Ragini Dwivedi: ರಾಗಿಣಿಗಾಗಿಯೇ ಸೆಟ್ಟೇರ್ತಿದೆ ಹೊಸ ಸಿನಿಮಾ!

ರಾಗಿಣಿ ಮತ್ತೊಮ್ಮೆ ಪೊಲೀಸ್ ಆಫೀಸರ್ ಆದ್ರೇ ?

ರಾಗಿಣಿ ಮತ್ತೊಮ್ಮೆ ಪೊಲೀಸ್ ಆಫೀಸರ್ ಆದ್ರೇ ?

ಅಂದು ರಾಗಿಣಿ ಐಪಿಎಸ್ ಸಿನಿಮಾ ಬಂದಿತ್ತು. ಇಂದು ಅದೇ ರಾಗಿಣಿ ಇನ್ನೂ ಒಂದು ಚಿತ್ರ ಒಪ್ಪಿದ್ದಾರೆ. ಆ ಚಿತ್ರಕ್ಕೂ ಈ ಚಿತ್ರಕ್ಕೂ ಏನಾದರೂ ಲಿಂಕ್ ಇದಿಯಾ ? ಈ ಸಿನಿಮಾದ ಹೊಸ ಮ್ಯಾಟರ್ ಏನು ? ಇಲ್ಲಿದೆ ಓದಿ.

  • News18 Kannada
  • 5-MIN READ
  • Last Updated :
  • Bangalore [Bangalore], India
  • Share this:

ಸ್ಯಾಂಡಲ್‌ವುಡ್‌ ನಾಯಕಿ ನಟಿ ರಾಗಿಣಿ ದ್ವಿವೇದಿ (Ragini Dwivedi New Movie) ಬಹು ದಿನಗಳ ಬಳಿಕ ಹೊಸ ಸಿನಿಮಾ ಒಂದನ್ನ ಒಪ್ಪಿದ್ದಾರೆ. ಇಲ್ಲಿವರೆಗೆ ಇದ್ದ ಎಲ್ಲ ಪ್ರೋಜೆಕ್ಟ್‌ಗಳ ಕೆಲಸದ ಮಧ್ಯ ಹೊಸ ರೀತಿ ಫೋಟೋ ಶೂಟ್‌ನಲ್ಲಿ ಕಾಣಿಸಿಕೊಂಡು ಪಡ್ಡೆಗಳ (Sandalwood Actress Ragini) ನಿದ್ದೆಗಡಿಸಿದ್ದರು. ಇದೀಗ ಕನ್ನಡದ ಒಂದು ಪ್ರೋಜೆಕ್ಟ್‌ ಅನ್ನ ರಾಗಿಣಿ ದ್ವಿವೇದಿ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದ ಟೈಟಲ್‌ ಈ ಹಿಂದಿನ ರಾಗಿಣಿಯ ಒಂದು ಸಿನಿಮಾವನ್ನ ಹೋಲುತ್ತದೆ. ಆದರೆ ಆ (Ragin New Movie) ಚಿತ್ರವೇ ಬೇರೆ ಈ ಚಿತ್ರವೇ ಬೇರೆ ಅನ್ನೋ ಮಾಹಿತಿ ಕೂಡ ಹೊರ ಬಿದ್ದಾಗಿದೆ. ವಿಶೇಷವಾಗಿ ಕನ್ನಡದ ನಿರ್ಮಾಪಕರು ಈ ಒಂದು ಸಿನಿಮಾವನ್ನ ಮಾಡುತ್ತಿದ್ದಾರೆ. ಇವರ ಈ ಚಿತ್ರದ ಒಂದಷ್ಟು ಅಧಿಕೃತವಾದ (Sandalwood Updates) ವಿಷಯ ಇಲ್ಲಿದೆ.


ಕನ್ನಡದಲ್ಲೂ ನಾಯಕಿ ಪ್ರಧಾನ ಸಿನಿಮಾಗಳು ಕಡಿಮೇನೆ. ಅಂತಹದ್ರಲ್ಲಿ ನಾಯಕಿಯನ್ನೆ ಆಧರಿಸಿ ಕಮರ್ಷಿಯಲ್ ಸಿನಿಮಾ ಮಾಡೋದು ದೂರದ ಮಾತೇ ಬಿಡಿ.


Sandalwood Actress Ragini Dwivedi New Movie Latest Updates Reveal
ರಾಗಿಣಿ ಕನ್ನಡದ ಕಮರ್ಷಿಯಲ್ ಹೀರೋಯಿನ್ ಅಲ್ವೇ ?


ಅಂದು ರಾಗಿಣಿ ಐಪಿಎಸ್ ಇಂದು ರಾಗಿಣಿ ಏನು ?

ಆದರೆ ಈ ಒಂದು ಬ್ಯಾರಿಯರ್‌ ಅನ್ನ ಬ್ರೇಕ್ ಮಾಡಿದ ಮೊದಲ ನಾಯಕಿ ಯಾರೂ ಅನ್ನೋ ಪ್ರಶ್ನೇಗೆ, ಅಲ್ಲಿ ಕನಸಿನ ರಾಣಿ ಮಾಲಾಶ್ರೀ ಅವರು ಕಣ್ಮುಂದೆ ಬರುತ್ತಾರೆ.


ಪೊಲೀಸ್ ಪಾತ್ರದ ಮೂಲಕ ಮಾಲಾಶ್ರೀ ಅವರು ಕಮರ್ಷಿಯಲ್ ಹೀರೋಯಿನ್ ಆಗಿ ಗೆದ್ದು ಬೀಗಿದ್ದರು. ನಿರ್ಮಾಪಕರ ಜೇಬು ತುಂಬಿಸಿದ್ದರು.




ರಾಗಿಣಿ ಕನ್ನಡದ ಕಮರ್ಷಿಯಲ್ ಹೀರೋಯಿನ್ ಅಲ್ವೇ ?


ಮಾಲಾಶ್ರೀ ಅವರಾದ್ಮೇಲೆ ರಾಗಿಣಿ ದ್ವಿವೇದಿ ಆ ಒಂದು ಹೆಸರು ಮಾಡಿದ್ದರು ಅಂತಲೇ ಹೇಳಬಹುದು. ರಾಗಿಣಿ ದ್ವಿವೇದಿ ನಂಬಿಕೊಂಡು ದುಡ್ಡು ಹಾಕಿರೋ ನಿರ್ಮಾಪಕರು ಇದ್ದಾರೆ. ಹಾಗೆ ಪೊಲೀಸ್ ಪಾತ್ರದ ಒಂದು ಸಿನಿಮಾ ಕೂಡ ಬಂದಿತ್ತು. ಆ ಚಿತ್ರಕ್ಕೆ ರಾಗಿಣಿ ಐಪಿಎಸ್ ಅಂತಲೇ ಶೀರ್ಷಿಕೆ ಇಡಲಾಗಿತ್ತು.


ಆನಂದ್ ಪಿ ರಾಜು ಈ ಚಿತ್ರವನ್ನ ಡೈರೆಕ್ಟ್ ಮಾಡಿದ್ದರು. ಭರ್ಜರಿ ಆ್ಯಕ್ಷನ್‌ಗಳ ಈ ಚಿತ್ರ 2014 ಮಾರ್ಚ್‌-28 ರಂದು ರಿಲೀಸ್ ಆಗಿತ್ತು. ಒಳ್ಳೆ ರೆಸ್ಪಾನ್ಸ್ ಕೂಡ ಬಂದಿತ್ತು.




ರಾಗಿಣಿ ಮತ್ತೊಮ್ಮೆ ಪೊಲೀಸ್ ಆಫೀಸರ್ ಆದ್ರೇ ?


ಅದೇ ರಾಗಿಣಿ ದ್ವಿವೇದಿ ಈಗ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ. ಹಾಗೆ ಬರ್ತಿರೋ ಈ ಚಿತ್ರಕ್ಕೆ ರಾಗಿಣಿ ಐಎಎಸ್ ವರ್ಸಸ್ ಐಪಿಎಸ್ ಅಂತಲೇ ಶೀರ್ಷಿಕೆ ಫೈನಲ್ ಮಾಡಲಾಗಿದೆ.


ರಾಗಿಣಿ ಹೊಸ ಸಿನಿಮಾ ಡೈರೆಕ್ಟರ್ ಯಾರು ?


ಈ ಚಿತ್ರದ ಮೂಲಕ ರಾಗಿಣಿ ಮತ್ತೊಮ್ಮೆ ತಮ್ಮ ಹೆಸರಿನ ಸಿನಿಮಾ ಮಾಡುತ್ತಿದ್ದಾರೆ. ಆದರೆ ಈ ಸಲ ಈ ಚಿತ್ರವನ್ನ ಆನಂದ್‌ ಪಿ.ರಾಜು ಡೈರಕ್ಟ್ ಮಾಡ್ತಾಯಿಲ್ಲ. ಬದಲಾಗಿ ಸಬಾಸ್ಟಿನ್ ಡೇವಿಡ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ.


Sandalwood Actress Ragini Dwivedi New Movie Latest Updates Reveal
ರಾಗಿಣಿ ಹೊಸ ಸಿನಿಮಾ ಡೈರೆಕ್ಟರ್ ಯಾರು ?


ಸಬಾಸ್ಟಿನ್ ಡೇವಿಡ್ ಈ ಹಿಂದೆ ಮಾನ ಮತ್ತು ಧ್ವನಿ ಅನ್ನೊ ಸಿನಿಮಾ ಮಾಡಿದ್ದಾರೆ. ಇದೀಗ ರಾಗಿಣಿ ಐಎಎಸ್ ವರ್ಸಸ್ ಐಪಿಎಸ್ ಚಿತ್ರದ ಕಥೆ, ಚಿತ್ರಕಥೆ ಮಾಡಿಕೊಂಡು ನಿರ್ದೇಶನ ಮಾಡುತ್ತಿದ್ದಾರೆ.


ಇದನ್ನೂ ಓದಿ: Pavitra Lokesh: ನರೇಶ್ ಐ ಲವ್​ ಯೂ ಎಂದಾಗ ಪವಿತ್ರಾ ಏನಂದ್ರು ಗೊತ್ತಾ?


ನೈಜ ಘಟನೆಯನ್ನ ಆಧರಿಸಿಯೇ ಬರ್ತಿರೋ ಈ ಚಿತ್ರಕ್ಕೆ ನಿರ್ಮಾಪಕ ಕೆ.ಮಂಜು ದುಡ್ಡು ಹಾಕುತ್ತಿದ್ದಾರೆ. ಸದ್ಯಕ್ಕೆ ಇಷ್ಟು ಮಾಹಿತಿ ಇದೆ. ಮುಂದಿನದ್ದು ಶೀಘ್ರದಲ್ಲಿಯೇ ತಿಳಿಸುತ್ತೇವೆ ಅಂತಲೂ ಕೆ.ಮಂಜು ಹೇಳಿದ್ದಾರೆ.


ರಾಗಿಣಿ ಸಿನಿಮಾಲ್ಲಿ ಯಾರೆಲ್ಲ ಇದ್ದಾರೆ ಗೊತ್ತೇ ?


ಸಿನಿಮಾದಲ್ಲಿ ನುರಿತ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಹಿರಿಯ ಕಲಾವಿದರು ಈ ಚಿತ್ರದ ಪ್ರಮುಖ ಪಾತ್ರಗಳಿಗೆ ಜೀವ ತುಂಬುತಿದ್ದಾರೆ. ಉಳಿದಂತೆ ರಾಗಿಣಿ ಮತ್ತೊಮ್ಮೆ ಹೊಸ ಧಮಾಕಾ ಮಾಡೋ ಭರವಸೆಯನ್ನ ಕೂಡ ಮೂಡಿಸಿದ್ದಾರೆ.

top videos
    First published: