ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಅವರ ಫೋಟೋ, ವಿಡಿಯೋಗಳನ್ನು (Video) ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಲೇ ಇರುತ್ತಾರೆ. ವಿವಾಹವಾದ (Marriage) ಮೇಲೂ ನಟಿ ಸೋಷಿಯಲ್ ಮೀಡಿಯಾವನ್ನು (Social Media) ಮರೆತಿಲ್ಲ. ಈಗಲೂ ಆ್ಯಕ್ಟಿವ್ (Active) ಆಗಿದ್ದಾರೆ. ತಮ್ಮ ಸಿನಿಮಾ ಅಪ್ಡೇಟ್ಸ್ ಸೇರಿದಂತೆ ಎಲ್ಲ ಮಾಹಿತಿಯನ್ನು (Information) ಪ್ರೀತಿಯ ಅಭಿಮಾನಿಗಳೊಂದಿಗೆ ಶೇರ್ ಮಾಡುತ್ತಾರೆ.
ನಟಿ ಸಿನಿಮಾಗಳನ್ನು ಮಾಡುವುದರ ಜೊತೆಗೆ ಯೂಟ್ಯೂಬ್ ಚಾನೆಲ್ ಕೂಡಾ ನಡೆಸುತ್ತಾರೆ. ಸೆಲೆಬ್ರಿಟಿ ಯೂಟ್ಯೂಬ್ ಚಾನೆಲ್ ಅಂದ ಮೇಲೆ ಹೇಳಬೇಕೆ? ಬಹಳಷ್ಟು ಜನ ಫಾಲೋವರ್ಸ್ಗಳನ್ನು ಕೂಡಾ ಹೊಂದಿದ್ದಾರೆ.
ನಟಿ ಇತ್ತೀಚೆಗೆ ಇದರಲ್ಲಿ ಒಂದು ವಿಡಿಯೋವನ್ನು ಶೇರ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಟಿ ಆಹಾರ ಸೇವಿಸುವಾಗಲೇ ವಾಂತಿ ಮಾಡುವುದನ್ನು ಕಾಣಬಹುದು. ಈ ವಿಡಿಯೋ ಕ್ಲಿಪ್ ಈ ವೈರಲ್ ಆಗಿದ್ದು ಇಷ್ಟು ಬೇಗ ನಟಿ ಗುಡ್ನ್ಯೂಸ್ ಕೊಟ್ಟರಾ ಎನ್ನುತ್ತಿದ್ದಾರೆ ನೆಟ್ಟಿಗರು.
ನಾನು ಹಾಗೂ ಯಶು ತುಂಬಾ ದಿನಗಳ ನಂತರ ಇಂದು ಹೊರಗಡೆ ಹೋಗ್ತಾ ಇದ್ದೇವೆ. ಇದು ತುಂಬಾ ಸ್ಪೆಷಲ್ ಜಾಗ. ಎಲ್ಲಿಗೆ ಎನ್ನುವುದನ್ನು ನಾನು ವಿಡಿಯೋದಲ್ಲಿ ನಿಮಗೆ ತೋರಿಸುತ್ತೇನೆ ಎಂದು ನಟಿ ವಿಡಿಯೋ ಶುರು ಮಾಡಿದ್ದಾರೆ.
ನಟಿ ಪತಿ ಯಶಸ್ ಜೊತೆಗೆ ಪ್ಯಾನ್ ಏಷ್ಯಾ ರೆಸ್ಟೋರೆಂಟ್ಗೆ ಹೋಗಿದ್ದಾರೆ. ವರ್ಲ್ಡ್ ಟ್ರೇಡ್ ಸೆಂಟರ್ನ 31ನೇ ಮಹಡಿಯಲ್ಲಿರುವ ಹೋಟೆಲ್ನಲ್ಲಿ. ಬಹಳ ಎತ್ತರದಲ್ಲಿರುವುದರಿಂದ ಸುಂದರ ವ್ಯೂ ಸಿಗುತ್ತದೆ. ಬೆಂಗಳೂರಿನಷ್ಟು ಪಾಸಿಟಿವ್ ಸಿಟಿ ಪ್ರಪಂಚದಲ್ಲಿ ಇಲ್ಲ. ಐ ಲವ್ ಯು ಬೆಂಗಳೂರು ಎಂದು ಸಿಲಿಕಾನ್ ಸಿಟಿ ಬಗ್ಗೆ ಪ್ರೀತಿ ವ್ಯಕ್ತಪಡಿಸಿದ ನಟಿ ಅದನ್ನೆಲ್ಲ ವಿಡಿಯೋದಲ್ಲಿ ಶೂಟ್ ಮಾಡಿದ್ದಾರೆ.
ಇದನ್ನೂ ಓದಿ: Aditi Prabhudeva: ಅಪ್ಸರೆಯೋ, ಅದಿತಿಯೋ? ಬಿಳಿ ಸೀರೆಯಲ್ಲಿ ಕಂಗೊಳಿಸಿದ ನಟಿ!
'ನೂಡಲ್ಸ್ ಬಿಟ್ಟರೆ ನಾರ್ಥ್ ಇಂಡಿಯನ್ ಫುಡ್ ಅಂತ ಯಾವುದನ್ನೂ ಟ್ರೈ ಮಾಡಿಲ್ಲ. ಮೊದಲ ನಾನು ಫ್ರೂಟ್ ಜೂಸ್ ಕುಡಿದೆ. ಈಗ ಚುಂಗ್ಫಾ ಬಂದಿದೆ. ಚೈನಾ ಆಹಾರಗಳ ರುಚಿ ನೋಡುತ್ತಿದ್ದೇನೆ. ರುಚಿ ಒಂದು ಚೂರು ಚೆನ್ನಾಗಿರಲಿಲ್ಲ.' ಎಂದು ಹೇಳುತ್ತಿದ್ದಂತೆ ಅದಿತಿ ತಟ್ಟೆ ಮೇಲೆ ವಾಂತಿ ಮಾಡಿದ್ದಾರೆ.
ಅಲ್ಲಿಗೆ ಸುಮ್ಮನಾಗದ ಅದಿತಿ ಚೈನಾದ ಫೇಮಸ್ sushi ರುಚಿ ನೋಡಿದ್ದಾರೆ.ಉಪ್ಪು ಉಳಿ ಖಾರ ಏನೂ ಇಲ್ಲದಿದ್ದರೂ ತುಂಬಾನೇ ಚೆನ್ನಾಗಿತ್ತು. ಇದನ್ನು ಮನೆಯಲ್ಲಿ ಪ್ರಯತ್ನ ಮಾಡಬೇಕು ಎಂದು ಸಾಮಾಗ್ರಿಗಳನ್ನು ಆರ್ಡರ್ ಮಾಡಿದೆ ಎಂದಿದ್ದಾರೆ. ಸುಶಿ ಬಾಲಿವುಡ್ ನಟ ರಣಬೀರ್ ಕಪೂರ್ ಅವರ ಅತ್ಯಂತ ಫೇವರಿಟ್ ಆಹಾರ ಎನ್ನುವುದು ಗಮನಾರ್ಹ.
ಅದಿತಿ ಮೆಚ್ಚಿದ ಸುಶಿ ಬಗ್ಗೆ ನಿಮಗೆ ಗೊತ್ತೇ?
ಸುಶಿ ಎಂಬುದು ಜಪಾನೀಸ್ ಖಾದ್ಯವಾಗಿದ್ದು, ಸಾಮಾನ್ಯವಾಗಿ ಸ್ವಲ್ಪ ಸಕ್ಕರೆ ಮತ್ತು ಉಪ್ಪಿನೊಂದಿಗೆ ತಯಾರಾದ ವಿನೆಗರ್ಡ್ ಅಕ್ಕಿ, ಸೀಫುಡ್ ಸಾಮಾನ್ಯವಾಗಿ ತರಕಾರಿಗಳಂತಹ ವಿವಿಧ ಪದಾರ್ಥಗಳೊಂದಿಗೆ ಇರುತ್ತದೆ. ಸುಶಿ ಮತ್ತು ಅದರ ಪ್ರಸ್ತುತಿ ಶೈಲಿಗಳು ವ್ಯಾಪಕವಾಗಿ ಬದಲಾಗುತ್ತವೆ. ಪ್ರಮುಖ ಅಂಶವೆಂದರೆ "ಸುಶಿ ರೈಸ್", ಇದನ್ನು ಶಾರಿ ಅಥವಾ ಸುಮೇಶಿ ಎಂದೂ ಕರೆಯಲಾಗುತ್ತದೆ.
ನಟಿ ಸದ್ಯ ಮದುವೆಯಾದ ನಂತರ ಪತಿಯೊಂದಿಗೆ ಕ್ವಾಲಿಟಿ ಸಮಯ ಕಳೆಯುತ್ತಿದ್ದಾರೆ. ಅದರ ಜೊತೆಗೆ ಹಲವು ಸಿನಿಮಾಗಳಲ್ಲಿಯೂ ನಟಿಸುತ್ತಾ ಇಂಡಸ್ಟ್ರಿಯಲ್ಲಿಯೂ ಆ್ಯಕ್ಟಿವ್ ಆಗಿದ್ದಾರೆ. ಸಾಲು ಸಾಲು ಪ್ರಾಜೆಕ್ಟ್ಗಳನ್ನು ಒಪ್ಪಿಕೊಂಡು ನಟಿ ಕನ್ನಡ ಸಿನಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ