Ramya: ಮತ್ತೆ ಶುರುವಾಗುತ್ತಾ 'ರಮ್ಯ' ಚೈತ್ರಕಾಲ? "ಸಿನಿಮಾ ಮಾಡೇ ಪದ್ಮಾವತಿ" ಅಂತಿದ್ದಾರೆ ಫ್ಯಾನ್ಸ್
ಸುಮಾರು ವರ್ಷಗಳಿಂದ ರಾಜಕೀಯದಲ್ಲಿ ಬ್ಯುಸಿಯಾಗಿರುವ ರಮ್ಯಾ, ಸಿನಿಮಾದತ್ತ ಆಸಕ್ತಿವಹಿಸುತ್ತಿಲ್ಲ. ಆದ್ರೆ ಅವ್ರ ಅಭಿಮಾನಿಗಳು ಕೇಳಬೇಕಲ್ಲ? “ಸಿನಿಮಾ ಮಾಡೇ ಪದ್ಮಾವತಿ” ಅಂತ ಸಾಮಾಜಿಕ ಜಾಲತಾಣಗಳಲ್ಲಿ (Social Media) ಆಗ್ರಹ ಮಾಡ್ತಾನೇ ಇದ್ರು. ಇದೀಗ ಅವರ ಅಭಿಮಾನಿಗಳ ಪ್ರಾರ್ಥನೆ ಫಲಿಸೋ ಕಾಲ ಬಂದಿದೆ. ಅಂದರೆ ರಮ್ಯಾ ಮತ್ತೆ ಸಿನಿಮಾಗಳಲ್ಲಿ ನಟಿಸ್ತಾರಾ? ಚಿತ್ರರಂಗದಲ್ಲಿ ಮತ್ತೆ ಶುರುವಾಗುತ್ತಾ ರಮ್ಯ ಚೈತ್ರಕಾಲ? ಅರೆಯೇ, ಅವಸರ ಯಾಕೆ? ನಿಧಾನಕ್ಕೆ ಈ ಸ್ಟೋರಿ ಓದಿ…
ರಮ್ಯಾ.. ಕನ್ನಡ ಚಿತ್ರರಂಗ (Kannada Film Industry) ಕಂಡ ಮುದ್ದು ನಟಿಯರಲ್ಲಿ ಒಬ್ಬರು. ಅಭಿನಯದಲ್ಲೂ (Acting) ಸೈ, ಗ್ಲಾಮರ್ಗೂ (Glamour) ಜೈ ಎನಿಸಿಕೊಂಡ ರಮ್ಯಾ ಅಂದ್ರೆ ಈಗಲೂ ಪಡ್ಡೆ ಹುಡುಗರು ನಿದ್ದೆಯಲ್ಲೂ ಕನವರಿಸುತ್ತಾರೆ. ರಾಜಕೀಯಕ್ಕೆ (Politics) ಎಂಟ್ರಿ ಕೊಟ್ಟ ಬಳಿಕ ರಮ್ಯಾ ದಿವ್ಯಸ್ಪಂದನ (Ramya Divya Spandana) ಅವರನ್ನು ವಿರೋಧಿಸುವವರು ಹುಟ್ಟಿಕೊಂಡರು. ಆದರೆ ರಮ್ಯಾ ಸಿನಿಮಾಗಳಿಗೆ ಎಲ್ಲರೂ ಅಭಿಮಾನಿಗಳೇ! ಬರೀ ಸ್ಯಾಂಡಲ್ವುಡ್ (Sandalwood) ಅಷ್ಟೇ ಅಲ್ಲ, ಪಕ್ಕದ ತಮಿಳು (Tamil), ತೆಲುಗು (Telugu) ಸಿನಿಮಾಗಳಲ್ಲೂ ರಮ್ಯಾ ತಮ್ಮ ಛಾಪು ಮೂಡಿಸಿದವರು. ಸುಮಾರು ವರ್ಷಗಳಿಂದ ರಾಜಕೀಯದಲ್ಲಿ ಬ್ಯುಸಿಯಾಗಿರುವ ರಮ್ಯಾ, ಸಿನಿಮಾದತ್ತ ಆಸಕ್ತಿವಹಿಸುತ್ತಿಲ್ಲ. ಆದ್ರೆ ಅವ್ರ ಅಭಿಮಾನಿಗಳು ಕೇಳಬೇಕಲ್ಲ? “ಸಿನಿಮಾ ಮಾಡೇ ಪದ್ಮಾವತಿ” ಅಂತ ಸಾಮಾಜಿಕ ಜಾಲತಾಣಗಳಲ್ಲಿ (Social Media) ಆಗ್ರಹ ಮಾಡ್ತಾನೇ ಇದ್ರು. ಇದೀಗ ಅವರ ಅಭಿಮಾನಿಗಳ ಪ್ರಾರ್ಥನೆ ಫಲಿಸೋ ಕಾಲ ಬಂದಿದೆ. ಅಂದರೆ ರಮ್ಯಾ ಮತ್ತೆ ಸಿನಿಮಾಗಳಲ್ಲಿ ನಟಿಸ್ತಾರಾ? ಚಿತ್ರರಂಗದಲ್ಲಿ ಮತ್ತೆ ಶುರುವಾಗುತ್ತಾ ರಮ್ಯ ಚೈತ್ರಕಾಲ? ಅರೆಯೇ, ಅವಸರ ಯಾಕೆ? ನಿಧಾನಕ್ಕೆ ಈ ಸ್ಟೋರಿ ಓದಿ…
ಶುರುವಾಗುತ್ತಾ ‘ರಮ್ಯ’ ಚೈತ್ರ ಕಾಲ?
ಹೌದು, ಇಂಥದ್ದೊಂದು ಸುದ್ದಿ ಇದೀಗ ಸ್ಯಾಂಡಲ್ವುಡ್ನಲ್ಲಿ ಸಂಚಲನ ಮೂಡಿಸಿದೆ. ಮೊನ್ನೆ ಮೊನ್ನೆ ನಟಿ ಅಮೂಲ್ಯ ಅವರ ಸೀಮಂತದಲ್ಲಿ ಸ್ಯಾಂಡಲ್ವುಡ್ ತಾರೆಯರ ದಂಡೇ ನೆರೆದಿತ್ತು. ಅಲ್ಲಿ ನಟಿ ರಮ್ಯಾ ಕೂಡ ಬಂದಿದ್ದರು. ಈ ವೇಳೆ ತಾವು ಚಿತ್ರರಂಗಕ್ಕೆ ವಾಪಸ್ಸಾಗುವ ಬಗ್ಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.
ಪುನೀತ್ ಜೊತೆ ಸಿನಿಮಾ ಮಾಡಬೇಕಿತ್ತು ರಮ್ಯಾ
ಸ್ಯಾಂಡಲ್ವುಡ್ನ ಹಿಟ್ ಜೋಡಿಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಹಾಗೂ ನಟಿ ರಮ್ಯಾ ಅವರ ಜೋಡಿಯೂ ಒಂದು. ತಮ್ಮ ಮೊದಲ ಚಿತ್ರ ಅಭಿಯಲ್ಲಿ ರಮ್ಯಾ ಪುನೀತ್ ಜೊತೆ ನಟಿಸಿದ್ದರು. ಅದು ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಿತ್ತು. ಬಳಿಕ ಹಿಟ್ ಎನಿಸಿಕೊಂಡ ಆ ಜೋಡಿ, ಆಕಾಶ್, ಅರಸು ಸಿನಿಮಾಗಳಲ್ಲಿ ಮೋಡಿ ಮಾಡಿತ್ತು. ಅದಾದ ಮೇಲೆ ರಮ್ಯಾ ಹಾಗೂ ಪುನೀತ್ ತೆರೆ ಮೇಲೆ ಒಂದಾಗಲಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಪುನೀತ್ ರಾಜ್ಕುಮಾರ್ ಜೊತೆ ರಮ್ಯಾ ಸಿನಿಮಾದಲ್ಲಿ ನಟಿಸಬೇಕಿತ್ತು.
ಹೌದು, ಈ ಬಗ್ಗೆ ಖುದ್ದು ನಟಿ ರಮ್ಯಾ ಅವರೇ ಹೇಳಿದ್ದಾರೆ. ಪುನೀತ್ ನಿಧನರಾಗಿದ್ದ ಸಂದರ್ಭದಲ್ಲಿ ಮಾತನಾಡಿದ್ದ ರಮ್ಯಾ, ಮತ್ತೆ ನಾವಿಬ್ಬರು ನಟಿಸಬೇಕಿತ್ತು ಎಂದಿದ್ದರು. ಈ ಬಗ್ಗೆ ಹಿಂದೆಯೇ ಚರ್ಚೆಯಾಗಿತ್ತು. ಇಬ್ಬರೂ ಒಪ್ಪಿಗೆ ನೀಡಿಯೂ ಆಗಿತ್ತು. ಅಷ್ಟರಲ್ಲೇ ಅವರ ಅಕಾಲಿಕ ಮರಣ ನನಗೆ ಆಘಾತ ತಂದಿದೆ ಅಂತ ರಮ್ಯಾ ಭಾವುಕರಾಗಿ ನುಡಿದಿದ್ದರು.
ಸೋಶಿಯಲ್ ಮೀಡಿಯಾಗಳಲ್ಲಿ ಅಭಿಮಾನಿಗಳ ಒತ್ತಾಯ
ಚಿತ್ರರಂಗದಿಂದ ದೂರವಿದ್ದರೂ ಸೋಶಿಯಲ್ ಮೀಡಿಯಾಗಳ ಮೂಲಕ ನಟಿ ರಮ್ಯಾ ಅಭಿಮಾನಿಗಳಿಗಳ ಸಂಪರ್ಕದಲ್ಲೇ ಇರುತ್ತಾರೆ. ಕೆಲವೊಮ್ಮೆ ಲೈವ್ ಬರುವ ಮೂಲಕ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸುತ್ತಾರೆ. ಪ್ರತಿಸಲವೂ ಅಭಿಮಾನಿಗಳು ಕೇಳುವ ಪ್ರಶ್ನೆ ಯಾವಾರ ಸಿನಿಮಾ ಮಾಡ್ತೀರಿ? ಆದರೆ ರಮ್ಯಾ ಅದಕ್ಕೆ ಉತ್ತರ ಸರಿಯಾಗಿ ಹೇಳಿಯೇ ಇಲ್ಲ.
ಮೊನ್ನೆ ಅಮೂಲ್ಯ ಅವರ ಸೀಮಂತಕ್ಕೆ ಹೋಗಿದ್ದಾಗ ಸಿನಿಮಾ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗುತ್ತಿದೆ. ಇದೇ ಬರುವ ಮಾರ್ಚ್ ತಿಂಗಳಲ್ಲಿ ರಮ್ಯಾ ಹೊಸ ಸಿನಿಮಾ ಬಗ್ಗೆ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗುತ್ದಿದೆ. ಆದರೆ ಇದ್ಯಾವುದೂ ರಮ್ಯಾ ಅವರು ಅಧಿಕೃತವಾಗಿ ಹೇಳಿಲ್ಲ. ಒಂದು ವೇಳೆ ಇದು ನಿಜವೇ ಆದರೆ ರಮ್ಯಾ ಅಭಿಮಾನಿಗಳು ಈಗಿನಿಂಗಲೇ ಜಾತ್ರೆ ಮಾಡ್ತಾರೆ ಅನ್ನೋದಂತೂ ಸುಳ್ಳಲ್ಲ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ