• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • Vikram Ravichandran: ವೆಬ್ ಸೀರಿಸ್​ನಲ್ಲಿ ಕ್ರೇಜಿಸ್ಟಾರ್​ ಪುತ್ರ ವಿಕ್ರಮ್ ರವಿಚಂದ್ರನ್, ಶೀಘ್ರದಲ್ಲೇ ಸ್ಟ್ರೀಮಿಂಗ್ ಶುರು

Vikram Ravichandran: ವೆಬ್ ಸೀರಿಸ್​ನಲ್ಲಿ ಕ್ರೇಜಿಸ್ಟಾರ್​ ಪುತ್ರ ವಿಕ್ರಮ್ ರವಿಚಂದ್ರನ್, ಶೀಘ್ರದಲ್ಲೇ ಸ್ಟ್ರೀಮಿಂಗ್ ಶುರು

ಲವ್ ಯು ಅಭಿ ವೆಬ್ ಸಿರೀಸ್ ಸ್ಟ್ರೀಮಿಂಗ್ ಯಾವಾಗ?

ಲವ್ ಯು ಅಭಿ ವೆಬ್ ಸಿರೀಸ್ ಸ್ಟ್ರೀಮಿಂಗ್ ಯಾವಾಗ?

ವಿಕ್ರಮ್ ರವಿಚಂದ್ರನ್ ಹೊಸ ಸಿನಿಮಾ ಸದ್ದಿಲ್ಲದೆ ರೆಡಿ ಆಗಿದೆ. ಇದೇ ವಾರ ತೆರೆಗೂ ಬರ್ತಿದೆ. ಈ ಚಿತ್ರದ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ ಓದಿ.

 • News18 Kannada
 • 2-MIN READ
 • Last Updated :
 • Bangalore [Bangalore], India
 • Share this:

 ಕ್ರೇಜಿ ಸ್ಟಾರ್ ರವಿಚಂದ್ರನ್ ಎರಡನೇ ಪುತ್ರ (Vikram Ravichandran) ವಿಕ್ರಮ್ ರವಿಚಂದ್ರನ್ ಅಭಿನಯದ ಎರಡನೇ ಸಿನಿಮಾ ರಿಲೀಸ್‌ಗೆ ರೆಡಿ ಆಗಿದೆ. ಇದೇ ವಾರ ಚಿತ್ರ ಸ್ಟ್ರೀಮಿಂಗ್ ಕೂಡ ಆಗುತ್ತಿದೆ. ಅದಿತಿ ಪ್ರಭುದೇವ ಈ ಚಿತ್ರದಲ್ಲಿ (First web series Streaming Soon) ವಿಕ್ರಮ್‌ಗೆ ಜೋಡಿ ಆಗಿದ್ದಾರೆ. ಈ ಮೂಲಕ ವಿಕ್ರಮ್ ರವಿಚಂದ್ರನ್ ಹೊಸ ರೀತಿಯ ರೋಲ್‌ ಒಂದಕ್ಕೆ ಜೀವ ತುಂಬಿದ್ದಾರೆ. ಸಿನಿಮಾದ ಟೀಸರ್ ಕೂಡ ಈಗಾಗಲೇ (Vikram Ravichandran) ರಿಲೀಸ್ ಆಗಿದೆ. ಸಿನಿಮಾ ಝಲಕ್ ಅನ್ನ ಕೂಡ ಇದು ಕಟ್ಟಿಕೊಟ್ಟಿದೆ. ಅಂದ್ಹಾಗೆ ಈ ಚಿತ್ರದ ಇನ್ನಷ್ಟು (Love You Abhi Streaming Soon) ಡಿಟೈಲ್ಸ್ ಇಲ್ಲಿದೆ ಒಮ್ಮೆ ಓದಿ.


ವಿಕ್ರಮ್ ರವಿಚಂದ್ರನ್ ಹೊಸ ಭರವಸೆ ವೆಬ್ ಸಿರೀಸ್


ವಿಕ್ರಮ್ ರವಿಚಂದ್ರನ್ ಭರವಸೆ ಹೊಸ ರೀತಿಯ ಭರವಸೆ ಮೂಡಿಸುತ್ತಿದ್ದಾರೆ. ಸಿನಿಮಾ ಜೀವನದಲ್ಲಿ ಬೆರಳೆಣಿಕೆಯ ಸಿನಿಮಾ ಅಷ್ಟೇ ಮಾಡಿದ್ದಾರೆ.


Sandalwood Actor Vikram Ravichandran First web series Love You Abhi Streaming Soon
ವಿಕ್ರಮ್ ರವಿಚಂದ್ರನ್‌ಗೆ ಅದಿತಿ ಪ್ರಭುದೇವ ಜೋಡಿ


ತ್ರಿವಿಕ್ರಮ ಆದ್ಮೇಲೆ ವಿಕ್ರಮ್ ಒಪ್ಪಿದ ಸಿನಿಮಾ


ಮೊದಲ ಸಿನಿಮಾ ತ್ರಿವಿಕ್ರಮ್ ವಿಶೇಷವಾಗಿಯೇ ಗಮನ ಸೆಳೆದಿತ್ತು. ಕ್ರೇಜಿ ಪುತ್ರ ಇನ್ನಷ್ಟು ಕ್ರೇಜಿಯಾಗಿದ್ದಾರೆ ಅನ್ನುವ ಭಾವನೆ ಕೂಡ ಮೂಡಿ ಆಗಿದೆ.
ವಿಕ್ರಮ್ ರವಿಚಂದ್ರನ್ ಮತ್ತೊಂದು ಸಿನಿಮಾ


ಈ ಒಂದು ನಂಬಿಕೆಯನ್ನ ಮುಧೋಳ್ ಸಿನಿಮಾ ಮಾಡಿದೆ. ರವಿಚಂದ್ರನ್ ಮಾಡದೆ ಇರೋ ಆ್ಯಕ್ಷನ್ ಮತ್ತು ರಗಢ್ ಫೀಲ್ ಹಾಗೂ ಲುಕ್ ಅನ್ನ ಮುಧೋಳ್ ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್ ಮಾಡಿದ್ದಾರೆ.
ದೊಡ್ಡ ಭರವಸೆ ಮೂಡಿಸಿದ ಮುಧೋಳ್ ಟೀಸರ್


ಸಿನಿಮಾದ ಮೊದಲ ಟೈಟಲ್ ಟೀಸರ್ ಆ ಒಂದು ಸತ್ಯವನ್ನ ಹೇಳಿ ಆಗಿದೆ. ಚಿತ್ರದ ನಿರ್ದೇಶಕ ಕಾರ್ತಿಕ್ ರಾಜನ್ ಈ ಚಿತ್ರದಲ್ಲಿ ವಿಕ್ರಮ್‌ನನ್ನ ಅದ್ಭುತವಾಗಿಯೇ ತೋರಿಸುತ್ತಿದ್ದಾರೆ.


ವಿಕ್ರಮ್ ರವಿಚಂದ್ರನ್ ವೆಬ್ ಸಿರೀಸ್ ರೆಡಿ


ಭರ್ಜರಿ ಆ್ಯಕ್ಷನ್ ಇರೋ ಮುಧೋಳ್‌ ಸಿನಿಮಾ ಬರೋ ಮೊದಲೇ ವಿಕ್ರಮ್ ರವಿಚಂದ್ರನ್ ಅಭಿನಯದ ಲವ್ ಯು ಅಭಿ ಸಿರೀಸ್ ರಿಲೀಸ್ ಆಗುತ್ತಿದೆ.ವಿಕ್ರಮ್ ರವಿಚಂದ್ರನ್ ಮೊದಲ ವೆಬ್ ಸಿರೀಸ್


ಹೌದು, ಆದರೆ ಇದೊಂದು ವೆಬ್ ಸಿರೀಸ್ ಅನ್ನೋದು ಕೂಡ ಅಷ್ಟೇ ಸತ್ಯ. ಈ ಚಿತ್ರಕ್ಕೆ ಲವ್ ಯು ಅಭಿ ಅನ್ನುವ ಸುಂದರವಾದ ಟೈಟಲ್ ಕೂಡ ಇದೆ.


Sandalwood Actor Vikram Ravichandran First web series Love You Abhi Streaming Soon
ವಿಕ್ರಮ್ ರವಿಚಂದ್ರನ್ ಮೊದಲ ವೆಬ್ ಸಿರೀಸ್


ಲವ್ ಯು ಅಭಿಯಲ್ಲಿ ವಿಕ್ರಮ್ ಪಾತ್ರ ಏನು ಗೊತ್ತೆ?


ಲವ್ ಯು ಅಭಿ ಸಿರೀಸ್‌ ನಲ್ಲಿ ವಿಕ್ರಮ್ ರವಿಚಂದ್ರನ್ ಒಬ್ಬ ಬಿಸಿನೆಸ್‌ ಮ್ಯಾನ್ ಪಾತ್ರವನ್ನ ಮಾಡುತ್ತಿದ್ದಾರೆ. ಈ ಪಾತ್ರದ ಮೂಲಕ ಸಿಂಪಲ್ ಲುಕ್ ಅಲ್ಲೂ ಸಖತ್ ಆಗಿಯೇ ವಿಕ್ರಮ್ ಕಾಣಿಸಿಕೊಳ್ಳುತ್ತಿದ್ದಾರೆ.


ವಿಕ್ರಮ್ ರವಿಚಂದ್ರನ್‌ಗೆ ಅದಿತಿ ಪ್ರಭುದೇವ ಜೋಡಿ


ಲವ್ ಯು ಅಭಿ ಸಿನಿಮಾದಲ್ಲಿ ಅದಿತಿ ಪ್ರಭುದೇವ ಕೂಡ ಸಾಥ್ ಕೊಟ್ಟಿದ್ದಾರೆ. ಅಭಿ ಪಾತ್ರದ ಪ್ರೇಯಸಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ.


ಲವ್ ಯು ಅಭಿ ವೆಬ್ ಸಿರೀಸ್ ಸ್ಟ್ರೀಮಿಂಗ್ ಯಾವಾಗ?


ಈ ಜೋಡಿಯ ಲವ್ ಸ್ಟೋರಿಯ ಚಿತ್ರಣವನ್ನ ಟೀಸರ್ ಕೊಡುತ್ತಿದೆ. ಲವ್ ಯು ಅಭಿ ಸಿನಿಮಾ ಯಾವಾಗ ರಿಲೀಸ್ ಅನ್ನೋರಿಗೆ ಈಗಾಗಲೇ ಟೀಮ್ ಡೇಟ್ ಕೂಡ ಫಿಕ್ಸ್ ಮಾಡಿದೆ.


ಇದನ್ನೂ ಓದಿ: Amruthadhare: ಮೇ 29ರಿಂದ ಅಮೃತಧಾರೆ ಸೀರಿಯಲ್, ಛಾಯಾ ಸಿಂಗ್ ನಟನೆ ನೋಡಲು ಅಭಿಮಾನಿಗಳ ಕಾತುರ!


ಮೇ-19 ರಂದು ಲವ್ ಯುವ ಅಭಿ ಸ್ಟ್ರೀಮಿಂಗ್


ಲವ್ ಯು ಅಭಿ ವೆಬ್ ಸಿರೀಸ್ ಇದೇ ತಿಂಗಳ 19 ರಂದು ಸ್ಟ್ರೀಮಿಂಗ್ ಆಗುತ್ತಿದೆ. ಜಿಯೋ ಸಿನಿಮಾದಲ್ಲಿ ಲವ್ ಯು ಅಭಿ ವೆಬ್ ಸಿರೀಸ್ ಸ್ಟ್ರೀಮಿಂಗ್ ಆಗುತ್ತಿದೆ.

First published: