Manoranjan Ravichandran Marriage: ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಮನು ರವಿಚಂದ್ರನ್! ಇಂದು ಮಾಂಗಲ್ಯಧಾರಣೆ

Manoranjan Ravichandran Marriage: ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ರವಿಚಂದ್ರನ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಸಂಗೀತ ಎಂಬವರ ಜೊತೆ ನಟನ ವಿವಾಹ ನಡೆಯಲಿದ್ದು ಆಪ್ತರು ಭಾಗಿಯಾಗಲಿದ್ದಾರೆ.

ಮನು ರವಿಚಂದ್ರನ್ - ಸಂಗೀತಾ ರಿಸೆಪ್ಶನ್​

ಮನು ರವಿಚಂದ್ರನ್ - ಸಂಗೀತಾ ರಿಸೆಪ್ಶನ್​

  • Share this:
ಸ್ಯಾಂಡಲ್​ವುಡ್ ಕ್ರೇಜಿಸ್ಟಾರ್ ರವಿಚಂದ್ರನ್ (V Ravichandran) ಅವರ ಮನೆಯಲ್ಲಿ ಮದುವೆ (Marriage) ಸಂಭ್ರಮ ತುಂಬಿದೆ. ಅವರ ಪುತ್ರ ಮನೋರಂಜನ್ ರವಿಚಂದ್ರನ್ (Manoranjan Ravichandran) ಅವರು ಸಂಗೀತ (Sangeetha) ಎನ್ನುವ ಯುವತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಂಗೀತ ಎಂಬ ಯುವತಿ ಜೊತೆ ವಿವಾಹವಾಗುತ್ತಿರುವ ಮನು ರವಿಚಂದ್ರನ್ ಅವರ ವಿವಾಹ ಇಂದು ನಡೆಯಲಿದ್ದು, ಮಾಂಗಲ್ಯಧಾರಣೆ ನೆರವೇರಲಿದೆ. ಶನಿವಾರ ಬೆಂಗಳೂರಿನ (Bengaluru) ಅರಮನೆ ಮೈದಾನದಲ್ಲಿ (Palace Ground) ಅದ್ದೂರಿಯಾಗಿ ಮನು- ಸಂಗೀತ ಆರತಕ್ಷತೆ (Reception) ಕಾರ್ಯಕ್ರಮ ನೆರವೇರಿದ್ದು ರವಿಚಂದ್ರನ್ ಅವರ ಆಪ್ತರು ಮತ್ತು ಕುಟುಂಬದವರಿಗಷ್ಟೇ ಅವಕಾಶವಿತ್ತು. ಕ್ರೇಜಿಸ್ಟಾರ್ ಪುತ್ರನ ರಿಸೆಪ್ಷನ್ ಗೆ ಆಗಮಿಸಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva rajkumar) ದಂಪತಿ ಕೂಡಾ ಹೊಸ ಜೋಡಿಗೆ ಆಶೀರ್ವಾದ ಮಾಡಿದ್ದರು. ಹಂಸಲೇಖ ದಂಪತಿ, ಖುಷ್ಬು ಹಾಗೂ ಸ್ಯಾಂಡಲ್ ವುಡ್​ನ (Sandalwood) ನಟ ನಟಿಯರು ಕೂಡಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಿನ್ನೆ ಆರತಕ್ಷತೆ ನಡೆದಿದ್ದು ಇಂದು ಮನು ರವಿಚಂದ್ರನ್ ಅವರು ಸಂಗೀತಾಗೆ ಮಾಂಗಲ್ಯಧಾರಣೆ ಮಾಡಲಿದ್ದಾರೆ. ಸೋಮವಾರ ಆಗಸ್ಟ್ 22ರಂದು ನಂದಿ ಬೆಟ್ಟದ ಬಳಿ ಇರುವ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾದ ಆರತಕ್ಷತೆ ನಡೆಯಲಿದೆ. ನಾಳೆ ನಡೆಯುವ ಆರತಕ್ಷತೆಗೆ ಸಿನಿಮಾ ನಟರು, ರಾಜಕೀಯ ಗಣ್ಯರು ಹಾಗೂ ಕುಟುಂಬದವರಿಗಷ್ಟೇ ಪ್ರವೇಶ ಒದಗಿಸಲಾಗಿದೆ.

ಈಗಾಗಲೇ ನಟನಾಗಿ ಮಿಂಚುತ್ತಿರುವ ಮನು

ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಕೆಲ ಸಿನಿಮಾಗಳನ್ನು ಮಾಡಿದ್ದಾರೆ. ಸಾಹೇಬ, ರಣಧೀರ, ಮುಗಿಲ್ ಪೇಟೆ ಸೇರಿದಂತೆ ವಿವಿಧ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇದೀಗ ಮದುವೆಯಾಗುತ್ತಿದ್ದು, ಇದೇ ಆಗಸ್ಟ್​ 21 ಹಾಗೂ 22 ರಂದು ವಿವಾಹ ಕಾರ್ಯಕ್ರಮ ನಡೆಯುತ್ತಿದೆ.



ಮೂಲಗಳ ಪ್ರಕಾರ ಮನೋರಂಜನ್ ವೈದ್ಯಕೀಯ ಹಿನ್ನೆಲೆ ಇರುವ ಸಂಗೀತಾ ದೀಪಕ್ ಅವರನ್ನು ವಿವಾಹವಾಗುತ್ತಿದ್ದಾರೆ. ಸಿನಿಮಾರಂಗದ ಗಣ್ಯರನ್ನು ಆಮಂತ್ರಿಸುವುದರಲ್ಲಿ ಕ್ರೇಜಿಸ್ಟಾರ್ ಬ್ಯುಸಿ ಆಗಿದ್ದರು. ಈಗ ಮದುವೆ ಸಂಭ್ರಮದಲ್ಲಿದ್ದಾರೆ. ಈ ಜೋಡಿಯ ಮದುವೆ ಆಮಂತ್ರಣ ಪತ್ರಿಕೆ ಬಹಳ ಸುಂದರವಾಗಿ ಮೂಡಿ ಬಂದಿದ್ದು, ಕನಸುಗಾರನ ಕಲ್ಪನೆಯಲ್ಲಿ ತಯಾರಾಗಿದೆ. ಇದರ ನಡುವೆ ರವಿಚಂದ್ರನ್ ಅವರ ಪುತ್ರನ ವಿವಾಹದ ಸುದ್ದಿ ತಿಳಿದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಶುಭಕೋರುತ್ತಿದ್ದಾರೆ.



ಇದನ್ನೂ ಓದಿ: New Films: ಈ ಶುಕ್ರವಾರ ಸಿನಿಪ್ರಿಯರಿಗೆ ಭರ್ಜರಿ ಹಬ್ಬ - ಭರ್ತಿ 12 ಚಿತ್ರಗಳು ರಿಲೀಸ್​

ಸ್ಯಾಂಡಲ್​ವುಡ್​ನ ಕನಸುಗಾರ ವಿ. ರವಿಚಂದ್ರನ್ ತಮ್ಮ ಪುತ್ರಿಯ ವಿವಾಹವನ್ನು ಅದ್ಧೂರಿಯಾಗಿ ನೆರವೇರಿಸಿದ್ದರು. 2019ರಲ್ಲಿ ರವಿಚಂದ್ರನ್ ಅವರ ಪುತ್ರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಹಿರಿಯ ಮಗ ಮನೋರಂಜನ್ ಅವರ ವಿವಾಹವು ನಡೆಯಲಿದೆ. ಕಿರಿಯ ಪುತ್ರ ವಿಕ್ರಮ್​ ರವಿಚಂದ್ರನ್ ಇತ್ತೀಚೆಗೆ ತೆರೆಕಂಡ 'ತ್ರಿವಿಕ್ರಮ' ಚಿತ್ರದ ಮೂಲಕ ಸ್ಯಾಂಡಲ್​ವುಡ್​ಗೆ ಪಾದಾರ್ಪಣೆ ಮಾಡಿದ್ದಾರೆ.
Published by:Divya D
First published: