Me too Movement: ಕನ್ನಡ ಚಿತ್ರರಂಗದಲ್ಲಿ ಮತ್ತೆ ಮೀ ಟೂ ಸದ್ದು! ರೋಡ್ ರೋಮಿಯೋ ನಟಿ ಬಿಚ್ಚಿಟ್ಟ ಕರಾಳ ರಹಸ್ಯ

ಸ್ಯಾಂಡಲ್​​ವುಡ್​ನಲ್ಲಿ ಮತ್ತೆ ಮೀ ಟೂ ಆರೋಪ ಕೇಳಿ ಬಂದಿದೆ. ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಹೀರೋಯಿನ್ ಆಗಿ ಮಿಂಚಿದ್ದ ಆಶಿತಾ ಮೀ ಟೂ ಆರೋಪ ಮಾಡಿದ್ದಾರೆ.

ಆಶಿತಾ

ಆಶಿತಾ

  • Share this:
ಭಾರತದಲ್ಲಿ ಮೀ ಟೂ (Me Too) ಅಭಿಯಾನ ಹೆಚ್ಚಿನ ಹೆಣ್ಮಕ್ಕಳ ನೋವಿಗೆ ವೇದಿಕೆಯಾಯಿತು. ಮುಚ್ಚಿ ಹೋಗಿದ್ದ ಕರಾಳ ಘಟನೆಗಳನ್ನು ಮಹಿಳೆಯರು ಸೋಷಿಯಲ್ ಮೀಡಿಯಾ (Social Media) ಮೂಲಕ ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯವಾಯಿತು. ಮೀ ಟೂ ಅಭಿಯಾನ ಹೆಚ್ಚು ಸದ್ದು ಮಾಡಿದ್ದು ಸಿನಿಮಾ  (Cinema) ಇಂಡಸ್ಟ್ರಿಯಲ್ಲಿ. ಬಾಲಿವುಡ್​ನಿಂದ ಹಿಡಿದು ಸ್ಯಾಂಡಲ್​​ವುಡ್ (Sandalwood) ತನಕ ಪ್ರಾದೇಶಿಕ ಸಿನಿಮಾ ಕ್ಷೇತ್ರದಲ್ಲಿಯೂ ಮೀ ಟೂ ಸದ್ದು ಮಾಡಿದೆ. ನಟಿ ಶ್ರುತಿ ಹರಿ ಹರನ್ ಅವರು ಮೀ ಟೂ ಆರೋಪ ಮಾಡಿದ ನಂತರ ಈಗ ಮತ್ತೊಬ್ಬ ಕನ್ನಡ ನಟಿ ಇದೇ ರೀತಿ ಆರೋಪ ಮಾಡಿದ್ದು ಇದು ಸುದ್ದಿಯಾಗಿದೆ. ರೋಡ್ ರೋಮಿಯೋ (Road Romeo) ಸಿನಿಮಾದ ನಟಿ, ಬಾ ಬಾರೋ ರಸಿಕ ಖ್ಯಾತಿಯ ಆಶಿತಾ (Ashitha). ಈಗ ಮೀ ಟೂ ಆರೋಪ ಮಾಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ ನಟಿ ಆಶಿತಾ ಸದ್ಯ ಚಿತ್ರರಂಗದಿಂದ ದೂರ ಇದ್ದಾರೆ.

ನೇರ ಆರೋಪ ಮಾಡಿದ ನಟಿ

ಕೆಲವು ವರ್ಷಗಳ ಹಿಂದೆ ಸದ್ದು ಮಾಡಿದ್ದ ನಟಿ ಅನೇಕ ವರ್ಷದ ಬಳಿಕ ಮತ್ತೆ ಕ್ಯಾಮರಾ ಮುಂದೆ ಬಂದಿದ್ದಾರೆ. ಆಶಿತಾ ಕನ್ನಡ ಚಿತ್ರರಂಗದ ಕರಾಳಮುಖ ಬಹಿರಂಗ ಪಡಿಸಿದ್ದಾರೆ. ರಘುರಾಮ್ ಅವರ ಯೂಬ್ಯೂಬ್ ವಾಹಿನಿ ಜೊತೆ ಮಾತನಾಡಿದ ನಟಿ ಆಶಿತಾ ಮೀ ಟೂ ಕಾಟದ ಕುರಿತು ಸಾಕಷ್ಟು ವಿಚಾರಗಳನ್ನ ರಿವೀಲ್ ಮಾಡಿದ್ದಾರೆ. ಕೆಟ್ಟ ಅನುಭವವಾಗಿರುವುದು ಸಿನಿಮಾರಂಗದಿಂದ ದೂರ ಉಳಿಯಲು ಪ್ರಮುಖ ಕಾರಣ  ಎಂದು ನೇರವಾಗಿ ಆರೋಪ ಮಾಡಿದ್ದಾರೆ.

ಸಿನಿಮಾದಿಂದ ದೂರವಾದರೂ ಬೇಸರವಿಲ್ಲ ಎನ್ನುತ್ತಾರೆ ನಟಿ

ಸಿನಿಮಾ ರಂಗದಿಂದ ದೂರವಾಗಿದ್ದಕ್ಕೆ ನನಗೆ ಬೇಸರವಿಲ್ಲ ಎಂದಿರುವ ನಟಿ ಆಶಿತಾ ಸಿನಿಮಾ ರಂಗದಲ್ಲಿ ನಟಿಯಾಗಿ ಚೆನ್ನಾಗi ಗುರುತಿಸಿಕೊಂಡ ಮೇಲೂ ತಮಗೆ ಕೆಟ್ಟ  ಅನುಭವಗಳು ಆದವು ಎಂದಿದ್ದಾರೆ. ಸಿನಿಮಾ ಲೋಕದಲ್ಲಿ ನಟನಾ ಪಯಣ ಪ್ರಾರಂಭ ಆದಾಗ ಅಂತ ಕೆಟ್ಟ ಸಮಸ್ಯೆ ಆಗಿಲ್ಲ ಎಂದೂ ಹೇಳಿದ್ದಾರೆ.

ನಟಿಯಾಗಿ ಗುರುತಿಸಿಕೊಂಡ ಮೇಲೆ ಶುರುವಾಯ್ತು ಪ್ರಾಬ್ಲೆಂ

ಸಿನಿಮಾರಂಗದಲ್ಲಿ ಗುರುತಿಸಿಕೊಂಡ ಬಳಿಕ ತನಗೆ ಕೆಟ್ಟ ಅನುಭವವಾಯಿತು ನಟಿ ಹೇಳಿದರು. ಅದಕ್ಕೆಲ್ಲ ನಾನು ಆಸ್ಪದ ಕೊಡಲಿಲ್ಲ. ನನಗೆ ಅಂತ ಅವಕಾಶ ಬೇಕಾಗಿರಲಿಲ್ಲ. ಆ ನಿರ್ದೇಶಕರ ಹೆಸರು ಹೇಳುವುದು ಬೇಡ, ಅವರು ತನ್ನೊಂದಿಗೆ ನನ್ನನ್ನು ಸಲುಗೆಯಿಂದ ಇರಲು ಹೇಳಿದರು. ಅದಕ್ಕೆ ಒಪ್ಪದಾಗ ಬೇಕಾಬಿಟ್ಟಿ ಅವಮಾನಗಳನ್ನು ಮಾಡಿದ್ದರು. ಟೇಕ್ ಚೆನ್ನಾಗಿ ಬಂದರೂ, ಮತ್ತೆ ರಿಟೇಕ್ ಮಾಡಿಸುತ್ತಿದ್ದರು. ಇದೆಲ್ಲದರಿಂದ ನಾನು ಬೇಸತ್ತಿದ್ದೆ' ಎಂದು ಆಶಿತಾ ಅನೇಕ ವರ್ಷಗಳ ಬಳಿಕ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: Me Too: ಶೃತಿ ಹರಿಹರನ್ ಗೆ ಕಬ್ಬನ್ ಪಾರ್ಕ್ ಪೊಲೀಸರಿಂದ ನೋಟಿಸ್: ಸುಳ್ಳು ಕತೆ ಕಟ್ಟಿದ್ರಾ ನಟಿ?

'ಸರ್, ಸರ್, ಸರ್ ಅನ್ನಬೇಕು, ಮೆಸೇಜ್ ಮಾಡಬೇಕು, ಹಾಯ್ ಅಂತ ಹೇಳ್ತಾ ಇರಬೇಕು ಇದನ್ನೆಲ್ಲ ನಾನು ಮಾಡ್ತಾ ಇರ್ಲಿಲ್ಲ ಅಂತ ಎಷ್ಟು ಕಷ್ಟ ಕೊಟ್ಟಿದ್ದಾರೆ ಎಂದರೆ ಅಷ್ಟು ಕೊಟ್ಟಿದ್ದಾರೆ. ಇದು ನನ್ನ ಜೀವನದಲ್ಲಿ ಪೀಕ್ ನಲ್ಲಿ ಇದ್ದಾಗ ಆಗಿದ್ದು. ದೊಡ್ಡ ದೊಡ್ಡ ಕಲಾವಿದರ ಜೊತೆ ಕೆಲಸ ಮಾಡಿದಾಗ ನನಗೆ ಏನು ಆಗಿರ್ಲಿಲ್ಲ. ಹೊಸಬರು ಜೊತೆ ಕೆಲಸ ಮಾಡುವಾಗ ಇಂಥ ಕೆಟ್ಟ ಅನುಭವವಾಗಿದೆ' ಎಂದು ಹೇಳಿದ್ದಾರೆ.

ನಟಿಸೋ ಆಸಕ್ತಿ ಈಗಲೂ ಇದೆ

ಈಗಲೂ ನಟಿಸುವ ಆಸಕ್ತಿ ಇದೆ ಎಂದಿರುವ ನಟಿ ಆಶಿತಾ ಉತ್ತಮ ಪಾತ್ರ ಸಿಕ್ಕರೆ ಬರುವುದಾಗಿ ಹೇಳಿದ್ದಾರೆ. 'ಸಿನಿಮಾ ರಂಗದಲ್ಲಿ ಗುರುತಿಸಿಕೊಂಡ ನನ್ನಂತವಳಿಗೆ ಹೀಗಾಗಿರುವಾಗ, ಇನ್ನು ಹೊಸ ಹುಡುಗಿಯರು ಎಷ್ಟು ಕಷ್ಟ ಪಟ್ಟಿದ್ದಾರೋ ಗೊತ್ತಿಲ್ಲ. ಈಗಲೂ ನನಗೆ ನಟಿಸುವುದಕ್ಕೆ ಆಸಕ್ತಿ ಇದೆ. ಆದರೆ, ನನಗೆ ಟೀಮ್ ಇಷ್ಟವಾಗಬೇಕು ಮತ್ತು ನನಗೊಪ್ಪುವ ಪಾತ್ರ ಸಿಗಬೇಕು' ಎಂದು ಹೇಳಿದರು.

ಇದನ್ನೂ ಓದಿ: Me Too Case​: ನಟ ಅರ್ಜುನ್ ಸರ್ಜಾಗೆ ಕ್ಲೀನ್​ ಚಿಟ್​, ಶ್ರುತಿ ಹರಿಹರನ್ ಆರೋಪಕ್ಕೆ ಸಿಕ್ಕಿಲ್ಲ ಸಾಕ್ಷಿ!

ರೋಡ್ ರೊಮಿಯೋ ಸಿನಿಮಾ ಬಳಿಕ ಆಶಿತಾ ಮತ್ತೆ ಸಿನಿಮಾ ಮಾಡಿಲ್ಲ. ಉತ್ತಮ ಪಾತ್ರ ಸಿಕ್ಕಿದರೂ ಸಹ ಆಶಿತಾ ಸಿನಿಮಾಗಳಲ್ಲಿ ನಟಸಿಲ್ಲ. ಸದ್ಯ ಸಿನಿಮಾರಂಗದಿಂದ ದೂರ ಇರುವ ಆಶಿತಾ ಮತ್ತೆ ಬಣ್ಣ ಹಚ್ಚುತ್ತಾರಾ, ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲಿದ್ದಾರೆ ಎಂದು ಕಾದು ನೋಡಬೇಕಿದೆ.
Published by:Divya D
First published: