Pavitra Lokesh ಮದುವೆಯಾಗಿರುವ ಆ ನಟನ ಆಸ್ತಿ 6000 ಕೋಟಿಯಂತೆ! ಆತನಿಗೆ ಇದು ನಾಲ್ಕನೇ ಮದುವೆ

ನರೇಶ್​ ಕುಟುಂಬ

ನರೇಶ್​ ಕುಟುಂಬ

ಪವಿತ್ರಾ ಲೋಕೇಶ್ ಮತ್ತೆ ಮದುವೆ ಆಗಿದ್ದಾರೆ ಎಂಬ ವದಂತಿ ಇದೀಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ಪವಿತ್ರಾ ಲೋಕೇಶ್​ ಆಗಲಿ ಅಥವಾ ನರೇಶ್​ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ತೆಲುಗು ಮಾಧ್ಯಮಗಳಲ್ಲಿಈ ಬಗ್ಗೆ ಸುದ್ದಿ ಪ್ರಸಾರವಾಗಿದೆ.

  • Share this:

ಪವಿತ್ರ ಲೋಕೇಶ್ (Pavithra Lokesh)​ ಹೆಸರು ಕೇಳಿದವರೇ ಇಲ್ಲ. ಸ್ಯಾಂಡಲ್​ವುಡ್​ (Sandalwood)ನಲ್ಲಿ ತಮ್ಮದೇ ಆದ ಸ್ಪೇಸ್​ ಹೊಂದಿದ್ದಾರೆ ಪವಿತ್ರ ಲೋಕೇಶ್​. ತಮ್ಮ ಅಭಿನಯದ ಮೂಲಕವೇ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ್ದರು. ಕೇವಲ ಕನ್ನಡ ಚಿತ್ರರಂಗಷ್ಟೇ ಅಲ್ಲದೇ, ತಮಿಳು (Tamil), ತೆಲುಗು (Telugu) , ಸಿನಿಮಾಗಳಲ್ಲೂ ತಮ್ಮ  ಪ್ರಭಾವ ಬೀರುತ್ತಿದ್ದಾರೆ. ಪವಿತ್ರ ಲೋಕೇಶ್ ಒಬ್ಬ ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಟಿ. ರಂಗಭೂಮಿ ಮತ್ತು ಚಲನಚಿತ್ರ ನಟ ಮೈಸೂರು ಲೋಕೇಶ್ ಅವರ ಮಗಳು. ಪವಿತ್ರ ಲೋಕೇಶ್ ತನ್ನ 16 ನೇ ವಯಸ್ಸಿನಲ್ಲಿ ಅಭಿನಯಿಸಿ ಎಲ್ಲರ ಮನಸ್ಸು ಗೆದ್ದಿದ್ದರು. 150 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. 2006ರಲ್ಲೀ ತೆರೆಕಂಡ ಕನ್ನಡದ ಚಿತ್ರವಾದ ನಾಯಿ ನೆರಳು ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟನೆಗಾಗಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇದೀಗ ಪವಿತ್ರ ಲೋಕೇಶ್​ ಸಖತ್​ ಸುದ್ದಿಯಾಗ್ತಿದ್ದಾರೆ. ಮತ್ತೊಂದು ಮದುವೆ ಆಗಿದ್ದಾರೆ ಎಂಬ ಗುಸುಗುಸು ಹಬ್ಬಿದೆ.


ಟಾಲಿವುಡ್​ ಸೂಪರ್​ ಸ್ಟಾರ್ ಅಣ್ಣನ ಮದುವೆಯಾದರಾ ಪವಿತ್ರ ಲೋಕೇಶ್?


ಹೌದು, ಟಾಲಿವುಡ್​ ಸೂಪರ್​ ಸ್ಟಾರ್​ ಮಹೇಶ್​ ಬಾಬು ಅವರ ಅಣ್ಣ ನರೇಶ್​ ಅವರನ್ನು ಪವಿತ್ರ ಲೋಕೇಶ್​​ ಮದುವೆಯಾಗಿದ್ದಾರೆ ಎಂಬ ಸುದ್ದಿ ಹೊರಬಿದ್ದಿದ್ದು, ಅಭಿಮಾನಿಗಳು ಶಾಕ್​ ಆಗಿದ್ದಾರೆ. ಇದೇನಪ್ಪಾ? ಇದು ನಿಜಾನಾ? ಎಂದು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಕನ್ನಡ ನಟ ಸುಚೇಂದ್ರ ಪ್ರಸಾದ್ ಅವರನ್ನು ಪವಿತ್ರ ಲೋಕೇಶ್​ ವಿವಾಹವಾಗಿದ್ದರು. ಇವರಿಗೆ ಇಬ್ಬರು ಮುದ್ದಾದ ಮಕ್ಕಳು ಸಹ ಇದ್ದಾರೆ. ಇದ್ದಕಿದ್ದ ಹಾಗೇ ಇವರು ಮತ್ತೊಂದು ಮದುವೆಯಾಗಿದ್ದಾರೆ ಎಂಬ ಸುದ್ದಿಯನ್ನು ನಂಬಲು ಸಾಧ್ಯವಾಗುತ್ತಿಲ್ಲ.


ಯಾರು ಈ ನರೇಶ್​? ಅವರ ಹಿನ್ನೆಲೆ ಏನು?


ಟಾಲಿವುಡ್​ ಸೂಪರ್​ ಸ್ಟಾರ್​ ಕೃಷ್ಣ ಅವರ ಬಗ್ಗೆ ಯಾರಿಗೆ ಗೊತ್ತಿಲ್ಲ ಹೇಳಿ. ಮಹೇಶ್​ ಬಾಬು ಅವರ ತಂದೆ ಕೃಷ್ಣ ಒಂದಾನೊಂದು ಕಾಲದಲ್ಲಿ ತೆಲುಗು ಚಿತ್ರರಂಗವನ್ನು ಆಳಿದವರು. ಕೃಷ್ಣ ಅವರ ಎರಡನೇ ಹೆಂಡತಿ ಮಗ ಈ ನರೇಶ್​. ಕೃಷ್ಣ ಅವರ ಮೊದಲನೇ ಹೆಂಡತಿ ಹೆಸರು ಇಂದಿರಾ ದೇವಿ. ಕೃಷ್ಣ ಅವರ ಎರಡನೇ ಹೆಂಡತಿ ಹೆಸರು ವಿಜಯ ನಿರ್ಮಲ. ವಿಜಯ ನಿರ್ಮಲ ಅವರ ಮಗನೇ ನರೇಶ್​. ನೀವೂ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನರೇಶ್​ ಅವರನ್ನು ನೋಡಿದ್ದೀರಾ. ತೆಲುಗು ಚಿತ್ರರಂಗದಲ್ಲೂ ಸಾಕಷ್ಟು ಹೆಸರು ಮಾಡಿದ್ದಾರೆ ನರೇಶ್​​. ನರೇಶ್​ ತಾಯಿ ಅಂದರೆ ವಿಜಯ ನಿರ್ಮಲಾ ಹಾಗೂ ಅವರ ಮೊದಲ ಕೆ.ಎಸ್​​.ಮೂರ್ತಿ ಅವರ ಮಗ ನರೇಶ್​, ಕೆ.ಎಸ್​ ಮೂರ್ತಿ ಅವರ ಜೊತೆ ಡಿವೋರ್ಸ್ ಪಡೆದು ಕೃಷ್ಣ ಅವರನ್ನು ಮದುವೆಯಾಗಿದ್ದರು.


ಇದನ್ನೂ ಓದಿ: ಮಹೇಶ್ ಬಾಬು ಸಹೋದರನನ್ನು ಮದುವೆಯಾಗಿದ್ದರಂತೆ ಪವಿತ್ರಾ ಲೋಕೇಶ್


ನರೇಶ್​ ಅವರ ಒಟ್ಟು ಆಸ್ತಿ 6000 ಕೋಟಿಯಂತೆ!


ಹೌದು, ನರೇಶ್​ ಹೇಳಿ ಕೇಳಿ ದೊಡ್ಡ ಮನೆಯಲ್ಲಿ ಹುಟ್ಟಿದವರು. ಮೊದಲ ಅಪ್ಪ ಕೂಡ ಸಾಕಷ್ಟು ಹಣ ಮಾಡಿದ್ದರು. ಎರಡನೇ ಅಪ್ಪ ಕೂಡ ಸೂಪರ್​ ಸ್ಟಾರ್​. ಇನ್ನೇನು ಕೇಳಬೇಕಾ? ಹುಟ್ಟಿದಾಗಿನಿಂದಲೂ ಗೋಲ್ಡನ್​ ಸ್ಪೂನ್​ ಇಟ್ಟುಕೊಂಡೇ  ಬಂದವರು. ನರೇಶ್​ ಒಟ್ಟು  ಆಸ್ತಿ 6 ಸಾವಿರ ಕೋಟಿ ಎಂದು ಹೇಳಲಾಗುತ್ತಿದೆ. ಜೊತೆಗೆ ನರೇಶ್​ ಅವರಿಗೂ ಇದು ನಾಲ್ಕನೇ ಮದುವೆ ಎಂದು ಹೇಳಲಾಗುತ್ತಿದೆ. 62 ವರ್ಷದ ನರೇಶ್​ ಇದೀಗ 43 ವರ್ಷದ ಪವಿತ್ರಾ ಲೋಕೇಶ್​ ಅವರನ್ನು ಮದುವೆಯಾಗುತ್ತಿದ್ದಾರೆ.


ಇದನ್ನೂ ಓದಿ: ಮಗಳ ಟಾಲಿವುಡ್​ ಎಂಟ್ರಿ ಬಗ್ಗೆ ಅಪ್ಪ ಕೊಟ್ರು ಹಿಂಟ್​! ಅದು ಈ ಸ್ಟಾರ್​ ಜೊತೆ ಅಂದ್ಮೇಲೆ ಕೇಳಬೇಕಾ? ಫುಲ್​ ಸರ್​​ಪ್ರೈಸ್​


ಒಟ್ಟಿನಲ್ಲಿ ಈ ಮದುವೆ ವಿಚಾರ ಇದೀಗ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಆದರೆ ಈ ಬಗ್ಗೆ ಪವಿತ್ರಾ ಲೋಕೇಶ್​ ಆಗಲಿ ಅಥವಾ ನರೇಶ್​ ಆಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ತೆಲುಗು ಮಾಧ್ಯಮಗಳಲ್ಲಿಈ ಬಗ್ಗೆ ಸುದ್ದಿ ಪ್ರಸಾರವಾಗಿದೆ.

Published by:Vasudeva M
First published: