Radhika Kumaraswamy: ಅಬ್ಬಬ್ಬಾ... ಹರೆಯದ ಹುಡುಗಿಯರು ಕೂಡ ನಾಚುವಂತೆ ಡಾನ್ಸ್​​ ಮಾಡಿದ ರಾಧಿಕಾ ಕುಮಾರಸ್ವಾಮಿ!

ಕೆಲ ದಿನಗಳ ಹಿಂದೆ ರಾಧಿಕಾ ಅವರು ಬೀಚ್​ ಮುಂದು ನೃತ್ಯ ಮಾಡಿರುವ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದರು. ಇದೀಗ ಮತ್ತೊಂದು ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ಅವರ ಡಾನ್ಸ್​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. 

ರಾಧಿಕಾ ಕುಮಾರಸ್ವಾಮಿ

ರಾಧಿಕಾ ಕುಮಾರಸ್ವಾಮಿ

  • Share this:
ರಾಧಿಕಾ ಕುಮಾರಸ್ವಾಮಿ(Radhika Kumaraswamy).. ಒಂದು ಕಾಲದಲ್ಲಿ ಸ್ಯಾಂಡಲ್​ವುಡ್(Sandalwood)​ ಆಳಿದ ನಟಿ. ಇವರು ನಟಿಸಿದ ಅಷ್ಟು ಸಿನಿಮಾಗಳು ಭರ್ಜರಿ ಕೆಲೆಕ್ಷನ್ ಮಾಡಿತ್ತು. ಮಂಡ್ಯ, ಆಟೋಶಂಕರ್​, ಹಠವಾದಿ ಹೀಗೆ ಹಲವು ಸಿನಿಮಾಗಳಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಯಾಗಿ ಅಭಿನಯಿಸಿ ಎಲ್ಲರ ಮನಸ್ಸು ಗೆದ್ದಿದ್ದರು. ನಟಿ ಜೊತೆಗೆ ರಾಧಿಕಾ ಅವರು ಒಳ್ಳೆಯ ಡ್ಯಾನ್ಸರ್(Dancer). ಇವರ ನೃತ್ಯ ನೋಡಲೆಂದು ಅಭಿಮಾನಿಗಳು ಮತ್ತೆ ಮತ್ತೆ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದರು. ಒಂದಷ್ಟು ವರ್ಷಗಳ ಕಾಲ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಬ್ರೇಕ್(Break)​ ತೆಗೆದುಕೊಂಡಿದ್ದರು. ಬಳಿಕ ಸ್ವೀಟಿ(Sweety) ಸಿನಿಮಾದ ಮೂಲಕ ಮತ್ತೆ  ಕಮ್​ಬ್ಯಾಕ್(Comeback)​ ಮಾಡಿದ್ದರು. ಸಿನಿಮಾ ಹೇಳಿಕೊಳ್ಳುವ ಯಶಸ್ಸು ತಂದುಕೊಡಲಿಲ್ಲ. ಮತ್ತೆ ಒಂದಷ್ಟು ದಿನ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಬ್ರೇಕ್​ ತೆಗೆದುಕೊಂಡರು. ಬಳಿಕ ದಮಯಂತಿ ಸಿನಿಮಾದ ಮೂಲಕ ಮತ್ತೆ ಸಖತ್​ ಸೌಂಡ್ ಮಾಡಿದ್ದರು. ಇದಾ ಬಳಿಕ ರಾಧಿಕಾ ಅವರು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿರುತ್ತಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಒಂದೊಂದು ಅಪ್ಡೇಟ್‌ಗಳನ್ನು ಕೊಡುತ್ತಾ ಇರುತ್ತಾರೆ. ಜೊತೆಗೆ ಫೋಟೊ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಕಳೆದ ಕೆಲ ದಿನಗಳ ಹಿಂದೆ ರಾಧಿಕಾ ಅವರು ಬೀಚ್​ ಮುಂದು ನೃತ್ಯ ಮಾಡಿರುವ ವಿಡಿಯೋವೊಂದನ್ನು ಶೇರ್​ ಮಾಡಿಕೊಂಡಿದ್ದರು. ಇದೀಗ ಮತ್ತೊಂದು ಡ್ಯಾನ್ಸ್ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಾಧಿಕಾ ಅವರ ಡಾನ್ಸ್​ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ. 

ಹಿಂದಿ ಹಾಡಿಗೆ ರಾಧಿಕಾ ಭರ್ಜರಿ ಸ್ಟೆಪ್ಸ್​!

ಕಪ್ಪು ಬಣ್ಣದ ಗೌನ್‌ ತೊಟ್ಟು ಹಿಂದಿಯ 'ಮೇರ ಯಾರ್' ಹಾಡಿಗೆ ಹೆಜ್ಜೆ ಹಾಕಿದ್ದಾರೆ. ರಾಧಿಕಾ ಅವರ ಈ ವಿಡಿಯೋ ಕೂಡ ಸಾಕಷ್ಟು ಮೆಚ್ಚುಗೆ ಗಳಿಸಿದೆ. ವಿಡಿಯೋ ವೈರಲ್‌ ಆಗಿದೆ. ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವರ ಅಭಿಮಾನಿ ಬಳಗವನ್ನು ಈ ರೀತಿಯಾಗಿ ರಂಜಿಸುತ್ತಾ ಇರುತ್ತಾರೆ. ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಅಭಿನಯ ಮಾತ್ರ ಅಲ್ಲ, ಅವರಿಗೆ ಡಾನ್ಸ್‌ನಲ್ಲೂ ಅಷ್ಟೇ ಹೆಚ್ಚಿನ ಆಸಕ್ತಿ ಇದೆ. ಇದೀಗ ಅರೆಯದ ಹುಡುಗಿರು ಕೂಡ ನಾಚುವಂತೆ ಡಾನ್ಸ್ ಮಾಡಿದ್ದಾರೆ. ಅವರ ಎನರ್ಜಿ ಬಗ್ಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಜೊತೆಗೆ ಅವರ ನೃತ್ಯವನ್ನು ಮೆಚ್ಚಿಕೊಂಡಿದ್ದಾರೆ. ಈ ಡಾನ್ಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.



ಇದನ್ನು ಓದಿ: Instagramನಲ್ಲಿ ಪತಿಯ ಹೆಸರು ಕೈಬಿಟ್ಟ ಚಿರಂಜೀವಿ ಪುತ್ರಿ, ಶ್ರೀಜಾ-ಕಲ್ಯಾಣ್ ಬದುಕಲ್ಲಿ ಬಿರುಕು!?

ಈ ಹಿಂದೆ ವೈರಲ್​ ಆಗಿದ್ದ ‘ಜುಗ್ನು’ ಡಾನ್ಸ್ ವಿಡಿಯೋ!

ಈ ಹಿಂದೆ ಮತ್ತೊಂದು ವಿಡಿಯೋವನ್ನು ರಾಧಿಕಾ ಕುಮಾರಸ್ವಾಮಿಯವರು ಶೇರ್​ ಮಾಡಿಕೊಂಡಿದ್ದರು. ಬೀಚ್ ಮುಂದೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಒಂದನ್ನು ರಾಧಿಕಾ ಕುಮಾರಸ್ವಾಮಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ರ್‍ಯಾಪರ್ ಬಾದ್‌ಶಾನ 'ಜುಗ್ನು' ಹಾಡಿಗೆ ರಾಧಿಕಾ ಕುಮಾರಸ್ವಾಮಿ ಹೆಜ್ಜೆ ಹಾಕಿದ್ದು, ಯಾವುದೇ ಕೊರಿಯಾಗ್ರಾಫರ್ ಇಲ್ಲದೆ ಹಾಡಿನ ತಾಳಕ್ಕೆ ತಕ್ಕಂತೆ ನರ್ತಿಸಿರುವುದನ್ನು ಹಲವರು ಪ್ರಶಂಸಿದ್ದಾರೆ.



ಇದನ್ನು ಓದಿ : ರಚಿತಾ ರಾಮ್​ ನನ್​ ಜೊತೆ ಇದ್ರೆ ಕಳೆ ಬತ್ತದೆ ಅಂದಿದ್ಯಾಕೆ ಸತೀಶ್​ ನೀನಾಸಂ? ಫೋಟೋ ಸಿಕ್ಕಾಪಟ್ಟೆ ವೈರಲ್​!

ರಾಧಿಕಾ ಕೈಯಲ್ಲಿ ಸಾಲು ಸಾಲು ಸಿನಿಮಾ!

ರಾಧಿಕಾ ಕುಮಾರಸ್ವಾಮಿ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ 'ಕಾಂಟ್ರಾಕ್ಟ್' ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದರ ಜೊತೆಗೆ ರವಿಚಂದ್ರನ್ ನಟಿಸಿರುವ ನಿರೀಕ್ಷಿತ ಸಿನಿಮಾ 'ರಾಜೇಂದ್ರ ಪೊನ್ನಪ್ಪ'ದಲ್ಲಿಯೂ ರಾಧಿಕಾ ನಟಿಸಿದ್ದಾರೆ. ಜೊತೆಗೆ ಭೈರ ದೇವಿ ಎಂಬ ಭಕ್ತಿಪ್ರಧಾನ ಸಿನಿಮಾದಲ್ಲಿಯೂ ರಾಧಿಕಾ ನಟಿಸಿದ್ದಾರೆ.
Published by:Vasudeva M
First published: