Actress Tara: ಮತ್ತೆ ಅಮ್ಮ ಆಗ್ತಿದ್ದಾರಾ ತಾರಮ್ಮ? ಬೇಬಿ ಬಂಪ್ ಫೋಟೋ ವೈರಲ್​

ನಟಿ ತಾರಾ ಅನುರಾಧ

ನಟಿ ತಾರಾ ಅನುರಾಧ

Sandalwood Update: ತಾರಾ ಅವರು ಕೇವಲ ಸಿನಿ ರಂಗದಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲಿ ಸಹ ತಾರಾ ಬ್ಯುಸಿ ಇದ್ದಾರೆ. ಈ ಮಧ್ಯೆ ತಾರಾ ಅವರ ಈ ಫೋಟೋ ವೈರಲ್​ ಆಗುತ್ತಿದ್ದು, ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ. 

  • Share this:

ಸ್ಯಾಂಡಲ್​ವುಡ್​ನಲ್ಲಿ (Sandalwood) ಸುಮಾರು 3 ದಶಕಕ್ಕೂ ಹೆಚ್ಚು ಕಾಲದಿಂದ ಸಕ್ರಿಯವಾಗಿರುವ ನಟಿಯರಲ್ಲಿ ತಾರಾ ಅನುರಾಧ (Tara Anuradha) ಕೂಡ ಒಬ್ಬರು. ಯಾವುದೇ ಪಾತ್ರವನ್ನು ನೀಡಿದರೂ ಸಹ ಅದಕ್ಕೆ ಜೀವ ತುಂಬಿ, ಜನರ ಮನಸ್ಸಿಗೆ ಹತ್ತಿರವಾಗಿಸುವ ಕಲೆ ಅವರಲ್ಲಿದೆ ಎಂದರೆ ತಪ್ಪಾಗಲಾರದು. ಅವರ ಪ್ರತಿಯೊಂದು ಪಾತ್ರವೂ ಜನರಿಗೆ ಇಷ್ಟ. ಈಗಲೂ ಸಹ ಪೋಷಕ ನಟಿಯಾಗಿ ಸಿನಿರಂಗದಲ್ಲಿ (Film Industry) ಬ್ಯುಸಿ ಇರುವ ನಟಿ ಈಗ ಬೇರೆ ವಿಚಾರಕ್ಕೆ ಸುದ್ದಿಯಲ್ಲಿದ್ದಾರೆ. ಅವರು ಗರ್ಭಿಣಿಯಾಗಿದ್ದಾರೆ (Pregnant) ಎಂಬ ಸುದ್ದಿ ಹರಿದಾಡುತ್ತಿದ್ದು, ಅವರ ಫೋಟೋವೊಂದು ಫುಲ್​ ವೈರಲ್​ (Photo Viral) ಆಗಿದೆ.  ಹೌದು, ತಾರಾ ಅವರು ಗರ್ಭಧರಿಸಿರುವ ಫೋಟೋವೊಂದು ಸದ್ಯ ಸಾಮಾಜಿಕ ಜಾಲಾತಾಣದಲ್ಲಿ (Social Media) ಹರಿದಾಡುತ್ತಿದ್ದು, ಅಭಿಮಾನಿಗಳು ತಾರಾ ಎರಡನೇ ಬಾರಿ ತಾಯಿಯಾಗುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.


ಬೇಬಿ ಬಂಪ್ ಫೋಟೋ ವೈರಲ್​


ತಾರಾ ಅವರು ಕೇವಲ ಸಿನಿ ರಂಗದಲ್ಲಿ ಮಾತ್ರವಲ್ಲದೇ ಕಿರುತೆರೆಯಲ್ಲಿ ಸಹ ತಾರಾ ಬ್ಯುಸಿ ಇದ್ದಾರೆ. ಈ ಮಧ್ಯೆ ತಾರಾ ಅವರ ಈ ಫೋಟೋ ವೈರಲ್​ ಆಗುತ್ತಿದ್ದು, ಜನರಲ್ಲಿ ಗೊಂದಲಕ್ಕೆ ಕಾರಣವಾಗಿದೆ.  ಆದರೆ ತಾರಾ ಅವರು ಗರ್ಭಿಣಿಯಾಗಿಲ್ಲ. ಅವರ ಈ ಅವತಾರ ಒಂದು ಚಿತ್ರಕ್ಕಾಗಿ. ಹೌದು, ತಾರಾ ಅವರು ಉಸಿರೇ ಉಸಿರೇ ಚಿತ್ರದಲ್ಲಿ ಗರ್ಭಿಣಿ ಪಾತ್ರ ನಿರ್ವಹಿಸುತ್ತಿದ್ದು, ಶೂಟಿಂಗ್ ಸಮಯದಲ್ಲಿ ತೆಗೆದ ಈ ಫೋಟೋ ವೈರಲ್ ಆಗುತ್ತಿದೆ.


ಬಿಗ್​ಬಾಸ್​ ಸೀಸನ್​ 8ರ ರಾಜೀವ್​ ಅವರ ಅಭಿನಯದ ಈ ಚಿತ್ರದವನ್ನು ಎನ್ ಗೊಂಬೆ ಪ್ರೊಡಕ್ಷನ್ಸ್ ಅಡಿಯಲ್ಲಿ ಪ್ರದೀಪ್ ಯಾದವ್ ನಿರ್ಮಾಣ ಮಾಡುತ್ತಿದ್ದು, ಶ್ರೀಜಿ ಘೋಷ್​ ಈ ಚಿತ್ರದಲ್ಲಿ ನಾಯಕಿಯ ಪಾತ್ರ ಮಾಡಲಿದ್ದಾರೆ.  ಇನ್ನು ತಾರಾ ಹಲವಾರು ಚಿತ್ರಗಳನ್ನು ಒಪ್ಪಿಕೊಂಡಿದ್ದು ಫುಲ್ ಬ್ಯುಸಿ ಇದ್ದಾರೆ.


ಇದನ್ನೂ ಓದಿ: ಶೀಘ್ರದಲ್ಲಿ 'ರಾಜಾ-ರಾಣಿ' ಸೀಸನ್ 2 - ಯಾವಾಗ? ಯಾವ್ ಟೈಮ್​​? ಇಲ್ಲಿದೆ ಫುಲ್ ಡೀಟೇಲ್ಸ್​


ಇದರ ನಡುವೆ ಕಿರುತೆರೆಯಲ್ಲಿ ಸಹ ರಾಜರಾಣಿ ಹಾಗೂ ನಮ್ಮಮ್ಮ ಸೂಪರ್ ಸ್ಟಾರ್​ ರಿಯಾಲಿಟಿ ಶೋ ಮುಗಿಸಿದ್ದು, ರಾಜರಾಣಿ ಶೋ ಸೀಸನ್​ 2 ಸಹ ಈಗ ಆರಂಭವಾಗುತ್ತಿದ್ದು, ಅದರಲ್ಲಿ ಸಹ ಸೃಜನ್ ಲೋಕೇಶ್​ ಜೊತೆ ಜಡ್ಜ್​ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅಲ್ಲದೇ ಇವುಗಳ ನಡುವೆ ರಾಜಕೀಯದಲ್ಲಿ ಸಹ ತಾರಾ ಸಕ್ರಿಯವಾಗಿದ್ದು, ಸಭೆ ಸಮಾರಂಭಗಳಲ್ಲಿ ಭಾಗವಹಿಸುತ್ತಾರೆ.


ಸಿನೆಮಾಗೆ ಈ ಅವತಾರ


ತಾರಾ ಅನುರಾಧ ಚಂದನವನದ ಹಿರಿಯ ನಟಿಯರಲ್ಲಿ ಒಬ್ಬರು. ಕನ್ನಡ ಮಾತ್ರವಲ್ಲದೇ ತೆಲುಗು ಹಾಗೂ ಮಲಯಾಳಂ ಸಿನೆಮಾಗಳಲ್ಲಿ ಸಹ ಅಭಿನಯಿಸಿದ್ದಾರೆ.  ಅವರ ಅಭಿನಯದ ಹಲವಾರು ಹಸೀನಾ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಲಭಿಸಿತ್ತು. ಇದೊಂದೇ ಅಲ್ಲದೇ, ಹಲವಾರು ಕರ್ನಾಟಕ ರಾಜ್ಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.


ಇದನ್ನೂ ಓದಿ: 43ರಲ್ಲೂ 34ರಂತೆ ಕಾಣುವ ವಿಜಯ್ ರಾಘವೇಂದ್ರ! ಹುಟ್ಟುಹಬ್ಬದ ಸಂಭ್ರಮದಲ್ಲಿರುವ ‘ಚಿನ್ನಾರಿಮುತ್ತ’ನ ಹೆಜ್ಜೆ ಗುರುತು ಇಲ್ಲಿದೆ


ಕಾನೂರು ಹೆಗ್ಗಡತಿ, ಮುನ್ನುಡಿ, ಕಾರ್ಮುಗಿಲು, ಮುಂಜಾನೆಯ ಮಂಜು, ಕರಿಮಲೆಯ ಕಗ್ಗತ್ತಲು, ಮತದಾನ, ನಿನಗಾಗಿ, ಹಸೀನಾ. ಸೈನೈಡ್ , ಉಳಿದವರು ಕಂಡಂತೆ, ಬಡವ ರಾಸ್ಕಲ್​ ಹೀಗೆ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.  ಈಗಲೂ ಕೂಡ ಅವರ ಅಭಿನಯದ ಕೆಲ ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು, ಇನ್ನೂ ಕೆಲವು ಚಿತ್ರಗಳ ಶೂಟಿಂಗ್ ನಡೆಯುತ್ತಿದೆ.

Published by:Sandhya M
First published: