Shubha Poonja: ಸಿಂಪಲ್​ ಆಗಿ ಸುಮಂತ್​​ ಜೊತೆ ಸಪ್ತಪದಿ ತುಳಿದ ನಟಿ ಶುಭ ಪೂಂಜಾ! ಫೋಟೋಗಳು ವೈರಲ್​!

ನಟಿ ಶುಭ ಪೂಂಜಾ ತಮ್ಮ ದೀರ್ಘಕಾಲದ ಗೆಳೆಯ ಸುಮಂತ್​ ಜೊತೆ ಮದುವೆಯಾಗಿದ್ದಾರೆ.  ಸುಮಂತ್ ಹಾಗೂ ಶುಭಾ ಮಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿಂಪಲ್ ಆಗಿ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಮಂಗಳೂರಿನ ಮಜಲಬೆಟ್ಟುಬೀಡುವಿನಲ್ಲಿ ಕುಟುಂಬದವರು ಹಾಗು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ ಕಾರ್ಯಕ್ರಮ ನಡೆಯಿತು.

ಸುಮಂತ್​, ಶುಭ ಪೂಂಜಾ

ಸುಮಂತ್​, ಶುಭ ಪೂಂಜಾ

  • Share this:
ಸ್ಯಾಂಡಲ್​ವುಡ್ ನಟಿ ಶುಭಾ ಪೂಂಜ (Shubha Poonja) ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.ಈ ಹಿಂದೆಯೆ ನಟಿ ಶುಭ ಪೂಂಜ ಮದುವೆಯಾಗಬೇಕಿತ್ತು. ಆದರೆ, ಕೊರೋನಾ(Corona) ಕಾರಣದಿಂದ ಮುಂದೂಡಿಕೆಯಾಗಿತ್ತು. ನಟಿ ಶುಭ ಪೂಂಜಾ ತಮ್ಮ ದೀರ್ಘಕಾಲದ ಗೆಳೆಯ ಸುಮಂತ್(Sumanth)​ ಜೊತೆ ಮದುವೆಯಾಗಿದ್ದಾರೆ.  ಸುಮಂತ್ ಹಾಗೂ ಶುಭಾ ಮಂಗಳೂರಿ(Mangaluru)ನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸಿಂಪಲ್ ಆಗಿ ಮ್ಯಾರೇಜ್ ಮಾಡಿಕೊಂಡಿದ್ದಾರೆ. ಮಂಗಳೂರಿನ ಮಜಲಬೆಟ್ಟುಬೀಡುವಿನಲ್ಲಿ ಕುಟುಂಬದವರು ಹಾಗು ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಸರಳವಾಗಿ ಮದುವೆ(Simple Marriage) ಕಾರ್ಯಕ್ರಮ ನಡೆಯಿತು. ಹಲವಾರು ಸಿನಿರಂಗದ ಗಣ್ಯರು ಶುಭ ಪೂಂಜಾಗೆ ಶುಭಾಶಯ ತಿಳಿಸಿದ್ದಾರೆ. ನಟಿ ಮದುವೆಯಾಗಿರುವ  ಬಗ್ಗೆ ಸ್ವತಃ ನಟಿ ಶುಭ ಪೂಂಜಾ ಪೋಸ್ಟ್​ವೊಂದನ್ನು ಮಾಡಿದ್ದಾರೆ.



ಈ ಕುರಿತು ಶುಭಾ ಪೂಂಜಾ ತಮ್ಮ ಇನ್​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದು, ಚಿತ್ರವನ್ನು ಹಂಚಿಕೊಂಡಿದ್ದಾರೆ. ಪ್ರೀತಿಯ ಎಲ್ಲರಿಗೂ ನಮಸ್ಕಾರಗಳು. ಇಂದು ನಾನು ಮತ್ತು ಸುಮಂತ್ ಮಹಾಬಲ ಗುರು-ಹಿರಿಯರು ಮತ್ತು ಆತ್ಮೀಯ ಸ್ನೇಹಿತರ ಸಮ್ಮುಖದಲ್ಲಿ ನಮ್ಮ ಊರು ಮಜಲಬೆಟ್ಟುಬೀಡುವಿನಲ್ಲಿ ಸರಳ ವಿವಾಹವಾದೆವು. ನಿಮ್ಮೆಲ್ಲರ ಪ್ರೀತಿ ಮತ್ತು ಹಾರೈಕೆಗಳು ನಮ್ಮ ಮೇಲಿರಲಿ’’ ಎಂದು ಶುಭಾ ಬರೆದುಕೊಂಡಿದ್ದಾರೆ.

ಇದನ್ನು ಓದಿ : ಸ್ಯಾಂಡಲ್​ವುಡ್​ಗೂ ಪೋಸ್ಟ್​ಪೋನ್ ಬಿಗ್​ ಶಾಕ್​ ! `ಏಕ್​ ಲವ್​ ಯಾ’ ಬಿಡುಗಡೆ ದಿನಾಂಕ ಮುಂದೂಡಿಕೆ!

ಸಿಂಪಲ್ ಆಗಿ ಮದುವೆ ಆದ ನಟಿ ಶುಭ!

ಜನವರಿ ಮೊದಲ ವಾರ ನನ್ನ ಮದುವೆ. ನಮ್ಮಿಬ್ಬರ ಊರೂ ಮಂಗಳೂರು ಸಮೀಪ. ನಮ್ಮ ಕುಟುಂಬದ ಹಿರಿಯರೆಲ್ಲ ಅಲ್ಲೇ ಇದ್ದಾರೆ. ನಮ್ಮ ಮನೆ ದೇವರ ದೇವಸ್ಥಾನವೂ ಅಲ್ಲೇ ಇದೆ. ಆ ದೇವಸ್ಥಾನದಲ್ಲೇ ಮದುವೆ ಆಗುವ ಪ್ಲಾನ್‌ ಇದೆ. ನಾವಿಬ್ಬರೂ ಅದ್ದೂರಿತನಕ್ಕಿಂತ ಸರಳತನವನ್ನು ಹೆಚ್ಚು ಇಷ್ಟಪಟ್ಟವರು. ಹೀಗಾಗಿ ಸರಳವಾಗಿ ದೇವಸ್ಥಾನದಲ್ಲಿ ಮದುವೆ ಆಗ್ತೀವಿ ಎಂದು ಶುಭ ಪೂಂಜಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದೀಗ ಅದರಂತೆ ಸರಳವಾಗಿ ತಮ್ಮ ಗೆಳೆಯ ಸುಮಂತ್​ ಜೊತೆ ಸಪ್ತಪದಿ ತುಳಿದಿದ್ದಾರೆ.

ಇದನ್ನು ಓದಿ : ಹೇಳಿದ್​ ಟೈಮ್​ಗೆ ರಿಲೀಸ್​ ಮಾಡ್ತೀವಿ ಅಂದವ್ರು ಗಪ್​ಚುಪ್​: ರಾಧೆ ಶ್ಯಾಮ್​ ಬಿಡುಗಡೆ ದಿನಾಂಕ ಮುಂದೂಡಿಕೆ!

ಶುಭ ಪೂಂಜಾ ಕೈಹಿಡಿದ ಸಮಂತ್​ ಯಾರು?

ಶುಭ ಪೂಂಜಾ ಕೈ ಹಿಡಿದ ಸುಮಂತ್ ಬಿಲ್ಲವ, ಬೆಂಗಳೂರಿನಲ್ಲಿ ಗ್ಯಾಸ್ ಏಜೆನ್ಸ್ ನಡೆಸುತ್ತಿದ್ದು, ಜಯ ಕರ್ನಾಟಕ ಸಂಘಟನೆಯಲ್ಲಿ ಕೂಡಾ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಶುಭ ಪೂಂಜಾ ಕೆಲವು ವರ್ಷಗಳ ಹಿಂದೆ ಸುಮಂತ್ ಅವರನ್ನು ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಿದ್ದರು. ಕ್ರಮೇಣ ಇಬ್ಬರಿಗೂ ಪರಿಚಯವಾಗಿ ಈ ಪರಿಚಯ ಪ್ರೀತಿಗೆ ತಿರುಗಿತು. ಮನೆಯವರ ಮುಂದೆ ತಮ್ಮ ಪ್ರೀತಿಯನ್ನು ಹೇಳಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ನನ್ನ ಪತಿಯಾಗುವವರು ಸಿನಿಮಾ ಬಿಟ್ಟು ಬೇರೆ ಕ್ಷೇತ್ರದಲ್ಲಿ ಇರಬೇಕು ಎಂಬುದು ನನ್ನ ಆಸೆಯಾಗಿತ್ತು. ಅದರಂತೆ ನನಗೆ ಸುಮಂತ್ ಸಿಕ್ಕಿದ್ದಾರೆ. ಅವರು ನನ್ನ ವೃತ್ತಿಯನ್ನು ಬಹಳ ಗೌರವಿಸುತ್ತಾರೆ. ಮದುವೆಯಾದ ನಂತರ ಕೂಡಾ ನಾನು ನಟನೆಯನ್ನು ಮುಂದುವರೆಸಲು ಅವರ ಒಪ್ಪಿದ್ದಾರೆ. ಸುಮಂತ್ ಅವರ ಈ ಒಳ್ಳೆಯ ಗುಣದಿಂದಲೇ ನಾನು ಅವರನ್ನು ಇಷ್ಟಪಟ್ಟೆ  ಎಂದು ಶುಭ ಪೂಂಜಾ ಹೇಳಿದ್ದರು.

ಮಚ್ಚಿ ಎನ್ನುತ್ತಾ ಚಿತ್ರರಂಗಕ್ಕೆ ಬಂದಿದ್ದ ಶುಭ!

2004 ರಲ್ಲಿ ‘ಮಚ್ಚಿ’ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದ ಶುಭ ಪೂಂಜಾ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಸ್ಥಾನ ಹೊಂದಿದ್ಧಾರೆ. ಅವರು ಅಭಿನಯಿಸಿರುವ ಸಿನಿಮಾಗಳು ದೊಡ್ಡ ಮಟ್ಟಿಗೆ ಹಿಟ್ ಆಗದಿದ್ದರೂ ಶುಭ ಪೂಂಜಾ ಅಭಿನಯ ಹಾಗೂ ಕೆಲವೊಂದು ಚಿತ್ರಕಥೆಗಳಿಗೆ ಪ್ರಶಂಸೆ ವ್ಯಕ್ತವಾಗಿದೆ.
Published by:Vasudeva M
First published: