Chaitra Hallikeri:'ಹಳ್ಳಿ' ಹುಡುಗಿ ಬಾಳಲ್ಲಿ ಬರಲೇ ಇಲ್ಲ 'ಚೈತ್ರ'ಕಾಲ! ಗೋಲ್ಡ್‌ ಲೋನ್‌ ಕಿರಿಕ್‌ಗೆ ಪತಿ ವಿರುದ್ಧವೇ ನಟಿ ದೂರು

Sandalwood News: ಸ್ಯಾಂಡಲ್​ವುಡ್​ನಲ್ಲಿ  ಖುಷಿ, ಶಿಷ್ಯ, ಗುನ್ನ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿ ಚೈತ್ರಾ ಅಭಿನಯಿಸಿದ್ದಾರೆ. ಆದರೆ ಖುಷಿ ಚಿತ್ರ ಅವರಿಗೆ ಹೆಸರು ತಂದು ಕೊಟ್ಟ ಸಿನೆಮಾವಾಗಿದ್ದು, ಈ ಮೂಲಕ ಜನರಿಗೆ ಹತ್ತಿರವಾಗಿದ್ದರು.

ನಟಿ ಚೈತ್ರಾ

ನಟಿ ಚೈತ್ರಾ

  • Share this:
ಸ್ಯಾಂಡಲ್​ವುಡ್​ನಲ್ಲಿ (Sandalwood) ಮಿಂಚಿ ಮರೆಯಾಗಿದ್ದ ನಟಿ ಚೈತ್ರಾ ಹಳ್ಳಿಕೇರಿ (Chaitra Hallikeri) ತನ್ನ ಪತಿ ಮತ್ತು ಮಾವನ ವಿರುದ್ಧ ಪೊಲೀಸರಿಗೆ (Police) ದೂರು ನೀಡಿದ್ದು, ತನ್ನ ಬ್ಯಾಂಕ್ (Bank) ಖಾತೆ ದುರ್ಬಳಕೆ ಮಾಡಿಕೊಂಡು ಲೋನ್ ಪಡೆದಿರುವ ಆರೋಪ ಮಾಡಿದ್ದಾರೆ. ಈ ಬಗ್ಗೆ ಮೈಸೂರಿನ (Mysuru) ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವ ನಟಿ ಚೈತ್ರಾ, ನನ್ನ ಅನುಮತಿ ಇಲ್ಲದೇ ಪತಿ ಹಾಗೂ ಮಾವ ಸೇರಿ ಗೋಲ್ಡ್ ಲೋನ್ ಮಾಡಿದ್ದಾರೆ. ಇದಕ್ಕೆ ಬ್ಯಾಂಕ್ ಮ್ಯಾನೇಜರ್ ಸಹ ಸಹಾಯ ಮಾಡಿದ್ದಾರೆ ಎಂದು ಪತಿ ಬಾಲಾಜಿ ಪೋತರಾಜ್ ಮತ್ತು ಮಾವ ಪೋತರಾಜ್ ವಿರುದ್ಧ ಚೈತ್ರಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಗೋಲ್ಡ್ ಲೋನ್ ಪಡೆಯುವಾಗ ತನ್ನ ಸಹಿಯನ್ನು ನಕಲು ಮಾಡಿದ್ದಾರೆ ಎಂದು ಚೈತ್ರಾ ಆರೋಪ ಮಾಡಿದ್ದು, ಈ ಅವ್ಯವಹಾರದಲ್ಲಿ ಬ್ಯಾಂಕ್ ಮ್ಯಾನೇಜರ್ ಕೂಡ ಶಾಮೀಲಾಗಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ಅಲ್ಲದೇ ನಾನು ಈ ಬಗ್ಗೆ ಪ್ರಶ್ನೆ ಮಾಡಿದ ಕಾರಣ ನನಗೆ ಸುಮ್ಮನಿರುವಂತೆ ಜೀವ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ನಟಿ ಹೇಳಿದ್ದು, ಮೂರು ದಿನಗಳ ಹಿಂದೆಯೇ ದೂರು ನೀಡಿರುವ ಬಗ್ಗೆ ಮಾಹಿತಿ ಇದೆ.

ಈ ಬಗ್ಗೆ ಎಫ್ಐಆರ್ ದಾಖಲಾಗಿದ್ದು, ಜೀವ ಬೆದರಿಕೆ ಇರುವುದರಿಂದ ನನಗೆ ರಕ್ಷಣೆ ನೀಡಿ ಎಂದು ಚೈತ್ರಾ ಬೇಡಿಕೆ ಇಟ್ಟಿದ್ದು, ನ್ಯಾಯ ದೊರಕಿಸುವಂತೆ ಮನವಿ ಮಾಡಿದ್ದಾರೆ. ಗಂಡ, ಮಾವನ ಷಡ್ಯಂತರದ ವಹಿವಾಟಿಗೆ ಜಯಲಕ್ಷ್ಮೀಪುರಂನ ಸೌತ್ ಇಂಡಿಯನ್ ಬ್ಯಾಂಕ್ ಮ್ಯಾನೇಜರ್ ಸಹಾಯ ಮಾಡಿದ್ದು, ತನ್ನ ಖಾತೆ ಮೂಲಕ 13 ಲಕ್ಷ ಮೌಲ್ಯದ ಚಿನ್ನ ಅಡವಿಟ್ಟು ವಂಚನೆ ಮಾಡಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: 'ಅಲೆಕ್ಸಾ' ಅವತಾರದಲ್ಲಿ ಅದಿತಿ - ಫುಲ್​ ಫೈಟಿಂಗ್ ಮೂಡ್​ನಲ್ಲಿ ಶ್ಯಾನೆ ಟಾಪ್ ಹುಡ್ಗಿ

ಅಲ್ಲದೇ ನಾನು ಪತಿ ವಿರುದ್ಧ ಈಗಾಗಲೇ ದೈಹಿಕ ಹಲ್ಲೆ ಆರೋಪಿಸಿ ಕೇಸ್ ಹಾಕಿದ್ದೇನೆ. ನನ್ನ ಬ್ಯಾಂಕ್ ಖಾತೆ ದುರ್ಬಳಕೆ ಮಾಡಿದ್ದು ಗೊತ್ತಾಗಿ ಈಗ ಮತ್ತೊಂದು ಪ್ರಕರಣ ದಾಖಲಿಸಿದ್ದೇನೆ ಎಂದು ಚೈತ್ರಾ ಮಾಹಿತಿ ನೀಡಿದ್ದಾರೆ.

ಇನ್ನು ನಟಿ ಚೈತ್ರಾ ಪತಿಯ ವಿರುದ್ಧ ದೂರು ನೀಡುತ್ತಿರುವುದು ಇದೇ ಮೊದಲೇನಲ್ಲ. ಈ ಮೊದಲ ಸಹ ದೂರು ದಾಖಲಿಸಿದ್ದರು. ಆದರೆ ಹಿರಿಯ ಮಧ್ಯಸ್ಥಿಕೆಯಲ್ಲಿ ಸಮಸ್ಯೆಯನ್ನು ಬಗೆಹರಿಸಲಾಗಿತ್ತು. 2018ರಲ್ಲಿ ಪತಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ನಾನು ಕಷ್ಟಪಟ್ಟು ನಿರ್ಮಿಸಿದ ಧಾರಾವಾಹಿಯ ಸಂಪಾದನೆಯನ್ನು ಸಹ ಕಿತ್ತುಕೊಂಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದರು.

ಇದನ್ನೂ ಓದಿ: ಪೊಲೀಸ್​ ತಾಂಡವ್ ವಿರುದ್ಧ ಉಗ್ರ ರೂಪತಾಳಿದ ಕಂಠಿ - ಪುಟ್ಟಕ್ಕನ್ನ ಮಕ್ಕಳು ಧಾರಾವಾಹಿಯಲ್ಲಿ ‌ಬಿಗ್ ಫೈಟ್

ಸ್ಯಾಂಡಲ್​ವುಡ್​ನಲ್ಲಿ  ಖುಷಿ, ಶಿಷ್ಯ, ಗುನ್ನ ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿ ಚೈತ್ರಾ ಅಭಿನಯಿಸಿದ್ದಾರೆ. ಆದರೆ ಖುಷಿ ಚಿತ್ರ ಅವರಿಗೆ ಹೆಸರು ತಂದು ಕೊಟ್ಟ ಸಿನೆಮಾವಾಗಿದ್ದು, ಈ ಮೂಲಕ ಜನರಿಗೆ ಹತ್ತಿರವಾಗಿದ್ದರು. ಅಲ್ಲದೇ ಅವರ ಸಿನೆಮಾಗಳ ಹಲವಾರು ಹಾಡುಗಳು ಸಹ ಇಂದಿಗೂ ಸೂಪರ್ ಹಿಟ್. ಒಳ್ಳೆಯ ಚಿತ್ರಗಳನ್ನು ನೀಡುತ್ತಿದ್ದ ಚೈತ್ರಾ, ಒಳ್ಳೆಯ ಆಫರ್ಗಳನ್ನು ಪಡೆಯುತ್ತಿದ್ದ ಸಮಯದಲ್ಲಿಯೇ, ಉದ್ಯಮಿ ಬಾಲಾಜಿ ಪೋತಾರಾಜ್ ಅವರನ್ನು ಮದುವೆ ಆಗಿದ್ದರು. ಪತಿ ಮದುವೆಯ ನಂತರ ನಟನೆ ನಿಲ್ಲಿಸಬೇಕು ಎಂದ ಕಾರಣ, ಅದನ್ನು ಒಪ್ಪಿ ನಟನೆಯಿಂದ ದೂರ ಇದ್ದರು.
Published by:Sandhya M
First published: