TikTok: ಟಿಕ್​ಟಾಕ್​​ ಬ್ಯಾನ್​ ಮಾಡುವುದು ಬೇಡವೆಂದ ಸ್ಯಾಂಡಲ್​ವುಡ್​ ನಟಿ!

TikTok: ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿರುವ ನಟಿ ಸಂಯುಕ್ತಾ ಹೆಗ್ಡೆ ಟಿಕ್​ ಟಾಕ್ ಬ್ಯಾನ್​ ಮಾಡುವುದು ಬೇಡ ಎನ್ನುತ್ತಿದ್ದಾರೆ.  ಅದು ಒಳ್ಳೆಯ ರೀತಿ ಬದಲಾವಣೆ ಆಗಲಿ ಎನ್ನುತ್ತಿದ್ದಾರೆ ಕಿರಿಕ್​ ಬೆಡಗಿ ಸಂಯುಕ್ತಾ.

news18-kannada
Updated:May 23, 2020, 2:59 PM IST
TikTok: ಟಿಕ್​ಟಾಕ್​​ ಬ್ಯಾನ್​ ಮಾಡುವುದು ಬೇಡವೆಂದ ಸ್ಯಾಂಡಲ್​ವುಡ್​ ನಟಿ!
ಸಂಯುಕ್ತಾ ಹೆಗ್ಡೆ
  • Share this:
ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಚೀನಾ ಮೂಲದ ಟಿಕ್​ಟಾಕ್​ ಆ್ಯಪ್​ ಬ್ಯಾನ್​ ಮಾಡುವಂತೆ ಅಭಿಯಾನ ಶುರುವಾಗಿದೆ. ಸಾಕಷ್ಟು ಜನರು ಬ್ಯಾನ್​ ಟಿಕ್​ಟಾಕ್​ ಅಭಿಯಾನಕ್ಕೆ ಕೈ ಜೋಡಿಸುತ್ತಿದ್ದಾರೆ. ಅದರಂತೆ ಸ್ಯಾಂಡಲ್​ವುಡ್​ನ​ ಕೆಲವು ನಿರ್ದೇಶಕರು ಕೂಡ ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಇಂತಹ ಸಂದರ್ಭದಲ್ಲಿ ಕನ್ನಡದ ನಟಿಯೊಬ್ಬರು ಟಿಕ್​ಟಾಕ್​ ಬ್ಯಾನ್​ ಮಾಡುವುದು ಬೇಡ ಎಂದು ಹೇಳುತ್ತಿದ್ದಾರೆ!.

ಸಾಮಾಜಿಕ ಜಾಲತಾಣದಲ್ಲಿ ಸದಾ ಆ್ಯಕ್ಟೀವ್​ ಆಗಿರುವ ನಟಿ ಸಂಯುಕ್ತಾ ಹೆಗ್ಡೆ ಟಿಕ್​ ಟಾಕ್ ಬ್ಯಾನ್​ ಮಾಡುವುದು ಬೇಡ ಎನ್ನುತ್ತಿದ್ದಾರೆ.  ಅದು ಒಳ್ಳೆಯ ರೀತಿ ಬದಲಾವಣೆ ಆಗಲಿ ಎನ್ನುತ್ತಿದ್ದಾರೆ ಕಿರಿಕ್​ ಬೆಡಗಿ ಸಂಯುಕ್ತಾ.

ಟಿಕ್​ಟಾಕ್​​ ಬ್ಯಾನ್​ ಮಾಡುವುದರಿಂದ ಜನರ ಮನಸ್ಥಿತಿ ಬದಲಾಗುವುದಿಲ್ಲ. ಬ್ಯಾನ್​ ಮಾಡಿದರೆ ಬೇರೆ ಮಾರ್ಗವನ್ನು ಕಂಡು ಹಿಡಿಯುತ್ತಾರೆ. ಟಿಕ್​ಟಾಕ್ ಏನೇ ಆದರು ನಾನು ಕೇರ್​ ಮಾಡುವುದಿಲ್ಲ ಎಂದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಕಳೆದ ಹಲವು ದಿನಗಳಿಂದ #Bantiktok ಅಭಿಯಾನ ನಡೆಯುತ್ತಿದ್ದು, ಅನೇಕರು ಟಿಕ್​ಟಾಕ್​​ ಅನ್​ಇನ್​ಸ್ಟಾಲ್ ಮಾಡುತ್ತಿದ್ದಾರೆ. ಮತ್ತೊಂದೆಡೆ ಗೂಗಲ್​ ಪ್ಲೇಸ್ಟೋರ್​ನಲ್ಲಿ ಟಿಕ್​ಟಾಕ್​ ರೇಟಿಂಗ್​ ಕೂಡ ಕಡಿಮೆಯಾಗಿದೆ.

ಇನ್ನು ಟಿಕ್​ಟಾಕ್​​​ಗೆ  ಪರ್ಯಾಯವಾಗಿ ಅನೇಕರು ಯೂಟ್ಯೂಬ್​ ಮೊರೆ ಹೋಗುತ್ತಿದ್ದಾರೆ. #BringBackcarryMinatiyoutubeVideo ಎಂಬ ಅಭಿಯಾನವನ್ನು ಆರಂಭಿಸಿದ್ದಾರೆ. ಕಳೆದ ವಾರ ಪ್ಲೇ ಸ್ಟೋರ್​ನಲ್ಲಿ ಟಿಕ್​ಟಾಕ್​ ಆ್ಯಪ್​​​ 4.6 ರೇಟಿಂಗ್​ ಹೊಂದಿತ್ತು. ಬ್ಯಾನ್​​ ಟಿಕ್​ಟಾಕ್​ ಅಭಿಯಾನ ಪ್ರಾರಂಭವಾದ ನಂತರ 2.0ಗೆ ಇಳಿದಿದೆ. ಆದಾದ ನಂತರ 1.3 ರೇಟಿಂಗ್​​ನಲ್ಲಿ ಕಾಣಿಸಿಕೊಂಡಿದೆ. ಸದ್ಯ 1.6 ರೇಟಿಂಗ್​ ಹೊಂದಿದೆ.

 

‘ಬದಲಾಗು ನೀನು.. ಬದಲಾಯಿಸು ನೀನು‘; ಕೊರೋನಾ ವಿರುದ್ಧ ಹಾಡಿನ ಮೂಲಕ ದನಿಗೂಡಿಸಿದ ಸ್ಯಾಂಡಲ್​ವುಡ್ ತಾರೆಯರು 
First published: May 23, 2020, 2:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading