ಬದುಕಿದ್ದಾಗಲೇ ತನ್ನ ಸಾವಿನ ಸುದ್ದಿ ಓದಿದ ಸ್ಯಾಂಡಲ್​ವುಡ್ ನಟಿ ಗರಂ

ಬದುಕಿರುವಾಗಲೇ ಯಾಕೆ ಹೀಗೆ ಸುದ್ದಿ ಹಾಕುತ್ತಿದ್ದಾರೆ ಅಂತ ಪರಿಶೀಲಿಸಿದರೆ, ಅದು ಅಲ್ಲಿರುವ ಸುದ್ದಿಯೇ ಬೇರೆ. ಆದರೆ, ಜನರನ್ನು ಸೆಳೆಯಲು ಈ ರೀತಿ ದಾರಿ ತಪ್ಪಿಸುವ ಹೆಡ್​ಲೈನ್​ಗಳನ್ನು ಹಾಕಿ, ಸುದ್ದಿ ವೈರಲ್ ಮಾಡಿಸುತ್ತಿದ್ದಾರೆ ಎಂಬುದು ಅರಿವಾಗಿದೆ.

ತೇಜಸ್ವಿನಿ ಪ್ರಕಾಶ್

ತೇಜಸ್ವಿನಿ ಪ್ರಕಾಶ್

  • Share this:
ಸಿನಿಮಾಲೋಕ ಒಂದು ಮಾಯಾಜಾಲವಾದರೆ ಸೋಷಿಯಲ್ ಮೀಡಿಯಾ ಕೂಡ ಇನ್ನೊಂದು ಮಾಯಾಜಾಲ ಎಂದೇ ಹೇಳಬಹುದು. ಇವೆರಡರಿಂದಲೂ ಸೆಲೆಬ್ರಿಟಿಗಳು ಅಭಿಮಾನಿಗಳಿಗೆ ಹತ್ತಿರವಾಗಲು ಪ್ರಯತ್ನಿಸುತ್ತಾರೆ. ಆದರೆ, ಈ ಸೋಷಿಯಲ್ ಮೀಡಿಯಾದಿಂದ ಎಷ್ಟು ಉಪಯೋಗವೋ, ಅಷ್ಟೇ ದುರುಪಯೋಗಗಳೂ ಆಗುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ಸ್ಯಾಂಡಲ್​ವುಡ್​ ನಟಿ, ಕನ್ನಡ ಬಿಗ್​​ ಬಾಸ್ 5 ನೇ ಸೀಸನ್ ಸ್ಪರ್ಧಿ ತೇಜಸ್ವಿನಿ ಪ್ರಕಾಶ್ ಅವರ ಕುರಿತು ಇತ್ತೀಚೆಗಷ್ಟೇ ವೈರಲ್ ಆದ ಸುದ್ದಿಗಳು.

ಹೌದು, ಕೆಲ ದಿನಗಳ ಹಿಂದಯಷ್ಟೇ ಹಲವು ಯೂಟ್ಯೂಬ್ ಹಾಗೂ ವೆಬ್​ಸೈಟ್​ಗಳಲ್ಲಿ ತೇಜಸ್ವಿನಿ ಪ್ರಕಾಶ್ ನಿಧನ, ಸ್ಯಾಂಡಲ್​ವುಡ್ ನಟಿ ಇನ್ನಿಲ್ಲ ಎಂಬ ಸುದ್ದಿಗಳು ತುಂಬಾ ವೈರಲ್ ಆಗಿದ್ದವು. ಅದೂ ಎಷ್ಟರ ಮಟ್ಟಿಗೆ ಅಂದರೆ, ಖುದ್ದು ತೇಜಸ್ವಿನಿ ಪ್ರಕಾಶ್ ಅವರಿಗೇ ಅವರ ಗೆಳೆಯರು, ಸಂಬಂಧಿಕರು ಕರೆ ಮಾಡತೊಡಗುವಷ್ಟು.

Sushant Singh Rajput: ಸಾಮಾಜಿಕ ಜಾಲತಾಣದಲ್ಲಿ ಸುಶಾಂತ್ ಸಿಂಗ್​ ಮೃತ ದೇಹದ ಫೋಟೋ: ನೆಟ್ಟಿಗರ ಮೇಲೆ ಸಿಟ್ಟಾದ ಬಿ-ಟೌನ್​ ಸೆಲೆಬ್ರಿಟಿಗಳು..!

ತೇಜಸ್ವಿನಿ ಪ್ರಕಾಶ್ ಕುರಿತ ಸುಳ್ಳು ಸುದ್ದಿ.


ಇದೇ ಏಪ್ರಿಲ್ 25ರಂದು ತೇಜಸ್ವಿನಿ ಪ್ರಕಾಶ್ ಅವರ ತಂದೆ ಅನಾರೋಗ್ಯದಿಂದ ವಿಧಿವಶರಾಗಿದ್ದರು. ಈ ಹಿನ್ನೆಲೆಯಲ್ಲಿ ಅವರ ಸಂಬಂಧಿಕರು, ಸ್ನೇಹಿತರು ತೇಜಸ್ವಿನಿಯವರ ಈ ಸುದ್ದಿಯನ್ನು ನೋಡಿ ಶಾಕ್ ಆಗಿದ್ದರು. ತಂದೆಯ ಮರಣದಿಂದ ಅದಾಗಲೇ ಮನನೊಂದಿದ್ದ ತೇಜಸ್ವಿನಿಗೆ ಪದೇ ಪದೇ ಕರೆಗಳು ಬರತೊಡಗಿದವು. ಈ ಬೆಳವಣಿಗೆಗಳು ತೇಜಸ್ವಿನಿಗೆ ಮತ್ತಷ್ಟು ತಲೆನೋವು ತಂದೊಡ್ಡಿದ್ದವು.

ಬದುಕಿರುವಾಗಲೇ ಯಾಕೆ ಹೀಗೆ ಸುದ್ದಿ ಹಾಕುತ್ತಿದ್ದಾರೆ ಅಂತ ಪರಿಶೀಲಿಸಿದರೆ, ಅಲ್ಲಿರುವ ಸುದ್ದಿಯೇ ಬೇರೆ. ಆದರೆ, ಜನರನ್ನು ಸೆಳೆಯಲು ಈ ರೀತಿ ದಾರಿ ತಪ್ಪಿಸುವ ಹೆಡ್​ಲೈನ್​ಗಳನ್ನು ಹಾಕಿ, ಸುದ್ದಿ ವೈರಲ್ ಮಾಡಿಸುತ್ತಿದ್ದಾರೆ ಎಂಬುದು ಅರಿವಾಗಿದೆ. ತಕ್ಷಣ ಎಚ್ಚೆತ್ತ ನಟಿ ತೇಜಸ್ವಿನಿ ಪ್ರಕಾಶ್, ಆ ರೀತಿ ದಿಕ್ಕುತಪ್ಪಿಸುವ ಸುದ್ದಿಗಳ ಸ್ಕ್ರೀನ್​ಶಾಟ್​ಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಬಳಿಕ ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಎಲ್ಲರಿಗೂ ಈ ಸುದ್ದಿಗಳ ಕುರಿತ ಸ್ಪಷ್ಟನೆ ನೀಡಿದ್ದಾರೆ.

David Warner: ತರಬೇತುದಾರದಿಂದ ನೃತ್ಯ ಕಲಿಯೋಕೆ ಆರಂಭಿಸಿದ ಡೇವಿಡ್​ ವಾರ್ನರ್​..!

'ಕಳೆದ ಒಂದು ತಿಂಗಳಿನಿಂದ ಕೆಲ ಯೂಟ್ಯೂಬ್ ಚಾನಲ್, ಸೋಷಿಯಲ್ ಮೀಡಿಯಾ ಪೇಜ್​ಗಳು ಈ ರೀತಿಯ ಸುದ್ದಿಗಳನ್ನು ಶೇರ್ ಮಾಡುತ್ತಿದೆ. ಈ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗಿನಿಂದ ನನಗೆ ನೂರಾರು ಕರೆಗಳು ಬರುತ್ತಿವೆ. ಇದೆಲ್ಲಾ ಸುಳ್ಳು ಸುದ್ದಿಗಳು ಎಂದು ಹೇಳಲು ಬಯಸುತ್ತೇನೆ. ಹಲವು ದಿನಗಳ ನಾನು ಇದರ ಬಗ್ಗೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ಈಗ ಇದರ ಬಗ್ಗೆ ಮಾತನಾಡಲೇಬೇಕಿದೆ. ಇದು ಇನ್ನೂ ಹೆಚ್ಚಾದರೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುತ್ತೇನೆ' ಎಂದು ಎಚ್ಚರಿಕೆ ನೀಡಿದ್ದಾರೆ.
First published: