Sandalwood: ಹಿರಿಯ ನಟಿ ತಾರಾಗೆ ಮಾತೃ ವಿಯೋಗ, 76 ವರ್ಷದ ಪುಷ್ಪ ಟಿ ನಿಧನ

ತಾರಾ (Tara) ಅವರ ತಾಯಿ ಪುಷ್ಪಾ (Mother Pushpa) ಅವರು ಹೃದಯಾಘಾತ (Heart Attack) ದಿಂದ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಮಗಳು ತಾರಾ ಜೊತೆಗೆ ಮೈಸೂರಿಗೆ ಶೂಟಿಂಗ್ ಸಲುವಾಗಿ ಆಗಮಿಸಿದ್ದರು. ಈ ವೇಳೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಾಯಿ ಜೊತೆ ತಾರಾ

ತಾಯಿ ಜೊತೆ ತಾರಾ

  • Share this:
ಚಂದನವನದ ನಟಿ (Sandalwood Actress) ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ತಾರಾ (Tara) ಅವರ ತಾಯಿ ಪುಷ್ಪಾ (Mother Pushpa) ಅವರು ಹೃದಯಾಘಾತ (Heart Attack) ದಿಂದ ನಿಧನರಾಗಿದ್ದಾರೆ. ಅವರಿಗೆ 76 ವರ್ಷ ವಯಸ್ಸಾಗಿತ್ತು. ಮಗಳು ತಾರಾ ಜೊತೆಗೆ ಮೈಸೂರಿಗೆ ಶೂಟಿಂಗ್ ಸಲುವಾಗಿ ಆಗಮಿಸಿದ್ದರು. ಈ ವೇಳೆ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಅವರನ್ನು ತಕ್ಷಣವೇ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ (Jss Hospital) ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ 27-04-2022ರಂದು ಸಂಜೆ 4 ಗಂಟೆ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ. ಗುರುವಾರ (ಏ.28) ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶೂಟಿಂಗ್​ ವೇಳೆ ಅಸ್ವಸ್ಥರಾಗಿದ್ದ ತಾಯಿ ಪುಷ್ಪ

ನಟಿ ತಾರಾ ಅವರ ಜೊತೆ ಮೈಸೂರಿನಲ್ಲಿ ನಡೆಯುತ್ತಿದ್ದ ಶೂಟಿಂಗ್‌ನಲ್ಲಿ ಪುಷ್ಟ ಟಿ ಪಾಲ್ಗೊಂಡಿದ್ದರು. ಈ ವೇಳೆ ತೀವ್ರ ವಾಂತಿಯಾಗಿ ಅಸ್ವಸ್ಥಗೊಂಡಿದ್ದಾರೆ. ತಕ್ಷಣ ಅವರನ್ನು ಮೈಸೂರಿನ ಜೆಎಸ್ ಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸಿದ ಪುಷ್ಪಾ ಟಿ ನಿಧನರಾಗಿದ್ದಾರೆ. ಪುಷ್ಪಾ ಅವರಿಗೆ ತಾರಾ ಸೇರಿದಂತೆ ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ ಇದ್ದಾರೆ. ಅದರಲ್ಲೂ ತಾರಾ ಕಂಡರೆ ಅವರ ತಾಯಿಗೆ ಹೆಚ್ಚು ಇಷ್ಟ. ತಾರಾ ಅವರು ಎಲ್ಲೇ ಹೋದರು, ಅವರ ತಾಯಿ ಜೊತೆಯಲ್ಲಿರುತ್ತಿದ್ದರು.

ಇದನ್ನೂ ಓದಿ: ಪುಷ್ಪ 2 ಸಿನಿಮಾದಲ್ಲಿ 'ಬೆಂಕಿ' ಡೈಲಾಗ್ಸ್​ಗೆ ಕಡಿಮೆ ಇಲ್ವಂತೆ! ನೆಕ್ಸ್ಟ್​ ಲೆವೆಲ್ ಅಂದಿದ್ದಕ್ಕೆ ನೆಟ್ಟಿಗರು ಹೇಳಿದ್ದೇನು?

ತಾರಾ ತಾಯಿ ನಿಧನಕ್ಕೆ ಗಣ್ಯರ ಕಂಬನಿ

ಇನ್ನು, ತಾರಾ ಅನುರಾಧಾ ಅವರ ತಾಯಿ ಪುಷ್ಪಾ ಅವರ ನಿಧನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಸೇರಿದಂತೆ ಹಲವು ಗಣ್ಯರು ಮತ್ತು ಹಿರಿಯ ಕಲಾವಿದರು ತೀವ್ರ ಸಂತಾಪ ಸೂಚಿಸಿದ್ದಾರೆ. "ಖ್ಯಾತ ನಟಿ ಹಾಗೂ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ತಾರಾ ಅನುರಾಧಾ ಅವರ ತಾಯಿ ಶ್ರೀಮತಿ ಪುಷ್ಪಾ ಅವರ ನಿಧನದ ಸುದ್ದಿ ಕೇಳಿ ದುಃಖವಾಗಿದೆ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. ಆ ಚೇತನಕ್ಕೆ ಸದ್ಗತಿ ಪ್ರಾಪ್ತಿಯಾಗಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: ರಿಲೀಸ್​ಗೂ ಮುನ್ನವೇ ಸೌಂಡ್​ ಮಾಡ್ತಿದೆ 'ಭೈರವ'! ದಾಖಲೆ ಮೊತ್ತಕ್ಕೆ ಸೇಲಾದ ಹೊಸಬರ ಸಿನಿಮಾ
ತಾರಾ ಅವರ ಮೂಲ ಹೆಸರು ಅನುರಾಧ. ಆದರೆ ತಾರಾ ಎಂದೇ ಕರ್ನಾಟಕದ ಮನೆ ಮಾತಾಗಿದ್ದಾರೆ. 1986ರಲ್ಲಿ ತುಳಸಿದಳ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟ ತಾರಾ ಅತ್ಯಂತ ಜನಪ್ರಿಯ ನಟಿಯಾಗಿದ್ದಾರೆ. ನಾಯಕಿಯಾಗಿ, ಹಿರಿಯ ಪಾತ್ರಧಾರಿಯಾಗಿ, ವಿಭಿನ್ನ ಪಾತ್ರಗಳ ಮೂಲಕ ತಾರಾ ಮನಗೆದ್ದಿದ್ದಾರೆ.
Published by:Vasudeva M
First published: