• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • ಹೈದರಾಬಾದ್​​ನಲ್ಲಿ ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣ: ಉಗ್ರ ಪ್ರತಿಕ್ರಿಯೆ ಕೊಟ್ಟ ರಶ್ಮಿಕಾ ಮಂದಣ್ಣ, ಅನುಷ್ಕಾ, ಕೀರ್ತಿ ಸುರೇಶ್​..!

ಹೈದರಾಬಾದ್​​ನಲ್ಲಿ ವೈದ್ಯೆ ಅತ್ಯಾಚಾರ-ಹತ್ಯೆ ಪ್ರಕರಣ: ಉಗ್ರ ಪ್ರತಿಕ್ರಿಯೆ ಕೊಟ್ಟ ರಶ್ಮಿಕಾ ಮಂದಣ್ಣ, ಅನುಷ್ಕಾ, ಕೀರ್ತಿ ಸುರೇಶ್​..!

ರಶ್ಮಿಕಾ, ಅನುಷ್ಕಾ ಶೆಟ್ಟಿ ಹಾಗೂ ಕೀರ್ತಿ ಸುರೇಶ್​

ರಶ್ಮಿಕಾ, ಅನುಷ್ಕಾ ಶೆಟ್ಟಿ ಹಾಗೂ ಕೀರ್ತಿ ಸುರೇಶ್​

ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ, ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಹಾಗೂ ಕೀರ್ತಿ ಸುರೇಶ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೆಲಂಗಾಣದ ಪಶುವೈದ್ಯೆ ಅತ್ಯಾಚಾರ ಹಾಗೂ ಕೊಲೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ. 

  • Share this:

ದೇಶವನ್ನೇ ಬೆಚ್ಚಿಬೀಳಿಸಿದ ತೆಲಂಗಾಣದ ಪಶುವೈದ್ಯೆಯೊಬ್ಬರ ಮೇಲೆ ನಡೆದ ಅತ್ಯಾಚಾರ ಕೊಲೆ ಘಟನೆ ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. ದೆಹಲಿಯ ನಿರ್ಭಯಾ ಘಟನೆಯನ್ನು ನೆನಪಿಸುವಷ್ಟು ಪೈಶಾಚಿಕವಾಗಿರುವ ಈ ಕೃತ್ಯದ ಬಗ್ಗೆ ಸಿನಿರಂಗ ಆಕ್ರೋಶ ವ್ಯಕ್ತಪಡಿಸುತ್ತಿದೆ. ಸ್ಯಾಂಡಲ್​ವುಡ್​ ಹಾಗೂ ಟಾಲಿವುಡ್​ ನಾಯಕಿಯರೂ ಈ ಅಮಾನುಷ ಕೃತ್ಯದ ವಿರುದ್ಧ ದನಿ ಎತ್ತಿದ್ದಾರೆ.

ಈ ಘಟನೆ ವಿರುದ್ಧ ಕರಾವಳಿ ಬೆಡಗಿ ಅನುಷ್ಕಾ ಶೆಟ್ಟಿ, ಕಿರಿಕ್​ ಹುಡುಗಿ ರಶ್ಮಿಕಾ ಮಂದಣ್ಣ ಹಾಗೂ ಕೀರ್ತಿ ಸುರೇಶ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ್ದಾರೆ.

A man walks past a graffiti depicting a message in protest against rape, in Jammu
ಪ್ರಾತಿನಿಧಿಕ ಚಿತ್ರ.


'ಹುಡುಗಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಇದು ಮನುಕುಲವನ್ನೇ ಕದಲಿಸುವ ವಿಷಯ. ಈ ಪಾಪಿಗಳು ಮಾಡಿರುವ ಕೃತ್ಯ ಕಂಡು ವನ್ಯಜೀವಿಗಳೇ ಅಹಸ್ಯ ಪಡುತ್ತವೆ. ನಮ್ಮ ಸಮಾಜದಲ್ಲಿ ಮಹಿಳೆಯಾಗಿರುವುದೇ ಅಪರಾಧವೇ? ಆರೋಪಿಗಳಿಗೆ ಶಿಕ್ಷೆ ಕೊಡಿಸುವ ವಿಷಯದಲ್ಲಿ ಎಲ್ಲರೂ ಒಟ್ಟಾಗಿ ಹೋರಾಟ ಮಾಡೋಣ' ಎಂದು ಅನುಷ್ಕಾ ಶೆಟ್ಟಿ ಮನವಿ ಮಾಡಿದ್ದಾರೆ.


'ರಕ್ಷಣೆ ಎಲ್ಲಿದೆ? ಕೆಟ್ಟ ವಿಷಯಗಳು ಹಾಗೂ ಹಿಂಸಾಚಾರವನ್ನು ನಿರ್ಲಕ್ಷಿಸುವುದು ಸಮಸ್ಯೆಗೆ ಪರಿಹಾರವಲ್ಲ. ನಿಮಗೆ ಅಭದ್ರತೆ ಕಾಡಿದಾಗ ಸಹಾಯಕ್ಕಾಗಿ ಪ್ರಯತ್ನಿಸಿ. ಯಾರಿಗಾದರೂ ಸಹಾಯದ ಅಗತ್ಯವಿದ್ದಾಗ ಸ್ಪಂದಿಸಿ' ಎಂದು ಕೆಲವು ಸಹಾಯವಾಣಿಯ ಸಂಖ್ಯೆಗಳನ್ನು ಹಂಚಿಕೊಂಡಿದ್ದಾರೆ ರಶ್ಮಿಕಾ ಮಂದಣ್ಣ.


ಈ ಘಟನೆ ಕುರಿತಂತೆ ನಟಿ ಕೀರ್ತಿ ಸುರೇಶ್​ ಸಹ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


'ಯುವತಿಯ ಮೇಲೆ ಅತ್ಯಾಚರವೆಸಗಿ, ಜೀವಂತವಾಗಿ ಸುಟ್ಟಿರುವುದು ಹೃದಯ ವಿದ್ರಾವಕ ಘಟನೆ. ದಿನ ಕಳೆದಂತೆ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಸುರಕ್ಷಿತ ನಗರ ಎಂದುಕೊಂಡಿದ್ದ ಹೈದರಾಬಾದಿನಲ್ಲೇ ಈ ಘಟನೆ ನಡೆದಿರುವುದಕ್ಕೆ ಯಾರನ್ನು ಹೊಣೆಯಾಗಿಸುವುದು. ಯಾವಾಗ ನಮ್ಮ ದೇಶದಲ್ಲಿ ಮಹಿಳೆಯರು ಯಾವಾಗ ಬೇಕಾದರೂ ಸುರಕ್ಷಿತವಾಗಿ ಓಡಾಡುವಂತಹ ಪರಿಸ್ಥಿತಿ ಯಾವಾಗ ನಿರ್ಮಾಣವಾಗುತ್ತದೆ. ಎಲ್ಲ ಸೈಕೋಗಳನ್ನು ಹಾಗೂ ಇಂತಹ ಕ್ರೂರಿಗಳನ್ನು ಬೇಟೆಯಾಡಬೇಕು' ಎಂದು ಕೀರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

 Ileana Hot Photos: ಬಳುಕುವ ನಡುವಿನಿಂದಲೇ ಪಡ್ಡೆಗಳ ಹೃದಯಕ್ಕೆ ಕಿಚ್ಚು ಹಚ್ಚಿದ ಇಲಿಯಾನಾ..!

First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು