Vidya Virsh: ಹಿಂದಿಯಲ್ಲಿ ಕನ್ನಡತಿಯ ಹಾಡಿನ ಕಲರವ..!

ಈಗ ಏಕಾಏಕಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಹೊರಟಿದ್ದಾರೆ. ನಟಿಯಾಗಿ ಅಲ್ಲದೆ ನಿರ್ದೇಶಕಿಯಾಗಿಯೂ ಹೆಸರು ಮಾಡೋ ಸಾಹಸ ಮಾಡಿದ್ದಾರೆ. ಅದರಂತೆ ಹಿಂದಿಯಲ್ಲಿ ಬಂಜಾರಿ ಎಂಬ ಆಲ್ಬಂ ಸಾಂಗ್ ಗೆ ಆಕ್ಷನ್ ಕಟ್ ಹೇಳಿದ್ದಾರೆ ವಿದ್ಯಾ ವರ್ಷ್.

news18-kannada
Updated:June 29, 2020, 10:25 PM IST
Vidya Virsh: ಹಿಂದಿಯಲ್ಲಿ ಕನ್ನಡತಿಯ ಹಾಡಿನ ಕಲರವ..!
ವಿದ್ಯಾ ವರ್ಷ್
  • Share this:
ಕನ್ನಡದಿಂದ ಬಾಲಿವುಡ್ ಕದ ತಟ್ಟಿ ಅಲ್ಲಿ ತಾರೆಗಳಾಗಿ ಮಿಂಚಿರೋ ಉದಾಹರಣೆ ಸಾಕಷ್ಟಿವೆ. ಕಡಲೂರ ಚೆಲುವೆ ಶಿಲ್ಪಾ ಶೆಟ್ಟಿ, ಐಶ್ವರ್ಯ ರೈ, ರೋಹಿತ್ ಶೆಟ್ಟಿ, ಸುನೀಲ್ ಶೆಟ್ಟಿ ಹೀಗೆ ಹಿಂದಿ ಚಿತ್ರರಂಗದಲ್ಲಿ ಹೆಸರು ಮಾಡಿರೋ ದೊಡ್ಡ ‌ಪಟ್ಟಿಯೇ ಇದೆ.

ಈಗ ಯಾಕಪ್ಪ ಇಷ್ಟೊಂದು ಪೀಠಿಕೆ ಅಂದರೆ ಕನ್ನಡದ ಮತ್ತೊಬ್ಳು ಚೆಲುವೆ ಹಿಂದಿಯಲ್ಲಿ ಮಿನುಗೋ ಭರವಸೆ ಮೂಡಿಸಿದ್ದಾಳೆ. ಅದರ‌ ಮುನ್ನುಡಿಯಾಗಿ ಬಂಜಾರಿ ಎಂಬ ಆಲ್ಬಂ ಸಾಂಗ್ ಮೂಲಕ ಸೌಂಡ್ ಮಾಡ್ತಿದ್ದಾಳೆ.
ಯೆಸ್ ವಿದ್ಯಾ ವರ್ಷ್ ಎಂಬ ಬ್ಯೂಟಿ. ಮೊದಲಿಗೆ ಕನ್ನಡದಲ್ಲಿ  ರಾಮ್ ಲೀಲಾ, ಮಳೆ, 121 ಎಂಬ ಸಿನಿಮಾಗಳಲ್ಲಿ ಅಭಿನಯಿಸಿ ಅದೃಷ್ಟ ಪರೀಕ್ಷೆ ಮಾಡಿದ್ದರು.

ವಿದ್ಯಾ ವರ್ಷ್

ಈಗ ಏಕಾಏಕಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಹೊರಟಿದ್ದಾರೆ. ನಟಿಯಾಗಿ ಅಲ್ಲದೆ ನಿರ್ದೇಶಕಿಯಾಗಿಯೂ ಹೆಸರು ಮಾಡೋ ಸಾಹಸ ಮಾಡಿದ್ದಾರೆ. ಅದರಂತೆ ಹಿಂದಿಯಲ್ಲಿ ಬಂಜಾರಿ ಎಂಬ ಆಲ್ಬಂ ಸಾಂಗ್ ಗೆ ಆಕ್ಷನ್ ಕಟ್ ಹೇಳಿದ್ದಾರೆ ವಿದ್ಯಾ ವರ್ಷ್.

ವಿದ್ಯಾ ವರ್ಷ್

ರೇಪ್ ಫ್ರೀ ಇಂಡಿಯಾ ಎಂಬ ಕಾನ್ಸೆಪ್ಟ್ ನಡಿ ಈ ಆಲ್ಬಂ ಹೊರತರಲಾಗಿದೆ. ರಿಯಾಲಿಟಿ ಶೋ ಮೂಲಕ ಹೆಸರು ಮಾಡಿರೋ ಶಹಜಾದ್ ಆಲಿ ಬಂಜಾರಿ ಆಲ್ಬಂನಲ್ಲಿ ಅಭಿನಯಿಸಿದ್ದಾರೆ. ಜೂನ್ ೨೪ರಂದು ಆನ್​ಲೈನ್​ನಲ್ಲಿ ಬಂಜಾರಿ ರಿಲೀಸ್ ಆಗಿದ್ದು ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಈಗಾಗಲೇ ೧೫ ಲಕ್ಷ ಜನರು ವೀಕ್ಷಿಸಿದ್ದಾರೆ.. ಈ ಮೂಲಕ ಕನ್ನಡದ ಹುಡುಗಿ ಹಿಂದಿಯಲ್ಲಿ ದೊಡ್ಡ ಮಟ್ಟದಲ್ಲಿಯೇ ಸೌಂಡ್ ಮಾಡಲಾರಂಭಿಸಿದ್ದಾರೆ.
First published:June 29, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading