Ashika Ranganath: ದೇವಕನ್ಯೆಯಾದ ಆಶಿಕಾ ರಂಗನಾಥ್‌, ಗತವೈಭವ ಚಿತ್ರದ ಪೋಸ್ಟರ್​ ರಿಲೀಸ್​

ಆಶಿಕಾ ರಂಗನಾಥ್ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇಂದು ಅವರ ಜನ್ಮದಿನದ ಪ್ರಯುಕ್ತ ಅವರ ಹೊಸ ಚಿತ್ರದ ಪೋಸ್ಟರ್​ ಮತ್ತು ವಿಡಿಯೋ ಬಿಡುಗಡೆ ಮಾಡಲಾಗಿದೆ.

ದೇವಕನ್ಯೆಯಾಗಿ ಆಶಿಕಾ ರಂಗನಾಥ್​

ದೇವಕನ್ಯೆಯಾಗಿ ಆಶಿಕಾ ರಂಗನಾಥ್​

  • Share this:
ಸ್ಯಾಂಡಲ್‍ವುಡ್  (Sandalwood) ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್​ (Ashika Ranganath) ತುಂಬಾ ಕಡಿಮೆ ಸಮಯದಲ್ಲಿ ಕನ್ನಡದಲ್ಲಿ ಟಾಪ್​ ನಟಿಯರ ಸಾಲಿಗೆ ಸೇರಿಕೊಂಡು, ಚಿತ್ರರಂಗದ ಬಹುಬೇಡಿಕೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಈ ಸ್ಯಾಂಡಲ್​ವುಡ್​ ಮಿಲ್ಕಿ ಬ್ಯೂಟಿಗೆ ಇಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ. ಆಶಿಕಾ ಅವರು ಇಂದು ತಮ್ಮ 26ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಇದರ ನಡುವೆ ಅವರ  ಮುಂದಿನ ಸಿನಿಮಾದ ಅನೌನ್ಸ್ ಆಗಿದ್ದು, ಪೋಸ್ಟರ್​ ಮತ್ತು ವಿಡಿಯೋ ರಿಲೀಸ್ ಆಗಿದೆ. ದೇವಕನ್ಯೆ ಅವತಾರದಲ್ಲಿ ಚುಟು ಚುಟು ಬೆಡಗಿ ಮಿಂಚಲಿದ್ದು, ಗತವೈಭವದ ಕಥೆಯನ್ನು ಸಿಂಪಲ್ ಸುನಿ (Simple Suni) ಹೇಳಹೊರಟಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಆಶಿಕಾ ಪೋಸ್ಟರ್​ ಸಖತ್ ವೈರಲ್ ಆಗುತ್ತಿದ್ದು, ದೇವಕನ್ಯೆಯಾಗಿ ಕಾಣಿಸಿಕೊಂಡಿದ್ದಾರೆ.

ಗತವೈಭವದಲ್ಲಿ ದೇವಕನ್ಯೆಯಾದ ಆಶಿಕಾ:

ನಟಿ ಆಶಿಕಾ ರಂಗನಾಥ್ ಸಾಲು, ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಇಂದು ಅವರ ಜನ್ಮದಿನದ ಪ್ರಯುಕ್ತ ಅವರ ಹೊಸ ಚಿತ್ರದ ಪೋಸ್ಟರ್​ ಮತ್ತು ವಿಡಿಯೋ ಬಿಡುಗಡೆ ಮಾಡಲಾಗಿದೆ. ಸಿಂಪಲ್​ ಸುನಿ ನಿರ್ದೇಶನದಲ್ಲಿ ಮತ್ತೊಮ್ಮೆ ಆಶಿಕಾ ಮಿಂಚಲು ಸಿದ್ಧವಾಗಿದ್ದು, ಗತವೈಭವ ಎನ್ನುವ ಸಿನಿಮಾದಲ್ಲಿ ದೇವಕನ್ಯೆಯಾಗಿ ಆಶಿಕಾ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್​ ನಲ್ಲಿ ಆಶಿಕಾ ಥೇಟ್​ ದೇವಕನ್ಯೆಯ ರೀತಿ ಕಂಗೊಳಿಸುತ್ತಿದ್ದು, ಮಿಲ್ಕಿ ಬ್ಯೂಟಿಯ ಲುಕ್​ಗೆ ಅಭಿಮಾಣಿಗಳು ಕಳೆದು ಹೋಗಿದ್ದಾರೆ. ಪೋಸ್ಟರ್​ ಅನ್ನು ನಟಿ ಆಶಿಕಾ ರಂಗನಾಥ್ ಅವರು ಟ್ವಿಟರ್​ ನಲ್ಲಿ ಹಂಚಿಕೊಂಡಿದ್ದು, ‘ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಈ ವಿಡಿಯೋವನ್ನು ವಿಶೇಷ ದಿನದಂದು ನನಗೆ ಅರ್ಪಿಸಿದ್ದಕ್ಕಾಗಿ ಸಂಪೂರ್ಣ ಚಿತ್ರತಂಡಕ್ಕೆ ಧನ್ಯವಾದಗಳು‘ ಎಂದು ಬರೆದುಕೊಂಡಿದ್ದಾರೆ.





ನಾಯಕಿಗಾಗಿ ಹೈ ಬಜೆಟ್​ ನೀಡಿದ ಸಿಂಪಲ್​ ಸುನಿ:

ಇನ್ನು, ಯಾವಾಗಲೂ ವಿಶೇಷವಾಗಿ ಸಿನಿಮಾಗಳನ್ನು ಪ್ರಮೋಷನ್ ಮಾಡುವ ನಿರ್ದೇಶಕ ಸಿಂಪಲ್ ಸುನಿ, ಈ ಬಾರಿಯೂ ಅದೇ ರೀತಿ ವಿಭಿನ್ನವಾಗಿ ನಟಿಯ ಆಯ್ಕೆಯ ವಿಡಿಯೊವನ್ನು ಮಾಡಿದ್ದಾರೆ. ನಟಿಗಾಗಿ ಹುಡುಕಿಕೊಂಡು ಬರುವ ನಿರ್ದೇಶಕ ಮತ್ತು ನಟ ಧುಷ್ಯಂತ ಅವರು ನಟಿ ಆಶಿಕಾ ರಂಗನಾಥ್ ಅವರನ್ನು ಒಪ್ಪಿಸಿದ್ದಲ್ಲದೇ, ಸಿನಿಮಾಗಾಗಿ ಹೈ ಬಜೆಟ್​ ನೀಡುವುದಾಗಿ ಹೇಳಿ ನಟಿಯನ್ನು ಒಪ್ಪಿಸುತ್ತಾರೆ. ಆದರೆ ಇಲ್ಲಿಯೂ ನಿರ್ದೇಶಕರು ಕಥೆಯ ಎಳೆಯನ್ನು ಬಿಟ್ಟುಕೊಡುವುದಿಲ್ಲ ಎನ್ನುವುದನ್ನು ಸಖತ್ ಆಗಿ ತೋರಿಸಿದ್ದಾರೆ.





ಇದೊಂದು ರೊಮ್ಯಾಂಟಿಕ್ ಲವ್ ಸ್ಟೋರಿ ಆಗಿರಲಿದ್ದು, ಚಿತ್ರದಲ್ಲಿ ನಟ ದುಷ್ಯಂತ್ ಗ್ರಾಫಿಕ್ಸ್ ಡಿಸೈನರ್ ಆಗಿ ಕಾಣಿಸಿಕೊಂಡಿದ್ದಾರೆ. ಲವ್ ಸ್ಟೋರಿ ಜೊತೆಗೆ ಥ್ರಿಲ್ಲರ್‌ ಕಥೆಯನ್ನು ಸಿಂಪಲ್​ ಸುನಿ ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರೆ.

ಇದನ್ನೂ ಓದಿ: HBD Ashika Ranganath: ಚುಟು ಚುಟು ಬೆಡಗಿಗೆ ಇಂದು ಜನ್ಮದಿನದ ಸಂಭ್ರಮ, 26ನೇ ವಸಂತಕ್ಕೆ ಕಾಲಿಟ್ಟ ಆಶಿಕಾ ರಂಗನಾಥ್

ಶೂಟಿಂಗ್​ ಆರಂಬಿಸಿರುವ ಚಿತ್ರತಂಡ:

ಇಗಾಗಲೇ ಚಿತ್ರದ ಮೊದಲ ಹಂತದ ಚಿತ್ರೀಕರಣ ಆರಂಭವಾಗಿದ್ದು, ಮಂಗಳೂರು ಸುತ್ತಮುತ್ತ ಸಿನಿಮಾದ ಶೂಟಿಂಗ್​ ಮಾಡಲಾಗುತ್ತಿದೆ. ಅಲ್ಲದೇ ಕೊಡಗಿನಲ್ಲಿ ಶೇ.30ರಷ್ಟು ಚಿತ್ರೀಕರಣವನ್ನು ಈಗಾಗಲೇ ನಿರ್ದೇಶಕರು ಮುಗಿಸಿದ್ದಾರೆ.
Published by:shrikrishna bhat
First published: