ಇನ್​​ಸ್ಟಾಗ್ರಾಂ ಸೇಫ್ ಅಲ್ವಾ? ಹ್ಯಾಕ್ ಆಗುತ್ತಿದೆ ಕನ್ನಡ ನಟಿಮಣಿಯರ ಖಾತೆ!

ಲಾಕ್​ಡೌನ್​ ಸಮಯದಲ್ಲಿ ಸೋಷಿಯಲ್​ ಮೀಡಿಯಾ ಹ್ಯಾಕಿಂಗ್​ಗಳು ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಖ್ಯಾತ ಸೆಲೆಬ್ರಿಟಿಗಳನ್ನು ಟಾರ್ಗೆಟ್​ ಮಾಡಿಕೊಂಡಿರುವ ಹ್ಯಾಕರ್​ಗಳು ಅವರ ಖಾತೆಯನ್ನು ವಶ ಪಡಿಸಿಕೊಳ್ಳುವ ಮೂಲಕ ಸಂದೇಶ, ಫೋಟೋಗಳನ್ನು ಹರಿಬಿಡುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಅನೇಕರಲ್ಲಿ ಇನ್​​ಸ್ಟಾಗ್ರಾಂ ಕೂಡ ಸೇಫ್​ ಅಲ್ವಾ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.

ಪೂಜಾ ಹೆಗ್ಡೆ - ಆಶಿಕಾ ರಂಗನಾಥ್ - ಮಾನ್ವಿತಾ ಕಾಮತ್​

ಪೂಜಾ ಹೆಗ್ಡೆ - ಆಶಿಕಾ ರಂಗನಾಥ್ - ಮಾನ್ವಿತಾ ಕಾಮತ್​

 • Share this:
  ಫೇಸ್​ಬುಕ್​ ಒಡೆತನದ ಇನ್​ಸ್ಟಾಗ್ರಾಂನಲ್ಲಿ ಹ್ಯಾಕರ್​​ಗಳ ಉಪಟಳ ಹೆಚ್ಚಾಗುತ್ತಿದೆ. ಸೇಫ್​ ಎಂದುಕೊಂಡಿದ್ದ ಇನ್​ಸ್ಟಾಗ್ರಾಂನಲ್ಲಿ ಪ್ರತಿ ದಿನ ಸೆಲೆಬ್ರಿಟಿಗಳ ಖಾತೆಗಳು ಹ್ಯಾಕ್​ ಆಗುತ್ತಿರುವುದು ಅನೇಕರಿಗೆ ಶಾಕ್​​​​ ನೀಡಿದೆ. ಇತ್ತೀಚೆಗೆ ಕನ್ನಡದ ನಟಿ ಮಾನ್ವಿತಾ ಕಾಮತ್​, ಆಶಿಕಾ ರಂಗನಾಥ್​, ಪೂಜಾ ಹೆಗ್ಡೆ ಅವರ ಖಾತೆಯ ಮೇಲೆ ಹ್ಯಾಕರ್​ಗಳು ಕಣ್ಣು ಹಾಯಿಸಿ ಉಪಟಳ ನೀಡಿದ್ದಾರೆ. ಅಷ್ಟೇ ಏಕೆ ಕನ್ನಡದ ಖ್ಯಾತ ವಾಹಿನಿ ಆ್ಯಂಕರ್​​ ಒಬ್ಬರ ಇನ್​​ಸ್ಟಾ ಖಾತೆಯನ್ನು ಹ್ಯಾಕ್​​ ಮಾಡಿರುವುದು ಬೆಳಕಿಗೆ ಬಂದಿದೆ.

  ಲಾಕ್​ಡೌನ್​ ಸಮಯದಲ್ಲಿ ಸೋಷಿಯಲ್​ ಮೀಡಿಯಾ ಹ್ಯಾಕಿಂಗ್​ಗಳು ಹೆಚ್ಚಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಖ್ಯಾತ ಸೆಲೆಬ್ರಿಟಿಗಳನ್ನು ಟಾರ್ಗೆಟ್​ ಮಾಡಿಕೊಂಡಿರುವ ಹ್ಯಾಕರ್​ಗಳು ಅವರ ಖಾತೆಯನ್ನು ವಶ ಪಡಿಸಿಕೊಳ್ಳುವ ಮೂಲಕ ಸಂದೇಶ, ಫೋಟೋಗಳನ್ನು ಹರಿಬಿಡುತ್ತಿದ್ದಾರೆ ಎನ್ನಲಾಗಿದೆ. ಹಾಗಾಗಿ ಅನೇಕರಲ್ಲಿ ಇನ್​​ಸ್ಟಾಗ್ರಾಂ ಕೂಡ ಸೇಫ್​ ಅಲ್ವಾ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.

  ಈ ಬಗ್ಗೆ ಮಾತನಾಡಿದ ನಟಿ ಮಾನ್ವಿತಾ ಹರೀಶ್​​ ಇನ್​​ಸ್ಟಾಗ್ರಾಂನಲ್ಲಿ ಕಾಪಿರೈಟ್ಸ್​​ ಎಂಬ ಮೆಸೇಜ್​​​​ ಬಂದಿದೆ. ಆ ಮೆಸೇಜ್​ ತೆರೆಯುತ್ತಿದ್ದಂತೆ ನನ್ನ ಖಾತೆ ಹ್ಯಾಕ್​ ಆಗಿದೆ ಎಂದು ಹೇಳಿದರು.

  ನಟಿ ಆಶಿಕಾ ರಂಗನಾಥ್​​ ಅವರ ಖಾತೆಯನ್ನು​​ ಹ್ಯಾಕರ್ಸ್​ಗಳು ಹ್ಯಾಕ್​ ಮಾಡಿದ್ದರು. ಈ ವಿಚಾರ ತಕ್ಷಣವೇ ಅವರ ಗೋಚರಕ್ಕೆ ಬಂದಿದೆ. ನಂತರ ಅಕೌಂಟ್​ ಹ್ಯಾಕ್​ ಆಗಿದೆ ಎಂಬ ಸಂದೇಶವನ್ನು ರವಾನಿಸಿದ್ದಾರೆ.

  ಇನ್ನು ನಟಿ ಪೂಜಾ ಹೆಗ್ಡೆ ಅವರ ಇನ್​ಸ್ಟಾಗ್ರಾಂ ಖಾತೆಯನ್ನು ಹ್ಯಾಕರ್ಸ್​​ಗಳು ಬಿಟ್ಟಿಲ್ಲ. ಯಾರೋ ಅವರ ಅಕೌಂಟ್​ ಬಳಸಿಕೊಂಡು ನಟಿ ಸಮಂತಾ ಫೋಟೋ ಹಾಕಿ ‘ಐ ಡೋಂಟ್​​ ಫೈಂಡ್​​ ಹರ್​ ಪ್ರೆಟ್ಟಿ‘ ಎಂದು ಸಂದೇಶ ಹಾಕಿದ್ದರಂತೆ. ಈ ವಿಚಾರ ಪೂಜಾ ಅವರಿಗೆ ತಿಳಿದಿರಲಿಲ್ಲವಂತೆ. ಆನಂತರ ಒಂದಿಷ್ಟು ಜನರು ಅವರ ಗಮನಕ್ಕೆ ತಂದ ತಕ್ಷಣ ಎಚ್ಚೆತ್ತುಕೊಂಡ ಪೂಜಾ ತಮ್ಮ ತಾಂತ್ರಿಕ ತಂಡದವರೊಂದಿಗೆ ಸರಿಪಡಿಸಲು ಹೇಳಿದ್ದಾರೆ.ನಂತರ ಅವರ ಖಾತೆ ಸರಿಯಾಗಿದೆ.

  ಇನ್ನು ಕನ್ನಡದ ಖ್ಯಾತ ವಾಹಿನಿಯ ಆ್ಯಂಕರ್​ರೊಬ್ಬರ ಖಾತೆ ಕೂಡ ಹ್ಯಾಕ್​ ಆಗಿದ್ದು. ಆ ಬಗ್ಗೆ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.   ಎಚ್ಚರಿಕೆ! ಈ ಲಿಂಕ್​ ಮೇಲೆ ಕ್ಲಿಕ್​ ಮಾಡಬೇಡಿ

  ಇನ್​​​​ಸ್ಟಾಗ್ರಾಂನಲ್ಲಿ ಕಾಪಿರೈಟ್ಸ್​ ಕುರಿತಾದ ಸಂದೇಶವೊಂದು ಬರುತ್ತದೆ. ಅದರಲ್ಲಿ ಲಿಂಕ್​ ಕೂಡ ಇರುತ್ತದೆ. ಬಳಕೆದಾರ ಸಂದೇಶವನ್ನು ನೋಡುವ ಬರದಲ್ಲಿ ಮತ್ತು ಲಿಂಕ್​ ಕ್ಲಿಕ್​  ಮಾಡಿದ ತಕ್ಷಣ ಇನ್​​ಸ್ಟಾಗ್ರಾಂ ಖಾತೆ ಹ್ಯಾಕ್​ ಆಗುತ್ತದೆ. ಹಾಗಾಗಿ ಎಚ್ಚರಿಕೆಯಿಂದ ಇರುವುದು ಒಳಿತು

  First published: