Samyuktha Hegde: ಶೂಟಿಂಗ್ ವೇಳೆ ಅವಘಡ, ನಟಿ ಸಂಯುಕ್ತಾ ಹೆಗಡೆಗೆ ಗಂಭೀರ ಗಾಯ

ನಟಿ ಸಂಯುಕ್ತಾ ಹೆಗ್ಡೆ ಸದ್ಯ ‘ಕ್ರೀಮ್‘ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸಾಹಸ ದೃಶ್ಯದ ವೇಳೆ ನಟಿಗೆ ಗಾಯವಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.

ನಟಿ ಸಂಯುಕ್ತಾ ಹೆಗ್ಡೆ

ನಟಿ ಸಂಯುಕ್ತಾ ಹೆಗ್ಡೆ

  • Share this:
ಸ್ಯಾಂಡಲ್​ ವುಡ್​ನ (Sandalwood) ಕಿರಿಕ್ ಬೆಡಗಿ ನಟಿ ಸಂಯುಕ್ತ ಹೆಗ್ಡೆ (Samyuktha Hegde) ಕೆಲ ಸಮಯದಿಂದ ಚಿತ್ರರಂಗದಿಂದ ದೂರವಾಗಿದ್ದರು. ತೆಲುಗು, ತಮಿಳು ಸಿನಿಮಾಗಳಲ್ಲಿ ನಟಿಸುತ್ತಿದ್ದ ಸಂಯುಕ್ತ ಇದೀಗ ಕ್ರೀಮ್ (Cream) ಎಂಬ ಸಿನಿಮಾದಲ್ಲಿ (Movie) ನಟಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್​ ಸಹ ನಡೆಯುತ್ತಿದ್ದು, ಚಿತ್ರದ ಚಿತ್ರೀಕರಣದ ವೇಳೆ ನಾಯಕಿ ಸಂಯುಕ್ತ ಹೆಗ್ಡೆಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಹೌದು, ಕ್ರೀಮ್ ಚಿತ್ರದ ಫೈಟಿಂಗ್​ ಸನ್ನಿವೇಶದ ಚಿತ್ರೀಕರಣ ಮಾಡುತ್ತಿದ್ದ ವೇಳೆ ನಟಿ ಸಂಯುಕ್ತ ಹೆಗ್ಡೆಗೆ ಪೆಟ್ಟಾಗಿರುವುದಾಗಿ ತಿಳಿದುಬಂದಿದೆ. ಸದ್ಯ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸಿನಿಮಾದ ಚಿತ್ರೀಕರಣ ಮುಂದೂಡಿರುವುದಾಗಿ ಚಿತ್ರತಂಡ ತಿಳಿಸಿದೆ.

ಸಾಹಸ ದೃಶ್ಯದ ವೇಳೆ ಸಂಯುಕ್ತ ಹೆಗ್ಡೆಗೆ ಗಾಯ:

ಹೌದು, ನಟಿ ಸಂಯುಕ್ತಾ ಹೆಗ್ಡೆ ಸದ್ಯ ‘ಕ್ರೀಮ್‘ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಸಾಹಸ ದೃಶ್ಯದ ವೇಳೆ ನಟಿಗೆ ಗಾಯವಾಗಿದ್ದು, ಸದ್ಯ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ. ಹೀಗಾಗಿ ಸಿನಿಮಾದ ಶೂಟಿಂಗ್​ ಅನ್ನು ತಾತ್ಕಾಲಿಕವಾಗಿ ಚಿತ್ರತಂಡ ಮುಂದೂಡಿದೆಯಂತೆ. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಫೈಟ್ ಮಾಸ್ಟರ್ ಪ್ರಭು ಸಮ್ಮುಖದಲ್ಲಿ ಈ ಫೈಟಿಂಗ್​ ಸೀನ್​ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ನಡೆದ ಅಚಾತುರ್ಯದಿಂದ ಸಂಯುಕ್ತ ಅವರ ಕಾಲು ಹಾಗೂ ತಲೆಗೆ ಬಲವಾದ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಇನ್ನು, ಚಿತ್ರೀಕರಣ ಮಾಡುವಾಗ ಡ್ಯೂಪ್ ಬಳಸುವಂತೆ ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ಅವರು ಸಲಹೆ ನೀಡಿದ್ದರು ಎನ್ನಲಾಗಿದೆ. ಈ ಚಿತ್ರಕ್ಕೆ ಅಭಿಷೇಕ್ ಬಸಂತ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಡಿ.ಕೆ.ದೇವೇಂದ್ರ ಅವರು ಬಂಡವಾಳ ಹೂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ನಟಿ ಸಂಯುಕ್ತ ಹಗ್ಡೆಗೆ ಗಾಯ


ಚೇತರಿಕೆ ಕಾಣುತ್ತಿರುವ ಸಂಯುಕ್ತ:

ಸದ್ಯ ನಟಿ ಸಂಯುಕ್ತ ಹೆಗ್ಡೆ ಆರೋಗ್ಯದ ಕುರಿತು ಮಾಹಿತಿ ನೀಡಿರುವ ಚಿತ್ರದ ನಿರ್ಮಾಪಕರ ಡಿ.ಕೆ. ದೇವೇಂದ್ರ ಅವರು, ‘ಸಂಯುಕ್ತಾ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ಇನ್ನು 15 ದಿನ ವಿಶ್ರಾಂತಿ ಮಾಡುವಂತೆ ಸೂಚಿಸಿದ್ದಾರೆ. ಅವರ ಕಾಲಿಗೆ ಹಾಗೂ ಕಣ್ಣಿನ ಬಳಿ ಪೆಟ್ಟುಗಳಾಗಿವೆ. ಡ್ಯೂಪ್ ಬಳಲಸು ಸ್ವತಃ ಸಂಯುಕ್ತಾ ಅವರು ಒಪ್ಪಲಿಲ್ಲ. ಇದೊಂದು ನೈಜ ಘಟನೆ ಆಧರಿಸಿ ಮಾಡಿದ ಸಿನಿಮಾ‘ ಎಂದು ಹೇಳಿದ್ದಾರೆ.

ಇದನ್ನೂ ಓದಿ: Pooja Hegde: ಬೋಲ್ಡ್ ಸೆಲ್ಫಿ ಹಂಚಿಕೊಂಡ ಟಾಲಿವುಡ್​ ಬ್ಯೂಟಿ, ಪೂಜಾ ಹೆಗ್ಡೆ ಲುಕ್​ಗೆ ಕ್ಲೀನ್​ ಬೋಲ್ಡ್ ಆದ ನೆಟ್ಟಿಗರು!

ಹಣವಿದ್ದರೆ ಬೇಗ ಫೇಮಸ್​ ಆಗಬಹುದು ಎಂದಿದ್ದ ಸಂಯುಕ್ತಾ:

ಇನ್ನು, ವಿವಾದಗಳಿಂದ ಹೆಚ್ಚು ಸುದ್ದಿಯಾಗುತ್ತಿದ್ದ ಸಂಯುಕ್ತ ಇದೀಗ ಗಾಐ ಮಾಡಿಕೊಂಢು ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕಿರಿಕ್ ಪಾರ್ಟಿ ಚಿತ್ರದ ಮೂಲಕ ಖ್ಯಾತಿ ಪಡೆದಿದ್ದ ನಟಿ ನಂತರ ಕೆಲ ಸಿನಿಮಾಗಳ್ಲಲಿ ನಟಿಸಿದ್ದರು, ಬಳಿಕ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದ ಸಂಯುಕ್ತ ಇದಿಗ ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಸಂದರ್ಶನ ಒಂದರಲ್ಲಿ ಮಾತನಾಡುವಾಗ ಹಣವಿದ್ದರೆ ಯಾವ ನಟ ನಟಿಯರು ಬೇಕಾದರೂ ಕೇವಲ ಕಡಿಮೆ ಸಮಯದಲ್ಲಿ ಬಹು ಬೇಗ ಜನಪ್ರಿಯತೆ ಗಳಿಸಬಹುದು, ಹೆಚ್ಚು ಹೆಚ್ಚು ಅವಕಾಶಗಳನ್ನು ಪಡೆಯಬಹುದು ಎಂದು ಹೇಳುವ ಮೂಲಕ ಶಾಕ್​ ನೀಡಿದ್ದಾರೆ.

ಇದನ್ನೂ ಓದಿ: Disha - Tiger Shroff: ಬಾಲಿವುಡ್​ನಲ್ಲಿ ಮತ್ತೊಂದು ಬ್ರೇಕಪ್​ ಸುದ್ದಿ, ಟೈಗರ್ ಶ್ರಾಫ್​ - ದಿಶಾ ಪಾಟ್ನಿ ಜೊತೆಗಿಲ್ವಾ?

ಕೆಲವು ನಟ-ನಟಿಯರು ಬಹು ಬೇಗ ಫೇಮ್​ ಪಡೆಯಲು ಕಾರಣವೇನು? ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ, ‘ನ್ಯಾಷನಲ್ ಕ್ರಷ್, ಸ್ಟೇಟ್​ ಕ್ರಷ್ ಎಂಬುದೆಲ್ಲ ಹಣ ಕೊಟ್ಟು ಖರೀದಿಸಿದ ಬಿರುದುಗಳು. ಸಿನಿಮಾ ರಂಗದಲ್ಲಿ ಬೆನ್ನಹಿಂದೆ ಗಾಡ್​ ಫಾದರ್ ರೀತಿ ಯಾರಾದರೂ ಇದ್ದರೆ ಅಥವಾ ಹಣವಿದ್ದರೆ ಯಾವುದೇ ನಟ ನಟಿಯರು ಸುಲಭವಾಗಿ ಜನಪ್ರಿಯತೆ ಗಳಿಸಬಹುದು. ಪಿಆರ್​ಗಳಿಗೆ ಹಣ ನೀಡಿದರೆ ನಿಮಗೆ ಏನು ಬೇಕೋ ಅದನ್ನೆ ಅವರು ಮಾಡಿಕೊಡುತ್ತಾರೆ. ಒಬ್ಬರಿಗೆ ಉದಾಹರಣೆಗೆ ಚಾಕೊಲೇಟ್​ ಬಾಯ್ ಇಮೇಜ್ ಬೇಕು ಅಂದ್ರೆ ಪಿಆರ್​ಗಳು ಅದನ್ನು ಮಾಡಿಯೇ ತೀರುತ್ತಾರೆ‘ ಎಂದು ಹೇಳುವ ಮೂಲಕ ಸಿನಿರಂಗದ ಇನ್ನೊಂದು ಮುಖವನ್ನು ತೆರೆದಿಟ್ಟಿದ್ದಾರೆ.
Published by:shrikrishna bhat
First published: