Ramya: 777 ಚಾರ್ಲಿಯನ್ನು ಮೆಚ್ಚಿಕೊಂಡ ಮೋಹಕ ತಾರೆ; ರಕ್ಷಿತ್ ಲೈಫ್​ನಲ್ಲಿ ಶುರುವಾಗುತ್ತಾ ಮತ್ತೆ ರಮ್ಯ ಚೈತ್ರಕಾಲ?

ರಮ್ಯಾ ಅವರು 777 ಚಾರ್ಲಿ ಸಿನಿಮಾ ನೋಡಿ‌ ಮೆಚ್ಚಿಕೊಂಡಿದ್ದಾರೆ. ಅದಲ್ಲದೇ ರಮ್ಯಾ ಚಾರ್ಲಿ ಕುರಿತು ಮೆಚ್ಚಿಕೊಂಡು ಟ್ವೀಟ್​ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

ರಮ್ಯಾ

ರಮ್ಯಾ

  • Share this:
ಸ್ಯಾಂಡಲ್​ವುಡ್​ನ (Sandalwood) ಮೋಹಕ ತಾರೆ ರಮ್ಯಾ (Ramya) ಅವರು ಸದ್ಯ ಚಿತ್ರಂಗದಿಂದ ದೂರವಿದ್ದಾರೆ. ಆದರೂ ಕೆಲ ದಿನಗಳಿಂದ ರಮ್ಯಾ ಅವರು ಕನ್ನಡದ ಚಿತ್ರಗಳ ಕುರಿತು ಟ್ವೀಟ್ ಮಾಡುವುದು, ಮಾತನಾಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವ ಸೂಚನೆ ನೀಡುತ್ತಿದ್ದಾರೆ. ಇದರ ನಡುವೆ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘777 ಚಾರ್ಲಿ‘ (777 Charlie) ಚಿತ್ರ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಚಿತ್ರವು ಇದೇ ಜೂನ್ 10ರಂದು ರಿಲೀಸ್ ಆಗಲಿದೆ. ಆದರೆ ಇದಕ್ಕೂ ಮುನ್ನ ರಕ್ಷಿತ್ ಶೆಟ್ಟಿ ನಿನ್ನೆ ಒರಾಯನ್ ಮಾಲ್​ನಲ್ಲಿ ಆಪ್ತರಿಗೆ ಸ್ಪೆಷಲ್ ಶೋ ಏರ್ಪಡಿಸಿದ್ದರು. ಆ ಶೋನಲ್ಲಿ ರಮ್ಯಾ ಅವರು ಸಿನಿಮಾ ನೋಡಿ‌ ಮೆಚ್ಚಿಕೊಂಡಿದ್ದಾರೆ. ಅದಲ್ಲದೇ ರಮ್ಯಾ ಚಾರ್ಲಿ ಕುರಿತು ಮೆಚ್ಚಿಕೊಂಡು ಟ್ವೀಟ್​ ಮಾಡಿಕೊಂಡಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲ ಮೂಡಿಸಿದೆ.

'777 ಚಾರ್ಲಿ' ಒಂದು ಭಾವನಾತ್ಮಕ ಸಿನಿಮಾ:

ಇನ್ನು, 777 ಚಾರ್ಲಿ ಚಿತ್ರತಂಡವು ವಿಶೇಷವಾಗಿ ಸ್ಪೆಷಲ್ ಶೋ ಏರ್ಪಡಿಸಿದ್ದರು. ಆ ಶೋನಲ್ಲಿ ರಮ್ಯಾ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಈ ಶೋ ಮುಗಿದ ಬಳಿಕ ಎಲ್ಲರೂ ಚಿತ್ರದ ಕುರಿತು ಮೆಚ್ಚುಗೆಯ ಮಾತನಾಡಿದ್ದು, ಉತ್ತಮ ಪ್ರತಿಕ್ರಿಯೆ ದೊರಕಿದೆ. ರಮ್ಯಾ ಸಹ ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಈ ಕುರಿತು ಟ್ವೀಟ್ ಮಾಡಿದ್ದಾರೆ. ರಕ್ಷಿತ್ ಶೆಟ್ಟಿ ಅವರ ಟ್ವೀಟ್​ ಅನ್ನು ರೀ ಟ್ವೀಟ್ ಮಾಡಿರುವ ರಮ್ಯಾ, ‘777 ಚಾರ್ಲಿ ಒಂದು ಭಾವನಾತ್ಮಕ ಸಿನಿಮಾವಾಗಿದ್ದು, ಪ್ರೀತಿಯ ಮಹತ್ವ ಸಾರುವ ಸೊಗಸಾದ ಸಿನಿಮಾವಾಗಿದೆ. ನಾವು ಅಳವಡಿಸಿಕೊಳ್ಳಬೇಕಾದ ಉತ್ಕೃಷ್ಟ ಪ್ರೀತಿಯನ್ನು ಮನುಷ್ಯರಿಗೆ ಕಲಿಸುತ್ತದೆ. ಈ ಬೆಚ್ಚಗಿನ ಹೃದಯದ ಕಣ್ಣೀರಿಗಾಗಿ ರಕ್ಷಿತ್ ಮತ್ತು ಕಿರಣ್ ರಾಜ್ ಗೆ ಧನ್ಯವಾದಗಳು‘ ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ.

ರಮ್ಯಾ ಸಹ ಶ್ವಾನ ಪ್ರಿಯೆ:

ಇನ್ನು, ರಮ್ಯಾ ಅವರಿಗೆ ಸ್ವತಃ ನಾಯಿಗಳು ಎಂಧರೆ ಪ್ರೀತಿ ಹೆಚ್ಚು, ಇದರಿಂದಾಗಿಯೂ 777 ಚಾರ್ಲಿ ಚಿತ್ರ ರಮ್ಯಾ ಅವರಿಗೆ ಮತ್ತಷ್ಟು ಹೆಚ್ಚು ಇಷ್ಟವಾಯಿತಂತೆ. ಇದಲ್ಲದೇ ಕೆಲ ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಬೀದಿ ಬದಿ ನಾಯಿಯನ್ನು ಕಾರಣವಿಲ್ಲದೇ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ ರಮ್ಯಾ ಅವರು ಇದರ ವಿರುದ್ಧ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲದೇ ಇದರ ಪ್ರತಿಭಟನೆಯಲ್ಲಿಯೂ ಭಾಗವಹಿಸಿದ್ದರು.

ಇದನ್ನೂ ಓದಿ: 777 Charlie Review: ಇದು ಚಾರ್ಲಿಯಿಂದ ಬದಲಾದ ಬದುಕು, ರಕ್ಷಿತ್ ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ?

ರಕ್ಷಿತ್‌ ಜೊತೆ ಸಿನಿಮಾ ಮಾಡ್ತಾರಾ ರಮ್ಯಾ?

ರಕ್ಷಿತ್‌ ಜೊತೆ ರಮ್ಯಾ ಸಿನಿಮಾ ಮಾಡುವ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡ್ತಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಅನೇಕ ದಿನಗಳಿಂದ ಹರಿದಾಡುತ್ತಿವೆ. ಇದೀಗ ಇದಕ್ಕೆ ಪುಷ್ಠಿ ನೀಡುವಂತೆ ರಮ್ಯಾ ಅವರು ಚಾರ್ಲಿ ಸಿನಿಮಾದ ಕುರಿತು ಮಾತನಾಡಿದ್ದು, ಅಭಿಮಾನಿಗಳು ರಮ್ಯಾ ಮತ್ತು ರಕ್ಷಿತ್ ಪಕ್ಕಾ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳನ್ನು ಆಡುತ್ತಿದ್ದು, ಇವರಿಬ್ಬರ ಕಾಂಭಿನೇಷನ್ ನೋಡಲು ಕಾತುರರಾಗಿದ್ದೇವೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ. ಇದರೊಂದಿಗೆ ರಮ್ಯಾ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರು ಮದುವೆ ಆಗ್ತಾರಂತೆ ಅಂತ ಗಾಸಿಪ್‌ಗಳು ಓಡಾಡುತ್ತಿದ್ದವು. ಆದ್ರೀಗ ರಮ್ಯಾ ಕಮ್ ಬ್ಯಾಕ್ ಮಾಡೋದು ರಕ್ಷಿತ್ ಶೆಟ್ಟಿ ಸಿನಿಮಾದಲ್ಲೇ ನಟಿಸುತ್ತಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Ramya Exclusive: ರಮ್ಯಾ ಅಭಿಮಾನಿಗಳಿಗೊಂದು Breaking News! ಇದು ಎಲ್ಲೂ ಇಲ್ಲದ Exclusive ಸುದ್ದಿ

777 ಚಾರ್ಲಿ ಬಿಡುಗಡೆಗೆ ಕ್ಷಣಗಣನೆ:

ಹೌದು, 777 ಚಾರ್ಲಿ ಚಿತ್ರವು ಇದೇ ಜೂನ್ 10ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಚಿತ್ರವು 5 ಬಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು ಮತ್ತು ಮಲೆಯಾಳಂ ಬಾಷೆಗಳಲ್ಲಿ ಚಿತ್ರವ ಅದ್ಧೂರಿಯಾಗಿ ರಿಲೀಸ್ ಆಗಲಿದೆ. ಚಿತ್ರದಲ್ಲಿ ನಾಯಕನಾಗಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡರೆ, ಚಿತ್ರಕ್ಕೆ ಕಿರಣ್ ರಾಜ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
Published by:shrikrishna bhat
First published: