ಸುಮಲತಾ ಅಂಬರೀಶ್​ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು

news18
Updated:August 27, 2018, 10:52 PM IST
ಸುಮಲತಾ ಅಂಬರೀಶ್​ ಹುಟ್ಟುಹಬ್ಬಕ್ಕೆ ಶುಭ ಕೋರಿದ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು
news18
Updated: August 27, 2018, 10:52 PM IST
ನ್ಯೂಸ್​ 18 ಕನ್ನಡ

ಇಂದು ಕನ್ನಡ ಚಿತ್ರರಂಗವನ್ನು ಒಂದು ಕಾಲದಲ್ಲಿ ಆಳಿದ್ದ ನಟಿ ಸುಮಲತಾ ಅಂಬರೀಶ್​ ಅವರ ಹುಟ್ಟುಹಬ್ಬ. 54 ವರ್ಷವಾದರೂ ಇನ್ನೂ ಅದೇ ಹಳೆಯ ಚಾರ್ಮ್​ ಉಳಿಸಿಕೊಂಡಿರುವ ಸುಮಲತಾ ಅವರಿಗೆ ಇರುವ ಅಭಿಮಾನಿಗಳೇನೂ ಕಡಿಮೆಯಿಲ್ಲ.

ಮಲೆಯಾಳಂ, ತೆಲುಗು, ತಮಿಳು, ಹಿಂದಿ, ಕನ್ನಡ ಸಿನಿಮಾರಂಗದ ಖ್ಯಾತ ನಟರೊಂದಿಗೆ ತೆರೆ ಹಂಚಿಕೊಂಡು ಒಂದು ದಶಕಕ್ಕೂ ಹೆಚ್ಚು ಕಾಲ ಸ್ಟಾರ್​ ನಟಿ ಎನಿಸಿಕೊಂಡಿದ್ದವರು ಸುಮಲತಾ. ಕನ್ನಡದ ಖ್ಯಾತ ನಟ ಅಂಬರೀಶ್​ ಅವರನ್ನು ಮದುವೆಯಾದ ನಂತರ ಚಿತ್ರರಂಗದಿಂದ ಕೊಂಚ ದೂರವುಳಿದ ಸುಮಲತಾ ಇತ್ತೀಚೆಗೆ ದರ್ಶನ್​, ಧನಜಂಯ, ಪುನೀತ್​ ರಾಜ್​ಕುಮಾರ್​ರಂತಹ ನಟರಿಗೆ ತಾಯಿಯಾಗಿ ಕಾಣಿಸಿಕೊಂಡು ಮತ್ತೆ ಸಿನಿಮಾಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಡಾಟರ್​ ಆಫ್​ ಪಾರ್ವತಮ್ಮ ಮತ್ತು ತಾಯಿಗೆ ತಕ್ಕ ಮಗ ಸಿನಿಮಾಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಅಂದಹಾಗೆ, ಇಂದು 54ನೇ ಹುಟ್ಟುಹಬ್ಬ ಆಚರಿಸಿಕೊಂಡಿರುವ ಸುಮಲತಾ ಅವರಿಗೆ ಅಭಿಮಾನಿಗಳು ಮಾತ್ರವಲ್ಲದೆ ಕನ್ನಡದ ಸೆಲೆಬ್ರಿಟಿಗಳು ಕೂಡ ಶುಭಾಶಯ ಕೋರಿದ್ದಾರೆ. ದರ್ಶನ್​, ಸುದೀಪ್​, ಮಾನ್ವಿತಾ, ಪ್ರಿಯಾಂಕಾ ಉಪೇಂದ್ರ ಸೇರಿದಂತೆ ಕನ್ನಡ ಚಿತ್ರರಂಗದ ಖ್ಯಾತ ನಟ-ನಟಿಯರು ಸುಮಲತಾ ಅವರಿಗೆ ಶುಭ ಕೋರಿದ್ದಾರೆ.

ನನ್ನ ಪ್ರೀತಿಯ ಮದರ್​ ಇಂಡಿಯಾಗೆ ಜನ್ಮ ದಿನದ ಶುಭಾಶಯಗಳು ಎಂದು ದರ್ಶನ್​ ಶುಭ ಕೋರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸುಮಲತಾ, ದರ್ಶನ್​ ಶುಭ ಕೋರದಿದ್ದರೆ ನನ್ನ ಹುಟ್ಟುಹಬ್ಬ ಪರಿಪೂರ್ಣವೇ ಆಗುವುದಿಲ್ಲ ಎಂದಿದ್ದಾರೆ.

 ಸುಮಲತಾ ಅವರಿಗೆ ನಟಿ ಪ್ರಿಯಾಂಕಾ ಉಪೇಂದ್ರ ಕೂಡ ಶುಭ ಹಾರೈಸಿದ್ದಾರೆ.ಕಿಚ್ಚ ಸುದೀಪ್​ ಕೂಡ ಶುಭ ಕೋರಿದ್ದು, ನಿಮ್ಮ ನಗು ನಮಗೆ ಎಂದಿಗೂ ಸ್ಫೂರ್ತಿ ನೀಡುತ್ತದೆ. ಜೀವನದ ಒತ್ತಡವನ್ನು ಹೇಗೆ ನಿಯಂತ್ರಿಸಬೇಕು ಎಂಬುದನ್ನು ನಿಮ್ಮಿಂದ ಕಲಿತಿದ್ದೇವೆ. ನನ್ನ ಜೀವನದ ಭಾಗ ಆಗಿರುವುದಕ್ಕೆ ಧನ್ಯವಾದಗಳು ಪ್ರೀತಿಯ ಅಕ್ಕ ಎಂದು ಹೇಳಿದ್ದಾರೆ.ನಟ ವಸಿಷ್ಠ ಸಿಂಹ ಕೂಡ ಶುಭ ಹಾರೈಸಿದ್ದಾರೆಸುಮಲತಾ ಅವರಿಗೆ ಶುಭ ಹಾರೈಸಿರುವ ನಟಿ ಮಾನ್ವಿತಾ ಹರೀಶ್​ನಟ ಸುದೀಪ್ ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್​ ಅವರ ಪ್ರೀತಿಯ ಶುಭ ಹಾರೈಕೆತಾಯಿಗೆ ತಕ್ಕ ಮಗ ಸಿನಿಮಾದ ನಿರ್ದೇಶಕ ಶಶಾಂಕ್​ ಸುಮಲತಾ ಅವರಿಗಾಗಿ ವಿಭಿನ್ನವಾಗಿ ಶುಭ ಕೋರಿದ್ದಾರೆ.

 ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ಸುಮಲತಾ ಅವರ ಮಗನಾಗಿ ಅಭಿನಯಿಸುತ್ತಿರುವ ಅಜೇಯ್​ ರಾವ್​ ಸಿನಿಮಾದ ಫಸ್ಟ್​ ಲುಕ್​ ಹಾಕುವ ಮೂಲಕ ಶುಭ ಕೋರಿದ್ದಾರೆ.ಡಾಟರ್​ ಆಫ್​ ಪಾರ್ವತಮ್ಮ ಸಿನಿಮಾದಲ್ಲಿ ಸುಮಲತಾ ಅವರ ಮಗಳಾಗಿ ಕಾಣಿಸಿಕೊಳ್ಳಲಿರುವ ಹರಿಪ್ರಿಯಾ ಅವರ ಶುಭ ಹಾರೈಕೆ

 

First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ