• Home
 • »
 • News
 • »
 • entertainment
 • »
 • Nammamma Super Star: ತಾರಮ್ಮನ ಮಾತು ಸೀರಿಯಸ್ ಆಗಿ ತೆಗೆದುಕೊಂಡ್ರಾ ಅನು ಪ್ರಭಾಕರ್?

Nammamma Super Star: ತಾರಮ್ಮನ ಮಾತು ಸೀರಿಯಸ್ ಆಗಿ ತೆಗೆದುಕೊಂಡ್ರಾ ಅನು ಪ್ರಭಾಕರ್?

ಅನು ಪ್ರಭಾಕರ್

ಅನು ಪ್ರಭಾಕರ್

ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಶುರುವಾಗಿದೆ. ಸೀಸನ್ 2ಗೆ ನಿರಂಜನ್ ದೇಶಪಾಂಡೆ ಜೊತೆ ವಂಶಿ ಸಹ ನಿರೂಪಣೆ ಮಾಡಲಿದ್ದಾಳೆ. ಈ ತಂಡವು ದೀಪಾವಳಿ ಸಂಭ್ರಮಾಚರಣೆ ಮಾಡಿದ್ದು, ಆಗ ಅನು ಪ್ರಭಾಕರ್ ತಾರಮ್ಮ (Thara) ಹೇಳಿದ್ದನ್ನು ನಾನು ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ಮುಂದೆ ಓದಿ ...
 • News18 Kannada
 • Last Updated :
 • Karnataka, India
 • Share this:

  ಸ್ಯಾಂಡಲ್‍ವುಡ್ (Sandalwood) ನಟಿ ಅನು ಪ್ರಭಾಕರ್ (Anu Prabhakar). ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಹೆಸರು ವಾಸಿಯಾಗಿದ್ದಾರೆ. ಮದುವೆ ನಂತರ ಸಿನಿಮಾದಿಂದ ದೂರ ಉಳಿದಿದ್ದಾರೆ. ಕೆಲವು ರಿಯಾಲಿಟಿ ಶೋಗಳನ್ನು (Reality Show) ನಡೆಸಿಕೊಡ್ತಾರೆ. ಸದ್ಯ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 02 ಜಡ್ಜ್ ಆಗಿದ್ದಾರೆ. ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ (Nammamma Super Star) ಒಂದರಲ್ಲೂ ಅನು ಪ್ರಭಾಕರ್ ಇದ್ದರು. ಸ್ಪರ್ಧಿಗಳು ಅಭಿನಯಕ್ಕೆ ತಕ್ಕಂತೆ ಜಡ್ಜ್ ಮೆಂಟ್ ನೀಡ್ತಾರೆ. ಈಗ ಸೀಸನ್ 2 ಶುರುವಾಗಿದೆ. ಸೀಸನ್ 2ಗೆ ನಿರಂಜನ್ ದೇಶಪಾಂಡೆ ಜೊತೆ ವಂಶಿ ಸಹ ನಿರೂಪಣೆ ಮಾಡಲಿದ್ದಾಳೆ. ಈ ತಂಡವು ದೀಪಾವಳಿ ಸಂಭ್ರಮಾಚರಣೆ ಮಾಡಿದ್ದು, ಆಗ ಅನು ಪ್ರಭಾಕರ್ ತಾರಮ್ಮ (Thara) ಹೇಳಿದ್ದನ್ನು ನಾನು ಸೀರಿಯಸ್ ಆಗಿ ತೆಗೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.


  ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 02
  ಕಲರ್ಸ್ ಕನ್ನಡ ವಾಹಿನಿ ಹೊಸ ಹೊಸ ಪ್ರಯೋಗಗಳ ಮೂಲಕ ಜನರನ್ನು ಸೆಳೆಯುತ್ತಿದೆ. ಪ್ರತಿಯೊಂದು ಕಾರ್ಯಕ್ರಮಗಳು ಅದ್ಭುತವಾಗಿ ಮೂಡಿ ಬರುತ್ತಿವೆ. ಈಗ ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2 ಬರುತ್ತಿದೆ. ಅದರ ಗ್ರ್ಯಾಂಡ್ ಓಪೆನಿಂಗ್ ಕೂಡ ಆಗಿದೆ. ತಮ್ಮ ಮುದ್ದು ಮಕ್ಕಳ ಜೊತೆ ತಾಯಂದಿರು ಸ್ಪರ್ಧಿಸೋ ಕಾರ್ಯಕ್ರಮ. ಈ ಬಾರಿ ಕಾರ್ಯಕ್ರಮಕ್ಕೆ ವನ್ಷಿಕಾ ಅಂಜನಿ ಕಶ್ಯಪ ನಿರೂಪಣೆ ಮಾಡಲಿದ್ದಾಳೆ. ಜೊತೆಗೆ ನಿರಂಜನ್ ದೇಶಪಾಂಡೆ ಇರಲಿದ್ದಾರೆ.


  ಸೆಲೆಬ್ರೆಟಿಗಳ ಜೊತೆ ಸಾಮಾನ್ಯರಿಗೂ ಅವಕಾಶ
  ಕಳೆದ ಬಾರಿ ನಮ್ಮಮ್ಮ ಸೂಪರ್ ಸ್ಟಾರ್‍ನಲ್ಲಿ ಸೆಲೆಬ್ರೆಟಿಗಳಿಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದ್ರೆ ಈ ಬಾರಿ ಜನಸಾಮ್ಯಾನಿಗೂ ಅವಕಾಶ ನೀಡಲಾಗಿದೆ. ಈಡೀ ಕರುನಾಡ ತುಂಬಾ ಆಡಿಷನ್ ಮಾಡಿ. ಕೆಲವು ಮಕ್ಕಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಮಕ್ಕಳು ಅವರ ಅಮ್ಮಂದಿರ ಜೊತೆ ಗ್ರ್ಯಾಂಡ್ ಆಗಿ ಎಂಟ್ರಿ ಆಗಿದ್ದಾರೆ.


  ಇದನ್ನೂ ಓದಿ: Yellow Gangs: ಜೊತೆ ಜೊತೆಯಲಿ ಧಾರಾವಾಹಿ ಹರ್ಷವರ್ಧನ್ ಈಗ ಸಿನಿಮಾ ಹೀರೋ! 


  ತಾರಮ್ಮ ಹೇಳಿದ ರೀತಿ ಕೇಳ್ತಿನಿ
  ನಟಿ ಅನು ಪ್ರಭಾಕರ್ ಕಾರ್ಯಕ್ರಮದ ಜಡ್ಜ್ ಆಗಿದ್ರೂ, ಯಾವಗಲೂ ಸಿಂಪಲ್ ಆಗಿ ರೆಡಿ ಆಗ್ತಿದ್ರು. ಅದಕ್ಕೆ ತಾರಾ ಅವರು, ಚೆಂದ ರೆಡಿ ಆಗು ಎಂದು ಹೇಳ್ತಿದ್ರಂತೆ. ಅದಕ್ಕೆ ಈ ಬಾರಿ ಅನು ಪ್ರಭಾಕರ್ ಅವರು, ತಾರಮ್ಮ ಹೇಳಿದ ಹಾಗೆ ಕೇಳ್ತೀನಿ. ನಾನು ಗ್ರ್ಯಾಂಡ್ ಆಗಿ ರೆಡಿ ಆಗಿ ಬರ್ತಿನಿ ಎಂದಿದ್ದಾರೆ.


  Sandalwood Actress Anu Prabhakar told I will Follow the Thara Amma Rules what is it see
  ಅನು ಪ್ರಭಾಕರ್


  ಎಲ್ಲ ಮಕ್ಕಳಿಗೂ ವಂಶಿ ಇಷ್ಟ
  ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಳೆದ ಬಾರಿ ಪ್ರಸಾರವಾಗುತ್ತಿದ್ದ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ, ವಂಶಿ ಮತ್ತು ಯಶಸ್ವಿನಿ ಭಾಗವಹಿಸಿದ್ದರು. ಮೊದಲ ದಿನವೇ ಈಕೆ ಕನ್ನಡಿಗರ ಮನಸ್ಸು ಕದ್ದಿದ್ದಳು. ತನ್ನ ಮಾತಿನಿಂದ ಮೋಡಿ ಮಾಡಿದ್ದಳು. ಅಂದಿನಿಂದ ವಂಶಿಗಾಗಿಯೇ ಎಷ್ಟೊಂದು ಜನ ನಮ್ಮಮ್ಮ ಸೂಪರ್ ಸ್ಟಾರ್ ನೋಡ್ತಾ ಇದ್ರು.


  Sandalwood Actress Anu Prabhakar told I will Follow the Thara Amma Rules what is it see
  ಅನು ಪ್ರಭಾಕರ್


  ಈಗ ನಮ್ಮಮ್ಮ ಸೂಪರ್ ಸ್ಟಾರ್ ಗೆ ಬಂದಿರುವ ಹಲವು ಮಕ್ಕಳಿಗೆ ವಂಶಿ ಅಂದ್ರೆ ಇಷ್ಟ ಅಂತೆ. ನನಗೆ ವಂಶಿ ಇಷ್ಟ. ಅವಳು ಚೆನ್ನಾಗಿ ನಟನೆ ಮಾಡ್ತಾಳೆ ಎಂದು ಹೇಳಿದ್ದಾರೆ.


  ಇದನ್ನೂ ಓದಿ: Lakshana: ಕತ್ತಲೆ ಕೋಣೆಯಲ್ಲಿದೆ ದುರದೃಷ್ಟದ ಗುಟ್ಟು!


  ಯುಕೆಜಿ ಓದುತ್ತಿರುವ ವಂಶಿ ಸದ್ಯ ಕಾರ್ಯಕ್ರಮಗಳಲ್ಲೇ ಬ್ಯುಸಿ ಆಗಿದ್ದಾಳೆ. ಕಳೆದ ಬಾರಿಯಷ್ಟೇ ಶಾಲೆಗೆ ಸೇರಿದ್ದಾಳೆ. ರಿಯಾಲಿಟಿ ಶೋ ಬಳಿಕ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾಳೆ.

  Published by:Savitha Savitha
  First published: