Malashree Ramu: ನಿಮ್ಮನ್ನು ತುಂಬಾ ಮಿಸ್​ ಮಾಡ್ಕೊತಿದಿನಿ; ಗಂಡನ ಜನ್ಮದಿನಕ್ಕೆ ನಟಿ ಮಾಲಾಶ್ರೀ ಭಾವುಕ ಪತ್ರ

ನನಗಾಗೆ ಜನುಮ ಪಡೆದು ಬಂದ ಹೃದಯ ನೀವು. ನನಗೆ ಏನೇನು ಬೇಕೋ ಅದೆಲ್ಲಾ ಕೊಟ್ಟ ನಿಮಗೆ, ಆ ಇಡೀ ಸ್ವರ್ಗ ನಿಮ್ಮದಾಗಿರಲಿ ಅಂತ ಇವತ್ತು ಇಲ್ಲಿಂದಲೇ ಹಾರೈಕೆ ಮಾಡ್ತೀನಿ ರೀ... ಎಂದು ಮಾಲಾಶ್ರೀ ಭಾವುಕರಾಗಿದ್ದಾರೆ.

ಮಾಲಾಶ್ರೀ-ರಾಮು

ಮಾಲಾಶ್ರೀ-ರಾಮು

 • Share this:
  ಸ್ಯಾಂಡಲ್​ವುಡ್​​ನಲ್ಲಿ ಕೋಟಿ ನಿರ್ಮಾಪಕ ಎಂದೇ ಖ್ಯಾತರಾಗಿದ್ದ ನಟಿ ಮಾಲಾಶ್ರೀ ಅವರ ಪತಿ ರಾಮು ಕಳೆದ ಏಪ್ರಿಲ್​ನಲ್ಲಿ ಕೊರೋನಾಗೆ ಬಲಿಯಾಗಿದ್ದರು. ಇಂದು ರಾಮು ಅವರ ಹುಟ್ಟುಹಬ್ಬ. ಪತಿಯನ್ನು ಕಳೆದುಕೊಂಡ ದುಃಖದಲ್ಲಿರುವ ನಟಿ ಮಾಲಾಶ್ರೀ ಇನ್ನೂ ಸಹ ಆ ನೋವಿನಿಂದ ಹೊರ ಬಂದಿಲ್ಲ. ಇಂದು ತನ್ನ ಗಂಡನ ಹುಟ್ಟುಹಬ್ಬವಾಗಿರುವುದರಿಂದ ನಟಿ ಮಾಲಾಶ್ರೀ ಒಂದು ಭಾವುಕ ಪತ್ರವನ್ನು ಹಂಚಿಕೊಂಡಿದ್ದಾರೆ.  ರಾಮು ಅವರು ಸಾವನ್ನಪ್ಪಿದ ಕೆಲವು ದಿನಗಳ ಬಳಿಕವೂ ಮಾಲಾಶ್ರೀ ಒಂದು ಭಾವನಾತ್ಮಕ ಪತ್ರವನ್ನು ಬರೆದಿದ್ದರು. 

  ಮಾಲಾಶ್ರೀ ಅವರು ಇಂದು ಬರೆದಿರುವ ಪತ್ರದಲ್ಲಿ ತಮ್ಮ  ಪತಿಯನ್ನು ದೇವರಿಗೆ ಹೋಲಿಸಿದ್ದಾರೆ. ಹ್ಯಾಪಿ ಬರ್ತ್​​ಡೇ ಮೈ ಸೋಲ್​ ಎಂದು ಪತ್ರ ಆರಂಭಿಸಿರುವ ಮಾಲಾಶ್ರೀ, ನೀವು ನನಗೆ ದೇವರ ವರವಾಗಿ ಬಂದ್ರಿ, ನೀವು ನನಗೆ ವರಗಳನ್ನು ಕೊಡುವ ದೇವರಾದ್ರಿ. ಈ ದಿನ ನನ್ನ ದೇವರ ಹುಟ್ಟುಹಬ್ಬ. 23 ವರ್ಷಗಳ ಕಾಲ ನಿಮ್ಮ ಹುಟ್ಟುಹಬ್ಬವನ್ನು ನನ್ನ ಹುಟ್ಟುಹಬ್ಬವನ್ನಾಗಿ ಆಚರಿಸಿ ನನ್ನ ಉಸಿರಲ್ಲಿ ಉಸಿರಾಗ್ತಾ ಬಂದ್ರಿ.

  ಇದನ್ನೂ ಓದಿ:Kitchen Hacks: ಫ್ರಿಡ್ಜ್​​ನಲ್ಲಿ ಈ ಆಹಾರ ಪದಾರ್ಥಗಳನ್ನು ಇಡಬಾರದು..! ಯಾಕೆ ಗೊತ್ತಾ?

  ನನ್ನ ದಿನ ನೀವಾಗಿದ್ರಿ, ನನ್ನ ನಡೆ ನೀವಾಗಿದ್ರಿ, ನನ್ನ ನುಡಿ, ನಗು, ನೆಮ್ಮದಿ ನೀವಾಗಿದ್ರಿ, ನನ್ನ ಹೆಸರಿಗೆ ಬೆಳಕಾಗಿದ್ರಿ. ದಿನ ರಾತ್ರಿ ನನ್ನ ಆಗು-ಹೋಗುಗಳನ್ನು ಆಲಿಸಿ ನನಗೆ ಬುದ್ಧಿ ಹೇಳಿ ಬದುಕು ಬುನಾದಿ ಕಟ್ಟಿಕೊಟ್ಟ ಗುರುಗಳಾದ್ರಿ, ಮಕ್ಕಳ ಬದುಕನ್ನು, ಅವರ ಜೀವನವನ್ನು ಹಸನಾಗಿ ರೂಪಿಸಿದ ಪರ್ಫೆಕ್ಟ್​ ಫಾದರ್ ಆಗಿದ್ರಿ. ತುಂಬಾ ಕಾಳಜಿ ಮಾಡುತ್ತಿದ್ರಿ, ನೀವು ತುಂಬಾ ವಿಭಿನ್ನವಾದ ಆಲೋಚನೆಯನ್ನು ಉಳ್ಳವರು, ಡೆಡಿಕೇಟೆಡ್ ಆಗಿದ್ದಿವರು ನೀವು ಎಂದು ಮಾಲಾಶ್ರೀ ಭಾವುಕರಾಗಿದ್ದಾರೆ.

  ನೀವು ದೂರವಾದ ಆ ಕ್ಷಣದಿಂದ ಈ ಸಾಲುಗಳನ್ನು ಬರೆಯುತ್ತಿರುವ ಈ ಕ್ಷಣದಲ್ಲೂ ಕಣ್ಣಲ್ಲಿ ನೀರು ಹೆಪ್ಪುಗಟ್ಟಿ ಕಣ್ಣೆರಡು ಮಂಜಾಗ್ತಾನೆ ಇದೆ. ನಿಮ್ಮನ್ನು ತುಂಬಾ ಮಿಸ್​ ಮಾಡ್ಕೊತಿದಿನಿ ಎಂದು ನೆನೆದು ಕಣ್ಣೀರಾಕಿದ್ದಾರೆ.

  ನನಗಾಗೆ ಜನುಮ ಪಡೆದು ಬಂದ ಹೃದಯ ನೀವು. ನನಗೆ ಏನೇನು ಬೇಕೋ ಅದೆಲ್ಲಾ ಕೊಟ್ಟ ನಿಮಗೆ, ಆ ಇಡೀ ಸ್ವರ್ಗ ನಿಮ್ಮದಾಗಿರಲಿ ಅಂತ ಇವತ್ತು ಇಲ್ಲಿಂದಲೇ ಹಾರೈಕೆ ಮಾಡ್ತೀನಿ ರೀ... ನಿಮ್ಮನ್ನು ಸದಾ ಮಿಸ್​ ಮಾಡಿಕೊಳ್ತೀನಿ, ಮತ್ತೆ ಕೊನೆ ಉಸಿರಿರುವವರೆಗೂ ಪ್ರೀತಿಸ್ತೀನಿ ಅಂತ ಮಾಲಾಶ್ರೀ ತುಂಬಾ ಭಾವುಕವಾಗಿ ಹೇಳಿದ್ದಾರೆ.  ಇದನ್ನೂ ಓದಿ:Mandya Crime: ಫಾದರ್ಸ್​ ಡೇ ದಿನವೇ ಮಂಡ್ಯದಲ್ಲಿ ದುರಂತ; ಮಗಳ ಸಾವಿನ ಸುದ್ದಿ ಕೇಳಿ ತಂದೆಗೆ ಹೃದಯಾಘಾತ

  ಕೋಟಿ ನಿರ್ಮಾಪಕ ರಾಮು ಅವರು ಕಳೆದ ಏಪ್ರಿಲ್​ 26 ರಂದು ಕೊರೋನಾ ಸೋಂಕಿನಿಂದ ಸಾವನ್ನಪ್ಪಿದ್ದರು. ವಿಶೇಷವಾಗಿ ಸಾಹಸ ದೃಶ್ಯಗಳಿಗೆ ದುಬಾರಿ ಹಣವನ್ನು ಖರ್ಚು ಮಾಡುತ್ತಿದ್ದರು. ದುಬಾರಿ ಬಜೆಟ್ ಸಿನಿಮಾ ನಿರ್ಮಾಣ ಮಾಡುತ್ತಿದ್ದ ಕಾರಣ ಸ್ಯಾಂಡಲ್‍ವುಡ್‍ನಲ್ಲಿ ಕೋಟಿ ರಾಮು ಎಂದೇ ಹೆಸರುವಾಸಿಯಾಗಿದ್ದರು.

  ರಾಮು ನಿಧನದ ಬಳಿಕ ಅವರ ಪತ್ನಿ ಮಾಲಾಶ್ರೀ ಹಾಗೂ ಅವರ ಇಬ್ಬರು ಮಕ್ಕಳಾದ ಆರ್ಯನ್​ ಮತ್ತು ಅನನ್ಯ ದುಃಖದ ಮಡುವಿನಲ್ಲಿದ್ದರು. ಇನ್ನೂ ಸಹ ಅವರ ನೋವು ಮಾಸಿಲ್ಲ. ರಾಮು ಅವರು ಮೃತಪಟ್ಟ ಕೆಲವು ದಿನಗಳ ಬಳಿಕ ದುಃಖದ ಕಟ್ಟೆ ಒಡೆದು ಮಾತನಾಡಿದ್ದ ಮಾಲಾಶ್ರೀ ಆಗಲೂ ಒಂದು ಭಾವನಾತ್ಮಕ ಪತ್ರ ಬರೆದಿದ್ದರು.

  ’ಕಳೆದ 12 ದಿನಗಳು ತುಂಬಾ ನೋವಿನಿಂದ ಕೂಡಿದ್ದವು. ನಮಗೆ ದಿಕ್ಕೇ ತೋಚುತ್ತಿಲ್ಲ. ನಮ್ಮೆಲ್ಲರಿಗೂ ಬೆನ್ನೆಲುಬಾಗಿದ್ದ ಪ್ರೀತಿಯ ಪತಿ ರಾಮು ಅಗಲಿಕೆಯಿಂದ ಇಡೀ ಕುಟುಂಬ ದಿಗ್ಭ್ರಮೆಗೊಂಡಿದೆ. ನನ್ನ ಹೃದಯ ಛಿದ್ರಗೊಂಡಿದೆ. ರಾಮು ಅವರೇ ನಮಗೆ ಯಾವಾಗಲೂ ಬೆನ್ನೆಲುಬು. ಅವರೇ ನಮಗೆ ದಾರಿ ತೋರಿಸುವ ಬೆಳಕು. ಈ ಪರಿಸ್ಥಿತಿಯಲ್ಲಿ ರಾಮುಗಾಗಿ ಇಡೀ ಕನ್ನಡ ಚಿತ್ರರಂಗ ಪ್ರೀತಿ ತೋರಿಸಿದೆ. ನಮಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು. ಕಷ್ಟದ ಪರಿಸ್ಥಿತಿಯಲ್ಲಿ ನಮಗೆ ಪ್ರೀತಿ, ಕಾಳಜಿ ತೋರಿಸಿದ ಮೀಡಿಯಾ, ಕಲಾವಿದರು, ನಿರ್ಮಾಪಕರು, ತಂತ್ರಜ್ಞರು, ತಾಂತ್ರಿಕ ವರ್ಗದವರು ಹಾಗೂ ರಾಮು ಅವರ ಎಲ್ಲಾ ಅಭಿಮಾನಿಗಳು ಹಾಗೂ ಹಿತೈಷಿಗಳಿಗೂ ನನ್ನ ಧನ್ಯವಾದಗಳು' ಎಂದು ಮಾಲಾಶ್ರೀ ಆ ಪತ್ರದಲ್ಲಿ ಹೇಳಿದ್ದರು.
  Published by:Latha CG
  First published: