Ramya: ಪೊಲೀಸ್ ಠಾಣೆ ಮೆಟ್ಟಿಲೇರಿದ ರಮ್ಯಾ; ದೂರು ದಾಖಲಿಸಿದ ಪದ್ಮಾವತಿ

ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ (Social media) ಓರ್ವ ವ್ಯಕ್ತಿ ನಿಂದನೆ ಮಾಡಿದ್ದು, ಈ ಸಂಬಂಧ ಮೋಹಕ ತಾರೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ನಟಿ ರಮ್ಯಾ

ನಟಿ ರಮ್ಯಾ

  • Share this:
ಸ್ಯಾಂಡಲ್​ವುಡ್​ನ (Sandalwood) ಮೋಹಕ ತಾರೆ ರಮ್ಯಾ (Ramya) ಅವರು ಸದ್ಯ ಚಿತ್ರಂಗದಿಂದ ದೂರವಿದ್ದಾರೆ. ಆದರೂ ಕೆಲ ದಿನಗಳಿಂದ ರಮ್ಯಾ ಅವರು ಕನ್ನಡದ ಚಿತ್ರಗಳ ಕುರಿತು ಟ್ವೀಟ್ ಮಾಡುವುದು, ಮಾತನಾಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಸೂಚನೆ ನೀಡುತ್ತಿದ್ದಾರೆ. ಇದರ ನಡುವೆ ಅವರು ರಾಜಕೀಯದಿಂದ (Politics) ಸದ್ಯ ದೂರವಿದ್ದು, ಯಾವುದೇ ರೀತಿಯ ರಾಜಕೀಯ ಕಾರ್ಯಕ್ರಮಗಳಲ್ಲಿ ಅಥವಾ ರಾಜಕೀಯದ ಕುರಿತಾದ ಹೇಳಿಕೆಗಳಿಂದ ದೂರವಿದ್ದಾರೆ. ಈ ಮೂಲಕ ರಮ್ಯಾ ಅವರು ರಾಜಕೀಯದಿಂದ ದೂರಸರಿದರು ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಇದರ ನಡುವೆ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ (Social media) ಓರ್ವ ವ್ಯಕ್ತಿ ನಿಂದನೆ ಮಾಡಿದ್ದು, ಈ ಸಂಬಂಧ ಮೋಹಕ ತಾರೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಪೊಲೀಸ್ ಠಾಣೆ ಮೆಟ್ಟಿಲೇರಿದ ರಮ್ಯಾ:

ಇನ್ನು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯಯರಾಗಿರುವ ರಮ್ಯಾ ಅವರು, ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹೌದು, ಕಿಡಿಗೇಡಿಯೊಬ್ಬ ಇನ್ಸ್ಟಾದಲ್ಲಿ ನಿಂದನೆ ಮಾಡಿದ್ದಾನಂತೆ. ಹಾಗಾಗಿ ಅವರು ಹಲಸೂರು ಗೇಟ್ ಪೊಲೀಸ್ ಠಾಣೆ ಬಳಿ ಇರುವ ಕೇಂದ್ರ ವಿಭಾಗದ ಸಿಇಎನ್ ಠಾಣೆಯಲ್ಲಿ ವ್ಯಕ್ತಿಯ ವಿರುದ್ಧ ದೂರು ದಾಖಲಿಸಿದ್ದಾರಂತೆ. ತಮಗೆ ಇನ್ಸ್ಟಾಗ್ರಾಂನಲ್ಲಿ ವ್ಯಕ್ತಿಯೊಬ್ಬ ನಿಂದನೆ ಮಾಡಿದ್ದು, ಅವನ ವಿರುದ್ಧ ಸೂಕ್ತ ಕ್ರಮ ತಗೆದುಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ. ದೂರು ಸ್ವೀಕರಿಸಿರುವ ಸಿಇಎನ್ ಠಾಣಾಧಿಕಾರಿಗಳು ಸೂಕ್ತ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರಂತೆ.

ರಾಜಕೀಯದಿಂದ ದೂರವಾಗಿರುವ ಮೋಹಕ ತಾರೆ:

ಕೆಲ ವರ್ಷಗಳ ಹಿಂದೆ ರಮ್ಯಾ ಅವರು ಚಿತ್ರರಂಗದಿಂದ ದೂರವಾಗಿ ರಾಜಕೀಯಕ್ಕೆ ಪಾದಾರ್ಪಣೆ ಮಾಡಿದ್ದರು. ಆದರೆ ಇದೀಗ ರಾಜಕೀಯದಿಂದಲೂ ದೂರ ಸರಿದಿರುವ ಅವರು ಮತ್ತೆ ಚಿತ್ರರಂಗದತ್ತ ಬರುವಲ್ಲಿ ಕಾತುರರಾಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಅವರು ಮಂಡ್ಯದಿಂದ ಸಂಸದೆಯಾಗಿಯೂ ಆಯ್ಕೆ ಆಗಿದ್ದರು. ಇದಾದ ಬಳಿಕ ಕಾಂಗ್ರೆಸ್​ನ ಸೋಶಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡುತ್ತಿದ್ದ ಅವರು, ಇದೀಗ ಸಂಪೂರ್ಣವಾಗಿ ರಾಜಕೀಯದಿಂದ ದೂರ ಸರಿದಿದ್ದಾರೆ.

ಇದನ್ನೂ ಓದಿ: Ramya: 777 ಚಾರ್ಲಿಯನ್ನು ಮೆಚ್ಚಿಕೊಂಡ ಮೋಹಕ ತಾರೆ; ರಕ್ಷಿತ್ ಲೈಫ್​ನಲ್ಲಿ ಶುರುವಾಗುತ್ತಾ ಮತ್ತೆ ರಮ್ಯ ಚೈತ್ರಕಾಲ?

ಚಿತ್ರರಂಗದತ್ತ ಮುಖ ಮಾಡಿರುವ ರಮ್ಯಾ:

ಹೌದು, ಅನೇಕ ವರ್ಷಗಳ ನಂತರ ಇದೀಗ ರಮ್ಯಾ ಮತ್ತೆ ನಿಧಾನವಾಗಿ ಚಿತ್ರರಂಗದತ್ತ ಮುಖ ಮಾಡುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಮತ್ತೆ ತಾನು ನಿಜವಾಗಿಯೂ ಸಿನಿಮಾಗಳನ್ನು ಮಾಡುವುದಾಗಿ ಹೇಳಿಕೊಂಡಿದ್ದು, ರಮ್ಯಾ ಅವರ ಅಭಿಮಾನಿಗಳಿಗೆ ಸಂತಸ ತಂದಿದೆ. ಆದರೆ ಯಾವ ಚಿತ್ರದ ಮೂಲಕ ಅಥವಾ ಯಾವಾಗ ಸ್ಯಾಂಡಲ್​ವುಡ್​ ಗೆ ರೀ ಎಂಟ್ರಿ ನೀಡುತ್ತೇನೆ ಎಂದು ಈವರೆಗೂ ರಮ್ಯಾ ಸ್ಪಷ್ಟಪಡಿಸಿಲ್ಲ.

ಇದನ್ನೂ ಓದಿ: RRR ಚಿತ್ರದಲ್ಲಿ ರಾಮ್​ಚರಣ್​- ಜೂ NTR ‘ಗೇ‘ನಾ? ಇದೇನ್ ಗುರು ಹಿಂಗಾ ಹೇಳೋದು?

ರಕ್ಷಿತ್‌ ಜೊತೆ ಸಿನಿಮಾ ಮಾಡ್ತಾರಾ ರಮ್ಯಾ?

ರಕ್ಷಿತ್‌ ಜೊತೆ ರಮ್ಯಾ ಸಿನಿಮಾ ಮಾಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡ್ತಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಅನೇಕ ದಿನಗಳಿಂದ ಹರಿದಾಡುತ್ತಿವೆ. ಇದಕ್ಕೆ ಪುಷ್ಠಿ ನೀಡುವಂತೆ ರಮ್ಯಾ ಅವರು ಚಾರ್ಲಿ ಸಿನಿಮಾದ ಕುರಿತು ಮಾತನಾಡಿದ್ದು, ಅಭಿಮಾನಿಗಳು ರಮ್ಯಾ ಮತ್ತು ರಕ್ಷಿತ್ ಪಕ್ಕಾ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳನ್ನು ಆಡುತ್ತಿದ್ದು, ಇವರಿಬ್ಬರ ಕಾಂಬಿನೇಷನ್ ನೋಡಲು ಕಾತುರರಾಗಿದ್ದೇವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದರೊಂದಿಗೆ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರು ಮದುವೆ ಆಗ್ತಾರಂತೆ ಅಂತ ಗಾಸಿಪ್‌ಗಳು ಓಡಾಡುತ್ತಿದ್ದವು. ಆದ್ರೀಗ ರಮ್ಯಾ ಅವರು ರಕ್ಷಿತ್ ಶೆಟ್ಟಿ ಚಿತ್ರದ ಮೂಲಕವೇ ಕಂಬ್ಯಾಕ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.
Published by:shrikrishna bhat
First published: