Video Viral: ಕ್ಯಾನ್ಸರ್​ ಪೀಡಿತರಿಗೆ ತಲೆ ಕೂದಲನ್ನು ದಾನ ಮಾಡಿದ ಸ್ಯಾಂಡಲ್​ವುಡ್​ ನಟಿ!

ನಟಿ  ಸುಕೃತಾ ವಾಗ್ಲೆ ತಮ್ಮ ತಲೆ ಕೂದಲನ್ನು ಕಾನ್ಸರ್​ ಪೀಡಿತರಿಗೆ  ದಾನ ಮಾಡಿದ್ದಾರೆ. ಕೊರೋನಾದಿಂದಾಗಿ ಮನೆಯಲ್ಲಿ ಇರುವ ಸುಕೃತ ವಾಗ್ಲೆ ತಮ್ಮ ತಲೆ ಕೂದಲು ಕ್ಯಾನ್ಸರ್​ ಪೀಡಿತರಿಗೆ ಉಪಯೋಗಕ್ಕೆ ಬರಲಿ ಎಂದು ಕತ್ತರಿಸಿ ಕೊಂಡಿದ್ದಾರೆ.

ಸುಕೃತಾ ವಾಗ್ಲೆ

ಸುಕೃತಾ ವಾಗ್ಲೆ

 • Share this:
  ಮಹಾಮಾರಿ ಕೊರೋನಾ ವೈರಸ್​ ಹಾವಳಿ ದಿನ ದಿನದಿಂದಕ್ಕೆ ಹೆಚ್ಚಾಗುತ್ತಿದೆ.  ಏ 14 ರವರೆಗೆ ದೇಶ ಲಾಕ್​ ಡೌನ್​ ಆದೇಶವನ್ನು ಪಾಲಿಸುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೆಲೆಬ್ರಿಟಿಗಳು, ಸ್ಟಾರ್​ ನಟ-ನಟಿಯರು ನಿರ್ಗತಕರಿಗೆ ಸಹಾಯ ಮಾಡುತ್ತಿದ್ದಾರೆ. ಇತ್ತ ಸ್ಯಾಂಡಲ್​ವುಡ್​ ನಟಿಯೊಬ್ಬರು ತಮ್ಮ ತಲೆ ಕೂದಲನ್ನು ಕತ್ತರಿಸುವ ಮೂಲಕ ಕ್ಯಾನ್ಸರ್​ ಪೀಡಿತರಿಗೆ ದಾನ ಮಾಡಿದ್ದಾರೆ.

  ನಟಿ  ಸುಕೃತಾ ವಾಗ್ಲೆ ತಮ್ಮ ತಲೆ ಕೂದಲನ್ನು ಕಾನ್ಸರ್​ ಪೀಡಿತರಿಗೆ  ದಾನ ಮಾಡಿದ್ದಾರೆ. ಕೊರೋನಾದಿಂದಾಗಿ ಮನೆಯಲ್ಲಿ ಇರುವ ಸುಕೃತ ವಾಗ್ಲೆ ತಮ್ಮ ತಲೆ ಕೂದಲು ಕ್ಯಾನ್ಸರ್​ ಪೀಡಿತರಿಗೆ ಉಪಯೋಗಕ್ಕೆ ಬರಲಿ ಎಂದು ಕತ್ತರಿಸಿ ಕೊಂಡಿದ್ದಾರೆ. ಮಾತ್ರವಲ್ಲದೆ, ಕೂದಲು ಕತ್ತರಿಸುವ ವಿಡಿಯೋವನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ಈ ವಿಡಿಯೋ ನೋಡಿ ನಟಿ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     ನಟಿ ಸುಕೃತಾ 2013ರಲ್ಲಿ ಜಟ್ಟ ಚಿತ್ರದ ಮೂಲಕ ಬಣ್ಣದ ಲೋಕಕಕ್ಕೆ ಕಾಲಿಟ್ಟರು.  ಸ್ಯಾಂಡಲ್​ವುಡ್​ನ ಅನೇಕ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ. ಕಿರಗೂರಿನ ಗಯ್ಯಾಳಿಗಳು, ಬಹುಪರಾಕ್​, ದಯವಿಟ್ಟು ಗಮನಿಸಿ, ಫ್ಲೋರ್​ ಫಾರ್​ ಹಿಟ್​ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

  ಇದನ್ನೂ ಓದಿ: Corona Song: ಹಾಡಿನ ಮೂಲಕ ಕೊರೋನಾ ವೈರಸ್​ ಓಡಿಸಿದ ನಾದಬ್ರಹ್ಮ ಹಂಸಲೇಖ

  ಇದನ್ನೂ ಓದಿ: ಕೊರೋನಾಗೆ ಇಂದು ಮೂವರು ಬಲಿ; ಸೋಂಕಿತರಲ್ಲಿ 101 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಚ್

   
  First published: