Sruthi Hariharan: ಪ್ರೆಗ್ನೆಂಟ್​ ಆದ ಸುದ್ದಿ ಹೇಳಿ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟ ಶ್ರುತಿ ಹರಿಹರನ್

Sruthi Hariharan Pregnant: ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಆರೋಪದ ವೇಳೆ ಶ್ರುತಿಗೆ ಮದುವೆಯಾಗಿರುವ ಸುದ್ದಿ ಬಹಿರಂಗವಾಗಿತ್ತು. ಈ ವೇಳೆ ಪೊಲೀಸರಿಗೆ ನೀಡಿದ ದೂರಿನ ಪ್ರತಿಯಲ್ಲಿ ತಮ್ಮ ವಿಳಾಸ ಬರೆಯುವಾಗ ಗಂಡನ ಹೆಸರಿನ ಜಾಗದಲ್ಲಿ ರಾಮ್​ಕುಮಾರ್ ಹೆಸರನ್ನು ಶ್ರುತಿ ಹರಿಹರನ್ ಬರೆದಿದ್ದರು.

Sushma Chakre | news18
Updated:July 17, 2019, 11:41 AM IST
Sruthi Hariharan: ಪ್ರೆಗ್ನೆಂಟ್​ ಆದ ಸುದ್ದಿ ಹೇಳಿ ಅಭಿಮಾನಿಗಳಿಗೆ ಸರ್​ಪ್ರೈಸ್​ ಕೊಟ್ಟ ಶ್ರುತಿ ಹರಿಹರನ್
Sruthi Hariharan Pregnant: ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಆರೋಪದ ವೇಳೆ ಶ್ರುತಿಗೆ ಮದುವೆಯಾಗಿರುವ ಸುದ್ದಿ ಬಹಿರಂಗವಾಗಿತ್ತು. ಈ ವೇಳೆ ಪೊಲೀಸರಿಗೆ ನೀಡಿದ ದೂರಿನ ಪ್ರತಿಯಲ್ಲಿ ತಮ್ಮ ವಿಳಾಸ ಬರೆಯುವಾಗ ಗಂಡನ ಹೆಸರಿನ ಜಾಗದಲ್ಲಿ ರಾಮ್​ಕುಮಾರ್ ಹೆಸರನ್ನು ಶ್ರುತಿ ಹರಿಹರನ್ ಬರೆದಿದ್ದರು.
  • News18
  • Last Updated: July 17, 2019, 11:41 AM IST
  • Share this:
'ಲೂಸಿಯಾ' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟಿದ್ದ ಶ್ರುತಿ ಹರಿಹರನ್ ಕಳೆದ ವರ್ಷ ತೆರೆಕಂಡ 'ನಾತಿಚರಾಮಿ' ಸಿನಿಮಾ ನಂತರ ಎಲ್ಲೂ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಕಳೆದ ವರ್ಷ ನಟ ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪ ಮಾಡಿ ದೇಶಾದ್ಯಂತ ಸುದ್ದಿಯಾಗಿದ್ದ ಶ್ರುತಿಗೆ ನಂತರ ಸಿನಿಮಾ ಅವಕಾಶಗಳು ಕಡಿಮೆಯಾಗಿತ್ತು. ಈ ಬಗ್ಗೆ ಅವರೇ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದರು.  ಮನ್ಸೋರೆ ನಿರ್ದೇಶನದ 'ನಾತಿಚರಾಮಿ' ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾದರೂ ಬಾಕ್ಸಾಫೀಸ್​ನಲ್ಲಿ ಹೆಚ್ಚೇನೂ ಸದ್ದು ಮಾಡಲಿಲ್ಲ. ಇದಕ್ಕೆ ಶ್ರುತಿ ಹರಿಹರನ್ ಮೀಟೂ ಆರೋಪವೂ ಒಂದು ಕಾರಣ ಎಂಬ ಸುದ್ದಿ ಹರಿದಾಡಿತ್ತು.

ಮೀಟೂ ಅಭಿಯಾನದ ಬಳಿಕ ಇದೀಗ ಮತ್ತೊಂದು ವಿಚಾರಕ್ಕೆ ಶ್ರುತಿ ಹರಿಹರನ್ ಸುದ್ದಿಯಲ್ಲಿದ್ದಾರೆ. ಆದರೆ, ಈ ಬಾರಿ ಸಿಹಿಸುದ್ದಿಯ ಮೂಲಕ ಶ್ರುತಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೊಳಗಾಗಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧದ ಮೀಟೂ ಆರೋಪದ ವೇಳೆ ಶ್ರುತಿಗೆ ಮದುವೆಯಾಗಿರುವ ಸುದ್ದಿ ಬಹಿರಂಗವಾಗಿತ್ತು. ಈ ವೇಳೆ ಪೊಲೀಸರಿಗೆ ನೀಡಿದ ದೂರಿನ ಪ್ರತಿಯಲ್ಲಿ ತಮ್ಮ ವಿಳಾಸ ಬರೆಯುವಾಗ ಗಂಡನ ಹೆಸರಿನ ಜಾಗದಲ್ಲಿ ರಾಮ್​ಕುಮಾರ್ ಹೆಸರನ್ನು ಶ್ರುತಿ ಬರೆದಿದ್ದರು.

‘ಓಹ್ ಬೇಬಿ’ ಚಿತ್ರಕ್ಕೆ ಗುಡ್ ಬೈ ಹೇಳಿದ ನಟಿ ಸಮಂತಾ ಅಕ್ಕಿನೇನಿ!

ram kumar
ರಾಮ್​ ಕುಮಾರ್


ಕೇರಳದ ಕಲರಿಪಯಟ್ಟು ಕಲಾವಿದ ಮತ್ತು ಕೋರಿಯೋಗ್ರಾಫರ್ ಆಗಿರುವ ರಾಮ್​ಕುಮಾರ್​ ಜೊತೆಗೆ ಶ್ರುತಿ ಹರಿಹರನ್ ಮದುವೆಯಾಗಿದ್ದಾರೆ. ಡ್ಯಾನ್ಸರ್​ ಆಗಿರುವ ರಾಮ್​ಕುಮಾರ್ ಮತ್ತು ಶ್ರುತಿ ಬಹಳ ಹಿಂದಿನಿಂದಲೂ ರಿಲೇಷನ್​ಶಿಪ್​ನಲ್ಲಿದ್ದರು. ಕನ್ನಡದಲ್ಲಿ 'ಹ್ಯಾಪಿ ನ್ಯೂ ಇಯರ್' ಸಿನಿಮಾ ಆದ ಬಳಿಕ ಅವರಿಬ್ಬರೂ ಗುಟ್ಟಾಗಿ ಮದುವೆಯಾಗಿದ್ದರು. ಈ ವಿಷಯ ಅವರ ಆಪ್ತರ ಹೊರತಾಗಿ ಹೆಚ್ಚು ಜನರಿಗೆ ತಿಳಿದಿರಲಿಲ್ಲ.

ಡಿ ಬಾಸ್​ಗೆ ಕಿಚ್ಚನ ಕಿವಿಮಾತು: ಮತ್ತೆ ಒಂದಾಗ್ತಾರಾ ಸುದೀಪ್-ದರ್ಶನ್?

sruthi-hariharan02
ಪತಿ ರಾಮ್​ಕುಮಾರ್ ಜೊತೆ ಶ್ರುತಿ ಹರಿಹರನ್
ಇದೀಗ, ತಾವು ಗರ್ಭಿಣಿಯಾಗಿರುವ ಸಿಹಿಸುದ್ದಿ ನೀಡಿರುವ ಶ್ರುತಿ ಹರಿಹರನ್ ಅಧಿಕೃತವಾಗಿ ಈ ವಿಚಾರವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ರಾಧಿಕಾ ಪಂಡಿತ್​ ಎರಡನೇ ಬಾರಿ ತಾಯಿಯಾಗುತ್ತಿರುವ ಸುದ್ದಿಯನ್ನು ಘೋಷಿಸಿದ ಬೆನ್ನಲ್ಲೇ ಕನ್ನಡದ ಇನ್ನೋರ್ವ ನಟಿ ಕೂಡ ಸಿಹಿಸುದ್ದಿ ನೀಡಿದಂತಾಗಿದೆ.



 




View this post on Instagram





 

A post shared by Raam (@raam.kalari) on






ನಟರೂ ಕೂಡ ಆಗಿರುವ ರಾಮ್​ ಕುಮಾರ್​ ಮತ್ತು ಶ್ರುತಿ ಹರಿಹರನ್ ಒಟ್ಟಾಗಿ ಕನ್ನಡದ 'ಪ್ರೇಮ' ಎಂಬ ವಿಡಿಯೋ ಆಲ್ಬಂನಲ್ಲಿ ನಟಿಸಿದ್ದರು. ಸ್ವತಃ ರಾಮ್​ಕುಮಾರ್​ ಅವರೇ ಕ್ಲಿಕ್ಕಿಸಿರುವ ಬ್ಲರ್ ಫೋಟೋವೊಂದನ್ನು ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಶ್ರುತಿ ಹರಿಹರನ್ ಈ ಮೂಲಕ ಅಭಿಮಾನಿಗಳಿಗೆ ಸರ್​ಪ್ರೈಸ್​ ನೀಡಿದ್ದಾರೆ.




'ನನ್ನೊಳಗೆ ಒಂದು ಜೀವ ಉಸಿರಾಡುತ್ತಿದೆ. ಇದು ನನ್ನ ಹೊಸ ಜರ್ನಿಯ ಆರಂಭವಷ್ಟೇ. ನಿನ್ನನ್ನು ನೋಡಲು ನಾವು ಕಾತುರರಾಗಿದ್ದೇವೆ ಎಂದು ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಶ್ರುತಿ ಹರಿಹರನ್ ಈ ಫೋಟೋವನ್ನು ಕ್ಲಿಕ್ಕಿಸಿದ್ದು ತನ್ನ ಮಗುವನ್ನು ನೋಡಲು ಬಹಳ ಕುತೂಹಲದಿಂದ ಕಾಯುತ್ತಿರುವ ಅಪ್ಪ ರಾಮ್​ಕುಮಾರ್​' ಎಂದು ಬರೆದುಕೊಂಡಿದ್ದಾರೆ.



ಕನ್ನಡ ಮಾತ್ರವಲ್ಲದೆ ಮಲೆಯಾಳಂ ಸಿನಿಮಾಗಳಲ್ಲೂ ನಟಿಸಿರುವ ಶ್ರುತಿ ಹರಿಹರನ್ ಈ 'ಲೂಸಿಯಾ' ಸಿನಿಮಾಗೂ ಮೊದಲು ಕೋರಿಯೋಗ್ರಾಫರ್​ ಆಗಿದ್ದವರು. 'ಉರ್ವಿ', 'ಬ್ಯೂಟಿಫುಲ್ ಮನಸುಗಳು', 'ಗೋಧಿ ಬಣ್ಣ ಸಾಧಾರಣ ಮೈಕಟ್ಟು', 'ಅಂಬಿ ನಿಂಗ್ ವಯಸ್ಸಾಯ್ತೋ', 'ನಾತಿಚರಾಮಿ' ಮುಂತಾದ ಸಿನಿಮಾಗಳಲ್ಲಿ ವಿಭಿನ್ನ ರೀತಿಯ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡವರು ಶ್ರುತಿ ಹರಿಹರನ್. ಸದ್ಯಕ್ಕೆ 'ಟೆಸ್ಲಾ' ಮತ್ತು 'ಮನೆ ಮಾರಾಟಕ್ಕಿದೆ' ಸಿನಿಮಾ ತೆರೆಕಾಣಬೇಕಿದೆ.

 

First published:July 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading