ಸ್ಯಾಂಡಲ್‌ವುಡ್‌ನಲ್ಲಿ ಗೂಗ್ಲಿ ಚಿತ್ರ ನಾಯಕಿ (Kriti Kharbanda New Updates) ಕೃತಿ ಕರಬಂದ ವಿಶೇಷವಾಗಿಯೇ ಕಾಣಿಸಿಕೊಂಡಿದ್ದರು. ಸಿಂಪಲ್ ಬ್ಯೂಟಿ ಅಂತೀವಲ್ಲ, ಆ ಒಂದು ಮಾತಿಗೆ ಸಾಕ್ಷಿಯಂತೆ ಕಾಣಿಸಿಕೊಂಡದ್ದು ಇನ್ನೂ (Sandalwood Actress Kriti) ನೆನಪಿದೆ. ಚಿರಂಜೀವಿ ಸರ್ಜಾ ಅಭಿನಯದ ಚಿರು ಚಿತ್ರದಲ್ಲೂ ಕೃತಿ ಕರ್ಬಂದ ಸೌಂದರ್ಯ ಗಮನ ಸೆಳೆಯಿತು. ಇಲ್ಲೆ ಎಲ್ಲೋ ಅನ್ನುವ ಹಾಡಿನಲ್ಲಿ ಕೃತಿ ಕರಬಂದ ತುಂಬಾ ಚೆನ್ನಾಗಿಯೇ (Sandalwood Kriti Kharbanda) ಕಾಣಿಸಿಕೊಂಡ್ರು. ಕನ್ನಡದ ಕೆಲವು ಸಿನಿಮಾಗಳಲ್ಲಿ ಅಭಿನಯಿಸುತ್ತಲೇ ಕೃತಿ, ಬಾಲಿವುಡ್‌ಗೂ ಹಾರಿದರು. ಆದರೆ ಸಿನಿಮಾ ಪ್ರೀತಿಯನ್ನ ಬಾಲಿವುಡ್‌ನಲ್ಲಿಯೇ (New Photo Shoot Updates) ಮುಂದುವರೆಸಿರೋ ಕೃತಿ ಕರಬಂದ, ಇದೀಗ ಗೊತ್ತೇ ಆಗದಷ್ಟು ಬದಲಾಗಿ ಹೋಗಿದ್ದಾರೆ.
ರಾಕಿ ಭಾಯ್ ಹೀರೋಯಿನ್ ಕೃತಿ ಕರಬಂದ ಕಂಪ್ಲೀಟ್ ಚೇಂಜ್!
ಹೌದು, ಕೃತಿ ಕರಬಂದ ಬದಲಾಗಿ ಬಿಟ್ಟಿದ್ದಾರೆ. ತುಂಬಾ ಸುಂದರವಾಗಿ ಕಾಣಿಸುತ್ತಿದ್ದ ಈ ಬೆಡಗಿ, ಈಗ ತೀರಾ ಸಣ್ಣ ಆಗಿದ್ದಾರೆ. ಗುರುತೇ ಸಿಗದಷ್ಟು ಬದಲಾಗಿರೋ ಈ ಚೆಲುವೆಯ ಫೋಟೋ ಅತಿ ಹೆಚ್ಚು ಗಮನ ಸೆಳೆಯುತ್ತಿವೆ.
ಕೃತಿ ಕರಬಂದ ಯಾಕೆ ಹೀಗೆ ಆದ್ರೋ ಏನೋ ? ನೋಡಲು ಆಗದಷ್ಟು ಚೇಂಜ್ ಆಗಿದ್ದಾರೆ. ಒಂದು ರೀತಿ ಏನೋ ಪ್ರಾಬ್ಲಂ ಆಗಿದೆ ಅನ್ನುವ ಹಾಗೆ ಕೃತಿ ಕರ್ಬಂದ ಕಾಣಿಸುತ್ತಿದ್ದಾರೆ.
ಗೂಗ್ಲಿ ಬೆಡಗಿ ಕೃತಿ ಕರಬಂದಗೆ ಏನ್ ಆಗಿದೆ ?
ಕೃತಿ ಕರಬಂದ ಇನ್‌ಸ್ಟಾಗ್ರಾಮ್ ಪೇಜ್ ನೋಡಿದ್ರೆ ಸಾಕು, ಕೃತಿಯ ಹೊಸ ರೀತಿಯ ಫೋಟೋಗಳು ನಿಮ್ಮ ಕಣ್ಣಿಗೆ ಬೀಳುತ್ತವೆ. ಆದರೆ ಇದು ಕೃತಿ ಕರಬಂದಾನಾ ಅನ್ನೋ ಮಟ್ಟಿಗೆ ಕೃತಿ ಬಲಾಗಿದ್ದಾರೆ.
ಆದರೆ ಈ ಒಂದು ಬದಲಾವಣೆ ಯಾಕೋ ಅನ್ನೋದು ಕೂಡ ಅಷ್ಟೇ ಕುತೂಹಲದ ಪ್ರಶ್ನೆಯಾಗಿ ಉಳಿದಿದೆ. ಕನ್ನಡದ ಗೂಗ್ಲಿ ಸಿನಿಮಾದಲ್ಲಿ ಕಂಡ ಆ ಕೃತಿ ಕರಬಂದ ಈಗ ಸಿಗೋದೇ ಇಲ್ಲ. ಚಿರು ಜೊತೆಗೆ ನಟಿಸಿದ್ದ ಆ ಸ್ಮೈಲಿಂಗ್ ಬ್ಯೂಟಿ ಕೃತಿ ಕರ್ಬಂದ ಈಗಲೂ ಕಳೆದ ಹೋಗಿದ್ದಾರೆ.
ಗೂಗ್ಲಿ ಸಿನಿಮಾ ಹೀರೋಯಿನ್ ಕೃತಿ ಎಲ್ಲಿಗೆ ಹೋದ್ರು ?
ಕೃತಿ ಕರಬಂದ ಕನ್ನಡದ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ ಗೂಗ್ಲಿ ಸಿನಿಮಾ ಆ ಸಿನಿಮಾಗಳಲ್ಲಿ ಪ್ರಮುಖ ಚಿತ್ರವೇ ಆಗಿದೆ. ಚಿರು ಸಿನಿಮಾ ಕೂಡ ವಿಶೇಷವಾಗಿಯೇ ಗಮನ ಸೆಳೆದಿದೆ.
ಪ್ರೇಮ್ ಅಡ್ಡ, ಗಲಾಟೆ ಸಿನಿಮಾಗಳಲ್ಲೂ ಕೃತಿ ಕರ್ಬಂದ ನಟಿಸಿದ್ದಾರೆ. ಈ ಸಿನಿಮಾಗಳು ಆದ್ಮೇಲೆ ಬಾಲಿವುಡ್ ಕಡೆಗೆ ಮುಖ ಮಾಡಿರೋ ನಟಿ ಕೃತಿ ಕರಬಂದ ಇಲ್ಲಿ ರಾಜ್ ರೀಬೂಟ್ ಚಿತ್ರದಲ್ಲಿ ನಟಿಸಿದ್ದರು. ಹೌಸ್‌ಫುಲ್-4 ಸಿನಿಮಾದಲ್ಲೂ ಕೃತಿ ನಟಿಸಿ ಎಲ್ಲರ ಗಮನ ಸೆಳೆಯೋ ಪ್ರಯತ್ನ ಮಾಡಿದ್ದರು.
ಮಾಸ್ತಿಗುಡಿಯ ಬೆಡಗಿಯ ರೂಪಕ್ಕೆ ಏನಾಗಿದೆ ?
ಈ ನಡುವೆ ಕನ್ನಡದ ಮಾಸ್ತಿಗುಡಿ ಚಿತ್ರದಲ್ಲು ಕೃತಿ ಕರಬಂದ ನಟಿಸಿದ್ದರು. ಇದಾದ್ಮೇಲೆ ಮತ್ತೆ 14 Phere ಸಿನಿಮಾದಲ್ಲಿ ಕೃತಿ ಕರಬಂದ ನಟಿಸಿದ್ದೆ ಕೊನೆ ನೋಡಿ, ಈ ಚಿತ್ರದ ಬಳಿಕ ಕೃತಿ ಯಾವುದೇ ಭಾಷೆಯ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದೇ ಇಲ್ಲ.
ಇದನ್ನೂ ಓದಿ: Nawazuddin Siddiqui: ವಿಕ್ಟರಿ ವೆಂಕಟೇಶ್ಗೆ ಟಕ್ಕರ್ ಕೊಡಲು ಬಂದ್ರು ಬಾಲಿವುಡ್ ನವಾಜುದ್ದೀನ್, ಸೈಂಧವ್ ಫಸ್ಟ್ ಲುಕ್ ಔಟ್!
ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲಿ ನಟಿಸಿರೋ ಕೃತಿ ಕರ್ಬಂದ ಸದ್ಯ ನಟ ಪುಲ್ಕಿತ್ ಸಾಮ್ರಾಟ್ ಜೊತೆಗೆ ಡೇಟಿಂಗ್‌ನಲ್ಲೂ ಇದ್ದಾರೆ. ಇನ್ನುಳಿದಂತೆ ಕೃತಿ ಕರಬಂದ ಸದ್ಯ ತಮ್ಮ ಸ್ಪೆಷಲ್ ಫೋಟೋ ಶೂಟ್ ಮೂಲಕ ಗಮನ ಸೆಳೆದಿದ್ದಾರೆ.
ಇನ್ನು ಮುಂದಿನ ದಿನಗಳಲ್ಲಿ ಯಾವ ಹೊಸ ಸಿನಿಮಾ ಒಪ್ಪಿಕೊಳ್ಳುತ್ತಾರೆ ಅನ್ನೋ ಪ್ರಶ್ನೆ ಕೂಡ ಇದೆ. ಆದರೆ ಅದಕ್ಕೆ ಇನ್ನೂ ಉತ್ತರ ಸಿಕ್ಕಿಲ್ಲ. ಬೇಗ ಸಿಗೋ ನಿರೀಕ್ಷೆ ಕೂಡ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ