ವಿದೇಶಿ ಹುಡುಗನ ಜೊತೆ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಕುಚು ಕುಚು?

ಈ ಫೋಟೋಗೆ ಹಲವರು ಪ್ರತಿಕ್ರಿಯಿಸಿದ್ದು, ಕೆಲವರು ಜೋಡಿಗಳ ಬಗ್ಗೆ ಮೆಚ್ಚುಗೆ ಸೂಚಿಸಿದರೆ, ಮತ್ತೆ ಕೆಲವರು ನಟಿಯ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ.

zahir | news18
Updated:June 8, 2019, 8:27 PM IST
ವಿದೇಶಿ ಹುಡುಗನ ಜೊತೆ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಕುಚು ಕುಚು?
@THE PENTAGRAM STUDIO
  • News18
  • Last Updated: June 8, 2019, 8:27 PM IST
  • Share this:
ಸ್ಯಾಂಡಲ್​ವುಡ್​ನ ಕಿರಿಕ್ ಹುಡುಗಿ ಸಂಯುಕ್ತ ಹೆಗ್ಡೆ ಸದಾ ಒಂದಲ್ಲೊಂದು ವಿಷಯಗಳಿಂದ ಸುದ್ದಿಯಲ್ಲಿರುತ್ತಾರೆ. ಅದರಲ್ಲೂ ಹೆಚ್ಚಾಗಿ ವಿವಾದ ಮತ್ತು ಟ್ರೋಲ್​ಗಳಿಂದಲೇ ಕಿರಿಕ್ ಸುಂದರಿ ಸುದ್ದಿ ಕಾಲಂಗಳಲ್ಲಿ ಸ್ಥಾನ ಪಡೆದುಕೊಂಡಿದ್ದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿರಂಗದಿಂದ ದೂರ ಉಳಿದಿರುವ ನಟಿ , ಇದೀಗ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ಕೂಡ ತಮ್ಮ ವೈಯುಕ್ತಿಕ ವಿಚಾರಗಳಿಂದ ಎಂಬುದೇ ವಿಶೇಷ. ಹೌದು, ಸಂಯುಕ್ತ ಹೆಗ್ಡೆ ಇದೀಗ ಲವ್​ನಲ್ಲಿ ಬಿದ್ದಿದ್ದಾರೆಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಇದಕ್ಕೆ ಸಾಕ್ಷಿ ಎಂಬಂತೆ ವಿದೇಶಿ ಹುಡುಗನೊಂದಿಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ತನ್ನ ಗೆಳೆಯ ಮಡಿಲಲ್ಲಿ ಕೂತಿರುವಂತಹ ಫೋಟೋವನ್ನು ಸಂಯುಕ್ತ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇದಕ್ಕೆ ಚಾಕೊಲೇಟ್ ಜತೆ ವೆನಿಲ್ಲಾ ಸೇರಿದರೆ ಚೆನ್ನಾಗಿರುತ್ತದೆ ಎಂದು ಟ್ಯಾಗ್​​ಲೈನ್ ಸಹ ನೀಡಿದ್ದಾರೆ.
 

Loading...
View this post on Instagram
 

Chocolate and vanilla are better together #travel #travelphotography #travelislife #travelholic #germany #europe #thebarefeetchronicles


A post shared by Samyuktha Hegde (@samyuktha_hegde) on


ಇದರಿಂದ ಸಂಯುಕ್ತ ವಿದೇಶಿಗನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆಂಬ ಸುದ್ದಿಯೊಂದು ಹುಟ್ಟಿಕೊಂಡಿದೆ. ಈ ಫೋಟೋಗೆ ಹಲವರು ಪ್ರತಿಕ್ರಿಯಿಸಿದ್ದು, ಕೆಲವರು ಜೋಡಿಗಳ ಬಗ್ಗೆ ಮೆಚ್ಚುಗೆ ಸೂಚಿಸಿದರೆ, ಮತ್ತೆ ಕೆಲವರು ನಟಿಯ ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಒಟ್ಟಿನಲ್ಲಿ ಸದಾ ವಿವಾದಗಳಿಂದ ಸುದ್ದಿಯಲ್ಲಿರುತ್ತಿದ್ದ ಕಿರಿಕ್ ಹುಡುಗಿ ಇದೇ ಮೊದಲ ಬಾರಿಗೆ ಪ್ರೀತಿ ಪ್ರೇಮದ ವಿಚಾರದಿಂದ ಗಮನ ಸೆಳೆದಿದ್ದಾರೆ. 
View this post on Instagram
 

Auf Reisen trifft man die besten Menschen. @chris.1803 #thailand #germany #thebarefeetchronicles #travel #phiphi


A post shared by Samyuktha Hegde (@samyuktha_hegde) on


First published:June 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...