• Home
 • »
 • News
 • »
 • entertainment
 • »
 • Meghana Raj: ಕ್ರಿಸ್‍ಮಸ್‍ಗೆ ಗುಡ್ ನ್ಯೂಸ್ ಕೊಟ್ಟ ನಟಿ ಮೇಘನಾ ರಾಜ್! ಏನದು ಗೊತ್ತಾ?

Meghana Raj: ಕ್ರಿಸ್‍ಮಸ್‍ಗೆ ಗುಡ್ ನ್ಯೂಸ್ ಕೊಟ್ಟ ನಟಿ ಮೇಘನಾ ರಾಜ್! ಏನದು ಗೊತ್ತಾ?

ನಟಿ ಮೇಘನಾ ರಾಜ್

ನಟಿ ಮೇಘನಾ ರಾಜ್

ನಟಿ ಮೇಘನಾ ರಾಜ್ ಕ್ರಿಸ್‍ಮಸ್ ಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮೇಘನಾ ಶನಿವಾರ ಅಭಿಮಾನಿಗಳಿಗೆ ಒಂದು ಒಳ್ಳೆ ವಿಚಾರ ತಿಳಿಸುವುದಾಗಿ ಹೇಳಿದ್ದರು. ಅಂತೆಯೇ ಹಬ್ಬದ ದಿನ ಈ ಹೊಸ ವಿಚಾರ ಹೇಳಿದ್ದಾರೆ!

 • News18 Kannada
 • 3-MIN READ
 • Last Updated :
 • Karnataka, India
 • Share this:

  ಸ್ಯಾಂಡಲ್‍ವುಡ್ (Sandalwood)  ನಟಿ ಮೇಘನಾ ರಾಜ್ (Meghana Raj)  ಕ್ರಿಸ್‍ಮಸ್  (Christmas) ಹಬ್ಬದ ಸಂಭ್ರಮದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಮೇಘನಾ ಅವರು ಹೊಸ ಯೂಟ್ಯೂಬ್ (YouTube) ಚಾನೆಲ್ ಶುರು ಮಾಡಿದ್ದಾರೆ. ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಮೂಲಕ  ಜನರಿಗೆ ಇನ್ನಷ್ಟು ಹತ್ತಿರ ಆಗೋ ಪ್ರಯತ್ನ ಮಾಡ್ತಾ ಇದ್ದಾರೆ. ಕ್ರಿಸ್‍ಮಸ್‍ ಹಬ್ಬದ ಶುಭಾಶಯ ಕೋರುತ್ತಾ ತಮ್ಮ ಹೊಸ ಕನಸೊಂದನ್ನು ಜನರ ಮುಂದೆ ಇಡುತ್ತಿದ್ದಾರೆ. ಮೇಘನಾ ಅವರು ಶನಿವಾರ ಅಭಿಮಾನಿಗಳಿಗೆ (Fans) ಒಂದು ಒಳ್ಳೆ ವಿಚಾರ ತಿಳಿಸುವುದಾಗಿ ಹೇಳಿದ್ದರು. ಅಂತೆಯೇ ಹಬ್ಬದ ದಿನ ತಮ್ಮ ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದಾರೆ. ಮೇಘನಾ ಅವರು ಇನ್ಮುಂದೆ ಯೂಟ್ಯೂಬ್ ಚಾನೆಲ್ ಮೂಲಕ ಜನರನ್ನು ತಲುಪಲಿದ್ದಾರೆ.


  ಯೂಟ್ಯೂಬ್ ಚಾನೆಲ್ ಲಾಂಚ್
  ಮೇಘನಾ ರಾಜ್ ಅವರು ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ತಮ್ಮ ಖುಷಿಯ ವಿಚಾರವನ್ನು ಹಂಚಿಕೊಳ್ತಾರೆ. ಈಗ ತಮ್ಮದೇ ಆದ ಯೂಟ್ಯೂಬ್ ಚಾನೆಲ್ ಲಾಂಚ್ ಮಾಡಿದ್ದಾರೆ. ಅದು ಕ್ರಿಸ್‍ಮಸ್ ಹಬ್ಬದ ಸಂಭ್ರಮದಲ್ಲಿ. ಯೂಟ್ಯೂಬ್ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗ್ತಾ ಇದ್ದಾರೆ.


  ಅಭಿಮಾನಿಗಳಿಗಾಗಿ ಈ ಯೂಟ್ಯೂಬ್ ಚಾನೆಲ್
  ಪುತ್ರ ರಾಯನ್ ರಾಜ್ ಸರ್ಜಾ, ಪ್ರಮೀಳಾ ಜೋಶಾಯ್ ಹಾಗೂ ಸುಂದರ್ ರಾಜ್ ಜೊತೆ ಇರುವ ವಿಡಿಯೋ ತುಣುಕನ್ನು ಮೇಘನಾ ರಾಜ್ ಯೂಟ್ಯೂಬ್ ನಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ಯಾವಾಗಲೂ ಕೇಳ್ತಾ ಇದ್ರಂತೆ, ನೀವು ಯಾಕೆ ಯೂಟ್ಯೂಬ್ ಚಾನೆಲ್ ಓಪೆನ್ ಮಾಡಿಲ್ಲ ಅಂತ. ಅದಕ್ಕೆ ಅಭಿಮಾನಿಗಳಿಗಾಗಿ ಯೂಟ್ಯೂಬ್ ಚಾನೆಲ್ ಓಪೆನ್ ಮಾಡಿದ್ದಾರೆ.

  View this post on Instagram


  A post shared by Meghana Raj Sarja (@megsraj)
  ರಾಯನ್ ಲಾಲನೆ, ಪಾಲನೆ
  ಮಗನ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಮೇಘನಾ ರಾಜ್, ರಾಯನ್ ಲಾಲನೆ ಪಾಲನೆಯಲ್ಲೇ ಬ್ಯುಸಿ ಆಗಿದ್ದಾರೆ. ಸದಾ ಮಗನ ಜೊತೆಗೆ ಕಾಲ ಕಳೆಯುತ್ತಾರೆ. ಚಿರಂಜೀವಿ ಸರ್ಜಾ ಮತ್ತು ರಾಯನ್ ರಾಜ್ ಸರ್ಜಾ ಹೆಸರುಗಳು ತಮ್ಮ ಕೈಮೇಲೆ ಶಾಶ್ವತವಾಗಿ ಇರಲಿ ಎಂದು ಮೇಘನಾ ರಾಜ್ ಅವರು ಟ್ಯಾಟೋ ಹಾಕಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಕೆಲ ದಿನಗಳ ಹಿಂದೆ ಶೇರ್ ಮಾಡಿದ್ದರು.


  ಇದನ್ನೂ ಓದಿ: Bigg Boss Kannada: ರಾಕೇಶ್ ಹಾಗೂ ರೂಪೇಶ್ ಶೆಟ್ಟಿ ಫೈನಲ್‌ಗೆ! ಉಳಿದ ಮೂವರು ಯಾರು? 


  ಮೇಘನಾ ಪ್ರವಾಸ
  ಮೇಘನಾ ರಾಜ್ ಸರ್ಜಾ ಅವರು ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಕೆಲಸಗಳಿಗೆ ಕೊಂಚ ಬಿಡುವು ನೀಡಿ ಸ್ನೇಹಿತರ ಜೊತೆ ಪ್ರವಾಸಗಳಿಗೆ ಹೋಗುತ್ತಿರುತ್ತಾರೆ. ಮೇಘನಾ ಎಲ್ಲಾ ಖುಷಿ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡ್ತಾರೆ.


  sandalwood actress meghana raj, meghana raj youtube, meghana raj share the photos, ನಟಿ ಮೇಘನಾ ರಾಜ್, ಕ್ರಿಸ್‍ಮಸ್‍ಗೆ ಗುಡ್ ನ್ಯೂಸ್ ಕೊಟ್ಟ ನಟಿ ಮೇಘನಾ ರಾಜ್, ಸ್ಯಾಂಡಲ್ ವುಡ್ ನಟಿ ಮೇಘನಾ ರಾಜ್, kannada news, karnataka news,
  ನಟಿ ಮೇಘನಾ ರಾಜ್


  ಎರಡನೇ ಮದುವೆ ಆಗಲ್ಲ
  ಇತ್ತೀಚಿಗೆ ಮೇಘನಾ 2ನೇ ಮದುವೆ ಆಗ್ತಾರೆ ಎನ್ನುವ ಸುಇದ್ದಿಗಳು ಹಬ್ಬಿದ್ವು. 2ನೇ ಮದುವೆ ಬಗ್ಗೆ ಮಾತಾಡಿದ್ದ ಮೇಘನಾ ರಾಜ್ ಅವರು, ಚಿರು ಹೇಳಿದ್ದಾರೆ ನೀನು ನಿನ್ನ ಮನಸ್ಸು ಹೇಳುವ ಕೆಲಸ ಮಾಡು ಎಂದು. ಇನ್ನು ನನ್ನ ಮನಸ್ಸು ಈ ಬಗ್ಗೆ ಪ್ರಶ್ನೆ ಮಾಡಿಲ್ಲ ಹೀಗಾಗಿ ನಾನು ಈ ಬಗ್ಗೆ ಚಿಂತಿಸಿಲ್ಲ ಎಂದು ಹೇಳಿದ್ದರು.


  ಇದನ್ನೂ ಓದಿ: BBK Rupesh Rajanna: ರಾಜಣ್ಣ ವಿಡಿಯೋ ಮಾಡಿ ಗುರೂಜಿ, ಶೆಟ್ಟಿ ಮರ್ಯಾದೆ ತಗೀತಾರಂತೆ! ನೀಚ ಅಂದಿದ್ದು ಯಾರು? 


  ಚಿರು ನಿಧನದ ಬಳಿಕ ಮತ್ತೆ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ಮೇಘನಾ, ಕಲರ್ಸ್ ಕನ್ನಡದಲ್ಲಿ ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿದ್ರು. ಇದೀಗ ಮೇಘನಾ ರಾಜ್ ಹಲವು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.

  Published by:Savitha Savitha
  First published: