ಸ್ಯಾಂಡಲ್‌ವುಡ್‌ನ ಬಿಗ್ ಬಾಸ್ ಖ್ಯಾತಿಯ (Sanya Iyer New Photo Shoot) ನಟಿ ಸಾನ್ಯಾ ಅಯ್ಯರ್ ಹೊಸ ಫೋಟೋ ಶೂಟ್ ಫೋಟೋಗಳು ಈಗ ಸಿಕ್ಕಾಪಟ್ಟೆ ವೈರಲ್ ಆಗಿವೆ. ಈ ಫೋಟೋಗಳು ಸಾನ್ಯಾ ಬೋಲ್ಡ್‌ನೆಸ್ ಅನ್ನು ಅಷ್ಟೇ (Sandalwood Actress Sanya Iyer) ಅದ್ಭುತವಾಗಿಯೇ ತೋರಿವೆ. ಬಾಲಿವುಡ್‌ನ ಹೆಸರಾಂತ ಫೋಟೊಗ್ರಾಫರ್ ಡಬೂ ರತ್ನಾನಿ ಈ ಫೋಟೋಗಳನ್ನ ತೆಗೆದು ಸಾನ್ಯ ಅಯ್ಯರ್ ರೂಪ ರಾಶಿಯನ್ನ ಹೊಸ (Photo Shoot Making Video) ರೀತಿಯಲ್ಲಿ ತೋರಿದ್ದಾರೆ. ಆದರೆ ಇದರ ಹಿಂದಿನ ಆ ಮೇಕಿಂಗ್ ಹೇಗಿತ್ತು? ಸಾನ್ಯ ಅಯ್ಯರ್ ಒಬ್ಬರೇ ಈ ಒಂದು ಫೋಟೋ ಶೂಟ್ ಅಲ್ಲಿ ಪಾಲ್ಗೊಂಡಿದ್ದರೇ ? ಫೇಮಸ್ ಫೋಟೋಗ್ರಾಫರ್ ಡಬೂ ರತ್ನಾನಿ ಸಪೋರ್ಟ್ ಹೇಗಿತ್ತು? ಈ ಎಲ್ಲ ವಿಷಯವನ್ನ ನಾವು ಈ ಮೇಕಿಂಗ್ ವಿಡಿಯೋದಲ್ಲಿ ನೋಡಬಹುದು.
ಬಾಲಿವುಡ್ ನಟಿಯರಂತೆ ಹೊಳಿತಿರೋ ಸಾನ್ಯ ಅಯ್ಯರ್
ಸಾನ್ಯ ಅಯ್ಯರ್ ಫೋಟೋಗಳು ಸಖತ್ ಆಗಿವೆ. ಇಲ್ಲಿವರೆಗೂ ಬಿಗ್ ಬಾಸ್ ಮನೆಯಲ್ಲಿ ಮಿಂಚಿದ್ದ ಸಾನ್ಯ ಅಯ್ಯರ್, ಇದೀಗ ಬಾಲಿವುಡ್‌ಗೂ ಹೊರಟು ನಿಂತಂತಿದೆ. ಅಲ್ಲಿ ಬೇಕಾಗೋ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಂತೆನೂ ಕಾಣುತ್ತಿದೆ.
ಬಾಲಿವುಡ್‌ನ ಹೆಸರಾಂತ ಫೋಟೋಗ್ರಾಫರ್ ಡಬೂ ರತ್ನಾನಿ ಇದೀಗ ಸಾನ್ಯ ಅಯ್ಯರ್ ಹೊಸ ರೀತಿಯ ಫೋಟೋ ಶೂಟ್ ಮಾಡಿಕೊಟ್ಟಿದ್ದಾರೆ. ಈ ಒಂದು ಫೋಟೋ ಶೂಟ್ ಅಲ್ಲಿ ಅದ್ಭುತವಾದ ಫೋಟೋಗಳೇ ಬಂದಿವೆ.
ಪಡ್ಡೆಗಳ ನಿದ್ದೆಗೆಡಿಸಿದ ಸಾನ್ಯ ಅಯ್ಯರ್ ಫೋಟೋಸ್
ಸಾನ್ಯ ಅಯ್ಯರ್ ಫೋಟೋಗಳು ಪಡ್ಡೆಗಳ ನಿದ್ದೆಗೆಡಸಿರೋದಂತು ಅಷ್ಟೇ ಸತ್ಯ. ಇಲ್ಲಿವರೆಗೂ ಸಾನ್ಯ ಅಯ್ಯರ್ ಈ ರೀತಿ ಎಲ್ಲೂ ಕಾಣಸಿಕೊಂಡಿಲ್ಲ. ಬಾಲಿವುಡ್ ಸಿನಿಮಾಗಳಿಗೆ ಸೂಕ್ತ ಅನ್ನಿಸೋ ರೀತಿಯಲ್ಲಿ ಸಾನ್ಯ ಅಯ್ಯರ್ ಈ ಒಂದು ಫೋಟೋ ಶೂಟ್ ಅಲ್ಲಿಯೇ ಕಾಣಸಿಕೊಂಡಿದ್ದಾರೆ.
ಸಾನ್ಯ ಅಯ್ಯರ್ ಫೋಟೋ ಶೂಟ್ ಮೇಕಿಂಗ್ ರಿಲೀಸ್
ಆದರೆ ಈ ಫೋಟೋ ಶೂಟ್ ಹಿಂದಿನ ತಯಾರಿ ಮತ್ತು ಮೇಕಿಂಗ್ ಯಾರಿಗೂ ತಿಳಿದಿರಲಿಲ್ಲ. ಇದೀಗ ಅದು ರಿವೀಲ್ ಆಗಿದೆ. ಫೋಟೋ ಶೂಟ್‌ನ ಒಂದು ವಿಡಿಯೋ ಈಗ ಹೊರ ಬಂದಿದೆ. ಈ ಒಂದು ವಿಡಿಯೋದಲ್ಲಿ ಸಾನ್ಯ ಅಯ್ಯರ್ ಮೇಕ್ಅಪ್ ಮತ್ತು ಪೋಜಸ್‌ಗಳ ಬಗ್ಗೆನೂ ತಿಳಿಯುತ್ತದೆ.
ಡಬೂ ರತ್ನಾನಿ ತೆಗೆದ ಫೋಟೋ ಚೆಕ್ ಮಾಡ್ತಿದ್ದರು ಸಾನ್ಯ
ಪ್ರತಿ ಫೋಟೋ ತೆಗೆದ ಮೇಲೂ ಸಾನ್ಯ ನೇರವಾಗಿಯೇ ಡಬೂ ರತ್ನಾನಿ ಬಳಿ ಹೋಗುತ್ತಿದ್ದರು. ತಮ್ಮ ಹೊಸ ರೀತಿಯ ಫೋಟೋಗಳು ಹೇಗೆ ಬಂದಿವೆ ಅಂತಲೂ ನೋಡ್ತಾಯಿದ್ದರು. ಆ ಒಂದು ದೃಶ್ಯ ಮೇಕಿಂಗ್ ವಿಡಿಯೋದಲ್ಲೂ ಕ್ಯಾಪ್ಚರ್ ಆಗಿದೆ.
ಫೋಟೋ ಶೂಟ್ ಸಮಯದಲ್ಲಿ ಸಾನ್ಯ ಜೊತೆಗೆ ಇದ್ದವರಾರು?
ಸಾನ್ಯ ಅಯ್ಯರ್ ಫೋಟೋ ಶೂಟ್ ಟೈಮ್ ಅಲ್ಲಿ ಯಾರು ಸಾಥ್ ಕೊಟ್ಟಿದ್ದರು. ಯಾರೆಲ್ಲ ಜೊತೆಗೆ ಇದ್ದರು ಅನ್ನುವ ಪ್ರಶ್ನೆಗೆ ಸಾನ್ಯ ಅಯ್ಯರ್ ಅಮ್ಮ ದೀಪಾ ಅಯ್ಯರ್ ಜೊತೇನೆ ಇದ್ದರು. ಸಾನ್ಯ ಫೋಟೋ ಶೂಟ್‌ನಲ್ಲಿ ಅಮ್ಮ ದೀಪಾ ಅಯ್ಯರ್ ಜೊತೇಗೇನೆ ಇದ್ದರು.
ಸಾನ್ಯ ಅಯ್ಯರ್ ಲಕ್ ಹೊಡೆಯೋ ಕಾಲ ಬಂದೇ ಬಿಡ್ತಾ?
ಸಾನ್ಯ ಅಯ್ಯರ್ ಚಿತ್ರ ಜೀವನದಲ್ಲಿ ಏನೋ ದೊಡ್ಡಮಟ್ಟದಲ್ಲಿಯೇ ಆಗುವ ಹಾಗೆ ಕಾಣಿಸುತ್ತಿದೆ. ಈ ಫೋಟೋ ಶೂಟ್ ಆದ್ಮೇಲೆ ಬೇರೆ ಬೇರೆ ಆಫರ್ಸ್ ಬರೋ ಚಾನ್ಸಸ್ ಕೂಡ ಇದೆ. ಅಷ್ಟು ಅದ್ಭುತವಾಗಿಯೇ ಎಲ್ಲ ಫೋಟೋಗಳು ಬಂದಿವೆ.
View this post on Instagram
ಡಬೂ ರತ್ನಾನಿ ತೆಗೆಯೋ ಫೋಟೋಗಳೂ ಬಹತೇಕ ಸೂಪರ್ ಆಗಿರುತ್ತವೆ. ಸಿನಿಮಾ ಮಂದಿಯ ನಿರೀಕ್ಷೆಯನ್ನೂ ಮೀರಿಯೇ ಅದ್ಭುತ ಫೋಟೋಗಳನ್ನ ಡಬೂ ರತ್ನಾನಿ ತೆಗೆದುಕೊಟ್ಟಿರುತ್ತಾರೆ. ಕನ್ನಡದ ಪುಟ್ಟ ಗೌರಿ ಸಾನ್ಯ ಅಯ್ಯರ್ ಈಗ ಅದ್ಭುತ ಗ್ಲಾಮರಸ್ ನಟಿ ರೀತಿ ಕಾಣಿಸುತ್ತಿದ್ದಾರೆ.
ಇದನ್ನೂ ಓದಿ: South Actors: ಯುವತಿಯರ ಡ್ರೀಮ್ ಬಾಯ್! ಸೌತ್ನ ಸಖತ್ ಹ್ಯಾಂಡ್ಸಂ ಹೀರೋಗಳಿವರು
ಸಾನ್ಯ ಅಯ್ಯರ್ ಹೊಸ ಸಿನಿಮಾ ಯಾವಾಗ ಶುರು?
ಸಾನ್ಯ ಅಯ್ಯರ್ ಸದ್ಯ ಇನ್ನೂ ಯಾವುದೇ ಸಿನಿಮಾ ಒಪ್ಪಿಲ್ಲ. ಆದರೆ ಈಗೀನ ಫೋಟೊ ಶೂಟ್ ನೋಡಿದ್ರೆ, ಆ ಕೆಲಸ ಕೂಡ ಬಹು ಬೇಗ ಆಗೋ ಸಾಧ್ಯತೆ ಜಾಸ್ತಿ ಇದೆ. ಅದು ಕನ್ನಡದಲ್ಲಿಯೇ ಸಾಧ್ಯವಾಗುತ್ತದೆಯೇ? ಇಲ್ಲ ಬಾಲಿವುಡ್‌ನಿಂದಲೇ ಆಫರ್ ಬರುತ್ತದೆಯೋ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ