• Home
  • »
  • News
  • »
  • entertainment
  • »
  • YASH: ಹರ್ ಘರ್ ತಿರಂಗಾ ಎಂದ ರಾಕಿ ಭಾಯ್​, ಪ್ರಧಾನಿ ಮೋದಿ ಅಭಿಯಾನಕ್ಕೆ ಯಶ್​ ಸಾಥ್​

YASH: ಹರ್ ಘರ್ ತಿರಂಗಾ ಎಂದ ರಾಕಿ ಭಾಯ್​, ಪ್ರಧಾನಿ ಮೋದಿ ಅಭಿಯಾನಕ್ಕೆ ಯಶ್​ ಸಾಥ್​

ರಾಕಿಂಗ್​ ಸ್ಟಾರ್​ ಯಶ್​

ರಾಕಿಂಗ್​ ಸ್ಟಾರ್​ ಯಶ್​

ಯಶ್​ ಇಂದು ಮಾಡಿರುವ ಟ್ವೀಟ್​ ಸಖತ್ ವೈರಲ್ ಆಗುತ್ತಿದೆ. ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ವಿಶೇಷ ಅಭಿಯಾನಕ್ಕೆ ಇದೀಗ ಯಶ್​ ಸಹ ಕೈ ಜೋಡಿಸಿದ್ದಾರೆ.

  • Share this:

ರಾಕಿಂಗ್ ಸ್ಟಾರ್ ಯಶ್ (Rocking Star Yash) ಕೆಜಿಎಫ್ (KGF) ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ (Pan India Star) ಆಗಿ ಮೆರೆಯುತ್ತಿದ್ದಾರೆ. ಅವರಿಗೆ ಅಭಿಮಾನಿ ಬಳಗ ಹೆಚ್ಚಾಗಿದೆ. ಹೀಗಾಗಿ ಅವರ ಪ್ರತಿಯೊಂದು ನಡೆಯನ್ನೂ ಅವರ ಅಭಿಮಾಣಿಗಳು ನೋಡುತ್ತಿರುತ್ತಾರೆ. ಅಲ್ಲದೇ ಅವರ ಮುಂದಿನ ಸಿನಿಮಾದ ಕುರಿತು ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿದೆ. ಇದರ ನಡುವೆ ಯಶ್​ ಇಂದು ಮಾಡಿರುವ ಟ್ವೀಟ್​ ಸಖತ್ ವೈರಲ್ ಆಗುತ್ತಿದೆ. ಹೌದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ‘ಹರ್ ಘರ್ ತಿರಂಗಾ’ (Har Ghar Tiranga) ಅಭಿಯಾನಕ್ಕೆ ಕರೆ ನೀಡಿದ್ದಾರೆ. ಈ ಬಾರಿಯ ಆಗಸ್ಟ್ 15ರಂದು ಭಾರತೀಯ ಸ್ವತಂತ್ರೋತ್ಸವಕ್ಕೆ 75 ವರ್ಷವಾಗಲಿದೆ.


ಹೀಗಾಗಿ ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದಾರೆ. ಇದರ ಭಾಗವಾಗಿ ಆಗಸ್ಟ್ 13-15ರ ವರೆಗೆ ಪ್ರತಿ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವಂತೆ ಕೋರಲಾಗಿದೆ. ಇದಕ್ಕೆ ಇದೀಗ ಸ್ಯಾಂಡಲ್​ವುಡ್​ನ ಸ್ಟಾರ್ ಯಶ್ ಕೂಡ ಕೈ ಜೋಡಿಸಿದ್ದು, ಈ ಕುರಿತು ಟ್ವೀಟ್​ ಮಾಡಿದ್ದಾರೆ.


ತಿರಂಗ ನಮ್ಮೆಲ್ಲ ಭಾರತೀಯರ ಹೆಮ್ಮೆ ಎಂದ ರಾಕಿ ಭಾಯ್​:


ಹೌದು, ಈಗಾಗಲೇ ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ನೀಡಿದ್ದು, ಈ ಅಭಿಯಾನಕ್ಕೆ ಯಶ್​ ಸಹ ಸಾಥ್ ನೀಡಿದ್ದಾರೆ. ಈ ಕುರಿತು ನ್ಯಾಷನಲ್ ಸ್ಟಾರ್​ ಯಶ್​ ಸಹ ಟ್ವೀಟ್​ ಮಾಡಿದ್ದು, ‘ನಮ್ಮ ವೈವಿಧ್ಯತೆಯಲ್ಲಿ ಭರವಸೆ, ಆಕಾಂಕ್ಷೆಗಳು ಮತ್ತು ಏಕತೆಯ ಸಂಕೇತವಾದ ತಿರಂಗ ನಮ್ಮೆಲ್ಲ ಭಾರತೀಯರ ಹೆಮ್ಮೆ. 75 ವರ್ಷಗಳ ಸ್ವಾತಂತ್ರ್ಯೋತ್ಸವದ ವೇಳೆ ನಮ್ಮ ರಾಷ್ಟ್ರದ ಗುರುತಾದ ರಾಷ್ಟ್ರಧ್ವಜವನ್ನು ನಮ್ಮ ಮನೆಗಳಿಗೆ ತರೋಣ. ಆಗಸ್ಟ್ 13-15ರ ವರೆಗೆ ತ್ರಿವರ್ಣ ಧ್ವಜವನ್ನು ಹಾರಿಸೋಣ‘ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಯಶ್​ ತಮ್ಮ ಅಭಿಮಾನಿಗಳಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಮನವಿ ಮಾಡಿದ್ದಾರೆ.ಕೆಜಿಎಫ್ ಬಳಿಕ ನ್ಯಾಷನಲ್ ಸ್ಟಾರ್​ ಆಗಿರುವ ಯಶ್​ ಅವರು ಇದೀಗ ಹರ್ ಘರ್ ತಿರಂಗಾ ಅಭಿಯಾನಕ್ಕೆ ಸಾಥ್​ ನೀಡಿದ್ದು, ಈ ಅಭಿಯಾನಕ್ಕೆ ಅಭಿಮಾನಿಗಳಲ್ಲಿ ಕೈ ಜೋಡಿಸುವಂತೆ ಮನವಿ ಮಾಡಿದ್ದಾರೆ. ಇನ್ನು, ಇದೀಗ YASH19 ಕುರಿತು ಸಾಕಷ್ಟು ಚರ್ಚೆಗಳಾಗುತ್ತಿವೆ. ಆದರೆ ಯಶ್​ ಅರಾಮವಾಗಿ ಪತ್ನಿ ರಾಧಿಕಾ ಪಂಡಿತ್ ಜೊತೆ ಇಟಲಿ ಪ್ರವಾಸದಲ್ಲಿದ್ದಾರೆ.


ಇದನ್ನೂ ಓದಿ: ರಾಕಿ ಭಾಯ್ ಅಬ್ಬರಕ್ಕೆ ಬೆಚ್ಚಿದ್ದ ಅಮೀರ್​, KGF 2 ಎದುರು ಬರದೇ ಬದುಕಿದೆವು ಎಂದ ಬಾಲಿವುಡ್​ ಮಿಸ್ಟರ್​ ಪರ್ಫೆಕ್ಟ್!


Yash19 ಕುರಿತು ಹೆಚ್ಚಿದ ಕುತೂಹಲ:


ಸದ್ಯ ಸ್ಯಾಂಡಲ್​ವುಡ್​ನಲ್ಲಿ ಯಶ್​ ಮುಂದಿನ ಸಿನಿಮಾ ಕೆಜಿಎಫ್ 3 ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ನಿರ್ದೇಶಕ ನರ್ತನ್ ಜೊತೆ ರಾಕಿಭಾಯ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಮಾಹಿತಿ ಇದೆ. ನರ್ತನ್ ಕೂಡ ನಟ ಯಶ್‌ಗೆ ಸೂಕ್ತವಾಗುವ ಅದ್ಭುತ ಕಥೆಯನ್ನು ತಯಾರಿ ಮಾಡಿಕೊಂಡಿದ್ದಾರೆ, ಹಾಗಾಗಿ ಯಶ್​ ಸಿನಿಮಾದ ಪಾತ್ರಕ್ಕೆ ತಕ್ಕಂತೆ ಲುಕ್ ಚೇಂಜ್​ ಮಾಡಿಕೊಳ್ಳಲು ವರ್ಕೌಟ್​ ಸ್ಟಾರ್ಟ್​ ಮಾಡಿದ್ದಾರಂತೆ.


ಇದನ್ನೂ ಓದಿ: Kannada Pan India Movies: ಕೆಜಿಎಫ್​ನಿಂದ ವಿಕ್ರಾಂತ್ ರೋಣವರೆಗೆ, ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿದ ಕನ್ನಡದ ಪ್ಯಾನ್​ ಇಂಡಿಯಾ ಸಿನಿಮಾಗಳಿವು


ನರ್ತನ್ ಕೂಡ ಸ್ಯಾಂಡಲ್​ವುಡ್​ನಲ್ಲಿ ಉತ್ತಮ ನಿರ್ದೇಶಕ ಎಂದು ಹೆಸರು ಪಡೆದಿದ್ದಾರೆ, ಹಾಗಾಗಿ ಅಭಿಮಾನಿಗಳು ಸಹ ಈ ಸಿನಿಮಾದ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಯಶ್​ ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ,

Published by:shrikrishna bhat
First published: