ಪ್ಯಾನ್ ಇಂಡಿಯಾ ಚಿತ್ರದಲ್ಲಿ ಅತಿಥಿ ಪಾತ್ರ ಮಾಡ್ತಾರಾ Yash? ಹೊಸ ಟ್ವಿಸ್ಟ್​ ಕೊಟ್ಟ ರಾಕಿ ಭಾಯ್

ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿಯೂ ಅವರು ಕೇವಲ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಯಶ್ ಮತ್ತು ಪ್ರಭಾಸ್

ಯಶ್ ಮತ್ತು ಪ್ರಭಾಸ್

  • Share this:
ಸ್ಯಾಂಡಲ್​ ವುಡ್​ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಸದ್ಯ ಕೆಜಿಎಫ್ ಚಾಪ್ಟರ್ 2 (KGF Chapter 2) ಚಿತ್ರದ ಯಶಸ್ಸಿನಲ್ಲಿದ್ದಾರೆ. ಅಲ್ಲದೇ ಕುಟುಂಬದವರೊಂದಿಗೆ ಕಾಲಕಳೆಯುತ್ತಿರುವ ಅವರು, ತಮ್ಮ ಮುಂದಿನ ಚಿತ್ರದ ಕುರಿತು ಈವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಇದರಿಂದಾಗಿ ಅವರ ಮುಂದಿನ ಸಿನಿಮಾದ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಇದರ ನಡುವೆ ಯಶ್ ಇವರೊಂದಿಗೆ ಸಿನಿಮಾ ಮಾಡಲಿದ್ದಾರಂತೆ, ಇಷ್ಟು ಬಜೆಟ್ ಚಿತ್ರವವಂತೆ ಎಂದೆಲ್ಲಾ ಸುದ್ದಿಗಳು ಹರಿದಾಡುತ್ತಿವೆ. ಇದರ ನಡುವೆ ಮತ್ತೊಂದು ಹೊಸ ಅಫ್​ಡೇಟ್ ಕೇಳಿಬರುತ್ತಿದ್ದು,  ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ. ಅದರಲ್ಲಿಯೂ ಅವರು ಕೇವಲ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಕೇಳಿಬರುತ್ತಿದೆ.

ಸಲಾರ್​ ಚಿತ್ರದಲ್ಲಿ ನಟಿಸ್ತಾರಾ ಯಶ್?:

ಹೌದು, ಇಂತದೊಂದು ಸುದ್ದಿ ಇದೀಗ ಚಿತ್ರರಂಗದಲ್ಲಿ ಹರಿದಾಡುತ್ತಿದೆ. ನಟ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್​ ನಲ್ಲಿ ಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಸಲಾರ್‘ ಚಿತ್ರದಲ್ಲಿ ಯಶ್ ನಟಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಸಲಾರ್ ಚಿತ್ರದಲ್ಲಿ ಯಶ್ ಕೇವಲ ಅತಿಥಿ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿಗಳು ಹರಿದಾಡುತ್ತಿದ್ದು, ಈ ಕುರಿತು ಚಿತ್ರತಂಡ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಒಂದು ವೇಳೆ ಈ ರೀತಿ ಆದಲ್ಲಿ ಮತ್ತೊಂದು ಸೂಪರ್ ಹಿಟ್ ಚಿತ್ರ ಸಲಾರ್ ಆಗುವುದರಲ್ಲಿ ಅನುಮಾನವಿಲ್ಲ ;ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಕೆಜಿಎಫ್ ಮುಂದುವರೆದ ಭಾಗ ಸಲಾರ್:

ಕೆಜಿಎಫ್ 2 ಚಿತ್ರ ಬಿಡುಗಡೆ ಆದಾಗ ಇಂತದೊಂದು ಮಾತುಗಳು ಕೇಳಿಬಂದಿತ್ತು. ಸಲಾರ್  ಚಿತ್ರವು ಕೆಜಿಎಫ್ 2 ಮುಂದುವರೆದ ಭಾಗವಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ ಇದಕ್ಕೆ ಚಿತ್ರತಂಡ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆದರೆ ಇದೀಗ ಹರಿದಾಡುತ್ತಿರುವ ಸುದ್ದಿ ನೋಡಿದ್ದಲ್ಲಿ ಯಶ್ ಸಲಾರ್​ ನಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಲ್ಲಿ ಪಕ್ಕಾ ಇದು ಕೆಜಿಎಫ್ ಮುಂದುವರೆದ ಭಾಗ ಎಂಬುದು ಪಕ್ಕಾ ಆಗಲಿದೆ.

ಇದನ್ನೂ ಓದಿ: Actor Accident: ಕೆಜಿಎಫ್ ನಟನ ಕಾರು ಅಪಘಾತ, ಸಂಪೂರ್ಣ ನಜ್ಜುಗುಜ್ಜಾದ ಐಷಾರಾಮಿ ಕಾರು

ಯಶ್​ಗೆ 100 ಕೋಟಿ ಆಫರ್?:

ಕೆಜಿಎಫ್ 2 ಚಿತ್ರದ ಯಶಸ್ಸಿನ ಬೆನ್ನಲ್ಲೇ ಇದೀಗ ಯರ್ಶ ಅವರ ಮಾರ್ಕೆಟ್ ಸಹ ದೊಡ್ಡದಾಗಿದೆ. ಅಲ್ಲದೇ ಅವರ ಮುಂದಿನ ಸಿನಿಮಾದ ಕುರಿತ ಮಾಹಿತಿಗಾಗಿ ಇಡೀ ಭಾರತವೇ ಕಾದುಕುಳಿತಿದೆ. ಇದರ ನಡುವೆ ಕೆಜಿಎಫ್ 2 ಚಿತ್ರವನ್ನು ತೆಲುಗಿನಲ್ಲಿ ಬಿಡುಗಡೆ ಮಾಡಿದ ನಿರ್ಮಾಪಕ ದಿಲ್ ರಾಜು ಅವರು ಯರ್ಶ ಅವರ ಸಿನಿಂಆಗೆ ಬಂಡವಾಳ ಹೂಡಲಿದ್ದಾರೆ ಎಂಬ ಮಾತುಗಳಿವೆ.  ಅಲ್ಲದೇ ಯಶ್ ಅವರಿಗೆ 100 ಕೋಟಿ ಸಂಭಾವನೆಯನ್ನೂ ಸಹ ನೀಡಲಿದ್ದಾರೆ ಎನ್ನಲಾಗಿದ್ದು, ಇದೇನಾದರೂ ನಿಜವಾದಲ್ಲಿ ಭಾರತದಲ್ಲಿಯೇ ಒಂದು ಚಿತ್ರಕ್ಕೆ 100 ಕೋಟಿ ಸಂಭಾವನೆ ಪಡೆದ ಮೊದಲ ನಟ ಹಾಗೂ ಅತೀ ಹೆಚ್ಚು ಸಂಭಾವನೆ ಪಡೆಯುವವರ ಲೀಸ್ಟ್ ನಲ್ಲಿ ರಾಕಿಭಾಯ್ ಮೊದಲಿಗರಾಗುತ್ತಾರೆ.

ಇದನ್ನೂ ಓದಿ: ಬಾಲಿವುಡ್​ನಲ್ಲಿ ಧೂಳೆಬ್ಬಿಸಿದ ರಾಕಿ ಭಾಯ್, 6 ತಿಂಗಳ Bollywood ಬಾಕ್ಸ್ ಆಫೀಸ್​ ರಿಪೋರ್ಟ್

ತಮಿಳಿನ ಸ್ಟಾರ್​ ಡೈರೆಕ್ಟರ್ ಜೊತೆ ರಾಕಿ ಭಾಯ್?:

ಇದರ ಜೊತೆ ಮತ್ತೊಂದು ಸೂಪರ್ ಸುದ್ದಿ ಹರಿದಾಡುತ್ತಿದ್ದು, ರೋಬೋ, ರೋಬೋ 2.0ನ ನಂತಹ ಅದ್ದೂರಿ ಚಿತ್ರಗಳನ್ನು ನಿರ್ದೇಶಿಸಿರುವ ತಮಿಳಿನ ನಿರ್ದೇಶಕ ಶಂಕರ್ ಅವರು ಯಶ್ ಅವರಿಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿದೆ. ಶಂಕರ್ ನಿರ್ದೇಶನದಲ್ಲಿ ಬರೋಬ್ಬರಿ 800 ಕೋಟಿ ಬಜೆಟ್​ ನಲ್ಲಿ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಯಶ್ ಆಲೋಚಿಸುತ್ತಿದ್ದಾರೆ ಎಂಬ ಮಾಹಿತಿಗಳು ಎಲ್ಲಡೆ ಪಸರಿಸಿದ್ದು, ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಇದರ ನಡುವೆ ಯರ್ಶ ಮುಂದಿನ ಚಿತ್ರವನ್ನು ನರ್ತನ್ ಮಾಡಲಿದ್ದಾರೆ ಎಂಬ ಬಲವಾದ ಮಾತುಗಳೂ ಸಹ ಕೇಳಿಬರುತ್ತಿದೆ.
Published by:shrikrishna bhat
First published: