ಮಮ್ಮಿಯಾಗುತ್ತಿದ್ದಾರೆ ಮೇಘನಾ ರಾಜ್​!; ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿ ನೀಡಿದ ಸ್ಯಾಂಡಲ್​ವುಡ್​ ನಟಿ

‘ಸೆಲ್ಫಿ ಮಮ್ಮಿ ಗೂಗಲ್​ ಡ್ಯಾಡಿ‘ ಚಿತ್ರದ ಪೋಸ್ಟರ್​ನಲ್ಲಿ ಗೂಗಲ್​, ಟ್ವಿಟ್ಟರ್​, ಫೇಸ್​ಬುಕ್​ ಸೋಷಿಯಲ್​ ಮೀಡಿಯಾಗಳ ಲೋಗೊ ಇವೆ

news18-kannada
Updated:September 10, 2019, 11:21 PM IST
ಮಮ್ಮಿಯಾಗುತ್ತಿದ್ದಾರೆ ಮೇಘನಾ ರಾಜ್​!; ಅಭಿಮಾನಿಗಳ ಪಾಲಿಗೆ ಸಿಹಿ ಸುದ್ದಿ ನೀಡಿದ ಸ್ಯಾಂಡಲ್​ವುಡ್​ ನಟಿ
ಮೇಘನಾ ರಾಜ್​
news18-kannada
Updated: September 10, 2019, 11:21 PM IST
ನಟಿ ಮೇಘನಾ ರಾಜ್​ ನಟ ಚಿರಂಜೀವಿ ಸರ್ಜಾ ಅವರನ್ನು ವರಿಸಿದ್ದರು. ಮದುವೆ ನಂತರವೂ ಅವರು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ವಿಶೇಷ ಎಂದರೆ ಅವರು ಈಗ ಮಮ್ಮಿ ಆಗುತ್ತಿದ್ದಾರೆ! ಈ ಮೂಲಕ ಅವರು ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಅಂದಹಾಗೆ ನಾವು ಹೇಳುತ್ತಿರುವುದು ರಿಯಲ್​ ಬಗ್ಗೆ ಅಲ್ಲ ರೀಲ್​ ಕಥೆ ಬಗ್ಗೆ!

ಹೌದು,  ಸೃಜನ್​ ಲೋಕೇಶ್​ ಮತ್ತು ನಟಿ ಮೇಘನಾ ರಾಜ್​ ಹೊಸ ಸಿನಿಮಾವೊಂದು ತಯಾರಾಗಿದ್ದು, ಇದಕ್ಕೆ ‘ಸೆಲ್ಫಿ ಮಮ್ಮಿ ಗೂಗಲ್​ ಡ್ಯಾಡಿ' ಎಂದು ಹೆಸರಿಟ್ಟಿದ್ದಾರೆ. ಈ ಮೂಲಕ ಇಬ್ಬರೂ ಇದೇ ಮೊದಲ ಬಾರಿಗೆ ಈ ತೆರೆ​ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದ ​ ಹೆಸರೇ ಹೇಳುವಂತೆ ಇದು ಡ್ಯಾಡಿ ಮಮ್ಮಿ ಕತೆ ಇರಬಹುದು ಎಂದು ಅನೇಕರು ಲೆಕ್ಕಾಚಾರ ಹಾಕಿದ್ದಾರೆ.

ಇನ್ನು ಈ ಚಿತ್ರದ ಶೂಟಿಂಗ್​ ಈಗಾಗಲೇ ಮುಗಿದಿದ್ದು, ಟೈಟಲ್​ ಇಡುವುದು ಮಾತ್ರ ಬಾಕಿಇತ್ತು. ಹಲವು ತಿಂಗಳ ಬಳಿಕ ಚರ್ಚೆ ನಡೆಸಿ ‘ಸೆಲ್ಫಿ ಮಮ್ಮಿ ಗೂಗಲ್​ ಡ್ಯಾಡಿ‘ ಟೈಟಲ್​ ನೀಡಲಾಗಿದೆ ಎಂದು ಚಿತ್ರತಂಡ ಹೇಳಿದೆ. 'ಮಕ್ಕಳ ಕತೆ ಕೇಳಲೇಬೇಡಿ' ಎಂಬ ಟ್ಯಾಗ್​​ ಲೈನ್​ ನೀಡಲಾಗಿದೆ.
 

Loading...
View this post on Instagram
 

Presenting the title of my new film starring @srujanlokesh and myself! After 4 months of brainstorming we finally zeroed in on this one!! More deets bout the film coming soon!


A post shared by Meghana Raj (@megsraj) on


ಇದನ್ನೂ ಓದಿ: ಹೊಸಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ನಾನೇ ಸ್ಪರ್ಧಿಸುತ್ತೇನೆ; ಅನರ್ಹ ಶಾಸಕ ಎಂಟಿಬಿ ನಾಗರಾಜ್​

‘ಸೆಲ್ಫಿ ಮಮ್ಮಿ ಗೂಗಲ್​ ಡ್ಯಾಡಿ‘ ಚಿತ್ರದ ಪೋಸ್ಟರ್​ನಲ್ಲಿ ಗೂಗಲ್​, ಟ್ವಿಟ್ಟರ್​, ಫೇಸ್​ಬುಕ್​ ಸೋಷಿಯಲ್​ ಮೀಡಿಯಾಗಳ ಲೋಗೊ ಇವೆ. ಇವೆಲ್ಲವನ್ನು ನೋಡಿದಾಗ ಮೊಬೈಲ್​ ಅಡಿಕ್ಟ್​ ಆಗಿರೋ ಫ್ಯಾಮಿಲಿ ಚಿತ್ರ ಎನ್ನುವುದು ಅನೇಕರ ಊಹೆ.

‘ಸೆಲ್ಫಿ ಮಮ್ಮಿ ಗೂಗಲ್​ ಡ್ಯಾಡಿ‘ ಚಿತ್ರವನ್ನು ಮಧುಚಂದ್ರ ನಿರ್ದೇಶನ ಮಾಡಿದ್ದಾರೆ. ಸುಧಾ ಬರಗೂರು, ಅಚ್ಯುತ್​ ಕುಮಾರ್​ ಮತ್ತಿತರರು ಚಿತ್ರದಲ್ಲಿ ನಟಿಸಿದ್ದಾರೆ
First published:September 10, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...