ಮೋಹಕ ತಾರೆ ರಮ್ಯಾ.. ಕನ್ನಡ ಚಿತ್ರರಂಗ (Kannada Film Industry) ಕಂಡ ಮುದ್ದು ನಟಿಯರಲ್ಲಿ ಒಬ್ಬರು. ಅಭಿನಯದಲ್ಲೂ (Acting) ಸೈ, ಗ್ಲಾಮರ್ಗೂ (Glamour) ಜೈ ಎನಿಸಿಕೊಂಡ ರಮ್ಯಾ ಅಂದ್ರೆ ಈಗಲೂ ಪಡ್ಡೆ ಹುಡುಗರು ನಿದ್ದೆಯಲ್ಲೂ ಕನವರಿಸುತ್ತಾರೆ. ರಾಜಕೀಯಕ್ಕೆ (Politics) ಎಂಟ್ರಿ ಕೊಟ್ಟ ಬಳಿಕ ರಮ್ಯಾ ದಿವ್ಯಸ್ಪಂದನ (Ramya Divya Spandana) ಅವರನ್ನು ವಿರೋಧಿಸುವವರು ಹುಟ್ಟಿಕೊಂಡರು. ಆದರೆ ರಮ್ಯಾ ಸಿನಿಮಾಗಳಿಗೆ ಎಲ್ಲರೂ ಅಭಿಮಾನಿಗಳೇ! ಬರೀ ಸ್ಯಾಂಡಲ್ವುಡ್ (Sandalwood) ಅಷ್ಟೇ ಅಲ್ಲ, ಪಕ್ಕದ ತಮಿಳು (Tamil), ತೆಲುಗು (Telugu) ಸಿನಿಮಾಗಳಲ್ಲೂ ರಮ್ಯಾ ತಮ್ಮ ಛಾಪು ಮೂಡಿಸಿದವರು. ಸುಮಾರು ವರ್ಷಗಳಿಂದ ರಾಜಕೀಯದಲ್ಲಿ ಬ್ಯುಸಿಯಾಗಿರುವ ರಮ್ಯಾ, ಸಿನಿಮಾದತ್ತ ಆಸಕ್ತಿವಹಿಸುತ್ತಿಲ್ಲ. ಯಾವಾಗಪ್ಪ ರಮ್ಯಾ ಮತ್ತೆ ಸಿನಿಮಾ ಮಾಡ್ತಾರೆ ಅಂತ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಆದರೆ, ಇದೀಗ ರಮ್ಯಾ ಅವರ ಫೋಟೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ರಮ್ಯಾ ಜೊತೆ ಪೋಸ್ ಕೊಟ್ಟ ಯಾರು?
ಸದ್ಯಕ್ಕೆ ರಮ್ಯಾ ಬಿಸಿ ಬಿಸಿ ಚರ್ಚೆಯಾಗುತ್ತಿದ್ದಾರೆ.ಈ ಬಾರಿ ರಮ್ಯಾ ಇಷ್ಟೊಂದು ಚರ್ಚೆಯಾಗಲು ಒಂದು ಫೋಟೋ ಕಾರಣ. ಹೌದು, ಯುವಕನೊಬ್ಬ ರಮ್ಯಾ ಜೊತೆ ಪೋಸ್ ಕೊಟ್ಟಿದ್ದಾರೆ. ಇಷ್ಟೇ ಆಗಿದ್ದರೇ ರಮ್ಯಾ ಅವರ ವಿಚಾರ ಸುದ್ದಿಯಾಗುತ್ತಿರಲಿಲ್ಲ. ರಮ್ಯಾ ಅವರನ್ನು ಈ ಯುವಕ ತಬ್ಬಿಕೊಂಡು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಇದು ರಮ್ಯಾ ಅವರ ಅಭಿಮಾನಿಗಳಲ್ಲಿ ಅನುಮಾನ ಮೂಡಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ಹುಡುಗನ ಬಗ್ಗೆ ಸರ್ಚ್ ಮಾಡ್ತಿದ್ದಾರಂತೆ.
ಕರಣ್ ಜೋಶಿ ಎಂಬಾತನ ರಮ್ಯಾ ಫೋಟೋ
ಕರಣ್ ಜೋಶಿ ಎಂಬ ಯುವಕನ ಜೊತೆ ರಮ್ಯಾ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಈ ಯುವಕನ ಜೊತೆಎ ಆತ್ಮೀಯಾವಾಗಿ ಫೋಟೋ ತೆಗಿಸಿಕೊಂಡಿದ್ದಾರೆ. ತಬ್ಬಿಕೊಂಡು ರಮ್ಯಾ ಫೋಟೋ ತೆಗೆಸಿಕೊಂಡಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಅಮೂಲ್ಯ ಅವರ ಸೀಮಂತದಲ್ಲಿ ಸ್ಯಾಂಡಲ್ವುಡ್ ತಾರೆಯರ ದಂಡೇ ನೆರೆದಿತ್ತು. ಅಲ್ಲಿ ನಟಿ ರಮ್ಯಾ ಕೂಡ ಬಂದಿದ್ದರು. ಈ ವೇಳೆ ತಾವು ಚಿತ್ರರಂಗಕ್ಕೆ ವಾಪಸ್ಸಾಗುವ ಬಗ್ಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Aamir Khan ಮಗಳ ಹುಟ್ಟುಹಬ್ಬದ ಫೋಟೋ ಟ್ರೋಲ್! ಕೇಕ್ ಕಟ್ ಮಾಡೋಕೆ ಈ ಬಟ್ಟೆನಾ ಹಾಕೋದು ಅಂತ ಕ್ಲಾಸ್
ಪುನೀತ್ ಜೊತೆ ಸಿನಿಮಾ ಮಾಡಬೇಕಿತ್ತು ರಮ್ಯಾ
ಸ್ಯಾಂಡಲ್ವುಡ್ನ ಹಿಟ್ ಜೋಡಿಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ನಟಿ ರಮ್ಯಾ ಅವರ ಜೋಡಿಯೂ ಒಂದು. ತಮ್ಮ ಮೊದಲ ಚಿತ್ರ ಅಭಿಯಲ್ಲಿ ರಮ್ಯಾ ಪುನೀತ್ ಜೊತೆ ನಟಿಸಿದ್ದರು. ಅದು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಬಳಿಕ ಹಿಟ್ ಎನಿಸಿಕೊಂಡ ಆ ಜೋಡಿ, ಆಕಾಶ್, ಅರಸು ಸಿನಿಮಾಗಳಲ್ಲಿ ಮೋಡಿ ಮಾಡಿತ್ತು. ಅದಾದ ಮೇಲೆ ರಮ್ಯಾ ಹಾಗೂ ಪುನೀತ್ ತೆರೆ ಮೇಲೆ ಒಂದಾಗಲಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪುನೀತ್ ರಾಜ್ಕುಮಾರ್ ಜೊತೆ ರಮ್ಯಾ ಸಿನಿಮಾದಲ್ಲಿ ನಟಿಸಬೇಕಿತ್ತು.
ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ 3 ಸಿನಿಮಾದಲ್ಲಿ ಇವ್ರು ವಿಲನ್ ಅಂತೆ! 'ಬಾಹುಬಲಿ'ಲೇ ಅಬ್ಬರಿಸಿದ್ರು, ಇನ್ನು ಇಲ್ಲಿ ಬಿಡ್ತಾರಾ?
ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳ ಒತ್ತಾಯ
ಚಿತ್ರರಂಗದಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾಗಳ ಮೂಲಕ ನಟಿ ರಮ್ಯಾ ಅಭಿಮಾನಿಗಳಿಗಳ ಸಂಪರ್ಕದಲ್ಲೇ ಇರುತ್ತಾರೆ. ಕೆಲವೊಮ್ಮೆ ಲೈವ್ ಬರುವ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಾರೆ. ಪ್ರತಿಸಲವೂ ಅಭಿಮಾನಿಗಳು ಕೇಳುವ ಪ್ರಶ್ನೆ ಯಾವಾರ ಸಿನಿಮಾ ಮಾಡ್ತೀರಿ? ಆದರೆ ರಮ್ಯಾ ಅದಕ್ಕೆ ಉತ್ತರ ಸರಿಯಾಗಿ ಹೇಳಿಯೇ ಇಲ್ಲ.
ಜೂನ್ ತಿಂಗಳಲ್ಲಿ ಸಿನಿಮಾ ಅನೌನ್ಸ್ ಮಾಡ್ತಾರಾ ರಮ್ಯಾ?
ಇದೇ ಬರುವ ಜೂನ್ ತಿಂಗಳಲ್ಲಿ ರಮ್ಯಾ ಹೊಸ ಸಿನಿಮಾ ಬಗ್ಗೆ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗುತ್ದಿದೆ. ಆದರೆ ಇದ್ಯಾವುದೂ ರಮ್ಯಾ ಅವರು ಅಧಿಕೃತವಾಗಿ ಹೇಳಿಲ್ಲ. ಒಂದು ವೇಳೆ ಇದು ನಿಜವೇ ಆದರೆ ರಮ್ಯಾ ಅಭಿಮಾನಿಗಳು ಈಗಿನಿಂಗಲೇ ಜಾತ್ರೆ ಮಾಡ್ತಾರೆ ಅನ್ನೋದಂತೂ ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ