ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ (Ramya Divya Spandana) ಬಹಳ ದಿನಗಳ ಕಾಲ ಚಿತ್ರರಂಗದಿಂದ ದೂರ ಉಳಿದಿದ್ರು. ಇದೀಗ ಮತ್ತೆ ಸಿನಿಮಾಗಳಲ್ಲಿ (Movies) ಆ್ಯಕ್ಟೀವ್ ಆಗ್ತಿದ್ದಾರೆ. ಡಾಲಿ ಧನಂಜಯ್ ಸಿನಿಮಾ ಮೂಲಕ ರಮ್ಯಾ ಕಮ್ ಬ್ಯಾಕ್ ಮಾಡ್ತಿದ್ದಾರೆ. ತೆರೆ ಮೇಲೆ ಮೋಹಕ ತಾರೆ ರಮ್ಯಾ ನೋಡಿ ಹಲವು ವರ್ಷಗಳೇ ಕಳೆದು ಹೋಗಿದೆ. ಆದ್ರೆ ರಮ್ಯಾ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಇತ್ತ ರಮ್ಯಾ ಕೂಡ ಮತ್ತೆ ಫ್ಯಾನ್ಸ್ ಗಾಗಿ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲೂ (Social Media) ಸಕ್ರಿಯರಾಗಿರುವ ನಟಿ ರಮ್ಯಾ ಹಲವು ವಿಚಾರಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಶೇರ್ ಮಾಡಿಕೊಳ್ತಾರೆ. ಇದೀಗ ಗೋಲ್ಡನ್ ಗ್ಲೋಬ್ ಅವಾರ್ಡ್ (Golden Globe Award) ಗೆದ್ದ RRR ಸಿನಿಮಾ ಟೀಮ್ ಬಗ್ಗೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ (YS Jagan) ಹಾಡಿದ ಮಾತನ್ನು ಗಾಯಕ ಅದ್ನಾನ್ ಸಮಿ ಖಂಡಿಸಿದ್ರು. ಇದೀಗ ಅದ್ನಾನ್ ಸಮಿ ಮಾತಿಗೆ ರಮ್ಯಾ ಟಾಂಗ್ ಕೊಟ್ಟಿದ್ದಾರೆ.
RRR ಸಿನಿಮಾ ತಂಡಕ್ಕೆ ಆಂಧ್ರ ಸಿಎಂ ವಿಶ್
RRR ಸಿನಿಮಾದ ‘ನಾಟು ನಾಟು..’ ಹಾಡು ಗೋಲ್ಡನ್ ಗ್ಲೋಬ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಬಾಚಿಕೊಂಡಿತ್ತು. ಅನೇಕ ನಟ-ನಟರು, ರಾಜಕಾರಣಿಗಳು ಕೂಡ RRR ಸಿನಿಮಾ ಟೀಮ್ಗೆ ಶುಭಕೋರಿದೆ. ಹಾಗೇ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಸಹ ಈ ಟ್ವೀಟ್ ಶೇರ್ ಮಾಡಿಕೊಂಡಿದ್ರು. ತೆಲುಗು ಬಾವುಟ ಬಾನೆತ್ತರಕ್ಕೆ ಹಾರುವಂತೆ ಮಾಡಿದ್ದೀರಿ ಎಂದು ಸಂತಸ ವ್ಯಕ್ತಪಡಿಸಿದ್ದರು. ಇದನ್ನು ಅದ್ನಾನ್ ಸಮಿ ಖಂಡಿಸಿದ್ದರು.
ನಾವು ಮೊದಲು ಭಾರತೀಯರು- ಅದ್ನಾನ್ ಸಮಿ
ತೆಲುಗು ಬಾವುಟ ಬಾನೆತ್ತರಕ್ಕೆ ಹಾರುವಂತೆ ಮಾಡಿದ್ದೀರಿ ಎಂದ ಆಂಧ್ರ ಸಿಎಂ ಜಗನ್ ಟ್ವೀಟ್ ಖಂಡಿಸಿ ಗಾಯಕ ಅದ್ನಾನ್ ಸಮಿ ತೆಲುಗು ಧ್ವಜ? ಭಾರತದ ಧ್ವಜ ಅಲ್ಲವೇ? ನಾವು ಮೊದಲು ಭಾರತೀಯರು. ನಿಮ್ಮನ್ನು ನೀವು ಪ್ರತ್ಯೇಕಿಸಿಕೊಳ್ಳುವುದನ್ನು ನಿಲ್ಲಿಸಿ. ಅದರಲ್ಲೂ ಮುಖ್ಯವಾಗಿ ಅಂತರಾಷ್ಟ್ರೀಯವಾಗಿ ನಾವು ಒಂದು ದೇಶ. 1947ರಲ್ಲಿ ನೋಡಿದಂತೆ ಪ್ರತ್ಯೇಕತಾವಾದಿ ವರ್ತನೆಯು ಅತ್ಯಂತ ಅನಾರೋಗ್ಯಕರ. ಧನ್ಯವಾದಗಳು. ಜೈ ಹಿಂದ್’ ಎಂದು ಗಾಯಕ ಅದ್ನಾನ್ ಸಮಿ ಬರೆದುಕೊಂಡಿದ್ದರು.
Telugu flag? You mean INDIAN flag right? We are Indians first & so kindly stop separating yourself from the rest of the country…Especially internationally, we are one country!
This ‘separatist’ attitude is highly unhealthy as we saw in 1947!!!
Thank you…Jai HIND!🇮🇳 https://t.co/rE7Ilmcdzb
— Adnan Sami (@AdnanSamiLive) January 11, 2023
Yes, we are are Indians but we are also Kannadigas, Tamils, Telugu, Bengali etc we all have our ‘flags’ just like we have our own language. We feel proud as Indians & also as people rooted by culture, language, flag. Unity in diversity ring a bell? https://t.co/8NbZPDiW3A
— Ramya/Divya Spandana (@divyaspandana) January 12, 2023
ನಟಿ ರಮ್ಯಾ ಟ್ವೀಟ್ಗೆ ಅನೇಕ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ