Mahesh Babu ಜೊತೆ ನಟಿಸೋ ಅವಕಾಶ​ ಪಡೆದ ಸ್ಯಾಂಡಲ್​ವುಡ್​ ನಟಿ.. ರಶ್ಮಿಕಾಗಿಂತ ಕ್ಯೂಟ್ ರೀ​ ಈ ಕನ್ನಡತಿ!

ಕನ್ನಡದ  ‘ಕಿಸ್​’(Kiss) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕ್ಯೂಟ್​(Cute) ಬೆಡಗಿ ಶ್ರೀಲೀಲಾ(Sreeleela) ಮಹೇಶ್​ ಬಾಬು ಅವರ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ ಎಂದು ಹೇಳಲಾಗುತ್ತಿದೆ,

ಮಹೇಶ್​ ಬಾಬು, ಶ್ರೀಲೀಲಾ

ಮಹೇಶ್​ ಬಾಬು, ಶ್ರೀಲೀಲಾ

  • Share this:
ಟಾಲಿವುಡ್(Tollywood)​ ಸ್ಟಾರ್​​ ನಟರ ಜೊತೆ ನಮ್ಮ ಕನ್ನಡದ ನಟಿಯರ ನಟಿಸುವುದನ್ನು ನೋಡಿದರೆ, ಅದೇನೋ ಒಂಥರಾ ಖುಷಿ. ನಮ್ಮ ಕನ್ನಡದವರು ಬೇರೆ ಭಾಷೆಗಳಿಗೆ ಹೋಗಿ ಸಿನಿಮಾ ಮಾಡಿದರೆ ನಮಗೆ ಹೆಮ್ಮ ಅಲ್ವಾ? ಕನ್ನಡ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಯಾಗಿದ್ದ ರಶ್ಮಿಕಾ ಮಂದಣ್ಣ(Rashmika Mandanna) ಈಗ ಫುಲ್​ ಬ್ಯುಸಿಯಾಗಿದ್ದಾರೆ. ತೆಲುಗು, ತಮಿಳು, ಹಿಂದಿ ಸಿನಿಮಾಗಳಲ್ಲಿ ಸಖತ್​ ಬ್ಯುಸಿಯಾಗಿದ್ದಾರೆ. ಕಡಿಮೆ ಸಮಯದಲ್ಲಿ ನಟಿ ರಶ್ಮಿಕಾ ದೊಡ್ಡ ದೊಡ್ಡ ಸ್ಟಾರ್​ಗಳ ಜತೆ ನಟಿಸುವ ಅವಕಾಶ ಸಿಕ್ಕಿತ್ತು. ಇದೀಗ ಮತ್ತೊಬ್ಬ ಸ್ಯಾಂಡಲ್​​ವುಡ್​ ನಟಿಗೆ ತೆಲುಗಿನ ಸೂಪರ್ ಸ್ಟಾರ್(Tollywood Superstar)​ ಜೊತೆ ನಟಿಸುವ ಅವಕಾಶ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಅದರಲ್ಲೂ ಮಹೇಶ್​ ಬಾಬು(Mahesh Babu) ಜೊತೆ ನಟಿಸುವ ಅವಕಾಶ ಕನ್ನಡದ ನಟಿಗೆ ಸಿಕ್ಕಿರುವುದು ಸಂತಸದ ವಿಚಾರ.  ಹೌದು, ಕನ್ನಡದ  ‘ಕಿಸ್​’(Kiss) ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕ್ಯೂಟ್​(Cute) ಬೆಡಗಿ ಶ್ರೀಲೀಲಾ(Sreeleela) ಮಹೇಶ್​ ಬಾಬು ಅವರ ಮುಂದಿನ ಸಿನಿಮಾದಲ್ಲಿ ನಟಿಸುವ ಅವಕಾಶ ದೊರೆತಿದೆ ಎಂದು ಹೇಳಲಾಗುತ್ತಿದೆ. ತೆಲುಗು ಸಿನಿಮಾದಲ್ಲೂ ಶ್ರೀಲೀಲಾ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಮಹೇಶ್​ ಬಾಬು ಮುಂದಿನ ಚಿತ್ರದಲ್ಲಿ ಕನ್ನಡತಿ ಶ್ರೀಲೀಲಾ!

ಟಾಲಿವುಡ್​ ಸೂಪರ್​ ಸ್ಟಾರ್​​​ ಮಹೇಶ್​ ಬಾಬು ಅವರ ಹೊಸ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಸಿನಿಮಾಗೆ ಎರಡನೇ ಹೀರೋಯಿನ್​ ಆಯ್ಕೆಯಲ್ಲಿ ಚಿತ್ರಂಡ ತಂಡ ಬ್ಯುಸಿ ಆಗಿದೆ. ಈ ಸಿನಿಮಾದ ನಿರ್ದೇಶಕ ತ್ರಿವಿಕ್ರಮ್​ ಶ್ರೀನಿವಾಸ್​ ಅವರು ಮಹೇಶ್​ ಬಾಬು ಜತೆ ಈ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕನ್ನಡತಿ ಶ್ರೀಲೀಲಾ ಹೆಸರನ್ನು ತ್ರಿವಿಕ್ರಮ್​ ಅವರು ಮಹೇಶ್​ ಬಾಬು ಮುಂದೆ ಇಟ್ಟಿದ್ದಾರೆ. ಇದಕ್ಕೆ ಮಹೇಶ್​ ಬಾಬು ಗ್ರೀನ್​ ಸಿಗ್ನಲ್​ ನೀಡಿದ್ದಾರೆ ಎಂಬ ಗುಸುಗುಸು ಟಾಲಿವುಡ್​ ಅಂಗಳದಲ್ಲಿ ಜೋರಾಗಿದೆ. ಇದು ನಿಜವಾಗಲಿ ಎಂದು ಶ್ರೀಲೀಲಾ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: ಮಲ್ಟಿಪ್ಲೆಕ್ಸ್​​ಗಳ ವಿರುದ್ಧ ಸ್ಯಾಂಡಲ್​ವುಡ್​ ನಿರ್ದೇಶಕ ಗರಂ.. ಫಿಲ್ಮ್ ಚೇಂಬರ್​ಗೆ ಜೋಗಿ ಪ್ರೇಮ್ ದೂರು!

12 ವರ್ಷಗಳ ಬಳಿಕ ಒಂದಾದ ಮಹೇಶ್​- ತ್ರಿವಿಕ್ರಮ್​!

ಟಾಲಿವುಡ್​ ನಟ ಮಹೇಶ್​ ಬಾಬು  ಹೊಸ ಸಿನಿಮಾ ಇತ್ತೀಚೆಗೆ ಸದ್ದಿಲ್ಲದೆ ಸೆಟ್ಟೇರಿತ್ತು. ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರು ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ. ಈ ಮೊದಲು ‘ಅತಡು’ ಹಾಗೂ ‘ಖಲೇಜ’ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದ್ದರು. ಈಗ 12 ವರ್ಷಗಳ ಬಳಿಕ ಇಬ್ಬರೂ ಮೂರನೇ ಚಿತ್ರಕ್ಕಾಗಿ ಮತ್ತೆ ಒಂದಾಗಿದ್ದಾರೆ. ಇದೇ ಸಿನಿಮಾದ 2ನೇ ನಾಯಕಿ ಪಾತ್ರಕ್ಕೆ ಕನ್ನಡತಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎಂಬ ಟಾಕ್​ ಇದೆ. ಇನ್ನೂ ಕನ್ನಡದಲ್ಲಿ ‘ಕಿಸ್​’, ‘ಭರಾಟೆ’ ಹಾಗೂ ರಿಲೀಸ್​ಗೆ ರೆಡಿಯಾಗಿರುವ ‘ಬೈಟು ಲವ್’ ಸಿನಿಮಾದಲ್ಲಿ ಶ್ರೀಲೀಲಾ ನಟಿಸಿದ್ದಾರೆ. ತೆಲುಗು ಸಿನಿಮಾ‘ ‘ಪೆಳ್ಳಿ ಸಂದಡಿ’ಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ತೂಕ ಇಳಿಸೋ ಟಿಪ್ಸ್​ ಕೊಟ್ಟ ಕನ್ನಡದ ಟಾಪ್​ ಹುಡುಗಿ.. ಅವ್ರು ಇದನ್ನೇ ಕುಡಿತಾರಂತೆ!

ನಭಾ, ರಶ್ಮಿಕಾ ಹಾದಿಯಲ್ಲೇ ಶ್ರೀಲೀಲಾ!

ನಭಾ ನಟೇಶ್​, ರಶ್ಮಿಕಾ ಮಂದಣ್ಣ ಈಗಾಗಲೇ ತೆಲುಗು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅದರಲ್ಲೂ ರಶ್ಮಿಕಾ ಮಂದಣ್ಣ ಟಾಲಿವುಡ್​​ನ ಟಾಪ್​ ನಟರ ಜೊತೆ ನಟಿಸಿದ್ದಾರೆ. ನಟಿ ಶ್ರೀಲೀಲಾ ಕೂಡ ತೆಲುಗಿನಲ್ಲಿ ನೆಲೆ ಕಂಡುಕೊಳ್ಳುತ್ತಿದ್ದಾರೆ. ಹೀಗಾಗಿ ಮಹೇಶ್​ ಬಾಬು ಅವರ ಸಿನಿಮಾದಲ್ಲಿ ನಟಿ  ಶ್ರೀಲೀಲಾ ಕಾಣಿಸಿಕೊಂಡರೆ, ಇವರಿಗೆ ದೊಡ್ಡ ಬ್ರೇಕ್​ ಸಿಗುವುದಂತೂ ಖಚಿತ.
Published by:Vasudeva M
First published: