ಸ್ಯಾಂಡಲ್​ವುಡ್ ನಟಿ ಸಂಜನಾರಿಂದ ಸಂಚಾರಿ ನಿಯಮ ಉಲ್ಲಂಘನೆ: ಬೀಳುತ್ತಾ ಫೈನ್?

Sanjana galrani: 2 ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿ ಬಿದ್ದರೆ ಇದೇ ದಂಡದ ಮೊತ್ತವು 2000 ಸಾವಿರ ಹಾಗೂ ಮೂರನೇ ಬಾರಿ ಸಿಕ್ಕಿ ಬಿದ್ದರೆ ಡಿಎಲ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸ್ಸು ಮಾಡುತ್ತಾರೆ.

news18-kannada
Updated:January 12, 2020, 9:19 PM IST
ಸ್ಯಾಂಡಲ್​ವುಡ್ ನಟಿ ಸಂಜನಾರಿಂದ ಸಂಚಾರಿ ನಿಯಮ ಉಲ್ಲಂಘನೆ: ಬೀಳುತ್ತಾ ಫೈನ್?
ಸಂಜನಾ
  • Share this:
ಸ್ಯಾಂಡಲ್​ವುಡ್ ನಟಿ ಸಂಜನಾ ಗಲ್ರಾಣಿ ಮತ್ತೆ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳ ಹಿಂದೆ ನಿರ್ಮಾಪಕಿ ವಂದನಾ ಅವರೊಂದಿಗಿನ ಜಟಾಪಟಿಯಿಂದ ಸುದ್ದಿಯಾಗಿದ್ದ ಸಂಜನಾ ಈ ಬಾರಿ ಸಂಚಾರಿ ನಿಯಮ ಉಲ್ಲಂಘಿಸಿ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಬೆಂಗಳೂರಿನ ಮೆಜಸ್ಟಿಕ್ ರಸ್ತೆಯಲ್ಲಿ ಕಾರು ಚಾಲನೆ ಮಾಡುವ ವೇಳೆ ಸೆಲ್ಪೀ ವಿಡಿಯೋ ಮಾಡಿದ್ದರು. ತೆಲುಗು ನಟ ಮಹೇಶ್ ಬಾಬು ಮೂವಿ ವೀಕ್ಷಣೆಗೆ ತೆರಳುತ್ತಿದಾಗ ತಿಳಿಸಿರುವ ಈ ವಿಡಿಯೋದಲ್ಲಿ ಸಖತ್ ಜೋಷನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ

ಡ್ರೈವಿಂಗ್ ವೇಳೆ ಮೊಬೈಲ್ ಬಳಸಬಾರದು ಎಂದು ಟ್ರಾಫಿಕ್ ನಿಯಮ ಹೇಳುತ್ತೆ. ಅಲ್ಲದೆ ಮೊಬೈಲ್​ನಲ್ಲಿ ಮಾತನಾಡಿದರೆ ಅಥವಾ ಮೊಬೈಲ್ ಬಳಕೆಯೊಂದಿಗೆ ವಾಹನ ಚಲಾಯಿಸಿದರೆ ಟ್ರಾಫಿಕ್ ಪೊಲೀಸ್ ದಂಡ ವಿಧಿಸುತ್ತಾರೆ. ಟ್ರಾಫಿಕ್ ನಿಯಮದ ಪ್ರಕಾರ ಡ್ರೈವಿಂಗ್ ನಲ್ಲಿ ಮೊಬೈಲ್ ಬಳಸಿ ಸಿಕ್ಕಿ ಬಿದ್ದರೆ 1000 ಸಾವಿರ ದಂಡ ಕಟ್ಟಬೇಕಾಗುತ್ತದೆ.

2 ನೇ ಬಾರಿ ಮೊಬೈಲ್ ಬಳಸಿ ಸಿಕ್ಕಿ ಬಿದ್ದರೆ ಇದೇ ದಂಡದ ಮೊತ್ತವು 2000 ಸಾವಿರ ಹಾಗೂ ಮೂರನೇ ಬಾರಿ ಸಿಕ್ಕಿ ಬಿದ್ದರೆ ಡಿಎಲ್ ಅಮಾನತಿಗೆ ಟ್ರಾಫಿಕ್ ಪೊಲೀಸರು ಶಿಫಾರಸ್ಸು ಮಾಡುತ್ತಾರೆ. ಇದೀಗ ಸಂಜನಾ ವಿಡಿಯೋ ಭಾರೀ ವೈರಲ್ ಆಗಿದ್ದು ಟ್ರಾಫಿಕ್ ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ.


ಇದನ್ನೂ ಓದಿ: Bigg Boss: ಬಿಗ್ ಬಾಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬಿಗ್ ಟ್ವಿಸ್ಟ್​..!
Published by: zahir
First published: January 12, 2020, 9:19 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading