Godhra: ನೀನಾಸಂ ಸತೀಶ್​ ಸಿನಿಮಾದ ಟೈಟಲ್​ ಚೇಂಜ್​, ಫಸ್ಟ್​ ಹೂಂ ಅಂದು, ಈಗ್ಯಾಕೆ ನೋ ಅಂದ್ರು!

ಭಾರತೀಯ ಚಲನಚಿತ್ರ ಸೆನ್ಸಾರ್​​  ಮಂಡಳಿಯು ಈ ಹಿಂದೆ ಅಂದರೆ 2020 ರಲ್ಲೇ ಈ ಚಿತ್ರಕ್ಕೆ ಸಂಬಂಧಿಸಿದಂತೆ ಇದರ ಟೈಟಲ್ ಅನ್ನು ಕೈಬಿಡುವಂತೆ ಸೂಚಿಸಿತ್ತು. ಅದನ್ನು ಈ ಚಿತ್ರತಂಡವು ಒಪ್ಪಿಕೊಂಡಿದ್ದು ಚಿತ್ರದ ಕಥೆಗೆ ಪೂರಕವಾದ ಹೆಸರೊಂದನ್ನು ಹುಡುಕುತ್ತಿತ್ತು.

ಗೋದ್ರಾ ಪೋಸ್ಟರ್​

ಗೋದ್ರಾ ಪೋಸ್ಟರ್​

  • Share this:
ಕನ್ನಡ (Kannada) ಚಿತ್ರರಂಗದಲ್ಲಿ ತಮ್ಮದೆ ಆದ ವಿಭಿನ್ನ ನಟನೆಯ ಮೂಲಕ ಗುರುತಿಸಿಕೊಂಡಿರುವ ನಟ ಸತೀಶ್ ನಿನಾಸಂ (Sathish Ninasam)  ಅವರ ಹೊಸ ಚಿತ್ರ ಗೋದ್ರಾ(Godhra)ದ ಹೆಸರು ಶೀಘ್ರದಲ್ಲೇ ಬದಲಾಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಕೆ.ಎಸ್ ನಂದೀಶ್ (K.S Nandish) ಅವರ ನಿರ್ದೇಶನವಿರುವ ಈ ಚಿತ್ರವು ತೆರೆಗೆ ಬರಲು ಸಿದ್ಧವಾಗಿದ್ದು ಚಿತ್ರದಲ್ಲಿ ಮುಖ್ಯ ನಾಯಕನ ಪಾತ್ರದಲ್ಲಿ ಸತೀಶ್ ಕಾಣಿಸಿಕೊಂಡಿದ್ದರೆ ಅವರಿಗೆ ನಾಯಕಿಯ ಪಾತ್ರದಲ್ಲಿ ಶ್ರದ್ಧಾ ಶ್ರೀನಾಥ್ (Shraddha Srinath) ನಟಿಸಿದ್ದಾರೆ.  ಅಷ್ಟಕ್ಕೂ ಈ ಚಿತ್ರದ ಶಿರ್ಷಿಕೆಯನ್ನು ಏಕೆ ಬದಲಿಸಲಾಗುತ್ತಿದೆ ಎಂದು ಬಹಳಷ್ಟು ಜನರ ತಲೆಯಲ್ಲಿ ಪ್ರಶ್ನೆ ಮೂಡದೆ ಇರಲಾರದು.

2020ರಲ್ಲೇ ಟೈಟಲ್​ ಕೈ ಬಿಡುವಂತೆ ಹೇಳಿದ್ದ ಸೆನ್ಸಾರ್​ ಮಂಡಳಿ!

ಭಾರತೀಯ ಚಲನಚಿತ್ರ ಸೆನ್ಸಾರ್​​  ಮಂಡಳಿಯು ಈ ಹಿಂದೆ ಅಂದರೆ 2020 ರಲ್ಲೇ ಈ ಚಿತ್ರಕ್ಕೆ ಸಂಬಂಧಿಸಿದಂತೆ ಇದರ ಟೈಟಲ್ ಅನ್ನು ಕೈಬಿಡುವಂತೆ ಸೂಚಿಸಿತ್ತು. ಅದನ್ನು ಈ ಚಿತ್ರತಂಡವು ಒಪ್ಪಿಕೊಂಡಿದ್ದು ಚಿತ್ರದ ಕಥೆಗೆ ಪೂರಕವಾದ ಹೆಸರೊಂದನ್ನು ಹುಡುಕುತ್ತಿತ್ತು. ಇದೀಗ ಬಂದಿರುವ ಮಾಹಿತಿಯಂತೆ ಚಿತ್ರತಂಡವು ಇದರ ಕಥೆಗೆ ತಕ್ಕಂತೆ ಅದನ್ನು ಸಮರ್ಥಿಸಬಲ್ಲ ಒಂದು ಟೈಟಲ್ ಅನ್ನು ಅಂತಿಮಗೊಳಿಸಿದ್ದು ಚಿತ್ರವು ತೆರೆಗೆ ಬರುವ ಮುಂಚೆಯೇ ಹೆಸರು ಬದಲಾವಣೆಯಾಗಲಿರುವುದಾಗಿ ತಿಳಿದುಬಂದಿದೆ.

ಶೀಘ್ರದಲ್ಲೇ ಸತೀಶ್​ ನಿನಾಸಂ ಸಿನಿಮಾ ಟೈಟಲ್ ಚೇಂಜ್​!

ಅತಿ ಶೀಘ್ರದಲ್ಲೇ ಚಿತ್ರಪ್ರೇಮಿಗಳಿಗೆ ಚಿತ್ರದ ಹೊಸ ಟೈಟಲ್ ಏನೆಂಬುದನ್ನು ಚಿತ್ರತಂಡ ಬಿಚ್ಚಿಡಲಿದೆ ಎಂದು ಹೇಳಲಾಗಿದೆ. ಇನ್ನು, ಈ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದ ನಾಯಕ ನಟನಾಗಿರುವ ಸತೀಶ್ ನಿನಾಸಂ ಅವರು ಈ ರೀತಿ ಪ್ರತಿಕ್ರಯಿಸಿದ್ದಾರೆ, "ನಾವು ಯಾರ ಮನಸ್ಸನ್ನು ನೋಯಿಸುವ ಇಚ್ಛೆಯನ್ನುಹೊಂದಿಲ್ಲ, ಹಾಗಾಗಿ ಸಿಬಿಎಫ್‍ಸಿ ನಿರ್ದೇಶನದಂತೆ ನಾವು ಈ ಚಿತ್ರದ ಟೈಟಲ್ ಬದಲಾಯಿಸಲು ಒಪ್ಪಿಕೊಂಡಿದ್ದೇವೆ" ಎಂದು ಹೇಳಿದ್ದರು.

ಇದನ್ನೂ ಓದಿ: ಕನ್ನಡ ಸಿನಿಮಾ ನೋಡಿ ಕೊಂಡಾಡಿದ ಕಿಚ್ಚ! 'ಆ' ನಟನ ಪರ್ಫಾಮೆನ್ಸ್​ಗೆ ಸುದೀಪ್​ ಫಿದಾ

ಗೋಧ್ರಾ ಹತ್ಯಾಕಾಂಡಕ್ಕೂ ಸಿನಿಮಾಗೂ ಸಂಬಂಧವಿಲ್ಲ!

ಈ ಹಿಂದೆ 2002 ರಲ್ಲಿ ದೇಶದೆಲ್ಲೆಡೆ ಸದ್ದು ಮಾಡಿದ್ದ ಗೋಧ್ರಾ ಹತ್ಯಾಕಾಂಡದ ಬಗ್ಗೆ ಎಲ್ಲರಿಗೂ ತೀಳಿದೇ ಇದೆ. ಅದಕ್ಕೆ ಸಂಬಂಧಿಸಿದಂತೆ ಈ ಚಿತ್ರದ ಶಿರ್ಷಿಕೆಗೂ ಈ ಘಟನೆಗೂ ಏನಾದರೂ ಸಂಬಂಧವಿದೆಯೇ ಎಂಬ ಊಹಾಪೋಹ ಏಳದೇ ಇರುವುದರಲ್ಲಿ ಅನುಮಾನವೇ ಇಲ್ಲ, ಹಾಗಾಗಿಯೇ ಈ ಚಿತ್ರತಂಡವು ಈ ಬಗ್ಗೆ ವಿಚಾರ ಮತ್ತೆ ಹೆಚ್ಚಿನ ವಿವಾದ ಸೃಷ್ಟಿ ಮಾಡದಂತೆ ತಮ್ಮ ಚಿತ್ರಕ್ಕೂ ಹಾಗೂ 2002 ರಲ್ಲಿ ಗುಜರಾತ್ ನಲ್ಲಿ ನಡೆದಿದ್ದ ಗೋಧ್ರಾ ಕಾಂಡಕ್ಕೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂಬುದನ್ನು ಈಗಾಗಲೇ ಸ್ಪಷ್ಟ ಪಡಿಸಿದೆ.

ಇದನ್ನೂ ಓದಿ: Pushpa ಸಿನಿಮಾಗೆ KGF​ ಕಂಪೇರ್​ ಮಾಡಿದ್ದವನಿಂದ ನೀಲ್​ ಭೇಟಿ, ಇವಾಗ ಏನ್​ ಹೇಳ್ತಿಯೋ 'ಬಳೆಪೇಟೆ ಬಳೆಗಾರ' ಎಂದ ಫ್ಯಾನ್ಸ್​

ಇನ್ನು ಚಿತ್ರದ ಮೊದಲ ಲುಕ್ ಹಾಗೂ ಟೀಸರ್ ಗಳು ಈಗಾಗಲೇ ಬಿಡುಗಡೆಗೊಂಡಿದ್ದು ಚಿತ್ರಾಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಹುಟ್ಟಿಸಿದೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಸತೀಶ್ ನಿನಾಸಂ ಹಾಗೂ ಶ್ರದ್ಧಾ ಶ್ರೀನಾಥ್ ಅವರು ಪ್ರಥಮ ಬಾರಿಗೆ ತೆರೆ ಹಂಚಿಕೊಂಡಿದ್ದಾರೆ.

ಹಲವು ಹಿಟ್​ ಸಿನಿಮಾ ನೀಡಿರೋ ಸತೀಶ್​ ನಿನಾನಸಂ!

ಇನ್ನು ಕೆಲಸದ ವಿಷಯಕ್ಕೆ ಬಂದರೆ ಸತೀಶ್ ಅವರು ಒಬ್ಬ ಪಳಗಿದ ನಟರಾಗಿದ್ದು ರಂಗಭೂಮಿಯ ಹಿನ್ನೆಲೆ ಹೊಂದಿದ್ದಾರೆ. ನಿನಾಸಂ ಸಾಂಸ್ಕೃತಿಕ ಮಂದಿರದಲ್ಲಿ ಅವರು ರಂಗಭೂಮಿ ಕಲಾವಿದರಾಗಿ ಗುರುತಿಸಿಕೊಂಡು ನಂತರ 2008 ರಲ್ಲಿ ಬಿಡುಗಡೆಯಾಗಿದ್ದ ಮಾದೇಶ ಎಂಬ ಚಿತ್ರದಲ್ಲಿ ಓಷಕ ನಟನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಅವರು ತಮ್ಮ ವೃತ್ತಿಯ ಆರಂಭಿಕ ದಿನಗಳಲ್ಲಿ ಹಲವು ಹಿಟ್ ಸಿನೆಮಾಗಳಲ್ಲಿ ಚಿಕ್ಕದಾದ ಆದರೆ ಬಲು ಮಹತ್ವದ ಪಾತ್ರಗಳನ್ನು ನಿರ್ವಹಿಸುತ್ತ ನಾಯಕ ನಟನಾಗಿ ಬಡ್ತಿ ಪಡೆದಿದ್ದಾರೆ. 2013 ರಲ್ಲಿ ಬಿಡುಗಡೆಯಾಗಿದ್ದ ಲೂಸಿಯಾ ಚಿತ್ರದಲ್ಲಿ ಸತೀಶ್ ಅವರು ಅತ್ಯದ್ಭುತವಾಗಿ ನಟಿಸಿದ್ದು ಚಿತ್ರ ಸಾಕಷ್ಟು ವಿಮರ್ಶಕ ಮೆಚ್ಚುಗೆಯನ್ನು ಗಳಿಸಿತ್ತು.
Published by:Vasudeva M
First published: