Rachitha Ram: ಮುಖ ಮುಚ್ಚಿಕೊಂಡು ಬಂದಿದ್ಯಾಕೆ ಬುಲ್ ಬುಲ್ ಬೆಡಗಿ..? ಸುದ್ದಿ ತಿಳಿದು ಅಭಿಮಾನಿಗಳು ಶಾಕ್!

Sandalwood: ಸದ್ಯ ರಚಿತಾ ರಾಮ್ ಸಾಕಷ್ಟು ಬ್ಯುಸಿಯಾಗಿದ್ದಾರೆ. 2022 ಅವ್ರ ಸಿನಿ ಕರಿಯರ್ ನಲ್ಲಿ ಲಕ್ಕಿ ಅಂತಾನೇ ಹೇಳಬಹುದು. ಈಗಾಗಲೇ ಲವ್ ಯೂ ರಚ್ಚು ರಿಲೀಸ್ ಆಗಿ, ತಕ್ಕಮಟ್ಟಿಗೆ ಕ್ಲಿಕ್ ಆಗಿದೆ. ತೆಲುಗಿನಲ್ಲೂ ನಟಿಸಿದ ಮೊದಲ ಸಿನಿಮಾ ಈಗಷ್ಟೇ ತೆರೆಕಂಡಿದೆ.

ನಟಿ ರಚಿತಾ ರಾಮ್​

ನಟಿ ರಚಿತಾ ರಾಮ್​

 • Share this:
  ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ (Rachitha Ram)  ಅಭಿಮಾನಿಗಳ ಮೆಚ್ಚಿನ ತಾರೆ. ಈ ಡಿಂಪಲ್ ಕ್ವೀನ್ ಹೋದಲ್ಲಿ ಬಂದಲ್ಲಿ ಎಲ್ಲಾ ಫ್ಯಾನ್ಸ್ ಮುತ್ತಿಕೊಳ್ಳುತ್ತಾರೆ. ಹೀಗಾಗಿ ಜನಜಂಗುಳಿಯಿಂದ ತಪ್ಪಿಸಿಕೊಳ್ಳಲು ರಚಿತಾ ರಾಮ್ ಹೊಸದೊಂದು ಐಡಿಯಾ ಮಾಡಿದ್ದಾರೆ. ಸ್ಟಾರ್’ಗಳು ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಪ್ರೀತಿ. ಸಿನಿತಾರೆಯರು (Cine Stars) ಏನ್ ಮಾಡ್ತಾರೆ, ಎಲ್ಲಿ ಹೋಗ್ತಾರೆ, ಎಲ್ಲಿ ಬರ್ತಾರೆ ಅನ್ನೋದು ತಿಳಿದುಕೊಳ್ಳುವ ಕುತೂಹಲ. ಹೀಗಾಗಿ ಸ್ಟಾರ್’ಗಳು ಹೋದಲ್ಲಿ ಬಂದಲ್ಲಿ ಎಲ್ಲಾ ಅವ್ರನ್ನು ಮುತ್ತಿಕೊಳ್ತಾರೆ. ಸೆಲ್ಫಿ ಕೊಡಿ, ಆಟೋಗ್ರಾಫ್ ಕೊಡಿ ಅಂತ ಕಾಡಿಸ್ತಾರೆ. ಇದರಿಂದ ತಪ್ಪಿಸಿಕೊಳ್ಳೋಕೆ ತಾರೆಯರು ಬೇರೆ ಬೇರೆ ವೇಷ ಧರಿಸಿ ಓಡಾಡ್ತಾರೆ. ಸೂಪರ್ ಸ್ಟಾರ್ ರಜನಿಕಾಂತ್ (Rajanikanth), ಕಿಚ್ಚ ಸುದೀಪ್ (Kichha Sudeepa) ಇವ್ರೆಲ್ಲ ಯಾರಿಗೂ ತಿಳಿಯದಂತೆ ಬೇರೆ ವೇಷದಲ್ಲಿ ಸುತ್ತಾಡೋದು ಗೊತ್ತೇ ಇದೆ. ಇದೀಗ ನಮ್ಮ ಕನ್ನಡದ ಹುಡುಗಿ, ಗುಳಿಕೆನ್ನೆಯ ಬೆಡಗಿ ರಚಿತಾ ರಾಮ್ ಕೂಡ ಇದೀಗ ವೇಷ ಮರೆಸಿಕೊಂಡಿದ್ದಾರಂತೆ. ಅರೇ ಅದ್ಯಾಕಪ್ಪ ಅನ್ನೋದಕ್ಕೆ ಮುಂದೆ ಓದಿ...

  ಈ ಡಿಂಪಲ್ ಕ್ವೀನ್ ರಚಿತಾ ರಾಮ್ ಮುಖಕ್ಕೆ ಬಟ್ಟೆ ಕಟ್ಟಿಕೊಂಡಿರೋ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

  ವಿಷಯ ಇಷ್ಟೇ..., ರಚಿತಾ ರಾಮ್ ತಮ್ಮ ಗೆಳೆಯ, ನಿರ್ದೇಶಕ ಮಯೂರ್ ರಾಘವೇಂದ್ರ ಅವ್ರನ್ನು ಮೀಟ್ ಆಗಿದ್ದಾರೆ. ಹಾಗಂತ ಸೀದಾ ಸಾದಾ ಹೋದ್ರೆ ಅಭಿಮಾನಿಗಳು ಗುರುತು ಹಿಡಿದು, ಕಿರಿಕಿರಿ ಮಾಡಬಹುದು ಅಂತ ವೇಷ ಮರೆಸಿಕೊಂಡಿದ್ದಾರೆ. ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ಮಯೂರ್ ಜೊತೆ ಆಂಜನೇಯ ಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಸ್ನೇಹಿತನ ಜೊತೆಗೆ ಪೂಜೆಯನ್ನೂ ಮಾಡಿಸಿದ್ದಾರೆ. ಅಲ್ಲಿರುವ ಭಕ್ತರ ಜೊತೆ ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದಿದ್ದಾರೆ.

  ಪಕ್ಕದಲ್ಲೇ ರಚಿತಾ ರಾಮ್ ಇದ್ದರೂ ಸರತಿ ಸಾಲಿನಲ್ಲಿದ್ದ ಜನರಿಗೆ ಆಕೆ ಯಾರು ಅನ್ನೋದೇ ಗೊತ್ತಾಗಲಿಲ್ವಂತೆ..!
  ಇದಾದ ಬಳಿಕ ಸ್ನೇಹಿತರಿಬ್ಬರೂ ಕಮರ್ಷಿಯಲ್ ಸ್ಟ್ರೀಟ್’ಗೆ ತೆರಳಿದ್ದಾರೆ. ರಚಿತಾ ರಾಮ್ ನಟಿಸುತ್ತಿರುವ ಮುಂದಿನ ಸಿನಿಮಾದಕ್ಕಾಗಿ ಹೊಸ ಡ್ರೆಸ್ ಬೇಕಿತ್ತಂತೆ. ಹೀಗಾಗಿ ತಮ್ಮಿಷ್ಟದ ಡ್ರೆಸ್ ಖರೀಸಿದ್ದಾರೆ. ಅಲ್ಲಿಂದ ತೆರಳಿದ ರಚಿತಾ ರಾಮ್ ಹಾಗೂ ಮಯೂರ ರಾಘವೇಂದ್ರ ಸೀದಾ ಹೋಟೆಲ್’ಗೆ ಹೋಗಿದ್ದಾರೆ. ಬೆಂಗಳೂರಿನ ಪ್ರಸಿದ್ಧ ಹೋಟೆಲ್’ಗಳಲ್ಲಿ ಒಂದಾದ ವಿದ್ಯಾರ್ಥಿ ಭವನಕ್ಕೆ ತೆರಳಿದ್ದಾರೆ. ಅಲ್ಲಿ ಬಿಸಿ ಬಿಸಿ ಮಸಾಲೆ ದೋಸೆ ತಿಂದು ಬಾಯಿ ಚಪ್ಪರಿಸಿದ್ದಾರೆ. ಗರಮಾ ಗರಂ ಚಹಾ ಕುಡಿದು ರಿಲ್ಯಾಕ್ಸ್ ಆಗಿದ್ದಾರೆ.

  ಈ ಎಲ್ಲಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಮುಖ ಮುಚ್ಚಿಕೊಂಡ ರಚ್ಚು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಅಭಿಮಾನಿಗಳು ತರಹೇವಾರಿ ಕಮೆಂಟ್ ಹಾಕುತ್ತಿದ್ದಾರೆ. ಅಯ್ಯೋ ನಮ್ಮ ಪಕ್ಕದಲ್ಲೇ ಇದ್ದರೂ ಗುರುತು ಹಿಡಿಯೋಕೆ ಆಗಿಲ್ವಲ್ಲಪ್ಪಾ ಅಂತ ಕೈ ಕೈ ಹಿಸುಕಿಕೊಂಡಿದ್ದಾರೆ. ನಮ್ಮ ಪಕ್ಕದಲ್ಲೇ ಕೂತು ಮಸಾಲೆ ದೋಸೆ ತಿಂದಿದ್ರಲ್ವಾ ಮೇಡಂ. ಛೇ ಮಾತನಾಡಿಸಬೇಕಿತ್ತು ಅಂತ ಬೇಸರದಿಂದಲೇ ಹೇಳಿಕೊಳ್ಳಿತ್ತಿದ್ದಾರೆ.

  ಸದ್ಯ ರಚಿತಾ ರಾಮ್ ಸಾಕಷ್ಟು ಬ್ಯುಸಿಯಾಗಿದ್ದಾರೆ. 2022 ಅವ್ರ ಸಿನಿ ಕರಿಯರ್ ನಲ್ಲಿ ಲಕ್ಕಿ ಅಂತಾನೇ ಹೇಳಬಹುದು. ಈಗಾಗಲೇ ಲವ್ ಯೂ ರಚ್ಚು ರಿಲೀಸ್ ಆಗಿ, ತಕ್ಕಮಟ್ಟಿಗೆ ಕ್ಲಿಕ್ ಆಗಿದೆ. ತೆಲುಗಿನಲ್ಲೂ ನಟಿಸಿದ ಮೊದಲ ಸಿನಿಮಾ ಈಗಷ್ಟೇ ತೆರೆಕಂಡಿದೆ. ಮುಂದೆ ಏಳರಿಂದ 8 ಸಿನಿಮಾಗಳು ರಚ್ಚು ಕೈಯಲ್ಲಿ ಇವೆ. ಇದೀಗ ಹೊಸ ಡ್ರೆಸ್ ಖರೀದಿಗೆ ಮಯೂರ್ ರಾಘವೇಂದ್ರ ಹೋಗಿರೋದ್ರಿಂದ ಮಯೂರ್ ಸಿನಿಮಾದಲ್ಲಿ ಬುಲ್ ಬುಲ್ ಬೆಡಗಿ ನಟಿಸ್ತಿದ್ದಾಳಾ ಅಂತ ಅಭಿಮಾನಿಗಳು ಚರ್ಚೆ ಶುರು ಮಾಡಿದ್ದಾರೆ.

  ವರದಿ: ಅಣ್ಣಪ್ಪ ಆಚಾರ್ಯ
  Published by:Sandhya M
  First published: