RIP Shankar Rao: ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್​ ಇನ್ನಿಲ್ಲ

ಹಿರಿಯ ನಟ ಶಂಕರ್ ರಾವ್ ಅಗಲಿಕೆಗೆ ಸ್ಯಾಂಡಲ್​ವುಡ್​ ಸಲೆಬ್ರಿಟಿಗಳು ಹಾಗೂ ರಂಗಭೂಮಿ ಕಲಾವಿದರು ಕಂಬನಿ ಮಿಡಿಯುತ್ತಿದ್ದಾರೆ. ಹಿರಿಯ ನಟನ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಬನಶಂಕರಿಯ ಚಿತಾಗಾರದಲ್ಲಿ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ನಟ ಶಂಕರ್ ರಾವ್​ ನಿಧನ

ನಟ ಶಂಕರ್ ರಾವ್​ ನಿಧನ

  • Share this:
ಬೆಳ್ಳಿತೆರೆ ಹಾಗೂ ಕಿರುತೆರೆಯಲ್ಲಿ ತಮ್ಮ ಅಭಿನಯದ ಮೂಲಕ ರಂಜಿಸುತ್ತಿದ್ದ ಕನ್ನಡದ ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್  (Shankar Rao) ನಿಧನರಾಗಿದ್ದಾರೆ. 84 ವರ್ಷದವಾರಿಗದ್ದ ಶಂಕರ್ ರಾವ್​ ಅವರು ಅಕ್ಟೋಬರ್​ 18ರಂದು ಅಂದರೆ ಇಂದು ಬೆಳಿಗ್ಗೆ ಅರಕೆರೆಯಲ್ಲಿರುವ ತಮ್ಮ ಮನೆಯಲ್ಲೇ 6.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಹಾಸ್ಯ ಕಲಾವಿದ ಅವರು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಳೆದ ಕೆಲ ತಿಂಗಳಿನಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅವರ ಮಡದಿ ಉಮಾ ಅವರು ಕಳೆದ ವರ್ಷ ನಿಧನರಾಗಿದ್ದರು. ತೆರೆ ಮೇಲೆ ಮಾತ್ರವಲ್ಲದೆ ನಿಜ ಜೀವನದಲ್ಲೂ ಹಾಸ್ಯ ಪ್ರವೃತ್ತಿಯ ವ್ಯಕ್ತಿತ್ವ ಉಳ್ಳವರಾಗಿದ್ದ ಶಂಕರ್ ಅವರು ಸದಾ ಸುತ್ತಲು ಇದ್ದವರನ್ನು ಲವಲವಿಕೆಯಿಂದ ಮಾತನಾಡಿಸುತ್ತಾ ನಗಿಸುತ್ತಿದ್ದರು. 

ಹಿರಿಯ ನಟ ಶಂಕರ್ ರಾವ್ ಅಗಲಿಕೆಗೆ ಸ್ಯಾಂಡಲ್​ವುಡ್​ ಸಲೆಬ್ರಿಟಿಗಳು ಹಾಗೂ ರಂಗಭೂಮಿ ಕಲಾವಿದರು ಕಂಬನಿ ಮಿಡಿಯುತ್ತಿದ್ದಾರೆ. ಹಿರಿಯ ನಟನ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ಬನಶಂಕರಿಯ ಚಿತಾಗಾರದಲ್ಲಿ ನಡೆಸಲು ಕುಟುಂಬದವರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Shankar Rao Death, Papa Pandu Shankar Rao, Shankar Rao, Kannada Serials, Sandalwood News,‘ಪಾಪ ಪಾಂಡು’ ಖ್ಯಾತಿಯ ಹಿರಿಯ ನಟ ಶಂಕರ್​ ರಾವ್​ ನಿಧನ, Shankar Rao Death News, Shankar Rao Passes Away, Shankar Rao Passed away, Shankar Rao death, Senior Kannada Actor Shankar Rao , Senior Kannada Actor Shankar Rao death, Senior Kannada Actor Shankar Rao passes away, silli lalli fame Actor Shankar Rao death, ಶಂಕರ್ ರಾವ್ ನಿಧನ, ಪಾಪಾ ಪಾಂಡು ನಟ, ಹಿರಿಯ ಕನ್ನಡದ ನಟ, ಸಿಲ್ಲಿ-ಲಲ್ಲಿ, Sandalwood and Kannada Serial actor Shankar Rao Passed away due to health problem ae
ನಟ ಶಂಕರ್ ರಾವ್​ ನಿಧನ


ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದ ಶಂಕರ್ ರಾವ್​ ಅವರು ನೂರಕ್ಕೂ ಹೆಚ್ಚು ಸಿನಿಮಾಗಳು, ಸಾಕಷ್ಟು ಧಾರಾವಹಿಗಳಲ್ಲಿ ನಟಿಸಿದ್ದಾರೆ. ಸಿನಿಮಾ, ಕಿರುತೆರೆ ಹಾಗೂ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅವರು 1972ರಿಂದ ಇತ್ತೀಚೆಗಿನ ದಿನಗಳವರೆಗೂ ನಟರಂಗ ರಂಗತಂಡದದಲ್ಲಿ ಸಕ್ರಿಯ ಕಲಾವಿದರಾಗಿದ್ದರು.

ಇದನ್ನೂ ಓದಿ: G K Govinda Rao Passes Away: ಕನ್ನಡದ ಹಿರಿಯ ನಟ ಪ್ರೊ ಜಿ ಕೆ ಗೋವಿಂದ ರಾವ್ ನಿಧನ: ಕಂಬನಿ ಮಿಡಿದ ರಾಜಕೀಯ ನಾಯಕರು-ಸೆಲೆಬ್ರಿಟಿಗಳು

1972ರಲ್ಲಿ ತೆರೆಕಂಡ ಯಾರ ಸಾಕ್ಷಿ ಸಿನಿಮಾದ ಮೂಲಕ ಶಂಕರ್​ ರಾವ್​ ಅವರು ಬೆಳ್ಳಿತೆರೆಗೆ ಪರಿಚಯವಾದರು. ಎಂ. ಆರ್​. ವಿಠಲ್​ ನಿರ್ದೇಶನದ ಸಿನಿಮಾ ಇದಾಗಿದೆ. ನಂತರ ಕಾಕನ ಕೋಟೆ, ಸಿಂಹಾಸನ, ಪುಟಾಣಿ ಏಜೆಂಟ್​ 123, ಮೂಗನ ಸೇಡು, ಕಲ್ಯಾಣ ಮಂಟಪ, ಪುನೀತ್​ ರಾಜ್​ಕುಮಾರ್ ಅಭಿನಯದ ಅಪ್ಪು,‌ ಧ್ರುವ, ಖುಷಿ  ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಧಾರಾವಾಹಿಗಳ ವಿಷಯಕ್ಕೆ ಬಂದರೆ, ಪಾಪ ಪಾಂಡು, ಸಿಲ್ಲಿಲಲ್ಲಿ, ಸೆಕೆಂಡ್ ಹ್ಯಾಂಡ್​ ಸದಾಶಿವ, ಪಲ್ಲವಿ, ಫೋಟೋಗ್ರಾಫರ್ ಪರಮೇಶಿ, ಯಾಕಿಂಗಾಡ್ತಾರೋ ಸೀರಿಯಲ್​ಗಳ ಮೂಲಕ ರಂಜಿಸಿದ್ದಾರೆ. ಇನ್ನು ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದ ಇವರು ಶಾಲಾ ದಿನಗಳಲ್ಲೇ ರಂಗಭೂಮಿಯತ್ತ ಆಕರ್ಷಿತರಾಗಿದ್ದರಂತೆ. ತಮ್ಮದೇ ಆದ ಗೆಳೆಯರ ಬಳಗ ಎಂಬ ರಂಗಪತಂಡವನ್ನು ಕಟ್ಟಿಕೊಂಡು ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಸೀಮನ್ಸ್​ ಆ್ಯಂಡ್​ ಸೀಮನ್ಸ್​ ಕಂಪೆನಿಯಲ್ಲಿ ಕೆಲಸ ಮಾಡುತ್ತಲೇ ಕಲಾಕುಂಜ, ನಟರಂಗ ತಂಡಗಳ ಜೊತೆ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸುತ್ತಿದ್ದರಂತೆ.ಬಹುಕಾಲದ ಗೆಳೆಯ, ಕನ್ನಡ ರಂಗಭೂಮಿಯ ಮಹಾನ್ ಕಲಾವಿದ ಶಂಕರ ರಾವ್ ಇಂದು ನಿಧನ ರಾಗಿದ್ದಾರೆ. ಶಂಕರರಾವ್ ನಟರಂಗ ತಂಡದ ಆಧಾರ ಸ್ಥಂಭಗಳಲ್ಲಿ ಒಬ್ಬರಾಗಿದ್ದರು. ಅವರಿಲ್ಲದೆ ಯಾವ ನಾಟಕ ವನ್ನೂ ಅವರು ಆಡುತ್ತಿರಲಿಲ್ಲ.
ನಮ್ಮ ತಂಡದ ಮಾಯಾಮೃಗ ಧಾರಾವಾಹಿಯಲ್ಲಿ ಸಂತಾನಂ ಪಾತ್ರ ಮಾಡಿ ಬಹಳ ಜನಪ್ರಿಯರಾಗಿದ್ದರು. ಪಾಪ ಪಾಂಡು ಧಾರಾವಾಹಿಯಲ್ಲಿ ಎಲ್ಲರೂ ಇಷ್ಟ ಪಡುವ ಪಾತ್ರ ಮಾಡಿ ಜನಾನುರಾಗಿಯಾಗಿದ್ದರು. ಅವರಿದ್ದ ಕಡೆ ಪ್ರತಿಕ್ಷಣವೂ ನಗೆಬುಗ್ಗೆಗಳಿಗೆ ಬರವಿರಲಿಲ್ಲ.ಸದಾ ಹಸನ್ಮುಖಿ.ಎಲ್ಲರ ಕಷ್ಟಕ್ಕೆ ಹೃದಯದ ಮೂಲಕ ಸ್ಪಂದಿಸುತ್ತಿದ್ದ ವ್ಯಕ್ತಿ. ಅವರ ಮನೆಯವರ ಶೋಕ ದಟ್ಟವಾಗಿ ಕುಳಿತಿದೆ.ನಟರಂಗದವರ ತಬ್ಬಲಿತನ ದಿನೇ ದಿನೇ ಹೆಚ್ಚು ಹೆಚ್ಚು ಕಾಡುತ್ತಿದೆ. ಅವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿಅವರ ಮನೆಯವರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ನಿರ್ದೇಶಕ ಸೀತಾರಾಮ್​ ಅವರು ಅಂತಾಪ ಸೂಚಿಸಿದ್ದಾರೆ.
Published by:Anitha E
First published: