ಸ್ಯಾಂಡಲ್‌ವುಡ್ ನೆನಪಿರಲಿ ಪ್ರೇಮ್ ಪುತ್ರಿ (Tara Anuradha New Movie) ಅಮೃತಾ ಪ್ರೇಮ್ ಅಭಿನಯದ ಟಗರು ಪಲ್ಯ ಸಿನಿಮಾ ಎಲ್ಲಿಗೆ ಬಂದಿದೆ ? ಇಲ್ಲಿವರೆಗೂ ಏನ್ ಆಗಿದೆ ? ಸಿನಿಮಾದ ಶೂಟಿಂಗ್ ಕೆಲಸ ಪೂರ್ಣ ಆಯಿತೇ ? ಸಿನಿಮಾ ಹೇಗೆ ಮೂಡಿ ಬಂದಿದೆ ? ನವ ನಿರ್ದೇಶಕ ಉಮೇಶ್ ಚಿತ್ರವನ್ನ ಹೇಗೆ ತೆಗೆದಿದ್ದಾರೆ ? ಚಿತ್ರಕ್ಕಾಗಿ ಆಯ್ಕೆ ಮಾಡಿರೋ ಶೂಟಿಂಗ್ ಸ್ಪಾಟ್ ಯಾವುದು? ಎಲ್ಲ ಕಲಾವಿದರ (Sandalwood Cinema News) ಡಬ್ಬಿಂಗ್ ಕೆಲಸ ಮುಗೀತಾ ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈಗ ಸಿಕ್ಕಿದೆ. ಆ ಉತ್ತರ ಕೊಟ್ಟವರು ಬೇರೆ ಯಾರೋ ಅಲ್ಲ. ಚಿತ್ರದಲ್ಲಿ ಅಭಿನಯಿಸಿರೋ ನಟಿ ತಾರಾ (Movie Latest Updates) ಅವರು ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗೆ ವಿಶೇಷವಾಗಿ ಮಾತನಾಡಿದ್ದಾರೆ. ಈ ಮಾತಿನ ಒಟ್ಟು ಚಿತ್ರಣದ ಸ್ಟೋರಿ ಇಲ್ಲಿದೆ.
ಟಗರು ಪಲ್ಯ ಸಿನಿಮಾ ಶೂಟಿಂಗ್ ಬಹುತೇಕ ಕಂಪ್ಲೀಟ್ ಆಗಿದೆ. ಸಿನಿಮಾ ತಂಡದ ಎಲ್ಲ ಕಲಾವಿದರು ತಮ್ಮ ಡಬ್ಬಿಂಗ್ ಕೆಲಸ ಮುಗಿಸಿಕೊಟ್ಟಿದ್ದಾರೆ. ಆದರೆ ತಾರಾ ಅವರ ಪಾತ್ರದ ರೆಕಾರ್ಡಿಂಗ್ ಬಾಕಿ ಉಳಿದಿತ್ತು ನೋಡಿ.
ಟಗರು ಪಲ್ಯ ಸಿನಿಮಾ ಚಿತ್ರೀಕರಣದ ಮ್ಯಾಟರ್ ರಿವೀಲ್
ಡಬ್ಬಿಂಗ್ ಕೆಲಸದಲ್ಲಿಯೇ ಬ್ಯುಸಿ ಇದ್ದ ನಟಿ ತಾರಾ ಉತ್ತರ ಕೊಟ್ಟರು. ಚಿತ್ರದ ಚಿತ್ರೀಕರಣದ ಒಂದಷ್ಟು ವಿಶೇಷತೆಗಳನ್ನು ಹೇಳಿಕೊಂಡರು. ಸಿನಿಮಾ ಹೇಗೆ ಬಂದಿದೆ ಅನ್ನುವ ಇಂಟ್ರಸ್ಟಿಂಗ್ ವಿಷಯವನ್ನ ಕೂಡ ಹಂಚಿಕೊಂಡಿದ್ದಾರೆ.
ಈ ಸಿನಿಮಾದ ಶೂಟಿಂಗ್ ಭರಚುಕ್ಕಿಯಲ್ಲಿಯೇ ನಡೆದಿದೆ. ಇದು ನಿಜಕ್ಕೂ ಒಂದು ವಿಶೇಷವಾದ ಜಾಗವೇ ಆಗಿದೆ. ಇಲ್ಲಿ ಬಹಳ ದಿನಗಳ ಬಳಿಕ ಸಿನಿಮಾ ಶೂಟಿಂಗ್ ಆಗಿದೆ. ಅದು ಟಗರು ಪಲ್ಯ ಸಿನಿಮಾ ಅನ್ನೋದೇ ವಿಶೇಷ ಅನ್ನುವುದು ತಾರಾ ಅವರ ಮಾತಿನ ತಾತ್ಪರ್ಯವೂ ಆಗಿದೆ.
ಟಗರು ಪಲ್ಯ ಸಿನಿಮಾದ ಕಥೆಯ ಸೀಕ್ರೆಟ್ ರಿವೀಲ್
ಟಗರು ಪಲ್ಯ ಒಂದೇ ದಿನದಲ್ಲಿ ನಡೆಯೋ ಒಂದು ಕಥೆ ಆಗಿದೆ. ಇದನ್ನ ಡೈರೆಕ್ಟರ್ ಉಮೇಶ್ ತುಂಬಾ ಚೆನ್ನಾಗಿಯೇ ತೆಗೆದಿದ್ದಾರೆ. ಹೊಸಬ ಅನ್ನುವ ಭಾವನೆ ಬರೋದಿಲ್ಲ. ಅಷ್ಟು ನೀಟಾಗಿಯೇ ಇಡೀ ಸಿನಿಮಾವನ್ನ ಉಮೇಶ್ ಮಾಡಿದ್ದಾರೆ.
ಚಿತ್ರದಲ್ಲಿ ರಂಗಾಯಣ ರಘು ಮತ್ತು ತಾರಾ ಅವರ ಕಾಂಬಿನೇಷನ್ ಇದೆ. ಬಹಳ ದಿನಗಳ ಬಳಿಕವೇ ತಾರಾ ಮತ್ತು ರಂಗಾಯಣ ರಘು ಈ ಚಿತ್ರದಲ್ಲಿ ಜೋಡಿ ಆಗಿದ್ದಾರೆ.
ಟಗರು ಪಲ್ಯ ಸಿನಿಮಾ ಫೋಟೋ ಹಂಚಿಕೊಂಡ ನಟಿ ತಾರಾ
ಸಿನಿಮಾದ ವಿಶೇಷ ಮಾಹಿತಿ ಹಚ್ಚಿಕೊಂಡಿರುವ ತಾರಾ ಅವರು, ಈಗ ತಮ್ಮ ಪಾತ್ರದ ಡಬ್ಬಿಂಗ್ ಕೆಲಸ ಶುರು ಮಾಡಿದ್ದಾರೆ. ಡಬ್ಬಿಂಗ್ ವೇಳೆಯ ಒಂದು ಫೋಟೋವನ್ನ ಕೂಡ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲೂ ಹಂಚಿಕೊಂಡಿದ್ದಾರೆ. ಆದರೆ ಈಗಾಗಲೇ ಟಗರು ಪಲ್ಯ ಸಿನಿಮಾದ ಎಲ್ಲ ಪಾತ್ರಗಳ ಡಬ್ಬಿಂಗ್ ಕೆಲಸ ಪೂರ್ಣಗೊಂಡಿದೆ.
ತಾರಾ ಅನುರಾಧಾ ತಮ್ಮ ರೋಲ್ ಬಗ್ಗೆ ತುಂಬಾ ವಿಶೇಷವಾಗಿಯೇ ಮಾತನಾಡಿದ್ದಾರೆ. ಈ ಮೂಲಕ ತಾರಾ ಅವರು ಮತ್ತೊಂದು ಒಳ್ಳೆ ಪಾತ್ರ ಮಾಡಿದ್ದಾರೆ.
ಟಗರು ಪಲ್ಯ ಸಿನಿಮಾದ ಹೊಸ ಮಾಹಿತಿ ಏನು ?
ಟಗರು ಪಲ್ಯ ಸಿನಿಮಾದ ಮೂಲಕವೇ ನೆನಪಿರಲಿ ಪ್ರೇಮ್ ಪುತ್ರಿ ಅಮೃತಾ ಪ್ರೇಮ್ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಮೊದಲ ದಿನದಿಂದ ಹಿಡಿದು, ಚಿತ್ರೀಕರಣದ ಕೊನೆ ದಿನದ ವರೆಗೂ ಅಮೃತಾ ಡೆಡಿಕೇಟೆಡ್ ಆಗಿಯೇ ಅಭಿನಯಿಸಿದ್ದಾರೆ.
ಇದನ್ನೂ ಓದಿ: Shiva Rajkumar: ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಶಿವಣ್ಣ ಜೋಡಿ! ಇವರ ಮದುವೆ ನಡೆದಿದ್ದೆಲ್ಲಿ ಗೊತ್ತಾ?
ಹಾಗೇನೆ ಚಿತ್ರೀಕರಣದ ಮೊದಲ ದಿನದಿಂದಲೂ ಅಮೃತಾ ಬಗ್ಗೆ ಒಳ್ಳೆ ಮಾತುಗಳೇ ಕೇಳಿ ಬಂದಿವೆ. ನಟಿ ತಾರಾ ಅವರೂ ಕೂಡ ಈಗ ಇಡೀ ಸಿನಿಮಾದ ಒಟ್ಟು ಔಟ್ ಹೇಗಿದೆ ? ಯಾರೆಲ್ಲ ಹೇಗೆ ಕೆಲಸ ಮಾಡಿದ್ದಾರೆ ಅನ್ನುವ ವಿಷಯವನ್ನ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ