ರೇವ್ ಪಾರ್ಟಿಗೆ ತೆರಳುತ್ತಿದ್ದ ಐಪಿಎಸ್ ಅಧಿಕಾರಿಗಳ ಹೆಸರು ಹೇಳ್ತೇನೆ; ಪೊಲೀಸರಿಗೆ ಎಚ್ಚರಿಕೆ ನೀಡಿದ ನಟಿ

ಅಕ್ರಮ ಡ್ರಗ್ಸ್‌ ದಂಧೆ ಜಾಲದೊಂದಿಗೆ ನಂಟು ಹೊಂದಿದ್ದ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿಯನ್ನು ಶುಕ್ರವಾರ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆಸಿದ್ದರು. ನಂತರ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಇನ್ನೂ ಕೆಲ ಹೀರೋಯಿನ್​ಗಳಿಗೆ ಪೊಲೀಸರು ನೋಟಿಸ್​ ನೀಡಲಿದ್ದಾರೆ ಎನ್ನಲಾಗಿದೆ.

ರೇವ್​ ಪಾರ್ಟಿ ಸಾಂದರ್ಭಿಕ ಚಿತ್ರ

ರೇವ್​ ಪಾರ್ಟಿ ಸಾಂದರ್ಭಿಕ ಚಿತ್ರ

 • Share this:
  ಬೆಂಗಳೂರು (ಸೆಪ್ಟೆಂಬರ್ 5): ಸ್ಯಾಂಡಲ್​ವುಡ್​ನಲ್ಲಿ ಡ್ರಗ್​ ವಿಚಾರ ಸಾಕಷ್ಟು ಸುದ್ದಿ ಮಾಡುತ್ತಿದೆ. ಖ್ಯಾತ ನಟಿಯರು ಹಾಗೂ ನಟರು ಡ್ರಗ್​ ತೆಗೆದುಕೊಳ್ಳುತ್ತಿದ್ದ ವಿಚಾರ ಸಿಸಿಬಿಗೆ ಗೊತ್ತಾಗಿದೆ. ಈಗಾಗಲೇ ನಟಿ ರಾಗಿಣಿ ದ್ವಿವೇದಿ ಅವರನ್ನು ಮೂರು ದಿನಗಳ ಕಾಲ ಪೊಲೀಸ್​ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಹೀಗಾಗಿ, ರಾಗಿಣಿ ವಿಚಾರಣೆ ವೇಳೆ ಯಾವ ಯಾವ ಮಾಹಿತಿಯನ್ನು ಬಿಚ್ಚಿಡಲಿದ್ದಾರೆ ಎನ್ನುವ ಕುತೂಹಲ ಮೂಡಿದೆ. ಈ ಮಧ್ಯೆ ಇನ್ನೂ ಕೆಲ ಹೀರೋಯಿನ್​ಗಳಿಗೆ ನೋಟಿಸ್​ ನೀಡಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ಕನ್ನಡದ ನಟಿಯೊಬ್ಬರು ಪೊಲೀಸರಿಗೆ ಎಚ್ಚರಿಕೆಯೊಂದನ್ನು ನೀಡಿದ್ದಾರಂತೆ. ಹೀಗೆ ಬಂಧಿಸುವ ಬಗ್ಗೆ ಕಿರುಕುಳ ನೀಡಿದರೆ ರೇವ್​ ಪಾರ್ಟಿಗೆ ಹೋಗುತ್ತಿದ್ದ ಐಪಿಎಸ್​ ಅಧಿಕಾರಿಗಳ ಹೆಸರನ್ನು ಹೇಳುತ್ತೇನೆ ಎಂದಿರುವುದಾಗಿ ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.    

  “ನಾನು ಪ್ರತಿಷ್ಠಿತ ಕುಟುಂಬದಿಂದ ಬಂದವನು. ಆದರೆ, ಇತ್ತೀಚೆಗೆ ನನ್ನ ಹೆಸರನ್ನು ಡ್ರಗ್​ ಕೇಸ್​ನಲ್ಲಿ ಸುಖಾಸುಮ್ಮನೆ ಎಳೆದು ತರಲಾಗುತ್ತಿದೆ. ನನಗೆ ತೊಂದರೆ ಕೊಡುವುದು ಮುಂದುವರಿದರೆ ನಾನು ಸುಮ್ಮನಿರುವುದಿಲ್ಲ. ರೇವ್​ ಪಾರ್ಟಿಗೆ ತೆರಳುತ್ತಿದ್ದ ಪೊಲೀಸ್​ ಅಧಿಕಾರಿಗಳು ಹಾಗೂ ಪ್ರತಿಷ್ಠಿತರ ಹೆಸರನ್ನು ಬಿಚ್ಚಿಡುತ್ತೇನೆ. ಡ್ರಗ್​ ಮಾಫಿಯಾ ಬಗ್ಗೆ ಗೊತ್ತಿರುವವರಲ್ಲಿ ಸಾಕಷ್ಟು ಮಂದಿ ಪೊಲೀಸರೂ ಇದ್ದಾರೆ, ಎಂದು ನಟಿ ಹೇಳಿರುವುದಾಗಿ ಸಿಸಿಬಿ ಪೊಲೀಸರು ಹೇಳಿದ್ದಾರೆ.

  ಅಕ್ರಮ ಡ್ರಗ್ಸ್‌ ದಂಧೆ ಜಾಲದೊಂದಿಗೆ ನಂಟು ಹೊಂದಿದ್ದ ಸ್ಯಾಂಡಲ್‌ವುಡ್‌ ನಟಿ ರಾಗಿಣಿ ದ್ವಿವೇದಿಯನ್ನು ಶುಕ್ರವಾರ ಸಿಸಿಬಿ ಪೊಲೀಸರು ವಿಚಾರಣೆಗೆ ಕರೆಸಿದ್ದರು. ಆದರೆ, ಸಂಜೆ ವಿಚಾರಣೆ ಬಳಿಕ ಅವರನ್ನು ಅಧಿಕೃತವಾಗಿ ಬಂಧನಕ್ಕೊಳಪಡಿಸಿರುವ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಮೂರು ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಪಡೆಯುವಲ್ಲಿ ಸಫಲರಾಗಿದ್ದಾರೆ. ಅಸಲಿಗೆ ವಿಚಾರಣೆ ವೇಳೆ ಪೊಲೀಸರು ಏಳು ದಿನಗಳ ಕಾಲ ಸುಪರ್ದಿಗೆ ನೀಡುವಂತೆ ನ್ಯಾಯಾಧೀಶರ ಬಳಿ ಮನವಿ ಮಾಡಿದ್ದರು. ಆದರೆ, ನ್ಯಾಯಾಧೀಶರು ಕೇವಲ ಮೂರು ದಿನ ಮಾತ್ರ ವಶಕ್ಕೆ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ನಟಿ ರಾಗಿಣಿ ಮುಂದಿನ ಮೂರು ದಿನ ಪೊಲೀಸರ ವಶದಲ್ಲಿ ವಿಚಾರಣೆ ಒಳಗಾಲಿದ್ದಾರೆ.
  Published by:Rajesh Duggumane
  First published: