ಸ್ಯಾಂಡಲ್ವುಡ್ ನಟಿ ಪವಿತ್ರಾ ಲೋಕೇಶ್ (Pavitra Lokesh) ಹಾಗೂ ನಟ ನರೇಶ್ (Naresh) ಅವರು ಮದುವೆಯಾಗಿದ್ದಾರೆ (Marriage). ಬಹಳಷ್ಟು ದಿನಗಳಿಂದ ಚರ್ಚೆಯಲ್ಲಿದ್ದ ಸೌತ್ನ ಈ ಜೋಡಿ ಮದುವೆಯಾಗಿದ್ದು (Marriage) ಇವರ ಮದುವೆ ವಿಡಿಯೋ (Marriage Video) ಎಲ್ಲೆಡೆ ವೈರಲ್ ಆಗಿದೆ. ನಟಿ ಪವಿತ್ರಾ ಅವರು ಕೆಂಪು ಬಣ್ಣದ ಸೀರೆ ಉಟ್ಟು ವಧುವಿನ ಲುಕ್ನಲ್ಲಿ ಮಿಂಚಿದ್ದಾರೆ. ನರೇಶ್ ಅವರು ವೈಟ್ ಕಲರ್ ಪಂಚೆ ಉಟ್ಟುಕೊಂಡಿದ್ದರು. ನರೇಶ್ ಟ್ವೀಟ್ ಮಾಡಿ ಎಲ್ಲರ ಆಶೀರ್ವಾದ ಕೋರಿದ್ದಾರೆ.
ವಿಡಿಯೋ ಟ್ವೀಟ್ ಮಾಡಿರುವ ನರೇಶ್ ಅವರು ತಮ್ಮನ್ನು ಆಶೀರ್ವಾದ ಮಾಡುವಂತೆ ಕೇಳಿದ್ದಾರೆ. ವಿಡಿಯೋವನ್ನು ಕೂಡಾ ಪೋಸ್ಟ್ ಮಾಡಿದ್ದು ವಿವಾಹದ ಶುಭ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
Seeking your blessings for a life time of peace & joy in this new journey of us🤗
ఒక పవిత్ర బంధం
రెండు మనసులు
మూడు ముళ్ళు
ఏడు అడుగులు 🙏
మీ ఆశీస్సులు కోరుకుంటూ ఇట్లు
- మీ #PavitraNaresh ❤️ pic.twitter.com/f26dgXXl6g
— H.E Dr Naresh VK actor (@ItsActorNaresh) March 10, 2023
ಕನ್ನಡದ ನಟಿ, ತೆಲುಗಿನ ನಟ
ಪವಿತ್ರಾ ಲೋಕೇಶ್ ಅವರು ಕರ್ನಾಟಕದವರು. ಕನ್ನಡದ ನಟಿಯಾಗಿ ಮಿಂಚಿ ಈಗ ಸೌತ್ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ.
ಇದನ್ನೂ ಓದಿ: Pavitra Lokesh, Naresh ಮದುವೆಗೆ ಖರ್ಚಾಗಿದ್ದು ಕೋಟಿ ಕೋಟಿ! ಈ ದುಡ್ಡಲ್ಲಿ ಸಾವಿರ ವಿವಾಹ ಮಾಡಬಹುದಿತ್ತು!
ಪವಿತ್ರಾ ಲೋಕೇಶ್ ತೆಲುಗಿನಲ್ಲಿ ಸಾಲು ಸಾಲು ಸಿನಿಮಾಗಳನ್ನು ಮಾಡುತ್ತಲೇ ಇದ್ದಾರೆ. ಬಹಳಷ್ಟು ವಿವಾದದ ನಂತರ ಈ ಜೋಡಿ ಕೊನೆಗೂ ಮದುವೆಯಾಗಿದ್ದಾರೆ.
ಹಿರಿಯ ನಟ ನರೇಶ್ ಮನೆ ಮೇಲೆ ಅಪರಿಚಿತರಿಂದ ದಾಳಿ ನಡೆದಿತ್ತು. ಈ ದಾಳಿಯಲ್ಲಿ ನರೇಶ್ ಹಾಗೂ ಇತರೆ ವಾಹನಗಳು ಜಖಂಗೊಂಡಿದ್ದವು. ಗಚ್ಚಿಬೌಲಿಯಲ್ಲಿರುವ ತಮ್ಮ ನಿವಾಸದ ಮೇಲೆ ನಡೆದ ಈ ದಾಳಿಯ ವಿರುದ್ಧ ನರೇಶ್ ಪೊಲೀಸರು ದೂರು ದಾಖಲಿಸಿದ್ದರು. ನರೇಶ್ ಸಿಸಿಟಿವಿ ದೃಶ್ಯಾವಳಿಯನ್ನೂ ಪೊಲೀಸರಿಗೆ ನೀಡಿದ್ದರು.
ಈ ದೂರಿನ ಆಧಾರದ ಮೇಲೆ ಗಚ್ಚಿಬೌಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆಯ ಭಾಗವಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗಿತ್ತು. ದಾಳಿಕೋರರು ಯಾರು ಎಂಬ ಬಗ್ಗೆ ತನಿಖೆ ನಡೆಸಲಾಗಿತ್ತು. ಈ ಬಗ್ಗೆ ಬಹಳಷ್ಟು ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದರು.
ಈ ಹಲ್ಲೆಗೆ ತನ್ನ 3ನೇ ಪತ್ನಿ ರಮ್ಯಾ ರಘುಪತ್ ಕಾರಣ ಎಂದು ನರೇಶ್ ಹೇಳಿಕೊಂಡಿದ್ದರು. ರಮ್ಯಾ ರಘುಪತಿ ತನ್ನನ್ನು ಕೊಲೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ನರೇಶ್ ಪೊಲೀಸರಿಗೆ ದೂರು ನೀಡಿದ್ದು, ಇದೀಗ ಮನೆ ಮೇಲೆ ದಾಳಿ ಕೂಡ ನಡೆದಿದೆ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ