ಇದು ಸಂಯುಕ್ತಾ ಹೆಗಡೆ ಜೀವನದ ಬೆಸ್ಟ್ ಕಿಸ್; ಕಿರಿಕ್ ಹುಡುಗಿಯ ಫೋಟೋ ವೈರಲ್!

ಕ್ರಿಸ್​ ಜೊತೆ ಸಂಯುಕ್ತಾ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ಮಾತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ವಿದೇಶಿ ಹುಡುಗನೊಂದಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದರು. ಈಗ ಅವರ ಹೊಸ ಫೋಟೋ ವೈರಲ್​ ಆಗಿದೆ.

Rajesh Duggumane | news18
Updated:June 28, 2019, 1:07 PM IST
ಇದು ಸಂಯುಕ್ತಾ ಹೆಗಡೆ ಜೀವನದ ಬೆಸ್ಟ್ ಕಿಸ್; ಕಿರಿಕ್ ಹುಡುಗಿಯ ಫೋಟೋ ವೈರಲ್!
ಸಂಯುಕ್ತಾ-ರಿಕ್​
Rajesh Duggumane | news18
Updated: June 28, 2019, 1:07 PM IST
ನಟಿ ಸಂಯುಕ್ತಾ ಹೆಗಡೆ ಸದ್ಯ ಸ್ಯಾಂಡಲ್​ವುಡ್​ನಿಂದ ಅಂತರ ಕಾಯ್ದುಕೊಂಡಿದ್ದು, ವಿದೇಶಿಗನ ಜೊತೆ ಸುತ್ತಾಟ ನಡೆಸುತ್ತಿದ್ದಾರೆ. ಸಂಯುಕ್ತಾ ಸಿನಿಮಾ ಮೂಲಕ ಸುದ್ದಿ ಮಾಡಿದ್ದಕ್ಕಿಂತ, ವಿವಾದಗಳಿಂದಲೇ ಹೆಚ್ಚು ಗಮನ ಸೆಳೆದಿದ್ದಾರೆ. ಈಗ ಅವರು ಕಿಸ್​ ಮಾಡುತ್ತಿರುವ ಫೋಟೋ ಒಂದನ್ನು ಹಂಚಿಕೊಂಡಿದ್ದು, 'ಇದು ನನ್ನ ಜೀವನದ ಅತ್ಯುತ್ತಮ ಚುಂಬನ' ಎಂದು ಬರೆದುಕೊಂಡಿದ್ದಾರೆ! ಈ ಫೋಟೋ ಸದ್ಯ ಸಖತ್​ ಸದ್ದು ಮಾಡುತ್ತಿದೆ.

ಹಾಗಾದರೆ ಯಾರ ಜೊತೆ ಸಂಯುಕ್ತಾ ಕಿಸ್​ ಮಾಡಿದ್ದಾರೆ ಎಂದು ನೀವು ಪ್ರಶ್ನಿಸಬಹುದು. ಅದಕ್ಕೂ ಉತ್ತರವಿದೆ. ಸಂಯುಕ್ತಾ ಚುಂಬಿಸಿದ್ದು ಟೆಡ್ಡಿ ಬೇರ್​ನೊಂದಿಗೆ! ಹೌದು, ಸಂಯುಕ್ತಾ ಜೆಕ್​ ಭಾಗದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಅವರ ಬಾಯ್​ಫ್ರೆಂಡ್​ ಎಂದು ಹೇಳಲಾದ ಕ್ರಿಸ್​ ಸಾವರ್​ ಕೂಡ ಸಂಯುಕ್ತಾಗೆ ಸಾತ್​ ನೀಡಿದ್ದಾರೆ. ಈ ವೇಳೆ ಟೆಡ್ಡಿ ಬೇರ್​ಗೆ ಸಂಯುಕ್ತಾ ಚುಂಬಿಸಿದ್ದಾರೆ. ಇದು ತಮ್ಮ ಜೀವನದ ಅತ್ಯುತ್ತಮ ಕಿಸ್​ ಎಂದು ಹೇಳಿಕೊಂಡಿದ್ದಾರೆ. ಸಂಯುಕ್ತಾ ಈ ಮೊದಲು ಕೂಡ ಸಾಕಷ್ಟು ಫೋಟೋಗಳನ್ನು ಹಂಚಿಕೊಂಡು ಸುದ್ದಿಯಾಗಿದ್ದರು.
 


Loading...View this post on Instagram
 

@chris.1803 watched me have the best kiss of my life ❤❤ I forgot to ask but were you jealous? Pc: @chris.1803 #travel #travelphotography #travelislife #travelholic #germany #europe #travelingishappiness #thebarefeetchronicles #prague #czech


A post shared by Samyuktha Hegde (@samyuktha_hegde) on


ಕ್ರಿಸ್​ ಜೊತೆ ಸಂಯುಕ್ತಾ ಡೇಟಿಂಗ್​ ನಡೆಸುತ್ತಿದ್ದಾರೆ ಎನ್ನುವ ಮಾತಿತ್ತು. ಇದಕ್ಕೆ ಸಾಕ್ಷಿ ಎಂಬಂತೆ ವಿದೇಶಿ ಹುಡುಗನೊಂದಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಅವರು ಹಂಚಿಕೊಂಡಿದ್ದರು. ತನ್ನ ಗೆಳೆಯ ಮಡಿಲಲ್ಲಿ ಕೂತಿರುವಂತಹ ಫೋಟೋವನ್ನು ಸಂಯುಕ್ತ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿ, ‘ಚಾಕೊಲೇಟ್-ವೆನಿಲ್ಲಾ ಕಾಂಬಿನೇಷನ್​ ಯಾವಾಗಲೂ ಚೆನ್ನಾಗಿರುತ್ತದೆ ಎಂದು,” ಬರೆದುಕೊಂಡಿದ್ದರು.


 
View this post on Instagram
 

Chocolate and vanilla are better together #travel #travelphotography #travelislife #travelholic #germany #europe #thebarefeetchronicles


A post shared by Samyuktha Hegde (@samyuktha_hegde) on
First published:June 28, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...