ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಮದುವೆ ಸಂಭ್ರಮ; ವೈವಾಹಿಕ ಜೀವನಕ್ಕೆ ಕಾಲಿಡ್ತಾರಾ ಮೋಹಕತಾರೆ ರಮ್ಯಾ?

Actress Ramya: 37 ವರ್ಷದ ರಮ್ಯಾ ನಟಿಯಾಗಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಅವರ ಮದುವೆಯ ಬಗ್ಗೆ ಹಲವಾರು ಗಾಳಿಸುದ್ದಿಗಳು ಹರಿದಾಡಿದ್ದವು. ಇದೀಗ ರಮ್ಯಾ ನಿಜವಾಗಲೂ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜೊತೆಗೆ ರಮ್ಯಾ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 

Sushma Chakre | news18
Updated:August 14, 2019, 10:49 AM IST
ಸ್ಯಾಂಡಲ್​ವುಡ್​ನಲ್ಲಿ ಮತ್ತೊಂದು ಮದುವೆ ಸಂಭ್ರಮ; ವೈವಾಹಿಕ ಜೀವನಕ್ಕೆ ಕಾಲಿಡ್ತಾರಾ ಮೋಹಕತಾರೆ ರಮ್ಯಾ?
ರಮ್ಯಾ
  • News18
  • Last Updated: August 14, 2019, 10:49 AM IST
  • Share this:
ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟಿಯಾಗಿದ್ದ ರಮ್ಯಾ 10 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಮಿಂಚಿದವರು. ಕಾಲಿವುಡ್​ನಲ್ಲೂ ಬೇಡಿಕೆ ಗಿಟ್ಟಿಸಿಕೊಂಡಿದ್ದ ರಮ್ಯಾ ಇದ್ದಕ್ಕಿದ್ದಂತೆ ಸಿನಿಜೀವನಕ್ಕೆ ವಿದಾಯ ಹೇಳಿ ರಾಜಕೀಯದಲ್ಲಿ ತೊಡಗಿಸಿಕೊಂಡರು.  2 ವರ್ಷಗಳಿಂದ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದೆ ಅಜ್ಞಾತರಾಗಿದ್ದ ರಮ್ಯಾ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಮೋಹಕತಾರೆ ರಮ್ಯಾ ಅವರನ್ನು ಮದುವೆಯಾಗುತ್ತಿರುವ ಹುಡುಗ ಯಾರು ಗೊತ್ತಾ? ಇಲ್ಲಿದೆ ಮಾಹಿತಿ.

ಕಳೆದ ವರ್ಷ ಸ್ಯಾಂಡಲ್​ವುಡ್​ನಲ್ಲಿ ಮದುವೆಯದ್ದೇ ಸದ್ದು. ದಿಗಂತ್​- ಐಂದ್ರಿತಾ ರೇ, ನಟಿ ಭಾವನಾ, ನೇಹಾ ಗೌಡ, ಚಿರಂಜೀವಿ ಸರ್ಜಾ- ಮೇಘನಾ ರಾಜ್, ಸ್ಕಂದ ಅಶೋಕ್, ನಯನಾ ಪುಟ್ಟಸ್ವಾಮಿ, ಸುನಿಲ್ ರಾವ್, ನಿರ್ದೇಶಕರಾದ ಪವನ್ ಒಡೆಯರ್, ಸಂತೋಷ್ ಆನಂದರಾಮ್ ವಿವಾಹವಾಗಿದ್ದರು. ಈ ವರ್ಷ ನಟ ಯುವರಾಜ್​ಕುಮಾರ್​ ಹಸೆಮಣೆಯೇರಿದ್ದರು. ಇದೀಗ ನಟಿ ರಮ್ಯಾ ಸರದಿ.

ದರ್ಶನ್​ ಸೇರಿ ಹಲವು ಪ್ರಭಾವಿಗಳಿಂದ ರಾಜಕಾಲುವೆ ಒತ್ತುವರಿ; ಕೈಕಟ್ಟಿ ಕೂತ ಬಿಬಿಎಂಪಿ

ಪುನೀತ್​ ರಾಜ್​ಕುಮಾರ್​ಗೆ ಜೋಡಿಯಾಗಿ 'ಅಭಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ರಮ್ಯಾ ನಂತರ ಹಿಂತಿರುಗಿ ನೋಡಲೇ ಇಲ್ಲ. ಸಾಲುಸಾಲು ಹಿಟ್ ಚಿತ್ರಗಳನ್ನು ನೀಡುತ್ತಾ ಹೋದ ಅವರು ಕನ್ನಡದ ಎಲ್ಲ ಸೂಪರ್​ಸ್ಟಾರ್​ಗಳ ಜೊತೆಯೂ ತೆರೆ ಹಂಚಿಕೊಂಡಿದ್ದಾರೆ. 2016ರಲ್ಲಿ ತೆರೆಕಂಡ 'ನಾಗರಹಾವು' ಸಿನಿಮಾ ನಂತರ ರಮ್ಯಾ ಯಾವ ಚಿತ್ರದಲ್ಲೂ ನಟಿಸಲಿಲ್ಲ.2013ರಲ್ಲಿ ಮಂಡ್ಯದಿಂದ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ ರಮ್ಯಾ ಸಂಸತ್​ ಪ್ರವೇಶಿದ್ದರು. ಆದರೆ, 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಅನುಭವಿಸಿ ಕಾಂಗ್ರೆಸ್​ ಪಕ್ಷದ ಸೋಷಿಯಲ್ ಮೀಡಿಯಾ ಉಸ್ತುವಾರಿ ವಹಿಸಿಕೊಂಡಿದ್ದರು. ಕೆಲ ವರ್ಷಗಳಿಂದ ರಾಜಕೀಯದಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳದ ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆ ಅಭಿಮಾನಿಗಳನ್ನು ಕಾಡಿತ್ತು.

ಯಾರ ಮೇಲೆ ಕಿಚ್ಚನ ‘ಪೈಲ್ವಾನ್‘​ ಕುಸ್ತಿ? ಹೀಗ್ಯಾಕೆ ಟ್ವೀಟ್ ಮಾಡಿದ್ರೂ ಸುದೀಪ್​37 ವರ್ಷದ ರಮ್ಯಾ ನಟಿಯಾಗಿ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಅವರ ಮದುವೆಯ ಬಗ್ಗೆ ಹಲವಾರು ಗಾಳಿಸುದ್ದಿಗಳು ಹರಿದಾಡಿದ್ದವು. ಇದೀಗ ರಮ್ಯಾ ನಿಜವಾಗಲೂ ಮದುವೆಯಾಗಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಮ್ಮ ಬಹುಕಾಲದ ಗೆಳೆಯ ರಾಫೆಲ್ ಜೊತೆಗೆ ರಮ್ಯಾ ದುಬೈನಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.  ಏಳೆಂಟು ವರ್ಷಗಳಿಂದ ರಿಲೇಷನ್​ಶಿಪ್​ನಲ್ಲಿರುವ ಪೋರ್ಚುಗಲ್ ದೇಶದ ರಾಫೆಲ್​- ರಮ್ಯಾ ಸದ್ಯದಲ್ಲೇ ಹಸೆಮಣೆಯೇರುವುದು ಪಕ್ಕಾ ಎನ್ನಲಾಗಿದೆ.

ರಾಫೆಲ್ ಜೊತೆಗೆ ರಮ್ಯಾ


ಕಳೆದ ವರ್ಷವೇ ಈ ಬಗ್ಗೆ ಸುಳಿವು ನೀಡಿದ್ದ ರಮ್ಯಾ ಅವರ ತಾಯಿ ರಂಜಿತಾ, ಮುಂದಿನ ವರ್ಷ ರಮ್ಯಾ ಮದುವೆಯಾಗುವುದಾಗಿ ತಿಳಿಸಿದ್ದರು. ಇದೀಗ ಮದುವೆಯ ಸಿದ್ಧತೆಗಳು ನಡೆದಿದ್ದು, ದುಬೈನಲ್ಲಿ ರಾಫೆಲ್​ ಅವರನ್ನು ರಮ್ಯಾ ವರಿಸಲು ರೆಡಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ