• ಹೋಂ
  • »
  • ನ್ಯೂಸ್
  • »
  • ಮನರಂಜನೆ
  • »
  • Haripriya Dream Boy: ಹರಿಪ್ರಿಯಾ ಹೇಳಿದಂತೆ ಇದ್ದಾರಾ ವಸಿಷ್ಠ ಸಿಂಹ? ಡ್ರೀಮ್ ಬಾಯ್ ಬಗೆಗಿನ ವಿಡಿಯೋ ವೈರಲ್!

Haripriya Dream Boy: ಹರಿಪ್ರಿಯಾ ಹೇಳಿದಂತೆ ಇದ್ದಾರಾ ವಸಿಷ್ಠ ಸಿಂಹ? ಡ್ರೀಮ್ ಬಾಯ್ ಬಗೆಗಿನ ವಿಡಿಯೋ ವೈರಲ್!

ಹರಿಪ್ರಿಯಾ ಹೇಳಿದಂತೆ ಇದ್ದಾರಾ ವಸಿಷ್ಠ ಸಿಂಹ?

ಹರಿಪ್ರಿಯಾ ಹೇಳಿದಂತೆ ಇದ್ದಾರಾ ವಸಿಷ್ಠ ಸಿಂಹ?

ತುಂಬಾ ಕ್ವಾಲಿಟೀಸ್ ಇರಬೇಕು. ತುಂಬಾ ದೊಡ್ಡ ಲೀಸ್ಟ್ ಇದೆ. ಅವರು ಸೆನ್ಸಿಬಲ್ ಆಗಿರಬೇಕು. ತುಂಬಾ ಅಂಡರ್ ಸ್ಟಾಂಡಿಂಗ್, ವೆರಿ ಪ್ರೊಟೆಕ್ಟಿವ್ ಆಗಿರಬೇಕು. ನಗಿಸುತ್ತಾ ಇರಬೇಕು.

  • News18 Kannada
  • 4-MIN READ
  • Last Updated :
  • Karnataka, India
  • Share this:

    ಸ್ಯಾಂಡಲ್‍ವುಡ್‍ನ (Sandalwood) ಮತ್ತೊಂದು ಸ್ಟಾರ್ ಜೋಡಿ ಹಸೆಮಣೆ ಏರಲು ಸಿದ್ಧವಾಗಿದೆ. ಹರಿಪ್ರಿಯಾ (Haripriya) ಹಾಗೂ ವಸಿಷ್ಠ ಸಿಂಹ (Vasishta Simha) ಇತ್ತೀಚೆಗಷ್ಟೇ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಈ ಜೋಡಿ ಮದುವೆ ಆಗುತ್ತಾರೆ ಅಂತ ಸುದ್ದಿ ಹಬ್ಬಿದ ಬೆನ್ನಲ್ಲೇ ಅದಕ್ಕೆ ಸಾಕ್ಷಿ ಎನ್ನುವಂತೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಹರಿಪ್ರಿಯಾ ಅವರ ನಿವಾಸದಲ್ಲಿ ಸರಳವಾಗಿ ನಿಶ್ಚಿತಾರ್ಥ ನೆರವೇರಿತ್ತು. ಹೊಸದೊಂದು ಸಿನಿಮಾದಲ್ಲಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಜೊತೆಯಾಗಿ ನಟಿಸಿದ್ದಾರೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ಇಬ್ಬರ ನಡುವೆ ಪ್ರೀತಿ (Love) ಆಗಿದೆ ಎಂದು ಹೇಳಲಾಗ್ತಿದೆ. ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ (Sudeep) ಮುಂದೆ ಹರಿಪ್ರಿಯಾ ತಮ್ಮ ಕನಸಿನ ಹುಡುಗ (Dream Boy) ಹೇಗಿರಬೇಕು ಎಂದು ಹೇಳಿದ್ದರು. ಆ ವಿಡಿಯೋ ವೈರಲ್ ಆಗ್ತಿದೆ.


    ಹರಿಪ್ರಿಯ ಲವ್ಸ್ ವಸಿಷ್ಠ ಸಿಂಹ
    ಸ್ಯಾಂಡಲ್‍ವುಡ್ ಕ್ಯೂಟ್ ಜೋಡಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯ ಪ್ರೀತಿ ಮಾಡ್ತಾ ಇದ್ದಾರೆ. ಪ್ರೀತಿಯನ್ನು ಇನ್ನಷ್ಟು ಗಟ್ಟಿಗೊಳಿಸಲು ನಿಶ್ಚಿತಾರ್ಥ ಮಾಡಿಕೊಂಡು ಉಂಗರು ಬದಲಾಯಿಸಿಕೊಂಡಿದ್ದಾರೆ. ಮುಂದಿನ ವರ್ಷ ಈ ಜೋಡಿ ಮದುವೆ ಆಗ್ತಾರೆ ಎನ್ನುವ ಸುದ್ದಿಗಳು ಕೇಳಿ ಬಂದಿವೆ.


    ಹರಿಪ್ರಿಯಾ ಡ್ರೀಮ್ ಬಾಯ್ ಹೇಗಿರಬೇಕು?
    ಈ ಹಿಂದೆ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ಅವರು, ಹರಿಪ್ರಿಯಾಗೆ ನಿಮ್ಮ ಡ್ರೀಮ್ ಬಾಯ್ ಹೇಗಿರಬೇಕು ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಹರಿಪ್ರಿಯಾ ಈ ರೀತಿ ಹೇಳಿದ್ದರು. 'ತುಂಬಾ ಕ್ವಾಲಿಟೀಸ್ ಇರಬೇಕು. ತುಂಬಾ ದೊಡ್ಡ ಲೀಸ್ಟ್ ಇದೆ. ಅವರು ಸೆನ್ಸಿಬಲ್ ಆಗಿರಬೇಕು. ತುಂಬಾ ಅಂಡರ್ ಸ್ಟಾಂಡಿಂಗ್, ವೆರಿ ಪ್ರೊಟೆಕ್ಟಿವ್ ಆಗಿರಬೇಕು. ನಗಿಸುತ್ತಾ ಇರಬೇಕು. ತುಂಬಾ ಮಾತನಾಡುತ್ತಾನೆ. ಸೋ ಮೆನಿ ಕ್ವಾಲಿಟೀಸ್ ಇರಬೇಕು' ಎಂದಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.



    ವಸಿಷ್ಠ ಸಿಂಹ ಅದೇ ರೀತಿ ಇದ್ದಾರಾ?
    ಹರಿಪ್ರಿಯಾ ತನ್ನ ಡ್ರೀಮ್ ಬಾಯ್ ಬಗ್ಗೆ, ತುಂಬಾ ಗುಣಗಳು ಇರಬೇಕು ಎಂದು ಹೇಳಿದ್ದರು. ಈಗ ವಸಿಷ್ಠ ಸಿಂಹರನ್ನು ಪ್ರೀತಿ ಮಾಡಿ ಮದುವೆ ಆಗುತ್ತಿದ್ದಾರೆ. ಹಾಗಾದ್ರೆ ಈ ಎಲ್ಲಾ ಗುಣಗಳು ವಸಿಷ್ಠ ಸಿಂಹ ಅವರಿಗೆ ಇವೆನಾ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ.


    ಇದನ್ನೂ ಓದಿ: Lakshana: ನಕ್ಷತ್ರಾ ಒಳ್ಳೆತನ ನೋಡಿ ಕರಗಿದ ಮೌರ್ಯ! ಕೊಲ್ಲೋ ನಿರ್ಧಾರ ಕೈಬಿಟ್ಟನಾ ಕೊಲೆಗಾರ? 


    ಒಟ್ಟಿಗೆ ಡಬ್ಬಿಂಗ್ ಮಾಡಿದ ಜೋಡಿ
    ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ತೆಲುಗಿನ ಎವರ್ ಚಿತ್ರದ ರಿಮೇಕ್ ಚಿತ್ರಕ್ಕೆ ವಶಿಷ್ಠ ಸಿಂಹ-ಹರಿಪ್ರಿಯಾ ಒಟ್ಟಿಗೆ ಡಬ್ಬಿಂಗ್ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಆಗಿರುವ ಈ ಚಿತ್ರಕ್ಕೆ ಕನ್ನಡದಲ್ಲಿ ಇನ್ನು ಹೆಸರಿಟ್ಟಿಲ್ಲ.ಇನ್ನೂ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ನಟನೆಯ ಸಿನಿಮಾ ಮುಂದಿನ 2023ರಲ್ಲಿ ತೆರೆಗೆ ಅಪ್ಪಳಿಸಲಿದೆ. ಸಿನಿಮಾ ರಿಲೀಸ್ ಜೊತೆ ಮದುವೆಯ ಗುಡ್ ನ್ಯೂಸ್ ಕೂಡ ಸಿಂಹಪ್ರಿಯ ಜೋಡಿ ಸದ್ಯದಲ್ಲೇ ಅಧಿಕೃತವಾಗಿ ತಿಳಿಸಲಿದ್ದಾರೆ.


    ಹರಿಪ್ರಿಯಾ ಹೇಳಿದಂತೆ ಇದ್ದಾರಾ ವಸಿಷ್ಠ ಸಿಂಹ?


    ಹರಿಪ್ರಿಯಾಗೆ ವಸಿಷ್ಠ ಸಿಂಹ ಕ್ರಿಸ್ಟಲ್ ಎಂಬ ನಾಯಿ ಮರಿಯನ್ನು ಉಡುಗೊರೆಯಾಗಿ ನೀಡಿದ್ದರು. ಈ ಕ್ರಿಸ್ಟಲ್ ಬೆಳೆಯುತ್ತಾ, ಬೆಳೆಯುತ್ತಾ ನಮ್ಮ ಆತ್ಮೀಯತೆ ಹೆಚ್ಚಾಯ್ತು. ಪ್ರೀತಿಯು ಬೆಳೆಯಿತು. ಕ್ರಿಸ್ಟಲ್ ನಮ್ಮಿಬ್ಬರ ಪ್ರೀತಿಗೆ ಕನ್ನಡಿ ಎಂದು ಹರಿಪ್ರಿಯಾ ವಿಡಿಯೋ ಒಂದರಲ್ಲಿ ಹೇಳಿಕೊಂಡಿದ್ದರು.


    ಇದನ್ನೂ ಓದಿ: Ramachari: ನಾನು, ನೀನು ಜೊತೆಯಾಗಲು ಸಾಧ್ಯವೇ ಇಲ್ಲ ಎಂದ ರಾಮಾಚಾರಿ, ಚಾರು ಬೇಸರ! 


    ಗುರುಹಿರಿಯರ ಸಮ್ಮತಿಯ ಮೇರೆಗೆ ಇತ್ತೀಚೆಗೆ ಎಂಗೇಜ್‍ಮೆಂಟ್ ಮಾಡಿಕೊಂಡಿರುವ ವಸಿಷ್ಠ ಸಿಂಹ-ಹರಿಪ್ರಿಯಾ 2023ರಲ್ಲಿ ಫೆಬ್ರವರಿ ಅಥವಾ ಮಾರ್ಚ್‍ನ ಶುಭ ಮುಹೂರ್ತದಲ್ಲಿ ಹಸೆಮಣೆ ಏರಲು ಈ ಜೋಡಿ ರೆಡಿಯಾಗಿದೆಯಂತೆ.

    Published by:Savitha Savitha
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು