Ramya: ಮೈಸೂರಿನ ದೋಸೆ ತಿಂದು ಕನ್ನಡ ಸಿನಿಮಾ ಟ್ರೈಲರ್ ನೋಡಿ ಅಂತಾ ಮೋದಿಗೆ ರಮ್ಯಾ ಟಿಪ್ಸ್

ಸ್ಯಾಂಡಲ್​ ವುಡ್ ಕ್ವೀನ್ ರಮ್ಯಾ (Ramya) ಟ್ವೀಟ್ ಮೂಲಕ ಮೋದಿಗೆ ಸ್ವಾಗತ ಕೋರಿದ್ದಾರೆ. ಜೊತೆಗೆ ಕನ್ನಡ ಸಿನಿಮಾ ಒಂದರ ಟ್ರೈಲರ್ ನೋಡುವಂತೆ ಸಹ ಸಲಹೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಕಳೆದ ಎರಡು ದಿನಗಳ ಕಾಲ ಕರ್ನಾಟಕ ಪ್ರವಾಸದಲ್ಲಿದ್ದರು. ಮೊದಲ ದಿನ ಬೆಂಗಳೂರಿನಲ್ಲಿ ಅನೇಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದ ಮೋದಿ ಅವರು, ಮರುದಿನ ಅಂದ್ರೆ ಜೂನ್ 21ರಂದು ಮೈಸೂರಿಒಗೆ ತೆರಳಿದ್ದರು. ಅಲ್ಲಿಯೂ ಅನೇಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಅವರು ಬಳಿಕ ವಿಶ್ವ ಯೋಗ ದಿನದ (International Day of Yoga) ಅಂಗವವಾಗಿ ಸಾವಿರಾರು ಜನರೊಂದಿಗೆ ಯೋಗ ಮಾಡುವ ಮೂಲಕ ಅರ್ಥಪೂರ್ಣವಾಗಿ ಯೋಗ ದಿನವನ್ನು ಆಚರಿಸಿದರು. ಬಳಿಕ ಮೈಸೂರಿನಲ್ಲಿ ಸುತ್ತೂರು ಮಠಕ್ಕೆ (Sri Suttur Math) ಸಹ ಭೇಟಿ ನೀಡಿದ್ದರು. ಅಲ್ಲದೇ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ದೆಹಲಿಗೆ ವಾಪಸ್ಸಾಗಿದ್ದಾರೆ. ಆದರೆ ಇದರ ನಡುವೆ ಸ್ಯಾಂಡಲ್​ ವುಡ್ ಕ್ವೀನ್ ರಮ್ಯಾ (Ramya) ಟ್ವೀಟ್ ಮೂಲಕ ಮೋದಿಗೆ ಸ್ವಾಗತ ಕೋರಿದ್ದಾರೆ. ಜೊತೆಗೆ ಕನ್ನಡ ಸಿನಿಮಾ ಒಂದರ ಟ್ರೈಲರ್ ನೋಡುವಂತೆ ಸಹ ಸಲಹೆ ನೀಡಿದ್ದಾರೆ.

ಮೋದಿಗೆ ಸಲಹೆ ನೀಡಿದ ರಮ್ಯಾ:

ಇನ್ನು, ಟ್ವೀಟ್​ ಮಾಡುವ ಮೂಲಕ ನಟಿ ರಮ್ಯಾ ಮೋದಿಗೆ ಸ್ವಾಗತ ಕೋರಿದ್ದಾರೆ. ಅಲ್ಲದೇ ಮೈಸೂರಿನಲ್ಲಿ ಆಗಬೇಕಾಗಿರು ಕೆಲ ಕೆಲಸಗಳ ಪಟ್ಟಿಯನ್ನು ನೀಡಿದ್ದಾರೆ. ಅಲ್ಲದೇ ಕನ್ನಡದ ಹೊಸಬರ ಚಿತ್ರದ ಟ್ರೈಲರ್ ಅನ್ನು ನೋಡುವಂತೆ ಹೇಳಿದ್ದಾರೆ. ಟ್ವೀಟ್​ ನ ಆರಂಭದಲ್ಲಿ ನಮ್ಮ ಮೈಸೂರಿಗೆ ಸ್ವಾಗತ ನರೇಂದ್ರ ಮೋದಿ ಅವರೆ ಎಂದು ಬರೆದುಕೊಂಡಿದ್ದಾರೆ. ಈ ಟ್ವೀಟ್​ ಮಾಡುತ್ತಿದ್ದಂತೆ ವೈರಲ್ ಆಗಿದ್ದು, ಅನೇಕರು ಅನೇಕ ರೀತಿಯಲ್ಲಿ ಕಾಮೆಂಟ್ ಮಾಡಲಾರಂಭಿಸಿದ್ದಾರೆ.

ಮೈಸೂರಿನಲ್ಲಿ ಮಾಡಬೇಕಾಗಿರು ಕೆಲಸಗಳ ಪಟ್ಟಿಯನ್ನೂ ನೀಡಿರುವ ರಮ್ಯಾ ಮೊದಲನೇಯದಾಗಿ ನೀವು ಇಲ್ಲಿನ ರಸ್ತೆಗಳನ್ನು ಉದ್ಘಾಟನೆ ಮಾಡಿ. ಖಂಡಿತವಾಘಿಐಉ ನಮಗೆ ಅದರ ಅವಶ್ಯಕತೆ ತುಂಬಾನೇ ಇದೆ. ಇದಕ್ಕೆ ರಸ್ತೆ ಸಾರಿ್ಗೆ ಮತ್ತು ಹೆದ್ದಾಋಇಗಳ ಸಚಿವ ನಿತಿನ್ ಗಡ್ಕರಿ ಅವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ,. ನಂತರದಲ್ಲಿ ಮೋದಿ ಅವರಿಗೆ ದಯವಿಟ್ಟು ನೀವು ನಮ್ಮ ಪ್ರಸಿದ್ಧ ಮೈಲಾರಿ ಬೆಣ್ಣೆ ದೋಸೆಯನ್ನು ಸೇವಿಸಿ. ಇಲ್ಲಿಯಂತಹ ಮೈದುವಾದ ಬೆಣ್ಣೆ ದೋಸೆಯನ್ನು ನೀವು ಎಲ್ಲಿಯೂ ಸೇವಿಸಿರುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕವಾಗಿ ಮೋದಿ ಅವರಿಗೆ ಸ್ವಾಗತ ಕೋರಿದ್ದಲ್ಲದೇ ಸಲಹೆಗಳನ್ನೂ ನೀಡಿದ್ದಾರೆ.

ಇದನ್ನೂ ಓದಿ: Vikrant Rona: 'ವಿಕ್ರಾಂತ್​ ರೋಣ'ನ ಹೆಸರಲ್ಲಿ ಒಂದಾದ ಸ್ಯಾಂಡಲ್​ವುಡ್, ಒಂದೇ ವೇದಿಕೆಯಲ್ಲಿ ಘಟಾನುಘಟಿಗಳು

ಕನ್ನಡ ಸಿನಿಮಾದ ಟ್ರೈಲರ್ ನೋಡಿ ಎಂದ ರಮ್ಯಾ:

ಮೋದಿ ಆಗಮನಕ್ಕೆ ಸರಣಿ ಟ್ವೀಟ್ ಮಾಡಿರುವ ರಮ್ಯಾ ತಮ್ಮ ಮತ್ತೊಂದು ಟ್ವೀಟ್​ ನಲ್ಲಿ ಮೋದಿ ಅವರಿಗೆ ಕನ್ನಡ ಸಿನಿಮಾದ ಟ್ರೈಲರ್ ನೋಡಿ ಎಂದು ಹೇಳಿದ್ದಾರೆ. ಮೈಸೂರಿನ ಪ್ರಸಿದ್ಧ ಆರ್ಕೆಸ್ಟ್ರಾ ಸಂಸ್ಕ್ರತಿಯ ಬಗ್ಗೆ ತಿಳಿದುಕೊಳ್ಳಬೇಕಾದರೆ ಹೊಸಬರೇ ಸೇರಿಕೊಂಡು ಮಾಡಿರುವ ‘ಆರ್ಕೆಸ್ಟ್ರಾ ಮೈಸೂರು‘ ಚಿತ್ರದ ಟ್ರೈಲರ್ ವೀಕ್ಷಿಸಿ ಎಂದು ಟ್ವೀಟ್​ ಮಾಡಿದ್ದಾರೆ.

ರಮ್ಯಾ ಟ್ವೀಟ್​ಗೆ ಪ್ರತಿಕ್ರಿಯಿಸಿದ ನೆಟ್ಟಿಗರು:

ರಮ್ಯಾ ಟ್ವೀಟ್​ ಮಾಡುತ್ತಿದ್ದಂತೆ ಟ್ವೀಟ್​ ಸಖತ್ ವೈರಲ್ ಆಗಿದೆ. ಅವರ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ಮೆನು ಅಲ್ಲಿ ಮೈಸೂರು ಪಾಕ ಮತ್ತು ಹನುಮಂತು ಬಿರಿಯಾನಿ ಸೇರಿಸಿ, ನಿಮಗೆ ಮಾಡೋಕೆ ಕೆಲ್ಸ ಇಲ್ಲ. ನಿಮ್ಮ ಪಾರ್ಟಿ ಜನಾನೆ ನಿಮ್ಮನ್ನು ಓಡಿಸಿದ್ದಾರೆ ಎಂದೆಲ್ಲಾ ತರಹೇವಾರಿಯಾಗಿ ಕಾಮೆಂಟ್ ಮಾಡಿದ್ದಾರೆ.
Published by:shrikrishna bhat
First published: