• Home
  • »
  • News
  • »
  • entertainment
  • »
  • Radhika Kumaraswamy: ಫೇಸ್​ಬುಕ್​ ಹೊಸ ಅಕೌಂಟ್​ ತೆರೆದ ರಾಧಿಕಾ.. ಇನ್ಮುಂದೆ ಫ್ಯಾನ್ಸ್​ಗಳಿಗೆ ಅಲ್ಲೇ ಸಿಕ್ತಾರಂತೆ!

Radhika Kumaraswamy: ಫೇಸ್​ಬುಕ್​ ಹೊಸ ಅಕೌಂಟ್​ ತೆರೆದ ರಾಧಿಕಾ.. ಇನ್ಮುಂದೆ ಫ್ಯಾನ್ಸ್​ಗಳಿಗೆ ಅಲ್ಲೇ ಸಿಕ್ತಾರಂತೆ!

ನಟಿ ರಾಧಿಕಾ ಕುಮಾರಸ್ವಾಮಿ

ನಟಿ ರಾಧಿಕಾ ಕುಮಾರಸ್ವಾಮಿ

ಈಗಾಗಲೇ ರಾಧಿಕಾ ಕುಮರಸ್ವಾಮಿ ಹೆಸರಲ್ಲಿ ಹಲವಾರು ಅಕೌಂಟ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಇದೆ. ಇದೆನ್ನೆಲ್ಲ ಅವರ ಅಭಿಮಾನಿಗಳು ಹ್ಯಾಂಡಲ್​ ಮಾಡುತ್ತಿದ್ದಾರೆ. ಇದೀಗ ನಟಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ಜೊತೆ ಸ್ವತಃ ಸಂಪರ್ಕದಿಂದ ಇರಲು ಫೇಸ್​​ಬುಕ್​​ನಲ್ಲಿ ಹೊಸ ಅಕೌಂಟ್​ ತೆರೆದಿದ್ದಾರೆ.

ಮುಂದೆ ಓದಿ ...
  • Share this:

ರಾಧಿಕಾ ಕುಮಾರಸ್ವಾಮಿ (Radhika Kumaraswamy).. ಒಂದು ಕಾಲದಲ್ಲಿ ಸ್ಯಾಂಡಲ್​ವುಡ್ (Sandalwood)​ ಆಳಿದ ನಟಿ. ಇವರು ನಟಿಸಿದ ಅನೇಕ ಸಿನಿಮಾಗಳು ಭರ್ಜರಿ ಕೆಲೆಕ್ಷನ್ ಮಾಡಿತ್ತು. ಮಂಡ್ಯ, ಆಟೋಶಂಕರ್​, ಹಠವಾದಿ ಹೀಗೆ ಹಲವು ಸಿನಿಮಾಗಳಲ್ಲಿ ರಾಧಿಕಾ ಕುಮಾರಸ್ವಾಮಿ ನಟಿಯಾಗಿ ಅಭಿನಯಿಸಿ ಎಲ್ಲರ ಮನಸ್ಸು ಗೆದ್ದಿದ್ದರು. ನಟಿ ಜೊತೆಗೆ ರಾಧಿಕಾ ಅವರು ಒಳ್ಳೆಯ ಡ್ಯಾನ್ಸರ್ (Dancer). ಇವರ ನೃತ್ಯ ನೋಡಲೆಂದು ಅಭಿಮಾನಿಗಳು ಮತ್ತೆ ಮತ್ತೆ ಚಿತ್ರಮಂದಿರಗಳಿಗೆ ಹೋಗಿ ಸಿನಿಮಾ ನೋಡುತ್ತಿದ್ದರು. ಒಂದಷ್ಟು ವರ್ಷಗಳ ಕಾಲ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಬ್ರೇಕ್ (Break)​ ತೆಗೆದುಕೊಂಡಿದ್ದರು. ಬಳಿಕ ಸ್ವೀಟಿ (Sweety) ಸಿನಿಮಾದ ಮೂಲಕ ಮತ್ತೆ  ಕಮ್​ಬ್ಯಾಕ್ (Comeback)​ ಮಾಡಿದ್ದರು. ಸಿನಿಮಾ ಹೇಳಿಕೊಳ್ಳುವ ಯಶಸ್ಸು ತಂದುಕೊಡಲಿಲ್ಲ. ಮತ್ತೆ ಒಂದಷ್ಟು ದಿನ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಿಂದ ಬ್ರೇಕ್​ ತೆಗೆದುಕೊಂಡರು. ಬಳಿಕ ದಮಯಂತಿ ಸಿನಿಮಾದ ಮೂಲಕ ಮತ್ತೆ ಸಖತ್​ ಸೌಂಡ್ ಮಾಡಿದ್ದರು. 


ಫೇಸ್​​ಬುಕ್​ ಹೊಸ ಅಕೌಂಟ್​ ತೆರೆದ ರಾಧಿಕಾ ಕುಮಾರಸ್ವಾಮಿ!


ಈಗಾಗಲೇ ರಾಧಿಕಾ ಕುಮಾರಸ್ವಾಮಿ ಹೆಸರಲ್ಲಿ ಹಲವಾರು ಅಕೌಂಟ್​ಗಳು ಸೋಷಿಯಲ್​ ಮೀಡಿಯಾದಲ್ಲಿ ಇದೆ. ಇದನ್ನೆಲ್ಲ ಅವರ ಅಭಿಮಾನಿಗಳು ಹ್ಯಾಂಡಲ್​ ಮಾಡುತ್ತಿದ್ದಾರೆ. ಇದೀಗ ನಟಿ ರಾಧಿಕಾ ಕುಮಾರಸ್ವಾಮಿ ಅಭಿಮಾನಿಗಳ ಜೊತೆ ಸ್ವತಃ ಸಂಪರ್ಕದಿಂದ ಇರಲು ಫೇಸ್​​ಬುಕ್​​ನಲ್ಲಿ ಹೊಸ ಅಕೌಂಟ್​ ತೆರೆದಿದ್ದಾರೆ. ಈ ಬಗ್ಗೆ ಸ್ವತಃ ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ. ಎಲ್ಲರಿಗೂ ನಮಸ್ಕಾರ.. ನಾನು ರಾಧಿಕಾ ಕುಮಾರಸ್ವಾಮಿ ಎಂಬ ಹೊಸ ಫೇಸ್​​ಬುಕ್ ಅಕೌಂಟ್​ ತೆರೆಯುತ್ತಿದ್ದೇನೆ ಎಂದು ಅವರು ವಿಡಿಯೋದಲ್ಲಿ ಹೇಳಿದ್ದಾರೆ.


ಫೇಸ್​​ಬುಕ್​ನಲ್ಲಿ ಲೈವ್​ ಬರ್ತಾರಂತೆ ನಟಿ ರಾಧಿಕಾ!


ಹೌದು,  ಈ ವಿಚಾರವನ್ನು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಡಿಡಿಜೆ ಕಾರ್ಯಕ್ರಮದ ಫಿನಾಲೆ ದಿನ ಪ್ರಪ್ರಥಮ ಬಾರಿಗೆ ನನ್ನ ಪೇಜ್​ನಿಂದ ಲೈವ್​ ಬರುತ್ತೇನೆ. ನಿಮಗೆ ಯಾವುದೇ ಪ್ರಶ್ನೆ ಕೇಳಬೇಕು ಅಂದರೆ ನೇರವಾಗಿ ನನ್ನ ಕೇಳಬಹುದು. ನಿಮ್ಮ ಪ್ರೀತಿಗೆ ನಾನು ಸದಾ ಚಿರಋಣಿ. ನನ್ನ ಪೇಜ್​​ನ ಲೈಕ್​  ಮಾಡಿ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದ್ದಾರೆ. ಈ ವಿಚಾರ ತಿಳಿದು ಅವರ ಅಭಿಮಾನಿಗಳು ಖುಷ್​ ಆಗಿದ್ದಾರೆ. ಇಷ್ಟು ದಿನ ಯಾರ ಕೈಗೂ ಸಿಗದಿದ್ದ ರಾಧಿಕಾ ಕುಮಾರಸ್ವಾಮಿ ಈಗ ಸಡನ್​ ಆಗಿ ಅಭಿಮಾನಿಗಳೊಟ್ಟಿಗೆ ಮಾತನಾಡುತ್ತೇನೆ ಎಂದು ಹೇಳಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.



ಇದನ್ನೂ ಓದಿ: ಅಬ್ಬಬ್ಬಾ... ಹರೆಯದ ಹುಡುಗಿಯರು ಕೂಡ ನಾಚುವಂತೆ ಡಾನ್ಸ್​​ ಮಾಡಿದ ರಾಧಿಕಾ ಕುಮಾರಸ್ವಾಮಿ!


ವೈರಲ್ ಆಗಿತ್ತು ರಾಧಿಕಾ ಡ್ಯಾನ್ಸ್​ ವಿಡಿಯೋ!


ನಟಿ ರಾಧಿಕಾ ಕುಮಾರಸ್ವಾಮಿ ಅವರಿಗೆ ಅಭಿನಯ ಮಾತ್ರ ಅಲ್ಲ, ಅವರಿಗೆ ಡಾನ್ಸ್‌ನಲ್ಲೂ ಅಷ್ಟೇ ಹೆಚ್ಚಿನ ಆಸಕ್ತಿ ಇದೆ. ಹರೆಯದ ಹುಡುಗಿಯರು ಕೂಡ ನಾಚುವಂತೆ ಡಾನ್ಸ್ ಮಾಡಿದ್ದರು. ಸಿಕ್ಕಾಪಟ್ಟೆ ಎನರ್ಜಿಯಿಂದ ರಾಧಿಕಾರವರು ಈ ವಿಡಿಯೋದಲ್ಲಿ ಸ್ಟೆಪ್‌ ಹಾಕಿದ್ದರು. ಅವರ ಎನರ್ಜಿ ಬಗ್ಗೆ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ. ಜೊತೆಗೆ ಅವರ ನೃತ್ಯವನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ರಾಧಿಕಾ ಅವರು ಮುಂದೆ ಯಾವ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಲ್ಲ. ಅದರೆ ಅವರು ಆದಷ್ಟು ಬೇಗ ಮತ್ತೊಂದು ಸಿನಿಮಾ ಮಾಡಲಿ ಎನ್ನುವುದು ಅವರ ಅಭಿಮಾನಿಗಳ ಮಹತ್ತರ ಆಸೆ ಆಗಿದೆ.


ಇದನ್ನೂ ಓದಿ: ನಟಿಗೆ ಡಬಲ್​ ಮೀನಿಂಗ್​ ಪ್ರಶ್ನೆ ಕೇಳಿದ ಯುವಕ.. ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ಸಮಂತಾ!

ರಾಧಿಕಾ ಕುಮಾರಸ್ವಾಮಿ ಕನ್ನಡ ಹಾಗೂ ತಮಿಳಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗುತ್ತಿರುವ 'ಕಾಂಟ್ರಾಕ್ಟ್' ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಬಿಡುಗಡೆಗೆ ತಯಾರಾಗಿದೆ. ಇದರ ಜೊತೆಗೆ ರವಿಚಂದ್ರನ್ ನಟಿಸಿರುವ ನಿರೀಕ್ಷಿತ ಸಿನಿಮಾ 'ರಾಜೇಂದ್ರ ಪೊನ್ನಪ್ಪ'ದಲ್ಲಿಯೂ ರಾಧಿಕಾ ನಟಿಸಿದ್ದಾರೆ. ಜೊತೆಗೆ ಭೈರ ದೇವಿ ಎಂಬ ಭಕ್ತಿಪ್ರಧಾನ ಸಿನಿಮಾದಲ್ಲಿಯೂ ರಾಧಿಕಾ ನಟಿಸಿದ್ದಾರೆ.

Published by:Vasudeva M
First published: