ಕೆಸಿಸಿ ಕ್ರಿಕೆಟ್: ನೆಟ್​​ನಲ್ಲಿ ಸ್ಯಾಂಡಲ್​ವುಡ್ ಸ್ಟಾರ್ಸ್ ಸಖತ್ ಪ್ರಾಕ್ಟೀಸ್

news18
Updated:April 4, 2018, 11:52 AM IST
ಕೆಸಿಸಿ ಕ್ರಿಕೆಟ್: ನೆಟ್​​ನಲ್ಲಿ ಸ್ಯಾಂಡಲ್​ವುಡ್ ಸ್ಟಾರ್ಸ್ ಸಖತ್ ಪ್ರಾಕ್ಟೀಸ್
news18
Updated: April 4, 2018, 11:52 AM IST
ನ್ಯೂಸ್ 18 ಕನ್ನಡ

ಬೆಂಗಳೂರು (ಏ. 04): ಕರ್ನಾಟಕ ಚಲನಚಿತ್ರ ಕಪ್ ಕ್ರಿಕೆಟ್ ಟೂರ್ನಿ​​ ಏಪ್ರಿಲ್ 7 ಮತ್ತು 8 ರಂದು ನಡೆಯಲಿದ್ದು, ಸ್ಯಾಂಡಲ್​​ವುಡ್​ ನಟರು ಭರ್ಜರಿ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ನಿರ್ದೇಶಕ ನಿರೂಪ್ ಭಂಡಾರಿ, ಅರು ಗೌಡ, ಸಿಂಪಲ್ ಸುನಿ, ನಂದ ಕಿಶೋರ್, ಕೆ.ಪಿ. ಶ್ರೀಕಾಂತ್, ಡಾರ್ಲಿಂಗ್ ಕೃಷ್ಣ, ಇಮ್ರಾನ್ ಸರ್ದಾರಿಯಾ, ಅರುಣ್ ಸಾಗರ್, ಚಂದನ್ ಸೇರಿದಂತೆ ಅನೇಕ ನಟರು ನೆಟ್​​ನಲ್ಲಿ ಕಠಿಣ ತಾಲೀಮು ನಡೆಸುತ್ತಿದ್ದಾರೆ.

 

ಕಿಚ್ಚ ಸುದೀಪ್ ಆಯೋಜಿಸುತ್ತಿರುವ ಕೆಸಿಸಿ ಲೀಗ್​​ನಲ್ಲಿ ಒಟ್ಟು ಆರು ತಂಡಗಳಿದ್ದು, 10 ಒವರ್​ಗಳ ಮಾದರಿಯಲ್ಲಿ ಪಂದ್ಯ ನಡೆಯಲಿದೆ. ಪ್ರತೀ ತಂಡದಲ್ಲಿ 12 ಆಟಗಾರರಿರುತ್ತಾರೆ. ಸಿಸಿಎಲ್ ಮತ್ತು ಕೆಪಿಎಲ್ ಲೀಗ್​ಗಳ ಆಟಗಾರರೂ ಈ ತಂಡಗಳಲ್ಲಿರುತ್ತಾರೆ. ನೆಲಮಂಗಲದ ಆದಿತ್ಯ ಮೈದಾನದಲ್ಲಿ ಟೂರ್ನಿ ನಡೆಯಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಲಿದ್ದಾರೆ. ಟೂರ್ನಿ ಆರಂಭಕ್ಕೂ ಮುನ್ನ ಭವ್ಯ ಸಮಾರಂಭ ನಡೆಯಲಿದೆ.
First published:April 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...