Dhananjay-Amrutha: ಡಾಲಿ ಪ್ರಪೋಸ್​ ಮಾಡಿದಾಗ ಸಖತ್​ ಎಮೋಷನಲ್​ ಆದ್ರಂತೆ ಅಮೃತಾ.. ಪ್ರೀತಿ ಬಗ್ಗೆ ಕೊಟ್ರು ಬಿಗ್​ ಸುಳಿವು!

ಡಾಲಿ, ಅಮೃತಾ ಪ್ರಣಯ ಪಕ್ಷಿಗಳು.. ಹಾಗಂತೆ ಹೀಗಂತೆ ಅನ್ನೋ ಗಾಸಿಪ್ ನಟರಾಕ್ಷಸನ ಅಭಿಮಾನಿಗಳ ಅಂಗಳದಲ್ಲೇ ಸದ್ದು ಮಾಡಿತ್ತು. ಆದರೆ, ಇದ್ಯಾವುದಕ್ಕೂ ತುಟಿ ಬಿಚ್ಚದ ಈ ಜೋಡಿ ತಾವಾಯ್ತು ತಮ್ಮ ಕೆಲಸ ಅಯ್ತು ಅಂತ ಸುಮ್ಮನಿದ್ದರು.

ಧನಂಜಯ್​, ಅಮೃತ ಅಯ್ಯಂಗಾರ್​

ಧನಂಜಯ್​, ಅಮೃತ ಅಯ್ಯಂಗಾರ್​

  • Share this:
ಡಾಲಿ ಧನಂಜಯ್(Daali Dhananjay), ಅಮೃತಾ ಅಯ್ಯಂಗಾರ್(Amrutha Iyengar) ಇಬ್ಬರು ‘ಬಡವ ರಾಸ್ಕಲ್​’(Badava Rascal) ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದಕ್ಕೂ ಮೊದಲು ಡಾಲಿ ಅಮೃತಾ ‘ಪಾಪ್ ಕಾರ್ನ್ ಮಂಕಿ ಟೈಗರ್’(Popcorn Monkey Tiger) ಚಿತ್ರದಲ್ಲೂ ಸ್ಕ್ರೀನ್ ಶೇರ್ ಮಾಡಿದ್ದಾರೆ. ಈ ಜೋಡಿಯನ್ನು ಬ್ಯಾಕ್ ಟು ಬ್ಯಾಕ್ ತೆರೆ ಮೇಲೆ ಕಂಡ ಚಿತ್ರಪ್ರೇಮಿಗಳು ಇವರಿಬ್ಬರು ರೀಲ್​ನಲ್ಲಿ ಮಾತ್ರವಲ್ಲ ರಿಯಲ್ ಲೈಫ್​​ನಲ್ಲೂ ಲವ್ ಮಾಡ್ತಿದ್ದಾರೆ. ಡಾಲಿ, ಅಮೃತಾ ಪ್ರಣಯ ಪಕ್ಷಿಗಳು.. ಹಾಗಂತೆ ಹೀಗಂತೆ ಅನ್ನೋ ಗಾಸಿಪ್ ನಟರಾಕ್ಷಸನ ಅಭಿಮಾನಿಗಳ ಅಂಗಳದಲ್ಲೇ ಸದ್ದು ಮಾಡಿತ್ತು. ಆದರೆ, ಇದ್ಯಾವುದಕ್ಕೂ ತುಟಿ ಬಿಚ್ಚದ ಈ ಜೋಡಿ ತಾವಾಯ್ತು ತಮ್ಮ ಕೆಲಸ ಅಯ್ತು ಅಂತ ಸುಮ್ಮನಿದ್ದರು. ಆದರೆ ಸಡನ್ ಅಗಿ ಕೆಲವುದಿನಗಳ ಹಿಂದೆ ಖಾಸಗಿ ಚಾನಲ್ ಕಾರ್ಯಕ್ರಮವೊಂದರಲ್ಲಿ ಡಾಲಿ ಬಿಯರ್ ಬಾಟಲ್ ಬಿಟ್ಟು  ರೋಸ್(Rose) ಹಿಡಿದು ಪಕ್ಕಾ ಹಳ್ಳಿ ಹುಡುಗನಂತೆ ನಾಚಿ ನೀರಾಗಿ ಅಮೃತಾ ಅಯ್ಯಂಗಾರ್​​ಗೆ ಪ್ರಪೋಸ್(Propose) ಮಾಡಿದ್ದರು. ಇನ್ನು ಈ ಗೋಲ್ಡನ್ ಮೂಮೆಂಟ್(Golden Moment)​ಗೆ ಗೋಲ್ಡನ್ ಸ್ಟಾರ್ ಗಣೇಶ್(Golden Star) ಸಾಕ್ಷಿಯಾಗಿದ್ದರು. ಇದನ್ನು ನೋಡಿದ ಡಾಲಿ ಅಭಿಮಾನಿ ಬಳಗ ‘ಬಡವ ರಾಸ್ಕಲ್​’ ಪ್ರೀತಿಯಲಿ ಬಿದ್ದಿದ್ದಾನೆ ಅಂತ  ಖುಷಿ ಪಟ್ಟಿದ್ದರು.

ಪ್ರಪೋಸ್​ ಮಾಡಿದ್ದು ರೀಲ್​ಗಾಗಿ ರಿಯಲ್ ಆಗಿ ಅಲ್ಲ!

ಇಂಡಸ್ಟ್ರಿ ಮಂದಿ ಕೂಡಿ ಈ ಜೋಡಿ ಸಪ್ತಪದಿ ತುಳಿತಾರ ಅಂತ ಲೆಕ್ಕಾಚಾರ ಹಾಕಿದ್ದರು. ಈಗ ಎಲ್ಲಾ ಲೆಕ್ಕಚಾರಕ್ಕೆ ಅಮೃತ ಅಯ್ಯಂಗಾರ್ ಕ್ಲಾರಿಟಿ ಕೊಟ್ಟಿದ್ದು, ನಾವಿಬ್ಬರು ಲವ್ ಅಲ್ಲಿ ಬಿದ್ದಿಲ್ಲ.. ಡಾಲಿ ನನಗೆ ಪ್ರಪೋಸ್ ಮಾಮಾಡಿದ್ದು ಒಂದು ಟಾಸ್ಕ್ ಗಾಗಿ ಎಂದು ಡಾಲಿ ಪ್ರಪೋಸ್ ಮಾಡಿದ್ದು ರೀಲ್​ಗಾಗಿ ರಿಯಲ್ ಆಗಿ ಅಲ್ಲ ಅಂತ ಹೇಳಿದ್ದಾರೆ. ಹೌದು, ಲವ್ ಮಾಕ್ಟೇಲ್ 2 ಟ್ರೈಲರ್ ಲಾಂಚ್ ಕಾರ್ಯಕ್ರಮಕ್ಕೆ ಬಂದಿದ್ದ ವೇಳೆ ಧನಂಜಯ್​ ಅವರ ಪ್ರೇಮ ನಿವೇದನೆ ಬಗ್ಗೆ ಅಮೃತ ಅಯ್ಯಂಗಾರ್​ ಮನ ಬಿಚ್ಚಿ ಮಾತನಾಡಿದ್ದಾರೆ.

ಇದನ್ನು ಓದಿ : ನಟ ರಾಕ್ಷಸನ ಕೈಯಲ್ಲಿ ರೋಸ್​, ಡಾಲಿ ಮನಗೆದ್ದ ಚೆಲುವೆ ಇವ್ರೇನಾ? ಇಲ್ಲ ಅಂದ್ರೆ ಪ್ರಪೋಸ್​ ಮಾಡಿದ್ದೇಕೆ?

‘ಡಾಲಿ ಪ್ರಪೋಸ್ ಮಾಡಿದಾಗ ಎಮೋಷನಲ್​ ಆದೆ’

‘ನಾವು ಒಂದು ರಿಯಾಲಿಟಿ ಶೋಗೆ ಹೋಗಿದ್ವಿ..ಡಾಲಿ ಲವ್ ಸೀನ್ ನಲ್ಲಿ ತುಂಭಾ ನಾಚಿಕೆ ಪಡ್ತಾರೆ ಅನ್ನೋ ವಿಚಾರ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ಹೇಳಿದ್ವಿ..ಅದಕ್ಕೆ ಅವರು ರಿಯಾಲಿಟಿ ಶೋನಲ್ಲಿ  ಧನಂಜಯ್ ನನಗೆ  ಪ್ರಪೋಸ್ ಮಾಡುವ ಟಾಸ್ಕ್ ಕೊಟ್ಟಿದ್ದರು ಅಂತ ಅಮೃತ ಹೇಳಿದ್ದಾರೆ. ಅದನ್ನು ಚಾಲೆಂಜ್​ ಆಗಿ ತೆಗೆದು ಕೊಂಡು ಡಾಲಿ ನನಗೆ ಪ್ರಪೋಸ್​ ಮಾಡಿದರು ಅಷ್ಟೇ. ಆ ಕ್ಷಣದಲ್ಲಿ ಧನಂಜಯ ಅವರ ಡೆಡಿಕೇಶನ್ ನೋಡಿ ನಾನು ಎಮೋಷನಲ್ ಆದೆ..ಅದನ್ನು ನೋಡಿದವರು ನಾವು ಲವ್ ಮಾಡ್ತಿದ್ದೀವಿ ಅಂದು ಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಮತ್ತೆ ಒಂದೇ ವೇದಿಕೆಯಲ್ಲಿ ಡಾಲಿ-ಚಿಟ್ಟೆ, `ಗೋಲ್ಡನ್​ ಗ್ಯಾಂಗ್’​ ಶೋಗೆ ಬಂದ ಧನಂಜಯ್​ ಗ್ಯಾಂಗ್!

ಅಲ್ಲದೆ ರಿಯಾಲಿಟಿ ಶೋ ನೋಡಿದ ನನ್ನ ಸ್ನೇಹಿತರು ವಿಶ್ ಮಾಡಿದ್ದಾರೆ. ಆ ತರಹದ ವಿಚಾರ ಏನು ಇಲ್ಲ. ನಾನು ಈಗಷ್ಟೇ ಇಂಡಸ್ಟ್ರಿಗೆ ಎಂಟ್ರಿ ಕೊಟ್ಟಿದ್ದೀನಿ. ಸದ್ಯ ನನ್ನ ದೃಷ್ಟಿ ಕೆರಿಯರ್ ಮೇಲಿದೆ. ನಮ್ಮಿಬ್ಬರ ನಡುವೆ ಅಂತದ್ದೇನು ಇಲ್ಲ. ಆ ತರಹದ ವಿಷಯ ಇದ್ರೆ ನಾನು ಅದನ್ನು ಒಪನ್ ಆಗಿ ಹೇಳ್ತಿನಿ ಎಂದ ಅಮೃತ ಕಳೆದ ನಾಲ್ಕೈದು ದಿನಗಳಿಂದಇದ್ದ ಗೊಂದಲಕ್ಕೆ ತೆರೆಎಳಿದಿದ್ದಾರೆ. ಆದರೆ ಇವರ ಜೋಡಿಯನ್ನು ತೆರೆ ಮೇಲೆ ನೋಡಿ ಇಷ್ಟ ಪಟ್ಟರುವ ಕನ್ನಡಿಗರು ಈ ಜೋಡಿ ನಿಜ ಜೀವನದಲ್ಲಿ ಒಂದಾಗಲಿ ಅಂತ ಹಾರೈಸುತಿದ್ದಾರೆ.

(ವರದಿ-ಸತೀಶ್​ ಎಂ.ಬಿ.)
Published by:Vasudeva M
First published: